Kalaburagi: ಯುವಕರೇ ಸಂಸ್ಕೃತಿಯ ರಕ್ಷಕರು: ನಟ ಸುಚೇಂದ್ರ ಪ್ರಸಾದ್

ಯುವಶಕ್ತಿಗಳು ಭಾಗಿಯಾಗದೆ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ. ಸಂಸ್ಕೃತಿಯ ರಕ್ಷಣೆ ಯುವಕರ ಕೈಯಲ್ಲಿದೆ ಎಂದು ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ಸುಚೇಂದ್ರ ಪ್ರಸಾದ್ ಅಭಿಮತ ವ್ಯಕ್ತಪಡಿಸಿದ್ದಾರೆ. 

Youths are the custodians of culture Says Actor Suchendra Prasad At Kalaburagi gvd

ಕಲಬುರಗಿ (ಜ.27): ಯುವಶಕ್ತಿಗಳು ಭಾಗಿಯಾಗದೆ ಸಂಸ್ಕೃತಿ ಉಳಿಯಲು ಸಾಧ್ಯವಿಲ್ಲ. ಸಂಸ್ಕೃತಿಯ ರಕ್ಷಣೆ ಯುವಕರ ಕೈಯಲ್ಲಿದೆ ಎಂದು ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ಸುಚೇಂದ್ರ ಪ್ರಸಾದ್ ಅಭಿಮತ ವ್ಯಕ್ತಪಡಿಸಿದ್ದಾರೆ. ಕಲಬುರಗಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಹಯೋಗದಲ್ಲಿ ನಡೆದ 2022-23ನೇ ಶೈಕ್ಷಣಿಕ ಸಾಲಿನ 3ನೇ ಅಂತರ್ ವಿಶ್ವವಿದ್ಯಾಲಯದ ದಕ್ಷಿಣ-ಪೂರ್ವ ವಲಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲರೊಂದಿಗೆ ಸಕ್ಯ ಬೆಳೆಸಿ, ಸೌಖ್ಯದಿಂದಿರುವುದೇ ಸಂಸ್ಕೃತಿಯಾಗಿದೆ. 

ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯ ಅರಿವಾಗುತ್ತದೆ. ಹೀಗಾಗಿ ಇಂದಿನ ಯುವಕರಿಗೆ ಪಾಠದ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಖ್ಯವಾಗಿವೇ ಎಂದು ತಿಳಿಸಿದರು. ಭಾಷೆ ಹೇಗೆ ಕೇವಲ ಸಂವಹನಕ್ಕಷ್ಟೇ ಸೀಮಿತವಲ್ಲವೋ, ಹಾಗೆಯೇ ಸಂಸ್ಕೃತಿ ಸಹ ಕೇವಲ ಸಂಭ್ರಮಕ್ಕೆ ಸೀಮಿತವಲ್ಲ. ಅದು, ನಡೆ, ನುಡಿ, ಆಚಾರ-ವಿಚಾರಗಳಲ್ಲಿ ಅಡಗಿದೆ. ನಮ್ಮ ಪೂರ್ವಿಕರಿಂದ ಕಲಿತಿದ್ದನ್ನು ನಾವು ಮುಂದುವರೆಸಿಕೊಂಡು ಸಾಗಬೇಕಿದೆ ಎಂದರು. ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೋ .ಬಿ.ಕೆ. ತುಳಸಿಮಾಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಯುವಜನೋತ್ಸವ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ನವಚೇತನ್ಯ ಮೂಡಿಸುತ್ತದೆ. ದೇಶದಲ್ಲಿ ಶೇ.65% ಯುವಕರಿದ್ದಾರೆ. 

ಕಾರ್ಕಳದ ಪರಶುರಾಮ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ಭಾರತದ ಭವಿಷ್ಯ ಯುವಪೀಳಿಗೆ ಕೈಯಲ್ಲಿದೆ. ಆದರಿಂದ ಯುವಕರ ಸರ್ವತೋಮುಖ ಬೆಳವಣಿಗೆ ಅತ್ಯವಶ್ಯಕವಾಗಿದೆ ಎಂದರು. ಜಗತ್ತಿನೊಂದಿಗೆ ಸ್ಪರ್ಧಿಸಲು ಕೌಶಲ್ಯಗಳ ಅಗತ್ಯತೆ ಇಂದಿನ ಯುವ ಸಮೋಹಕ್ಕೆ ಇರುವುದರಿಂದ ನೂತನ ಶಿಕ್ಷಣ ನೀತಿಯಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜ್ಞಾನ ಪರಿಷ್ಕರಣೆ ಮೂಲಕ ಸಮಗ್ರ ಅಭಿವೃದ್ಧಿಗಾಗಿ ಪಠ್ಯದ ಜತೆ ಪಠ್ಯತರ ಚಟುವಟಿಕೆಗಳಿಗೆ ಮನ್ನಣೆ ನೀಡಲಾಗಿದೆ ಎಂದು ತಿಳಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ದಯಾನಂದ ಅಗಸರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾರ್ಯದರ್ಶಿ ಡಾ.ಬಲ್ವಿತ್ ಸಿಂಗ್ ಸುಖೋನ್ ಅತಿಥಿಗಳಾಗಿ ಭಾಗವಹಿಸಿದರು. ಇದೇ ವೇಳೆಯಲ್ಲಿ ಯುವಜನೋತ್ಸವ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಗಮನ ಸೆಳೆದ ಜಾನಪದ ಕಲಾ ತಂಡಗಳು: ಇದಕ್ಕೂ ಮುನ್ನ ವಿವಿ ಆವರಣ ಬಯಲು ರಂಗ ಮಂದಿರದಿಂದ ಜಾನಪದ ಕಲಾ ತಂಡಗಳಿಂದ ನೃತ್ಯ ಮತ್ತು ವಾದ್ಯ ಮೇಳದೊಂದಿಗೆ ಯುವಜನೋತ್ಸದ ಬೃಹತ್ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ದಕ್ಷಿಣ ಪೂರ್ವ ವಲಯದ ಕರ್ನಾಟಕ, ತೆಲಂಗಾಣ ಹಾಗೂ ಚತ್ತಿಸಗಡ್ ರಾಜ್ಯಗಳ ಗುಲಬರ್ಗಾ ವಿವಿ, ಶರಣಬಸವ ವಿವಿ, ಖಾಜಾ ಬಂದೇ ನವಾಜ್ ವಿವಿ, ಬೆಂಗಳೂರು ವಿವಿ, ಮೈಸೂರು ವಿವಿ, ಮಂಗಳೂರು ವಿವಿ, ದಾವಣಗೆರೆ ವಿವಿ, ಶಿವಮೊಗ್ಗ ವಿವಿ, ಅಕ್ಕಮಹಾದೇವಿ ವಿವಿ, ಕೃಷಿ ವಿವಿ, ಚತ್ತಿಸಗಡ್ ವಿವಿ, ಸತ್ಯಸಾಯಿ ವಿವಿ ಸೇರಿ ಒಟ್ಟು 23 ವಿಶ್ವವಿದ್ಯಾಲಯಗಳ ಸುಮಾರು 1200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ನಾನು ಪಕ್ಷಾಂತರಿಯಾದರೆ ಏಳು ಪಕ್ಷ ಬದಲಿಸಿರುವ ಸಿದ್ದರಾಮಯ್ಯ ಯಾರು?: ಪ್ರಮೋದ್ ಮಧ‍್ವರಾಜ್

ವಿವಿ ಆವರಣದ ಬಯಲು ರಂಗ ಮಂದಿರದಿಂದ ಆರಂಭವಾದ ಮೆರವಣಿಗೆಯು ರಾಷ್ಟ್ರಕೂಟ ದ್ವಾರ ಹಾಗೂ ಚಾಲುಕ್ಯದ್ವಾರದಿಂದ ಸಭಾಂಗಣದವರೆಗೆ ಆಯಾ ರಾಜ್ಯಗಳ ವಿವಿಧ ಸಂಸ್ಕೃತಿಕ ಕಲೆಗಳನ್ನು ಪ್ರದರ್ಶನ ಮಾಡುತ್ತಾ ಸಾಗಿ ಬಂದವು. ಈ ವೇಳೆ ಕಲಬುರಗಿಯ ಶರಣಬಸವೇಶ್ವರ ಪಲ್ಲಕ್ಕಿ, ರಥ, ಬೆಂಗಳೂರಿನ ಪೂಜಾ ಕುಣಿತ, ಡೊಳ್ಳು ಕುಣಿತ, ವಿರಾಗಸೆ, ನಂದಿಕುಣಿತ, ಹಲಗೆ ವಾದನ, ಕಂಸಾಳೆ ವಾದನ, ತಮಟೆ ವಾದನ, ಮಂಗಳೂರಿನ ಹುಲಿ ಕುಣಿತ, ಚತ್ತಿಸಗಡ್ ರಾಜ್ಯ ನೃತ್ಯ ನೇರೆದವರ ಗಮನ ಸೆಳೆದವು.

Latest Videos
Follow Us:
Download App:
  • android
  • ios