'ಸಂಗಮೇಶ್ ವಿರುದ್ಧ 307 ಕೇಸ್ ಹಾಕಿ, ಬಿಜೆಪಿಗೆ ಕರ್ಕೊಂಡು ಹೋಗಲು ಯತ್ನಿಸಿದ್ದಾರೆ'
ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಹಾಗೂ ಆಡಳಿತರೂಢ ಪಕ್ಷ ಬಿಜೆಪಿ ನಡುವೆ ರಾಜಕೀಯ ಸಮರ ಶುರುವಾಗಿದೆ.
ಬೆಂಗಳೂರು, (ಮಾ.09): ಶಿಮಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರುಗಳ ಮಧ್ಯೆ ಶೀತಲ ಸಮರ ನಡೆದಿದೆ.
ಪ್ರೊ ಕಬಡ್ಡಿ ಪಂದ್ಯಾವಳಿ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಭದ್ರವಾತಿ ಕಾಂಗ್ರೆಸ್ ಶಾಸಕ ಬಿ ಕೆ ಸಂಗಮೇಶ್ವರ ಅವರ ಪುತ್ರ ಬಿ ಎಸ್ ಬಸವೇಶ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ರಾಜ್ಯ ಕಾಂಗ್ರೆಸ್ ಆಕ್ರೋಶಗೊಂಡಿದ್ದು, ಶಿವಮೊಗ್ಗ ಚಲೋ ನಡೆಸಲು ಮುಂದಾಗಿದೆ.
'ಇನ್ನೊಂದು ತಿಂಗಳಲ್ಲಿ ಬಿಎಸ್‌ವೈ, ಈಶ್ವರಪ್ಪ ಹಗರಣ ಬಯಲು'
ಇನ್ನು ಈ ಬಗ್ಗೆ ಇಂದು (ಮಂಗಳವಾರ) ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್,ಶಾಸಕ ಸಂಗಮೇಶ್ ಹಾಗೂ ಕುಟುಂಬದ ವಿರುದ್ಧ ಸುಳ್ಳು ಕೇಸ್ ಹಾಕಿಸಿದ್ದಾರೆ. 307 ಕೇಸ್ ಹಾಕಿ, ಒತ್ತಡ ಹಾಕಿ ಬಿಜೆಪಿಗೆ ಕರೆದುಕೊಂಡು ಹೋಗಲು ಪ್ರಯತ್ನ ನಡೆಸಿದ್ದಾರೆ.ಸಂಗಮೇಶ್ ಕುಟುಂಬದ ವಿರುದ್ಧ ಸುಳ್ಳು ಕೇಸ್ ಹಾಕಿದ್ದಾರೆ. ಇದನ್ನ ಖಂಡಿಸಿ ಮಾ.13 ರಂದು ಶಿವಮೊಗ್ಗ ಚಲೋ ನಡೆಸುತ್ತಿದ್ದೇವೆ ಎಂದರು.
ರಾಜ್ಯದ ವಿವಿಧೆಡೆ ಶಾಂತಿಭಂಗ ಮಾಡಿದವರ ವಿರುದ್ಧ ಕ್ರಮವಿಲ್ಲ. ನಮ್ಮ ಶಾಸಕರು, ಕಾರ್ಯಕರ್ತರ ಮೇಲೆ ನೂರಾರು ಕೇಸ್ಗಳನ್ನ ಹಾಕ್ತಿದ್ದಾರೆ. ಇದರ ವಿರುದ್ಧವಾಗಿ ಹೋರಾಟ ಮಾಡಲು ಚರ್ಚೆ ಮಾಡಿದ್ದೇವೆ. ಸದನದಲ್ಲಿ ಅಸಭ್ಯ ವರ್ತನೆ ಅಂತಾ ಹೇಳಿ ಅವರ ಹಕ್ಕಿಗೆ ಧಕ್ಕೆ ಉಂಟು ಮಾಡಿದ್ದಾರೆ. ಇದನ್ನ ಖಂಡಿಸಿ ಮಾ.13 ರಂದು ಶಿವಮೊಗ್ಗ ಚಲೋ ನಡೆಸುತ್ತಿದ್ದೇವೆ. ನಮ್ಮ ಪಕ್ಷದ ಕಾರ್ಯಕರ್ತರ ರಕ್ಷಣೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.