ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿ ಘೋಷಣೆ: ಯಾರಿಗೆ? ಯಾವುದು?
ರಾಜ್ಯದ ಒಟ್ಟು 19 ವಿವಿಧ ನಿಗಮಗಳು ಮತ್ತು ಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಆದೇಶ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧಿಕೃತ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?
ಬೆಂಗಳೂರು, [ಡಿ, 22]: ಕಾಂಗ್ರೆಸ್ ಹೈಕಮಾಂಡ್ ಇಬ್ಬರು ಹಾಲಿ ಸಚಿವರಿಗೆ ಕೊಕ್ ಕೊಟ್ಟ ಒಟ್ಟು 8 ಶಾಸಕರಿಗೆ ಸಚಿವ ಸ್ಥಾನ ನೀಡಿದೆ. ಅದರಂತೆ ಇಂದು [ಶನಿವಾರ] 8 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ಇನ್ನು ರಾಜ್ಯದ ಒಟ್ಟು 19 ವಿವಿಧ ನಿಗಮಗಳು ಮತ್ತು ಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಆದೇಶ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧಿಕೃತ ಘೋಷಣೆ ಮಾಡಿದ್ದಾರೆ.
ನೂತನ ಸಚಿವರ ಪ್ರಮಾಣ ವಚನ: ಯಾರ್ಯಾರಿಗೆ ಯಾವ್ಯಾವ ಖಾತೆ..?
ಇದರಲ್ಲಿ ಸಂಸದೀಯ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಜಯನಗರ ಶಾಸಕಿ ಸೌಮ್ಯರೆಡ್ಡಿ ಹೆಸರನ್ನು ಕೈಬಿಡಲಾಗಿದೆ. ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಶರಣಬಸಪ್ಪ ದರ್ಶನಾಪುರ್ ಅವರನ್ನ ನೇಮಿಸಿದ್ದಾರೆ.
ಸಂಪುಟ ವಿಸ್ತರಣೆ: ಸಿದ್ರಾಮಯ್ಯ ಹೇಳಿದಂತೆ ಉತ್ತರ ಕರ್ನಾಟಕಕ್ಕೆ ಅಗ್ರಸ್ಥಾನ
ನವದೆಹಲಿಯಲ್ಲಿ ವಿಶೇಷ ಪ್ರತಿನಿಧಿಯಾಗಿ ಡಾ. ಅಜಯ್ ಸಿಂಗ್ ಅವರನ್ನ ಆಯ್ಕೆ ಮಾಡಲಾಗಿದೆ. ಇನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ವಿ ಮುನಿಯಪ್ಪ ಅವರನ್ನ ನೇಮಿಸಲಾಗಿದೆ.
ಹಾಗಾದ್ರೆ ನಿಗಮ ಮಂಡಳಿಯಲ್ಲಿ ಯಾರ್ಯಾರಿದ್ದಾರೆ?
1. ಕರ್ನಾಟಕ ಭೂ ಸೇನಾ ನಿಗಮ- ಬಿ.ಕೆ.ಸಂಗಮೇಶ್ವರ್
2. ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮ- ನರೇಂದ್ರ ಆರ್.
3. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ- ಬಿ.ನಾರಾಯಣ ರಾವ್
4. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ- ಟಿ.ವೆಂಕಟರಮಣಯ್ಯ
5. ಕರ್ನಾಟಕ ಗೋದಾಮು ನಿಗಮ- ಡಾ.ಉಮೇಶ್ ಜಿ. ಜಾಧವ್
6. ಹಟ್ಟಿ ಚಿನ್ನದ ಗಣಿ ಲಿಮಿಟೆಡ್- ಟಿ.ರಘುಮೂರ್ತಿ
7. ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ- ಎಸ್.ಎನ್. ಸುಬ್ಬಾರೆಡ್ಡಿ
8. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ- ಯಶ್ವಂತ್ ರಾಯ್ ಗೌಡ ವಿ.ಪಾಟೀಲ್
9. ಕರ್ನಾಟಕ ಸಾಬೂನು ಮಾರ್ಜಕ ನಿಯಮಿತ ಮಂಡಳಿ- ಬಿ.ಎ.ಬಸವರಾಜು
10. ಕಿಯಾನಿಕ್ಸ್- ಬಿ.ಶಿವಣ್ಣ
11. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ- ನಾರಾಯಣಸ್ವಾಮಿ ಎಸ್.ಎನ್
12. ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ- ಮುನಿರತ್ನ
13. ವಾಯವ್ಯ ಕೆಎಸ್ಆರ್ಟಿಸಿ- ಶಿವರಾಮ್ ಹೆಬ್ಬಾರ್
14. ಬಿಎಂಆರ್ಡಿಎ – ಎನ್.ಎ. ಹ್ಯಾರಿಸ್
15. ಬಿಡಿಎ- ಸೋಮಶೇಖರ್ ಎಸ್.ಟಿ
16. ಕೆಎಸ್ಎಸ್ಐಡಿಸಿ- ಬಿ.ಎಸ್ ಸುರೇಶ್
17. ಮಾಲಿನ್ಯ ನಿಯಂತ್ರಣ ಮಂಡಳಿ- ಡಾ ಕೆ.ಸುಧಾಕರ್
18. ಮೈಸೂರು ಮಿನರಲ್ಸ್ ಲಿಮಿಟೆಟ್ – ಲಕ್ಷ್ಮೀ ಹೆಬ್ಬಾಳ್ಕರ್
19. ಮಲ್ನಾಡ್ ಏರಿಯಾ ಅಭಿವೃದ್ದಿ ಪ್ರಾಧಿಕಾರ – ಟಿ.ಡಿ ರಾಜೇಗೌಡ
ಸಂಸದೀಯ ಕಾರ್ಯದರ್ಶಿಗಳು
1. ಅಬ್ದುಲ್ ಜಬ್ಬರ್
2. ಅಂಜಲಿ ನಿಂಬಾಳ್ಕರ್
3. ಐವಾನ್ ಡಿಸೋಜ
4. ಮಹಾಂತೇಶ ಕೌಜಲಗಿ
5. ರೂಪ ಶಶಿಧರ್
6. ಕೆ. ಗೋವಿಂದರಾಜ್
7. ರಾಘವೇಂದ್ರ ಹಿಟ್ನಾಳ್
8. ಎಂ.ಎ ಗೋಪಾಲಸ್ವಾಮಿ
9. ದುರ್ಗಪ್ಪ ಹುಲಗೆರೆ