ಬೆಂಗಳೂರು, [ಡಿ.22]: ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರದ ಸಂಪುಟ ವಿಸ್ತರಣೆ ಕೊನೆಗೂ ಆಗಿದ್ದು, ರಾಜಭವನದಲ್ಲಿ ಇಂದು [ಶನಿವಾರ] ಸಂಜೆ ನಡೆದ ಕಾರ್ಯಕ್ರಮದಲ್ಲಿ ನಿಯೋಜಿತ ಸಚಿವರಿಗೆ ರಾಜ್ಯಪಾಲ ವಿ.ಆರ್​​.ವಾಲಾ ಅವರು ಪ್ರತಿಜ್ಞಾವಿಧಿ ಬೊಧಿಸಿದರು.

ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿ ಘೋಷಣೆ: ಯಾರಿಗೆ? ಯಾವುದು?

ಈ ಮೂಲಕ ಸಿಎಂ, ಡಿಸಿಎಂ ಹಾಗೂ 27 ಸಂಪುಟ ದರ್ಜೆ ಸಚಿವರು ಸೇರಿದ CM ಕುಮಾರಸ್ವಾಮಿ ಸರ್ಕಾರದಲ್ಲಿ ಇನ್ನೆರಡು ಸಚಿವ ಸ್ಥಾನ ಮಾತ್ರ ಬಾಕಿ ಉಳಿದುಕೊಂಡಿವೆ. ಶೂನ್ಯ ಮಾಸ ಮುಗಿದ ಬಳಿಕ ತನ್ನ ಕೋಟಾ ಭರ್ತಿಗೆ ಜೆಡಿಎಸ್ ಚಿಂತನೆ ಮಾಡಿದೆ.

ಸಂಪುಟ ವಿಸ್ತರಣೆ: ಸಿದ್ರಾಮಯ್ಯ ಹೇಳಿದಂತೆ ಉತ್ತರ ಕರ್ನಾಟಕಕ್ಕೆ ಅಗ್ರಸ್ಥಾನ

ಇನ್ನು ಸಂಪುಟ ವಿಸ್ತರಣೆ ಆಗಿದ್ದೇನು ಆಯ್ತು. ಈಗ ಹೊಸ ಸಚಿವರಿಗೆ ಯಾವ ಖಾತೆ ಎಂದು ಕಾಂಗ್ರೆಸ್ ನಲ್ಲಿ ಬಿರುಸಿನ ಚರ್ಚೆಗಳು ನಡೆದಿದ್ದು, ಈಗಿನ ಪ್ರಕಾರ ಕಾಂಗ್ರೆಸ್ ನಲ್ಲಿ ಚರ್ಚೆಯಾಗ್ತಿರುವ ಸಂಭಾವ್ಯ ಖಾತೆಗಳು ಆಧಾರದ ಮೇಲೆ ನೀಡಲಾತ್ತದೆ ಎಂದು ಮೂಲಗಳು ತಿಳಿಸಿವೆ.

ಹಾಗಾದ್ರೆ ಯಾರ್ಯಾರಿಗೆ ಯಾವ್ಯಾವ ಖಾತೆ..?
* M.B.ಪಾಟೀಲ್ ಗೆ ಡಾ.ಜಿ.ಪರಮೇಶ್ವರ್ ಬಳಿಯಿದ್ದ ಗೃಹ ಖಾತೆ ಸಾಧ್ಯತೆ
* M.T.B.ನಾಗರಾಜ್ ಗೆ ಖಾದರ್ ಬಳಿಯಿದ್ದ ನಗರಾಭಿವೃದ್ಧಿಖಾತೆ ಸಾಧ್ಯತೆ [ಬೆಂಗಳೂರು ನಗರ ಅಭಿವೃದ್ಧಿ ಹೊರತುಪಡಿಸಿ].
* ಆರ್. ಶಂಕರ್ ಕೈಬಿಟ್ಟಿದ್ದಿರಿಂದ ಸತೀಶ್ ಜಾರಕಿಹೊಳಿಗೆ ಅರಣ್ಯ ಖಾತೆ ಸಾಧ್ಯತೆ.
* ಶಿವಳ್ಳಿಗೆ ರಮೇಶ್ ಜಾರಕಿಹೊಳಿ ಹೊಂದಿದ್ದ ಪೌರಾಡಳಿತ ಖಾತೆ ಸಾಧ್ಯತೆ
* ರಹೀಂಖಾನ್ ಗೆ ಜಮೀರ್ ಬಳಿಯಿದ್ದ ಅಲ್ಪಸಂಖ್ಯಾತ ಕಲ್ಯಾಣ ಸಾಧ್ಯತೆ
* R.B.ತಿಮ್ಮಾಪುರಗೆ ಡಿಕೆಶಿ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆ ಸಾಧ್ಯತೆ
* ತುಕಾರಾಂಗೆ ಪರಮೇಶ್ವರ್ ಬಳಿಯಿದ್ದ ಯುವಜನ ಸೇವಾ ಖಾತೆ ಸಾಧ್ಯತೆ
* ಪಿ.ಟಿ.ಪರಮೇಶ್ವರ್ ನಾಯ್ಕ್ ಗೆ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ ಖಾತೆ ನೀಡುವ ಸಾಧ್ಯತೆಗಳಿವೆ.