Asianet Suvarna News Asianet Suvarna News

ಸಂಪುಟ ವಿಸ್ತರಣೆ: ಸಿದ್ರಾಮಯ್ಯ ಹೇಳಿದಂತೆ ಉತ್ತರ ಕರ್ನಾಟಕಕ್ಕೆ ಅಗ್ರಸ್ಥಾನ

ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಅಗ್ರ ಸ್ಥಾನ! ಸಿದ್ದರಾಮಯ್ಯ ಹೇಳಿದಂತೆ ಉತ್ತರ ಕರ್ನಾಟಕಕ್ಕೆ ಜಾಕ್‍ಪಾಟ್! ನೂತನ 8 ಸಚಿವರ ಪೈಕಿ ಉತ್ತರ ಕರ್ನಾಟಕದ 7 ಶಾಸಕರಿಗೆ ಮಂತ್ರಿಗಿರಿ. ಯಾರ್ಯಾರಿಗೆ? ಇಲ್ಲಿದೆ ಲೀಸ್ಟ್

Karnataka Congress Gives More Priority to Uttara Karnataka in  Cabinet Expansion
Author
Bengaluru, First Published Dec 22, 2018, 4:58 PM IST
  • Facebook
  • Twitter
  • Whatsapp

ಬೆಂಗಳೂರು, [ಡಿ.22]  ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಅಗ್ರಪಾಲು ದೊರೆತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ಕೈ ಹೈಕಮಾಂಡ್ ನಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

8 ನೂತನ ಸಚಿವರ ಪೈಕಿ 7 ಸಚಿವ ಸ್ಥಾನಗಳು ಉತ್ತರ ಕರ್ನಾಟಕ ಶಾಸಕರಿಗೆ ನೀಡಿರುವ ಕಾಂಗ್ರೆಸ್ ಹೇಳಿದಂತೆ ನಡೆದುಕೊಂಡಿದೆ. ಸಂಪುಟ ವಿಸ್ತರಣೆ, ಪುನಾರಚನೆ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ಅನ್ಯಾಯವಾಗಿದೆ, ತಾರತಮ್ಯ ಮಾಡಲಾಗುತ್ತಿದೆ ಎಂಬ ಪ್ರಬಲ ಆರೋಪಗಳು ಕೇಳಿಬಂದಿದ್ದವು.

8 ಜನರಿಗೆ ಮಂತ್ರಿ, ನಿಗಮ ಮಂಡಳಿಗೆ 20 ಶಾಸಕರು: ಇಲ್ಲಿದೆ ಪಟ್ಟಿ

ಈ ಆರೋಪಗಳನೆಲ್ಲ ಗಮನಿಸಿರುವ ಕಾಂಗ್ರೆಸ್ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಸರಿದೂಗಿಸಿದೆ. ಇನ್ನು ನಿಗಮ ಮಂಡಳಿಯಲ್ಲಿ ಸಮಪಾಲು ನೀಡಿದೆ.

 ಉತ್ತರ ಕರ್ನಾಟಕದ ನೂತನ 7 ಸಚಿವರು ಯಾರ್ಯಾರು?

ತುಕಾರಾಂ [ಸಂಡೂರರು], ಪಿ.ಟಿ ಪರಮೇಶ್ವರ್ ನಾಯಕ್ [ಹೂವಿನಹಡಗಲಿ], ಸಿ.ಎಸ್ ಶಿವಳ್ಳಿ [ಕುಂದಗೋಳ] , ಎಂ.ಬಿ ಪಾಟೀಲ್ [ಬಬಲೇಶ್ವರ] ರಹೀಂಖಾನ್ [ಬೀದರ್], ಸತೀಶ್ ಜಾರಕಿಹೊಳಿ [ಯಮಕನಮರಡಿ], ಆರ್.ಬಿ ತಿಮ್ಮಾಪುರ [ಬಾಗಲಕೋಟೆ].

Follow Us:
Download App:
  • android
  • ios