ಅವರ ಮನೆಯ ಹೆಣ್ಣನ್ನು ದಾರಿತಪ್ಪಿಸಿದ್ದು ಕುಮಾರಸ್ವಾಮಿ: ಕೆಪಿಸಿಸಿ ಸದಸ್ಯೆ ಚಂದ್ರಕಲಾ ಆಕ್ರೋಶ
ಲೋಕಸಮರದ ಒತ್ತಿನಲ್ಲಿ ರಾಜಕಾರಣಿಗಳು ತಮ್ಮ ಬಾಯಿಯನ್ನು ಹರಿಬಿಟ್ಟು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಕೂಡ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಗ್ಯಾರೆಂಟಿ ಯೋಜನೆಗಳಿಂದ ತಾಯಂದಿರು ಸ್ವಲ್ಪ ದಾರಿತಪ್ಪಿದ್ದಾರೆ ಎಂದಿದ್ದರು.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಏ.15): ಲೋಕಸಮರದ ಒತ್ತಿನಲ್ಲಿ ರಾಜಕಾರಣಿಗಳು ತಮ್ಮ ಬಾಯಿಯನ್ನು ಹರಿಬಿಟ್ಟು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಕೂಡ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಗ್ಯಾರೆಂಟಿ ಯೋಜನೆಗಳಿಂದ ತಾಯಂದಿರು ಸ್ವಲ್ಪ ದಾರಿತಪ್ಪಿದ್ದಾರೆ ಎಂದಿದ್ದರು. ಆ ಹೇಳಿಕೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೈತ್ರಿ ಪಕ್ಷಗಳನ್ನು ಹಣಿಯಲು ಬೃಹತ್ ಪ್ರತಿಭಟನೆಗೆ ಪ್ಲಾನ್ ರೂಪಿಸಿದೆ. ಹೌದು ಮಾತಿನ ಭರದಲ್ಲಿ ಮಹಿಳೆಯರಿಗೆ ಅಪಮಾನ ಆಗುವ ರೀತಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಯೋಜನೆಗಳನ್ನು ಟೀಕಿಸಿದ್ದರು.
ಹೀಗಾಗಿ ಬುಧವಾರ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದಿಂದ ಪ್ರತಿಭಟನೆಗೆ ಪ್ಲಾನ್ ರೂಪಿಸಿದೆ. ನೂರಾರು ಮಹಿಳೆಯನ್ನು ಸೇರಿಸಿ ಪ್ರತಿಭಟನೆ ನಡೆಸಿ ಬಳಿಕ ಕುಮಾರಸ್ವಾಮಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳ ಮೂಲಕ ಮಹಿಳಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದೆ. ಈ ಕುರಿತು ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ, ಕೆಪಿಸಿಸಿ ಸದಸ್ಯೆ ಚಂದ್ರಕಲಾ ಸೇರಿದಂತೆ ಜಿಲ್ಲಾ ಮಹಿಳಾ ಘಟಕದ ನೇತೃತ್ವದಲ್ಲಿ ಸುದ್ದಿಗೋಷ್ಟಿ ನಡೆಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಮಾತನಾಡಿದ ಕೆ.ಪಿ. ಚಂದ್ರಕಲಾ ತಮ್ಮ ಮನೆಯ ಹೆಣ್ಣು ಮಗಳನ್ನು ದಿಕ್ಕುತಪ್ಪಿಸಿ ರಾಧಿಕಾ ಅವರ ಮನೆಯಲ್ಲಿ ಇದ್ದಿದ್ದು ಯಾರೆಂದು ಗೊತ್ತಿದೆ.
ಬೀದರ್ ಕ್ಷೇತ್ರ ಅಭಿವೃದ್ಧಿಯಲ್ಲಿ ಭಗವಂತ ಖೂಬಾ ವಿಫಲ: ಸಚಿವ ಈಶ್ವರ ಖಂಡ್ರೆ
ಈಗ ರಾಜ್ಯದ ಮಹಿಳೆಯನ್ನು ದಾರಿತಪ್ಪಿಸುವ ರೀತಿಯ ಮಾತುಗಳನ್ನು ಕುಮಾರಸ್ವಾಮಿ ಅವರು ಮಾಡಿರುವುದು ಸರಿಯಲ್ಲ. ಸರ್ಕಾರದ ಯೋಜನೆಗಳನ್ನು ಪಡೆದುಕೊಂಡು ಯಾವ ಹೆಣ್ಣುಮಕ್ಕಳು ದಾರಿತಪ್ಪಿಲ್ಲ. ಹಿಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಕುಮಾರಸ್ವಾಮಿ ಅವರ ಸಹೋದರ ಸುಮಲತಾ ಅವರ ವಿರುದ್ಧ ಕೆಟ್ಟದಾಗಿ ಮಾತನಾಡಿದರು. ಅದರ ಪರಿಣಾಮ ಜೆಡಿಎಸ್ ಮಂಡ್ಯದಲ್ಲಿ ಏನಾಯಿತು ಎಂಬುದು ಗೊತ್ತಿದೆ. ಇದೀಗ ರಾಜ್ಯದ ಮಹಿಳೆಯರು ಮೈತ್ರಿ ಪಕ್ಷಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದಿದ್ದಾರೆ.
ಇನ್ನು ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ ಅವರು ಮಾತನಾಡಿ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಆದವರು. ಅವರಿಗೆ ಈ ಮಾತು ತಕ್ಕುದಾದದ್ದು ಅಲ್ಲ. ಅವರ ಈ ಮಾತನ್ನು ಯಾವ ಹೆಣ್ಣುಮಕ್ಕಳು ಸಹಿಸಿಕೊಳ್ಳುವುದಿಲ್ಲ. ಕುಮಾರಸ್ವಾಮಿ ಅವರು ಹೆಣ್ಣನ್ನು ಯಾವ ರೀತಿ ನೋಡುತ್ತಾರೆ ಎನ್ನುವುದು ಈ ಮಾತಿನಿಂದಲೇ ಅರ್ಥವಾಗುತ್ತದೆ. ನಮ್ಮ ಸರ್ಕಾರದ ಯೋಜನೆಯ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೆ ಈ ರೀತಿ ಮಾತನಾಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಕಡುವರ ಅಭಿವೃದ್ಧಿ ಬೇಕಾಗಿಲ್ಲ. ಹೀಗಾಗಿ ಈ ರೀತಿ ಮಾತನಾಡಿದ್ದಾರೆ ಎಂದಿದ್ದಾರೆ.
Lok Sabha Election 2024: ಭರವಸೆಗಳನ್ನು ಬಿಜೆಪಿ ಯಾವತ್ತೂ ಈಡೇರಿಸಿಲ್ಲ: ಸಿಎಂ ಸಿದ್ದರಾಮಯ್ಯ
ಮಹಿಳೆ ಎಂದೆಂದಿಗೂ ಸ್ವಾಭಿಮಾನಿ, ಸ್ವಾಭಿಮಾನಿ ಮಹಿಳೆಯರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಮೈತ್ರಿ ಪಕ್ಷಗಳಿಗೆ ಮಹಿಳೆಯರು ಸರಿಯಾದ ಬುದ್ಧಿ ಕಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಹೀಗಾಗಿಯೇ ಮಹಿಳಾ ಘಟಕದಿಂದ ಇದೇ 17 ರಂದು ಮಡಿಕೇರಿಯ ಖಾಸಗೀ ಹಳೇ ಬಸ್ಸು ನಿಲ್ದಾಣದಲ್ಲಿ ನೂರಾರು ಮಹಿಳೆಯರು ಸೇರಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಒಟ್ಟಿನಲ್ಲಿ ಮಹಿಳೆಯರ ವಿರುದ್ಧ ಕೀಳು ಮಾತನಾಡಿದ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದ್ದು, ಆ ಮೂಲಕ ಮೈತ್ರಿ ಪಕ್ಷಗಳನ್ನು ಹಣಿಯಲು ನಿರ್ಧಾರ ಮಾಡಿದೆ.