Asianet Suvarna News Asianet Suvarna News

ಟೀಕಿಸುವವರಿಗೆ ಕೋಲಾರ ಜಿಲ್ಲಾಭಿವೃದ್ಧಿಯೇ ಉತ್ತರ: ಸಿಎಂ ಸಿದ್ದರಾಮಯ್ಯ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಐದು ಗ್ಯಾರಂಟಿ ಘೋಷಣೆ ಬಳಿಕ ಅಭಿವೃದ್ದಿ ಕಾರ‍್ಯಗಳಿಗೆ ಹಣವಿಲ್ಲದೆ ಅಭಿವೃದ್ದಿ ಸಂಪೂರ್ಣವಾಗಿ ಕುಂಟಿತವಾಗಿದೆ ಎಂದು ವಿರೋಧ ಪಕ್ಷಗಳ ಆರೋಪ ಮಾಡುತ್ತಿದ್ದಾರೆ, ಅವರು ಒಮ್ಮೆ ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳನ್ನು ಕಣ್ಣು ತೆರೆದು ನೋಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. 

Kolar district development is the answer to critics Says CM Siddaramaiah gvd
Author
First Published Nov 12, 2023, 10:23 PM IST

ಬಂಗಾರಪೇಟೆ (ನ.12): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಐದು ಗ್ಯಾರಂಟಿ ಘೋಷಣೆ ಬಳಿಕ ಅಭಿವೃದ್ದಿ ಕಾರ‍್ಯಗಳಿಗೆ ಹಣವಿಲ್ಲದೆ ಅಭಿವೃದ್ದಿ ಸಂಪೂರ್ಣವಾಗಿ ಕುಂಟಿತವಾಗಿದೆ ಎಂದು ವಿರೋಧ ಪಕ್ಷಗಳ ಆರೋಪ ಮಾಡುತ್ತಿದ್ದಾರೆ, ಅವರು ಒಮ್ಮೆ ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳನ್ನು ಕಣ್ಣು ತೆರೆದು ನೋಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು. ಅವರು ತಾಲೂಕಿನ ಯರಗೋಳ್ ಗ್ರಾಮದಲ್ಲಿ ಮೂರು ತಾಲೂಕಿನ ಜನರಿಗೆ ಕುಡಿಯುವ ನೀರಾವರಿ ಯೋಜನೆಯಾದ ಯರಗೋಳ್ ಅಣೆಕಟ್ಟು ಯೋಜನೆಯನ್ನು ಲೋಕಾರ್ಪಣೆ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 2263 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಭಿವೃದ್ಧಿಗೆ ಗ್ಯಾರಂಟಿ ಅಡ್ಡಿಯಾಗಿಲ್ಲ: ಸರ್ಕಾರದಲ್ಲಿ ಹಣವಿಲ್ಲದಿದ್ದರೆ ಇಷ್ಟು ಮೊತ್ತದ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು. 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದರೂ ಅಭಿವೃದ್ದಿ ಪರ್ವ ನಿಂತಿಲ್ಲ ವಿಪಕ್ಷಗಳು ಬರೀ ರಾಜಕಾರಣಕ್ಕಾಗಿ ಟೀಕೆ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಕೋಲಾರ, ಎತ್ತಿನಹೊಳೆ ಯೋಜನೆ ಅನುಷ್ಠನಗೊಳಿಸಿ ಚಿಕ್ಕಬಳ್ಳಾಪುರ, ತುಮಕೂರು, ಹಾಸನ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರನ್ನು ಈ ಅವಧಿಯಲ್ಲೆ ನೀಡುತ್ತೇವೆ. ಜಿಲ್ಲೆಯಲ್ಲಿ ಕೆಸಿ ವ್ಯಾಲಿ ನೀರು ಹರಿಸುವ ಮೂಲಕ ಕೆರೆಗಳನ್ನು ತುಂಬಿಸಿದ್ದು ಜಿಲ್ಲೆಯ ಎಲ್ಲ ಶಾಸಕರು ಕಾರಣವೇ ಹೊರತು ವಿರೋಧ ಪಕ್ಷಗಳಲ್ಲ ಎಂದರು.

ರಾಜಕಾರಣದಲ್ಲಿ ಕಾಫಿ, ಡಿನ್ನರ್‌ಗೆ ಬಹಳ ಮಹತ್ವವಿದೆ: ಶಾಸಕ ರವಿ ಗಣಿಗ

ಕೆಸಿ ವ್ಯಾಲಿಗೆ ಎಚ್ಡಿಕೆ ವಿರೋಧಿಸಿದ್ದರು: ಕೆಸಿ ವ್ಯಾಲಿ ನೀರು ಜಿಲ್ಲೆಗೆ ಹರಿಸಿ ಕುಡಿಯುವ ನೀರಿನ ಭವಣೆ ನೀಗಿಸಲು ಮುಂದಾದಾಗ ಹೆಚ್.ಡಿ.ಕುಮಾರಸ್ವಾಮಿ ವಿರೋಧಿಸಿದರು ಅದು ವಿಷ ಎಂದು ಜನರಲ್ಲಿ ತಪ್ಪು ಭಾವನೆ ಬರುವಂತೆ ಮಾಡಿದರು. ಈಗ ಕೆರೆಗಳು ತುಂಬಿವೆ. ನೀರು ಬಳಸಿ ಯಾರಾದರು ಸತ್ತರೆ ಎಂದು ಪ್ರಶ್ನಿಸಿದರು. ಕೆಸಿ ವ್ಯಾಲಿ ನೀರನ್ನು ವಿಶ್ವಸಂಸ್ಥೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನು ತಿಳಿಯದೆ ರಾಜಕೀಯ ಲಾಭಕ್ಕಾಗಿ ಟೀಕೆ ಮಾಡುವುದು ಸರಿಯಿಲ್ಲ ಎಂದರು. ಈ ಹಿಂದೆ ಜಿಲ್ಲೆಯಲ್ಲಿ ಬರದಿಂದ ಕುಡಿಯುವ ನೀರಿಲ್ಲದೆ ಟ್ಯಾಂಕರ್ ಮೂಲಕ ನೀರನ್ನು ಖರೀದಿ ಮಾಡುವಂತ ಸ್ಥಿತಿ ಇತ್ತು,ಇನ್ನು ಅರಿತು ಮಾಕಂಡೇಯ ನೀರು ಹರಿದರೆ ಹಾಗೂ ಮಳೆ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿಯುವುದನ್ನು ತಡೆದು ಯರಗೋಳ್‌ ಡ್ಯಾಂ ಕಟ್ಟಿದ್ದರಿಂದ ಮೂರು ತಾಲೂಕಿನ ಜನರಿಗೆ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.

ಡ್ಯಾಂಗ್‌ ಬಾಗಿನ ಅರ್ಪಣೆ: ಇದಕ್ಕೂ ಮೊದಲು ಮುಖ್ಯಮಂತ್ರಿಗಳು ಡ್ಯಾಂಗೆ ಬಾಗಿನ ಅರ್ಪಿಸಿದರು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್,ಸಚಿವರಾದ ರಾಮಲಿಂಗಾರೆಡ್ಡೆ, ಕೃಷ್ಣಬೈರೆಗೌಡ, ಉನ್ನತಶಿಕ್ಷಣ ಸಚಿವ ಸುಧಾಕರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ವೆಂಕಟಶಿವಾರೆಡ್ಡಿ, ರೂಪಕಲಾಶಶಿಧರ್, ಕೆ.ವೈ.ನಂಜೇಗೌಡ, ಕೊತ್ತರೂ ಮಂಜುನಾಥ್, ಸಮೃದ್ದಿ ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಪಂ ಸಿಎಸ್ ಪದ್ಮ ಬಸಂತಪ್ಪ, ತಹಸೀಲ್ದಾರ್ ರಶ್ಮಿ,ಮತ್ತಿತರರು ಇದ್ದರು.

ರಾಮನಗರದಲ್ಲಿ ಒನಕೆ ಓಬವ್ವ ಭವನ ನಿರ್ಮಾಣಕ್ಕೆ ಕ್ರಮ: ಶಾಸಕ ಇಕ್ಬಾಲ್ ಹುಸೇನ್

ಕೆಜಿಎಫ್‌ಗೆ ನೀರು: ಮುಂದಿನ ದಿನಗಳಲ್ಲಿ ಯರಗೋಳ್ ಜಲಾಶಯದ ಕುಡಿಯುವ ನೀರನ್ನು ಕೆ.ಜಿ.ಎಫ್ ತಾಲೂಕಿಗೂ ವಿಸ್ತರಣೆ ಮಾಡಲು ಚಿಂತಿಸಲಾಗುತ್ತಿದೆ. ಜಿಲ್ಲೆಯ ಅಪೂರ್ವ ರಮ್ಯ ಸ್ಥಳಗಳಲ್ಲಿ ಇದೂ ಸೇರಲಿದೆ ಎಂದರು. ಕೆಜಿಎಫ್‌ಗೆ ಯರಗೋಳ್‌ ಡ್ಯಾಂ ಉದ್ಘಾಟನೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಕೆಜಿಎಫ್ ಶಾಸಕಿ ರೂಪಕಲಾಶಶಿಧರ್ ಮನವಿಯನ್ನು ಪ್ರಸ್ತಾಪಿಸಿದರು. ಡ್ಯಾಂನಲ್ಲಿ ನೀರಿನ ಲಭ್ಯತೆಯನ್ನು ನೋಡಿಕೊಂಡು ಹಾಗೂ ತಜ್ಙರಿಂದ ಮಾಹಿತಿ ಪಡೆದು ನೀರು ಕೊಡಬಹುದು ಎಂದು ವರದಿ ಬಂದರೆ ಎಷ್ಟೇ ಖರ್ಚಾದರೂ ಚಿಂತೆ ಇಲ್ಲ ಕೆಜಿಎಫ್ ನಗರಕ್ಕೂ ಯರಗೋಳ್ ಡ್ಯಾಂ ನೀರನ್ನು ಹರಿಸಲಾಗುವುದು ಎಂದು ಭರವಸೆ ನೀಡಿದರು. ಬೆಮೆಲ್‌ನಿಂದ ವಾಪಸ್ ಪಡೆಯಲಾದ 914 ಎಕರೆ ಭೂಮಿಯಲ್ಲಿ ಅತ್ಯಾಧುನಿಕ ಟೌನ್ ಶಿಪ್ ನಿರ್ಮಾಣ ಮಾಡಲಾಗುವುದು. ಕೋಲಾರ ಜಿಲ್ಲೆಯಲ್ಲಿ ೫೦ ಎಕರೆಗಳ ಜಾಗದಲ್ಲಿ ಕೋಮುಲ್ ಮೆಗಾ ಗೋಲ್ಡನ್ ಡೇರಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.

Follow Us:
Download App:
  • android
  • ios