ರಾಮನಗರದಲ್ಲಿ ಒನಕೆ ಓಬವ್ವ ಭವನ ನಿರ್ಮಾಣಕ್ಕೆ ಕ್ರಮ: ಶಾಸಕ ಇಕ್ಬಾಲ್ ಹುಸೇನ್
ಪ್ರಪಂಚದಲ್ಲಿ ಕೋಟಿ ಕೋಟಿ ಜನ ಹುಟ್ಟುತ್ತಾರೆ ಹಾಗೂ ಸಾಯುತ್ತಾರೆ. ಆದರೆ, ಕೆಲವರು ಮಾತ್ರ ಇತಿಹಾಸದ ಪುಟಗಳಲ್ಲಿ ಸೇರುತ್ತಾರೆ. ಅಂತವರ ಸಾಲಿನಲ್ಲಿ ಧೈರ್ಯ ವೀರ ಶೌರ್ಯ ವೀರವನಿತೆ ಒನಕೆ ಓಬವ್ವ ಸೇರುತ್ತಾರೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.
ರಾಮನಗರ (ನ.12): ಪ್ರಪಂಚದಲ್ಲಿ ಕೋಟಿ ಕೋಟಿ ಜನ ಹುಟ್ಟುತ್ತಾರೆ ಹಾಗೂ ಸಾಯುತ್ತಾರೆ. ಆದರೆ, ಕೆಲವರು ಮಾತ್ರ ಇತಿಹಾಸದ ಪುಟಗಳಲ್ಲಿ ಸೇರುತ್ತಾರೆ. ಅಂತವರ ಸಾಲಿನಲ್ಲಿ ಧೈರ್ಯ ವೀರ ಶೌರ್ಯ ವೀರವನಿತೆ ಒನಕೆ ಓಬವ್ವ ಸೇರುತ್ತಾರೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ನಾಡು, ರಾಷ್ಟ್ರ, ವಿಶ್ವ ಇತಿಹಾಸದಲ್ಲಿ ಇತಿಹಾಸ ಸೃಷ್ಟಿ ಮಾಡಿರುವ ಮಹನೀಯರ ಜಯಂತಿಯನ್ನು ಆಚರಿಸುತ್ತೇವೆ. ಆದರೆ, ಧೀರ ನಾರಿ, ವೀರ ವನಿತೆ ಒನಕೆ ಓಬವ್ವ ಅವರಲ್ಲರಿಗೂ ವಿಭಿನ್ನವಾದವರು ಎಂದು ಹೇಳಿದರು.
ಛಲವಾದಿ ಸಮಾಜದಲ್ಲಿ ತಳ ಮಟ್ಟದ ಸಮುದಾಯದಲ್ಲಿ ಹುಟ್ಟಿ ಒಬ್ಬ ಕೋಟೆ ಕಾವಲುಗಾರನ ಹೆಂಡತಿಯಾಗಿ ಇತಿಹಾಸ ಸೃಷ್ಟಿಸಿದವರು. ವೀರರಾಣಿ ಒನಕೆ ಓಬವ್ವನವರು. ಅವರ ಧೈರ್ಯತನ, ವೀರತನ, ಶೂರತನವುಳ್ಳ ವೀರರಾಣಿ ಒನಕೆ ಓಬವ್ವರನ್ನು ನೆನಪಿಸಿಕೊಳ್ಳುವಂತಹ ದಿನ. ನಮ್ಮ ನಾಡಿಗೆ ಆಪತ್ತು ಬಂದಿದೆ ಎಂದು ತಿಳಿದು ಶಸ್ತ್ರಭ್ಯಾಸ, ವಿದ್ಯೆ, ಸೈನ್ಯ ತರಬೇತಿ ಏನು ತಿಳಿಯದೆ ತಮ್ಮ ಧೈರ್ಯದಿಂದ ಎದುರಾಳಿಯ ನೂರಾರು ಸೈನಿಕರೊಂದಿಗೆ ಹೋರಾಡಿ ತಮ್ಮ ಕೋಟೆಯ ರಕ್ಷಣೆ ಮಾಡಿದರು ಎಂದು ತಿಳಿಸಿದರು. ನಾಡಿನ ಇತಿಹಾಸದಲ್ಲಿ ಅಮರರಾಗಿರುವಂತಹ ಒನಕೆ ಓಬವ್ವನವರ ದಿನಾಚರಣೆಯನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ.
ಕಾಡಾನೆ ಹಾವಳಿ ತಡೆ: ಸಿಎಂ ಭೇಟಿ ಮಾಡಿದ ಸಂಸದ ಡಿ.ಕೆ.ಸುರೇಶ್
ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದಂತಹ ಹೈದರಾಲಿಯ ಸೈನ್ಯವನ್ನು ಮಣಿಸಿ ತನ್ನ ಕೋಟೆಯ ರಕ್ಷಣೆ ಮಾಡಿ, ಕೊನೆಗೆ ತನ್ನ ಪ್ರಾಣವನ್ನು ತ್ಯಾಗ ಮಾಡಿದ ವೀರ ಮಣಿ, ವೀರ ನಾಯಕಿ ಒನಕೆ ಓಬವ್ವ ಎಂದು ಇಕ್ಬಾಲ್ ಹುಸೇನ್ ಹೇಳಿದರು. ಹೆಣ್ಣು ಮಕ್ಕಳು ಇತಿಹಾಸದಲ್ಲಿ ಅಪರೂಪ ಕಾಣಿಸಿಕೊಳ್ಳುತ್ತಾರೆ. ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ ಸೇರಿದಂತೆ ಅನೇಕ ಮಹಿಳೆಯರನ್ನು ಇಂದು ನಾವು ನೆನಪಿಸಿಕೊಳ್ಳುವಂತಹ ದಿನವಾಗಿದೆ. ಚಿತ್ರದುರ್ಗದಲ್ಲಿರುವ ಕೋಟೆ ಕಲ್ಲುಗಳು ವೀರ ರಾಣಿ ಒನಕೆ ಓಬವ್ವರ ಹೆಸರು ತಿಳಿಸುತ್ತದೆ. ಅವರ ಪ್ರತಿಮೆ ಕೂಡ ಅನಾವರಣವಾಗಿದೆ.
ಇವರ ಹೆಸರು ಅಮರವಾಗಿದೆ. ನಾವು ಇದನ್ನು ಗುರುತಿಸಿ ಆಚರಣೆ ಮಾಡುವುದು ಸಂತೋಷವಾದ ವಿಷಯವಾಗಿದೆ ಹಾಗೂ ರಾಮನಗರದಲ್ಲಿ ಒನಕೆ ಓಬವ್ವನ ಭವನ ನಿರ್ಮಾಣ ಮಾಡಲು ಕ್ರಮ ವಹಿಸುವುದಾಗಿ ತಿಳಿಸಿದರು. ಕಲಾವಿದರಾದ ಲಕ್ಷ್ಮೀದೇವಮ್ಮ, ಪೌರ ಕಾರ್ಮಿಕರಾದ ಯಲ್ಲಮ್ಮ, ಸೂಲಿಗಿತ್ತಿ ಹುಚ್ಚಮ್ಮ, ಸಮಾಜ ಸೇವೆಗಾಗಿ ಜಯಲಕ್ಷಮ್ಮ, ಆಶಾ, ಪ್ರಮೀಳಾ, ಮತ್ತು ಗೌರಮ್ಮ, ವೈದ್ಯಕೀಯ ಸೇವೆಗಾಗಿ ಸರೋಜಮ್ಮ, ಅಧಿಕಾರಿಗಳಾದ ಸರೋಜದೇವಿ, ರಮ್ಯ, ಅನಿತಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರಿಗೆ ವೀರವನಿತೆ ಒನಕೆ ಓಬವ್ವರವರ ಭಾವಚಿತ್ರವನ್ನು ವಿವಿಧ ಕಲಾ ತಂಡದೊಂದಿಗೆ ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.
ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಪತ್ರಕರ್ತ ಚಲುವರಾಜು, ಜಿಲ್ಲಾ ಜಾಗೃತಿ ಸಮಿತಿ ಹಾಗೂ ಉಪ ಸಮಿತಿಯ ಸದಸ್ಯರಾದ ಶಿವಕುಮಾರಸ್ವಾಮಿ, ಶಿವಕುಮಾರ್, ಶಿವಪ್ರಕಾಶ್, ಕಿರಣ್, ಅಂಜನಾಪುರ ವಾಸು, ಮಾಗಡಿ ದೊಡ್ಡಯ್ಯ, ಹರೀಶ್ ಬಾಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ರಮ್ಯ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸರೋಜದೇವಿ, ಯುವ ಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಉಪಸ್ಥಿತರಿದ್ದರು.