ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ನಟ ಕಿಚ್ಚ ಸುದೀಪ ಚುನಾವಣಾ ಪ್ರಚಾರ ಮಾಡಿದರು. 

ಬೆಂಗಳೂರು (ಮೇ 07): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ರಾಜ್ಯಾದ್ಯಂತ ಮಾಡಿದ್ದ ನಾನು, ಬೆಂಗಳೂರಿನಲ್ಲಿ ಮುನಿರತ್ನ ಪರವಾಗಿ ಪ್ರಚಾರ ಮಾಡುತ್ತಿರುವುದು ಖುಷಿಯಾಗಿದೆ. ಮುನಿ ಗೆಲ್ಲೋದು ಬೇರೆ ಅಲ್ಲಾ, ನಾನು ಗೆಲ್ಲೋದು ಬೇರೆ ಅಲ್ಲ, ಎರಡೂ ಒಂದೇ. ಮುನಿ ಗೆದ್ದರೆ ನಾನೇ ಗೆದ್ದಂಗೆ ಎಂದು ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ ಹೇಳಿದರು.

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ರೋಡ್‌ ಶೋ ಮೂಲಕ ಪ್ರಚಾರವನ್ನು ಆರಂಭಿಸಿದ ನಟ ಕಿಚ್ಚ ಸುದೀಪ, ಮುನಿರತ್ನ ಪರವಾಗಿ ಮಾತನಾಡಿದರು. ಇಷ್ಟು ದಿನ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಮ ಜೊತೆಯಲ್ಲಿ ಕರ್ನಾಟಕವನ್ನು ಸುತ್ತಾಡಿದ್ದೆನು. ಈಗ ಬೆಂಗಳೂರಿನಲ್ಲಿಯೇ ಪ್ರಚಾರ ಮಾಡುತ್ತಿರುವುದಕ್ಕೆ ಭಾರಿ ಖುಷಿಯಾಗಿದೆ. ಇನ್ನು ಮುನಿರತ್ನ ಗೆಲ್ಲುವುದು, ನಾನು ಗೆಲ್ಲುವುದು ಎರಡೂ ಒಂದೇ ಆಗಿದೆ. ಮುನಿ ಗೆದ್ದರೆ ನಾನು ಗೆದ್ದಂಗೆ, ಅವರನ್ನು ಗೆಲ್ಲಿಸಬೇಕು. ಗೆದ್ದೇ ಗೆಲ್ಲುವೆವು ಒಂದು ದಿನ, ಗೆದ್ದೇ ಗೆಲ್ಲುತ್ತೆ ಒಳ್ಳೆತನ. ಮುನಿರತ್ನ ಗೆಲುವಿಗೆ ಅವರ ಕೆಲಸಗಳೇ ಕಾರಣ ಎಂದು ಹೇಳಿದರು. 

ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರಚಾರ ಅಂತ್ಯ: 18 ಸಮಾವೇಶ, 6 ರೋಡ್‌ ಶೋಗಳ ಮಾಹಿತಿ ಇಲ್ಲಿದೆ!

ಆರ್.ಆರ್. ನಗರದ ವಿವಿಧೆಡೆ ಪ್ರಚಾರ: ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅದ್ದೂರಿ ಪ್ರಚಾರಕ್ಕೆ ನಟ ಕಿಚ್ಚ ಸುದೀಪ್ ಕೂಡ ಭರ್ಜರಿಯಾಗಿಯೇ ಸಾಥ್‌ ನೀಡಿದರು. ಇದೇ ಮೊಟ್ಟ ಮೊದಲ ಬಾರಿ ಬೆಂಗಳೂರಿನಲ್ಲಿ ಮತ ಬೇಟೆಗಿಳಿದ ಕಿಚ್ಚ ಸುದೀಪ್, ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಭರ್ಜರಿ ಮತಬೇಟೆ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರಕ್ಕಿಳಿದ ಮುನಿರತ್ನ ಹಾಗೂ ಸುದೀಪ್‌ ಕೊಟ್ಟಿಗೆಪಾಳ್ಯ, ಲಗ್ಗೆರೆ, ಲಕ್ಷ್ಮೀ ದೇವಿ ನಗರ ಸೇರಿ ವಿವಿಧ ವಾರ್ಡ್ ಗಳಲ್ಲಿ ಕಾರ್ಯಕರ್ತರ ಜೊತೆಗೂಡಿ ಪ್ರಚಾರ ಮಾಡಿದರು.

ಸುದೀಪ್‌ ಹಿಂದೆಯೋ ಜೊತೆಗಿದ್ರು, ಈಗಲೂ ಜೊತೆಗಿದ್ದಾರೆ: ಬಿಜೆಪಿ ಅಭ್ಯರ್ಥಿ ಮುನಿರತ್ನ ಮಾತನಾಡಿ, ಕರ್ನಾಟಕದ ಆಸ್ತಿ ಸುದೀಪ್ ಕರ್ನಾಟಕದೆಲ್ಲೆಡೆ ಪ್ರಚಾರ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮೊದಲನೆಯದಾಗಿ ನನ್ನ ಕ್ಷೇತ್ರದಲ್ಲಿ ಮಾಡುತ್ತಿರುವುದು ಖುಷಿಯಾಗುತ್ತಿದೆ. 2013 ರಲ್ಲಿ 2 ಬಾರಿ ಪ್ರಚಾರ ಮಾಡಿದ್ದೇವೆ. ಕಳೆದ ಚುನಾವಣೆಗೂ ಸುದೀಪ್ ನನ್ನ ಜೊತೆಗಿದ್ದರು. ಈ ಬಾರಿ ಕೂಡ ಸುದೀಪ್ ನನ್ನ ಜೊತೆಯಲ್ಲೇ ಇದ್ದಾರೆ. ಮುನಿರತ್ನ ಅವಾಗ ಏನೂ ಇರ್ಲಿಲ್ಲ ಅವತ್ತು ಬಂದಿದ್ರು, ಇವತ್ತು ಬಂದಿದಾರೆ, ಯಾವಾಗ್ಲೂ ಸುದೀಪ್ ನನಗೆ ಬೆಂಬಲ ನೀಡಿದ್ದಾರೆ. ನಾನು ಸುದೀಪ್ ಬಗ್ಗೆ ಅಭಿಮಾನ ಇಟ್ಕೊಂಡಿದೀನಿ. ಮತದಾರ ಬಂದುಗಳು ಆವತ್ತು ನನಗೆ ಆಶೀರ್ವಾದ ಮಾಡಿದ್ರು ಇವತ್ತು ಮಾಡ್ತಿದಾರೆ. ಮತದಾರ ಬಂದುಗಳು ಮತ ಭಿಕ್ಷೆ ಎಷ್ಟು ಕೊಡ್ತಾರೆ ಅನ್ನೋದು ಮುಖ್ಯವಲ್ಲ ಅವರ ಪ್ರೀತಿ ಅಭಿಮಾನ ನನಗೆ ಮುಖ್ಯ. ಬಿಜೆಪಿಗೆ ಮತ ನೀಡಿ ನಿಮ್ಗೆ ಒಳ್ಳೇದಾಗುತ್ತೆ ಎಂದು ಹೇಳಿದರು.

ಹೊರ ಜಿಲ್ಲೆಗಳಿಂದ ಜನರನ್ನು ಕರೆತಂದು ಕಾಂಗ್ರೆಸ್‌ ಪ್ರಚಾರ! ಒಬ್ಬರಿಗೆ 1000 ರೂ. ಹಣ ಹಂಚಿಕೆ!

ಬಿಜೆಪಿ ಅಭ್ಯರ್ಥಿಗಳ ಸುದೀಪ ಪ್ರಚಾರ: ರಾಜ್ಯ ವಿಧಾನಸಭಾ ಚುನಾವಣೆ ವೇಳೆ ನಾನು ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಮ ನನಗೆ ಸಹಾಯ ಮಾಡಿದ್ದರು. ಹೀಗಾಗಿ, ಅವರ ಚುನಾವಣಾ ಕಾರ್ಯಕ್ಕೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನಾನು ಬಿಜೆಪಿ ಪರವಾಗಿ ಪ್ರಚಾರ ಮಾಡದೇ, ಬೊಮ್ಮಾಯಿ ಮಾಮ ಹೇಳಿದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಮಾಡುವುದಾಗಿ ನಟ ಕಿಚ್ಚ ಸುದೀಪ ಹೇಳಿದ್ದರು. ಅದರಂತೆ ಬಸವರಾಜ ಬೊಮ್ಮಾಯಿ ಅವರೊಂದಿಗೆ ಉತ್ತರ ಕರ್ನಾಟಕದ ಬಹುಭಾಗದಲ್ಲಿ ಚುನಾವಣಾ ಪ್ರಚಾರ ಮಾಡಿದ ಸುದೀಪ, ಬಹಿರಂಗ ಪ್ರಚಾರದ ಕೊನೆಯ ದಿನ ಬೆಂಗಳೂರಿನಲ್ಲಿ ಮುನಿರತ್ನ ಪರವಾಗಿ ಪ್ರಚಾರ ಮಾಡಿದರು.