Asianet Suvarna News Asianet Suvarna News

KPCC Suspended KGF Babu: ಕೆಪಿಸಿಸಿ ಕಚೇರಿಯಲ್ಲಿ ಗಲಾಟೆ, ಕೆಜಿಎಫ್ ಬಾಬು ಕಾಂಗ್ರೆಸ್ ನಿಂದ ಅಮಾನತು

ಕಾಂಗ್ರೆಸ್ ಕಚೇರಿಯಲ್ಲಿ KGF ಬಾಬು ಗಲಾಟೆ ಪ್ರಕರಣದಲ್ಲಿ  ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್ ನಿಂದ ಅಮಾನತು ಮಾಡಲಾಗಿದೆ.  ಅಶಿಸ್ತು ನಡವಳಿಕೆ ತೋರಿದ ಹಿನ್ನೆಲೆಯಲ್ಲಿ ಶಿಸ್ತು ಸಮಿತಿ ಈ ನಿರ್ಧಾರ ಕೈಗೊಂಡಿದೆ.

KGF Babu fight case reached KPCC president DK Shivakumar hand gow
Author
First Published Jan 6, 2023, 10:31 PM IST

ಬೆಂಗಳೂರು (ಜ.6): ಕಾಂಗ್ರೆಸ್ ಕಚೇರಿಯಲ್ಲಿ KGF ಬಾಬು ಗಲಾಟೆ ಪ್ರಕರಣ ಕೆಪಿಸಿಸಿ ಅಧ್ಯಕ್ಷರ‌ ಡಿ.ಕೆ ಶಿವಕುಮಾರ್  ಬಳಿಗೆ  ತಲುಪಿತ್ತು. ಇದೀಗ ಕಾಂಗ್ರೆಸ್ ನಿಂದ ಕೆಜಿಎಫ್ ಬಾಬು ಅವರನ್ನು ವಜಾ ಮಾಡಲಾಗಿದೆ. ಪಕ್ಷದ ವಿರೋಧ ಹೇಳಿಕೆಯ ಹಿನ್ನೆಲೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿದೆ.

ಕೆಜಿಎಫ್‌ ಬಾಬು ಶುಕ್ರವಾರ ಕೆಪಿಸಿಸಿ ಕಚೇರಿಗೆ ಆಗಮಿಸಿ ಮಾಧ್ಯಮದ ಮುಂದೆ ಕಾಂಗ್ರೆಸ್ 80 ಸ್ಥಾನ ದಾಟಲ್ಲ ನಾವು ಅತೀ ಆತ್ಮವಿಶ್ವಾಸದಿಂದ ಇದ್ದೇವೆ ಎಂದಿದ್ದರು.  ಕೆಜಿಎಫ್ ಬಾಬು ಅವರ ಈ ಹೇಳಿಕೆಗೆ  ಎಸ್‌ ಮನೋಹರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಗದ್ದಲ ಜೋರಾಗಿದೆ. ಸ್ಥಳದಲ್ಲಿದ್ದ ನಾಯಕರಿಂದ ಗದ್ದಲದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಮಾಹಿತಿ ರವಾನೆಯಾಗಿತ್ತು, ಸುದ್ದಿ ತಿಳಿಯುತ್ತಿದ್ದಂತೆ ಕೆಜಿಎಫ್ ಬಾಬು ಸಮಜಾಯಿಷಿ ನೀಡಲು ಪ್ರಯತ್ನಿಸಿದ್ದಾರೆ. ಕೆಪಿಸಿಸಿ ಖಜಾಂಜಿ ವಿನಯ್ ಕಾರ್ತಿಕ್ ಮುಂದೆ ಸಮಜಾಯಿಷಿ  ನೀಡಲು  ಪ್ರಯತ್ನಿಸಿದ  ಕೆಜಿಎಫ್ ಬಾಬು ನಾನು ಪಕ್ಷದ ವಿರುದ್ಧ ಮಾತಾಡಿಲ್ಲ. ಅಧ್ಯಕ್ಷರ ಬಗ್ಗೆ ಒಳ್ಳೆಯ ಮಾತು ಆಡಿದ್ದೇನೆ ಎಂದಿದ್ದಾರೆ. ಈ ವೇಳೆ ಎಲ್ಲವೂ ಗೊತ್ತಿದೆ ಮಾತಾಡಿದ್ದು ವಿಡಿಯೋ ಇದೆ, ನಡೆಯಿರಿ ಎಂದು  ಕೆಪಿಸಿಸಿ ಖಜಾಂಜಿ ಹೇಳಿದ್ದಾರೆ.

ಗಲಾಟೆ ಪ್ರಕರಣ ಸುದ್ದಿ ಗೋಷ್ಠಿ ನಡೆಸಿದ  KGF ಬಾಬು:
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ತಮ್ಮ ‌ನಿವಾಸದಲ್ಲಿ KGF ಬಾಬು ಸುದ್ದಿ ಗೋಷ್ಠಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಗೆ ಇವತ್ತು ನನ್ನನ್ನು ಕರೆದಿದ್ದರು. ಅದಕ್ಕೆ ಹೋಗಿದ್ದೆ. ನನ್ನ ಕಡೆಯಿಂದ ಏನು ತಪ್ಪಾಗಿಲ್ಲ. ಬೇಕಾದ್ರೆ ವಿಡಿಯೋ ಚೆಕ್ ಮಾಡಿಕೊಳ್ಳಿ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಹೆಂಡತಿ ಮಕ್ಕಳನ್ನ ಬಿಟ್ಟು ಕಷ್ಟ ಪಡ್ತಿದ್ದಾರೆ. ಆದರೆ ಅವರಿಗೆ ಸಪೋರ್ಟ್ ಆಗಿ ಅಂತ ಹೇಳೋಕೆ ಹೋಗಿದ್ದೆ. ಸಲೀಂ ಅಹಮದ್ ರಿಂದ ಪಕ್ಷಕ್ಕೆ ಅನ್ಯಾಯ ಆಗ್ತಿದೆ. ಡಿಕೆಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ಪ್ರಾಣ ಕೊಡ್ತೀನಿ. ಈ ಪಕ್ಷಕ್ಕಾಗಿ ಕೋಟ್ಯಾಂತರ ನಾನು ಕಳೆದುಕೊಂಡಿದ್ದೇನೆ. ಪಕ್ಷ ಅಧಿಕಾರಕ್ಕೆ ಬರಬೇಕು ಅಂತ ಕೋಟಿ ಕೋಟಿ ಹಣ ಕಳೆದುಕೊಂಡಿದ್ದೇನೆ.

ಸಲೀಂ ಅಹಮದ್ ನನ್ನನ್ನ ಕಚೇರಿ ಒಳಗೆ ಬಿಡಬೇಡಿ ಅಂತ ನನಗೆ ಕಳೆದ ಬಾರಿ ಸಭೆ ವೇಳೆ ಪೊಲೀಸರಿಗೆ ಹೇಳಿದ್ರು. ಡಿಕೆಶಿವಕುಮಾರ್ ಅವರು ನನಗೆ ದೇವರು. ಡಿಕೆಶಿವಕುಮಾರ್, ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಅಂತ ಇದ್ದೇನೆ. ಕೆಪಿಸಿಸಿ ಕಚೇರಿಯಲ್ಲಿ ಮಿಸ್ ಯೂಸ್ ಆಗ್ತಿದೆ. ಯುವಕರು, ಮಹಿಳೆಯರನ್ನ ಸರಿಯಾಗಿ ಗೌರವ ಕೊಡ್ತಿಲ್ಲ.  ಡಿಕೆಶಿವಕುಮಾರ್ ಇರೋವರೆಗೂ ಕಚೇರಿಯಲ್ಲಿ ಜನ ತುಂಬಿರುತ್ತಾರೆ‌. ಡಿಕೆಶಿವಕುಮಾರ್ ಒಂದು ದಿನ ಇಲ್ಲ ಅಂದ್ರೆ ಜನ ಇರೊಲ್ಲ. ಸಲೀಂ ಅಹಮದ್ ಅವರಿಂದ ಏನು ಆಗೊಲ್ಲ.  ಅವರನ್ನು ಕೆಪಿಸಿಸಿಯಲ್ಲಿ ಕೂರಿಸಿದ್ದಾರೆ. ಅವರ ಹಿಂದೆ 4 ಜನ ಇಲ್ಲ. ನಾನು ಏನಾದ್ರು ತಪ್ಪು ಮಾಡಿದ್ರೆ ನನಗೆ ಏನೇ ಶಿಕ್ಷೆ ಕೊಟ್ಟರು ತಗೊಳ್ತೀನಿ. 

ಕೆಪಿಸಿಸಿಯಲ್ಲಿ ಉಸ್ತುವಾರಿ ಮಾಡ್ತಿರೋರು ಸರಿಯಿಲ್ಲ. ಸಲೀಂ ಅಹಮದ್ ಸರಿಯಿಲ್ಲ. ಯಾರಿಗೂ ಗೌರವ ಕೊಡೋದಿಲ್ಲ, ಪ್ರೀತಿಯಿಂದ ಅವರನ್ನ ಸರಿಯಾಗಿ ನಡೆದಿಕೊಂಡಿಲ್ಲ. ಇದನ್ನ ಹೇಳೋದಕ್ಕೆ ಹೋದ್ರೆ ಮನೋಹರ್ ಗಲಾಟೆ ಮಾಡಿದ. ಮನೋಹರ್ ಆರ್.ವಿ.ದೇವರಾಜ್ ಶಿಷ್ಯ. ನಾನು ಕಾಂಗ್ರೆಸ್ ವಿರುದ್ಧ ಮಾತಾಡಿಲ್ಲ. ಪಕ್ಷ ಸರಿ ‌ಮಾಡಿಕೊಳ್ಳದೇ ಹೋದ್ರೆ 80 ಸೀಟು ಬರೊಲ್ಲ . ಸರಿ ಮಾಡಿಕೊಂಡ್ರೆ 140 ಸ್ಥಾನ ಬರುತ್ತೆ. ನನ್ನ ಕುಟುಂಬ ಕಾಂಗ್ರೆಸ್ ಗೆ ದುಡಿದಿದ್ದಾರೆ. ನನ್ನನ್ನ ಉಚ್ಚಾಟನೆ ಮಾಡಿ ಅಂತ ಸುರ್ಜೇವಾಲಗೆ ಮನೋಹರ್ ಪತ್ರ ಬರೆದಿದ್ದಾರೆ. ನಾನು ಕಾಂಗ್ರೆಸ್ ಗೆ ಪ್ರಾಣ ಕೊಡ್ತೀನಿ. ಕಾಂಗ್ರೆಸ್ ಗೆ ನಾನು ಬೇಡ ಅಂದ್ರೆ ನಾನೇ ದೂರ ಹೋಗ್ತೀನಿ. ನಾನು ಅಲ್ಪಸಂಖ್ಯಾತರ ಪರವಾಗಿ ಇರೋನು. ಜನರ ಋಣ ನನ್ನ ಮೇಲೆ ಇದೆ. ಅದನ್ನ ನಾನು ತೀರಿಸಬೇಕು.  ನನ್ನನ್ನ ಅವಮಾನ ಮಾಡಿ ಪಕ್ಷದಿಂದ  ತೆಗೆಯೋಕೆ ಆರ್. ವಿ‌. ದೇವರಾಜ್  ಪ್ಲ್ಯಾನ್  ಮಾಡಿದ್ದಾರೆ.

ಸದ್ಯಕ್ಕೆ ರಾಜಕೀಯ ನಿವೃತ್ತಿ ಪಡೆಯಲ್ಲ : ಕೈ ನಾಯಕ

ಇಡಿ, ಐಟಿ ಎಲ್ಲಾ ಆಯ್ತು‌. ಏನು ಮಾಡೋಕೆ ಆಗಲಿಲ್ಲ.ಈಗ ಪ್ಲ್ಯಾನ್ ಮಾಡಿ ಹೀಗೆ ಮಾಡ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಜಾತಿ, ವ್ಯಕ್ತಿ, ಹಿರಿತನ ನೋಡಿ ಟಿಕೆಟ್ ಕೊಟ್ಟರೆ 80 ಸೀಟು ಬರೋದಿಲ್ಲ. ಸರ್ವೇ ಮಾಡಿ ಗೆಲ್ಲೋರಿಗೆ ಟಿಕೆಟ್ ಕೊಡಿ. ಕಾಂಗ್ರೆಸ್ ಹೆಸರಿನಲ್ಲಿ ನಾನು ಗೆಲ್ಲಬೇಕು ಅಂತ ಏನು ಇಲ್ಲ. ಕೆಜಿಎಫ್ ಬಾಬು ಹೆಸರಲ್ಲಿ ಗೆಲ್ತೀನಿ. ನನ್ನನ್ನ ಪಕ್ಷದಿಂದ ತೆಗೆದರೆ ಕಾಂಗ್ರೆಸ್ ಗೆ 10-15 ಸೀಟು ಕಡಿಮೆ ಆಗುತ್ತೆ. ಇದೆಲ್ಲ ಆರ್.ವಿ.ದೇವರಾಜ್ ಪ್ಲ್ಯಾನ್. ನನ್ನನ್ನ ಬೇಕಾದ್ರೆ ಕಾಂಗ್ರೆಸ್ ‌ನಿಂದ ತೆಗೆದು ಹಾಕಲಿ ನನಗೇನು ಅಗಬೇಕಿಲ್ಲ ಎಂದಿದ್ದಾರೆ.

Molakalmuru Constituency: ವಲಸಿಗರಿಗೆ ಪ್ರವೇಶವಿಲ್ಲ; ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿಯೇ ಶಾಸಕರಾಗಬೇಕೆಂದು ಬ್ಯಾನರ್!

ಸಲೀಂ ಅಹಮದ್ ನಿಜವಾದ ಮುಸ್ಲಿಂ ಅಲ್ಲ: ನಾನು ಕಾಂಗ್ರೆಸ್ ವಿರುದ್ದ ಮಾತಾಡಿದ್ರೆ ಏನೇ ಶಿಕ್ಷೆ ಕೊಟ್ಟರು ತಗೋತೀನಿ. ಕಾಂಗ್ರೆಸ್ ನಿಂದ ತೆಗೆಯೋದಾದ್ರೆ ಗೌರವದಿಂದ ತೆಗೀರಿ. ಆದ್ರೆ ಬ್ಲ್ಯಾಕ್ ಮಾರ್ಕ್ ಮಾಡಿ ತೆಗಿಬೇಡಿ. ನನ್ನ ಮಾತು ಯಾರಿಗಾದ್ರು ನೋವಾಗಿದ್ರೆ ಕ್ಷಮೆ ಕೇಳ್ತೀನಿ. ಆದ್ರೆ ಗೌರವದಿಂದ ನನ್ನನ್ನ ತೆಗೆಯಬೇಕು. ಹೀಗೆ ಆದ್ರೆ ಕಾಂಗ್ರೆಸ್ ಗೆ ಒಳ್ಳೆಯದಾಗುತ್ತೆ. ನಾನು ರಾಜಕೀಯ ವ್ಯಕ್ತಿಯಲ್ಲ. ನಾನು ವ್ಯಾಪಾರಸ್ತ. ಕಾಂಗ್ರೆಸ್ ಪಕ್ಷದವರು ನನಗೆ ಗೌರವ ಕೊಡಬೇಕು. ನಮ್ಮಲ್ಲಿ ತಪ್ಪು ಇಟ್ಕೊಂಡು 140 ಸೀಟು ಬರುತ್ತೆ ಅಂದ್ರೆ ಆಗೊಲ್ಲ. ನಾನು ಕಾಂಗ್ರೆಸ್ ವಿರುದ್ದ ಮಾತಾಡಿಲ್ಲ. ನಮ್ಮ-ತಾಯಿ ತಂದೆ ಕಾಂಗ್ರೆಸ್ ನಲ್ಲಿ ಇದ್ದರು. ನಾನು ‌ಪಾರ್ಟಿಯಿಂದ ಇಲ್ಲ. ಪಾರ್ಟಿ ನಮ್ಮಿಂದ ಇರೋದು. ನಮ್ಮನ್ನ ಗೆಲ್ಲಿಸೋದು‌ ಜನರು. ಕೆಪಿಸಿಸಿ ಮ್ಯಾನೇಜ್ಮೆಂಟ್ ಸರಿ ಮಾಡಿಕೊಳ್ಳಿ. ಸಲೀಂ ಅಹಮದ್ ಯಾರು ಅಂತ ನನಗೆ ಗೊತ್ತಿಲ್ಲ. ಸಲೀಂ ಅಹಮದ್ ನಿಜವಾದ ಮುಸ್ಲಿಂ ಅಲ್ಲ. ಆತ ಬ್ಯಾರಿ. ಸಲೀಂ ಅಹಮದ್ ಅಲ್ಪಸಂಖ್ಯಾತ ಲೀಡರ್ ಅಲ್ಲ. ಜಮೀರ್, ಖಾದರ್, ಮುಸ್ಲಿಂ ಲೀಡರ್. ಸಲೀಂ ಅಹಮದ್ ಬರೀ ಆಕ್ಟಿಂಗ್ ಮಾಡ್ತಾರೆ. ಅಲ್ಪಸಂಖ್ಯಾತ ಮತ ಈತನೇ ಹಾಳು ಮಾಡ್ತಾನೆ. ನಮಗೆ ಇವ್ರು ಟಿಕೆಟ್ ಕೊಡೊದು ಬೇಡ. ನಾನೇ ವಯಕ್ತಿಕವಾಗಿ ನಿಂತು 10 ಸೀಟು ಗೆಲ್ಲಿಸಿಕೊಡ್ತೀನಿ ಎಂದಿದ್ದಾರೆ.

Follow Us:
Download App:
  • android
  • ios