Molakalmuru Constituency: ವಲಸಿಗರಿಗೆ ಪ್ರವೇಶವಿಲ್ಲ; ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿಯೇ ಶಾಸಕರಾಗಬೇಕೆಂದು ಬ್ಯಾನರ್!
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಕ್ಕೆ ವಲಸಿಗ ಅಭ್ಯರ್ಥಿಗಳಿಗೆ ಪ್ರವೇಶವಿಲ್ಲ ಎನ್ನುವ ಅಭಿಯಾನ ತಾಲೂಕಿನಲ್ಲಿ ಆರಂಭಗೊಂಡಿದೆ. ಇದಕ್ಕೆ ಇಂಬು ನೀಡುವಂತೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಅಭ್ಯರ್ಥಿಗಳೇ ನಮ್ಮ ಮುಂದಿನ ಶಾಸಕರು ಎನ್ನುವಂತ ಬ್ಯಾನರ್‌ಗಳನ್ನು ಕಟ್ಟಿದ್ದಾರೆ.
ಮೊಳಕಾಲ್ಮುರು (ಜ.4) : ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಕ್ಕೆ ವಲಸಿಗ ಅಭ್ಯರ್ಥಿಗಳಿಗೆ ಪ್ರವೇಶವಿಲ್ಲ ಎನ್ನುವ ಅಭಿಯಾನ ತಾಲೂಕಿನಲ್ಲಿ ಆರಂಭಗೊಂಡಿದೆ. ಇದಕ್ಕೆ ಇಂಬು ನೀಡುವಂತೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಅಭ್ಯರ್ಥಿಗಳೇ ನಮ್ಮ ಮುಂದಿನ ಶಾಸಕರು ಎನ್ನುವಂತ ಬ್ಯಾನರ್‌ಗಳನ್ನು ಕಟ್ಟಿದ್ದಾರೆ.
2023ರ ವಿಧಾನಸಭಾ ಚುನಾವಣೆಯ(Assembly election 2023) ಹೊಸ್ತಿಲಲ್ಲಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ(Molakalmuru Assembly Constituency)ಕ್ಕೆ ಸ್ಥಳೀಯರೇ ಶಾಸಕರಾಗಿ ಆಯ್ಕೆಯಾಗಬೇಕು. ಹೊರಗಿನ ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಪ್ರವೇಶವಿಲ್ಲ. ಸ್ಥಳೀಯರಿಂದಲೇ ಕ್ಷೇತ್ರದ ಅಭಿವೃದ್ಧಿ ಎನ್ನುವ ಬ್ಯಾನರ್(Banners) ಕಟ್ಟಲಾಗಿದೆ. ಬ್ಯಾನರ್‌ನಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸದೆ ಕ್ಷೇತ್ರದ ಮತದಾರರ ಪರವಾಗಿ ಎಂಬಂತಿರುವ ಬ್ಯಾನರುಗಳು ಎಲ್ಲೆಡೆ ಕಂಡುಬರುತ್ತಿವೆ.
Chitradurga News: ನಾಯಕನಹಟ್ಟಿಯಲ್ಲಿ ಅಳತೆಗೋಲಿಲ್ಲದ ನೀರಿನ ಕರ
ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ(Congress party)ದಿಂದ ಹಲವರು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ((S Tippeswamy), ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೇಶ ಬಾಬು(Dr B Yogesh babu), ಕೆ.ಜೆ.ಜಯಲಕ್ಷ್ಮಿ, ಕಲ್ಲೇಶ್ ಸೇರಿ ಮಾಜಿ ಸಂಸದ ಉಗ್ರಪ್ಪ ಹಾಗೂ ಭಕ್ತ ರಾಮೇಗೌಡ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಚಿತ್ರ ನಟ ಶಶಿಕುಮಾರ್ ಬರುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಕ್ಷೇತ್ರದ ಅಭಿವೃದ್ಧಿ ಸ್ಥಳೀಯ ಶಾಸಕರಿಂದಲೇ ಸಾಧ್ಯ ಎನ್ನುವ ಬ್ಯಾನರ್‌ಗಳು ಹಾಕಿರುವುದು ಈ ತರದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಹಿಂದುಳಿದ ಪ್ರದೇಶವಾಗಿದೆ. ಈ ಕ್ಷೇತ್ರದಲ್ಲಿ ವಲಸಿಗ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ಆಯ್ಕೆಯಾಗಿರುವ ಶಾಸಕ ಜನರ ಕೈಗೂ ಸಿಗದೆ ಪರಿಣಾಮ ಸ್ಥಳೀಯ ಸಮಸ್ಯೆಗಳು ಬಗೆಹರಿಯದೆ ಕ್ಷೇತ್ರ ಸಂಕಷ್ಟಕ್ಕೆ ಗುರಿಯಾಗಿದೆ. ಇದಕ್ಕೆ ಸೂಕ್ತ ಪರಿಹಾರವೆಂದರೆ ಸ್ಥಳೀಯ ಅಭ್ಯರ್ಥಿಗಳನ್ನು ಶಾಸಕರಾಗಿ ಆಯ್ಕೆಮಾಡಬೇಕೆಂಬ ಸತ್ಯ ಜನತೆಗೆ ಅರ್ಥವಾಗಿದೆ. ಹಾಗಾಗಿ ಹೊರಗಿನ ಅಭ್ಯರ್ಥಿಗಳು ಕ್ಷೇತ್ರದ ಕಡೆ ಮುಖ ಮಾಡುವುದು ಉತ್ತಮ ಬೆಳವಣಿಗೆಯಲ್ಲ. ಸ್ಥಳೀಯ ಅಭ್ಯರ್ಥಿಗಳೇ ನಮ್ಮ ಮುಂದಿನ ಶಾಸಕರು ಎನ್ನುವುದು ಬ್ಯಾನರ್ ಮೂಲಕ ಕಾರ್ಯಕರ್ತರು ಆಗ್ರಹಿಸಿರುವುದು ಜನತೆಯ ಕುತೂಲಹಕ್ಕೆ ಕಾರಣವಾಗಿದೆ.
‘ಮೊಳಕಾಲ್ಮೂರಲ್ಲಿ ಶ್ರೀರಾಮಲು ಎದುರು ನಾನೇ ನಿಲ್ತೇನೆ’: ವಿ.ಎಸ್.ಉಗ್ರಪ್ಪ
ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಅಬ್ದುಲ್ಲಾ, ಮುಖಂಡರಾದ ಶಿವಲಿಂಗಪ್ಪ, ಗೋಪಾಲ್, ವೆಂಕಟೇಶ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ, ತಾಲೂಕು ಉಪಾಧ್ಯಕ್ಷ ದರ್ಶನ್, ರಫಿ, ಪಂಪಣ್ಣ, ವೆಂಕಟೇಶ ಇದ್ದರು.