ಬೆಂಗಳೂರು(ಜೂ.18): ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಫೈನಲ್ ಲಿಸ್ಟ್ ಬಿಡುಗಡೆ ಮಾಡಿದೆ. ಪರಿಷತ್ ಟಿಕೆಟ್ ಹಂಚಿಕೆಯಲ್ಲಿ ಸಿಎಂ ಯಡಿಯೂರಪ್ಪ ಕೈ ಮೇಲಾಗಿದ್ದು, ತಾವು ಕೊಟ್ಟ ಭರವಸೆಯಂತೆ ಮೂವರಿಗೆ ಟಿಕೆಟ್ ಕೊಡುವಲ್ಲಿ ಯಡಿಯೂರಪ್ಪ ಸಫಲರಾಗಿದ್ದಾರೆ. ಈ ಮೂಲಕ ಬಿಎಸ್‌ವೈ ರಾಜ್ಯಸಭಾ ಟಿಕೆಟ್ ಹಂಚಿಕೆಯಲ್ಲಾದ ವ್ಯತ್ಯಾಸ ಸರಿಪಡಿಸಿಕೊಳ್ಳಲು ಸಿಎಂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಅಳೆದು ತೂಗಿ ಬಿಜೆಪಿ ತನ್ನ ನಾಲ್ವರು ಅಭ್ಯರ್ಥಿಗಳ ಪಟ್ಟ ಬಿಡುಗಡೆ ಮಾಡಿದೆ. ಇಲ್ಲಿದೆ ನೋಡಿ ವಿವರ

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು, ಎಂಟಿಬಿ ನಾಗರಾಜ್, ಆರ್ ಶಂಕರ್, ಪ್ರತಾಪ್ ಸಿಂಹ ನಾಯಕ್, ಸುನೀಲ್ ವಲ್ಯಾಪುರ್ ಹೆಸರು ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿದೆ. ಆದರೆ ಹೆಚ್​. ವಿಶ್ವನಾಥ್​ ಸ್ಪರ್ಧೆಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ. ವಿಧಾನ ಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಯಾಗಿ ಬೆಳ್ತಂಗಡಿಯ ಪ್ರತಾಪ ಸಿಂಹ ನಾಯಕರ ಆಯ್ಕೆ ಮತ್ತೊಂದು ಅಚ್ಚರಿ ಹುಟ್ಟಿಸಿದೆಯಾದರೂ, ಮತ್ತೊಮ್ಮೆ ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಕರಾವಳಿ, ಮಧ್ಯಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಮತ್ತು ಬೆಂಗಳೂರು ಭಾಗಕ್ಕೆ ಟಿಕೆಟ್ ಹಂಚಿಕೆ ಮಾಡಲಾಗಿದ್ದು, ಪರಿಶಿಷ್ಟ ಜಾತಿ, ಕುರುಬ ಮತ್ತು ಮೇಲ್ವರ್ಗದ ( ಕೊಂಕಣಿ ) ಕಾಂಬೀನೇಷನ್ ಜಾರಿಗೊಳಿಸಲಾಗಿದೆ.

ಕರ್ನಾಟಕ MLC ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಇಲ್ಲಿದೆ ನಾಲ್ವರು ಅಭ್ಯರ್ಥಗಳ ಕಿರು ಪರಿಚಯ:

ಪ್ರತಾಪಸಿಂಹ ನಾಯಕ: ಪಕ್ಷದ ಶಿಸ್ತಿನ ಸಿಪಾಯಿ, ಹಳೆಯ ಕಾರ್ಯಕರ್ತ.  ಸಂಘದ ಹಿನ್ನೆಲೆಯಲ್ಲಿ ರಾಜಕಾರಣಕ್ಕೆ ಬಂದವರು. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಡೀ ಕರಾವಳಿಯಲ್ಲಿ ಪಸರಿಸಿಕೊಂಡಿರುವ ಕೊಂಕಣಿ ಸಮುದಾಯದ ಪ್ರಭಾವಿ ಮುಖಂಡರೂ ಹೌದು.

ಎಂ ಟಿ ಬಿ ನಾಗರಾಜ್: ಉಪಚುನಾವಣೆಯಲ್ಲಿ ಸ್ವಪಕ್ಷೀಯರ ಪಿತೂರಿಯಿಂದ ಸೋಲಾದ ಹಿನ್ನೆಲೆ ಪರಿಷತ್ ಸದಸ್ಯರಾಗಿ ಮಾಡುವ ಭರವಸೆ ಕೊಟ್ಟಿದ್ದ ಸಿಎಂ‌ ಯಡಿಯೂರಪ್ಪ. ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಸಿಎಂ. ಪ್ರಬಲ ಕುರುಬ ಸಮುದಾಯದ ಮುಖಂಡರಾಗಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗುವ ರಾಜಕೀಯ ಬಲ ಹೊಂದಿರುವ ಮುಖಂಡ. 

ಆರ್ ಶಂಕರ್: ಉಪಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ಶಂಕರ್. ಪರಿಷತ್ ಸದಸ್ಯರಾಗಿ ಮಾಡುವ ಭರವಸೆಯನ್ನು ಬಹಿರಂಗ ಸಭೆಯಲ್ಲಿ ಹೇಳಿದ್ದ ಯಡಿಯೂರಪ್ಪ. ಸರ್ಕಾರ ರಚನೆಗಾಗಿ ಶಾಸಕ ಸ್ಥಾನ ಬಿಟ್ಟು ಬಂದಿದ್ದ ಮುಖಂಡ.

ಈ ಬಾರಿ ದ.ಕ.ದಲ್ಲಿ ವಿಧಾನ ಪರಿಷತ್‌ ಆಕಾಂಕ್ಷಿಗಳಿಗೆ ನಿರಾಸೆ?

ಸುನೀಲ್ ವಲ್ಯಾಪುರೆ: ಕಳೆದ ಬಾರಿ ನಡೆದ ಚಿಂಚೋಳಿ ಉಪಚುನಾವಣೆಯಲ್ಲಿ ಟಿಕೆಟ್ ಸಿಗದೇ ಇದ್ದಾಗ ಬೇಸರಗೊಂಡಿದ್ದ ವಲ್ಯಾಪುರೆ. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಸಚಿವರಾಗಿದ್ದರು.  ಯಡಿಯೂರಪ್ಪ ಆಪ್ತರಾಗಿರುವ ವಲ್ಯಾಪುರೆ ಗೆ ಪರಿಷತ್ ಟಿಕೆಟ್ ನೀಡುವ ಭರವಸೆ ಕೊಡಲಾಗಿತ್ತು. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರೋಧಿ ಪಾಳಯದ ಪ್ರಭಾವಿ ಮುಖಂಡ. ಕೊಟ್ಟ ಭರವಸೆ ಈಡೇರಿಸಿರುವ  ಸಿಎಂ ಯಡಿಯೂರಪ್ಪ.