Asianet Suvarna News Asianet Suvarna News

ಸರ್ಕಾರ ರಚನೆ ಬೆನ್ನಲ್ಲೇ ಉಚಿತ ಭರವಸೆ ಕುರಿತು ರಾಹುಲ್ ಗಾಂಧಿ ಮಹತ್ವದ ಸಂದೇಶ!

ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕ ಜನತೆಗೆ 5 ಗ್ಯಾರೆಂಟಿ ನೀಡುವ ಭರವಸೆ ಪುನರುಚ್ಚರಿಸಿದ್ದಾರೆ. ಇದೇ ವೇಳೆ ಕರ್ನಾಟಕ ಜನತೆಗೆ ಧನ್ಯವಾದ ಹೇಳಿದ್ದಾರೆ.

Karnataka Oath taking ceremony Rahul Gandhi assured congress government fulfill 5 guarantees ckm
Author
First Published May 20, 2023, 1:37 PM IST

ಬೆಂಗಳೂರು(ಮೇ.20):  ಬಿಜೆಪಿ ತಾಕತ್ತನ್ನು ಕರ್ನಾಟಕ ಜನರು ಸೋಲಿಸಿದ್ದಾರೆ.  ಕಾಂಗ್ರೆಸ್ 5 ಗ್ಯಾರೆಂಟಿಗಳನ್ನು ಜನರಿಗೆ ನೀಡಲಿದೆ ಇದರಲ್ಲಿ ಅನುಮಾನವೇ ಬೇಡ. ಇದು ಕರ್ನಾಟಕ ಜನತೆಯ ಸರ್ಕಾರ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಜನತೆಯನ್ನುದ್ದೇಶಿ ಭಾಷಣ ಮಾಡಿದರು. 

ಕಾಂಗ್ರೆಸ್ ನೀಡಿದ ಎಲ್ಲಾ ಭರವಸೆಯನ್ನು ನಾವು ಈಡೇರಿಸುತ್ತೇವೆ.  ಪ್ರತಿ ಕುಟುಂಬದ ಸದಸ್ಯರಿಗೆ 10 ಕೆಜಿ ಅನ್ನಭಾಗ್ಯ, ಉಚಿತವಾಗಿ ಮಹಿಳೆಯರಿಗೆ ಕರ್ನಾಟಕ ರಾಜ್ಯದ ಬಸ್‌ಗಳಲ್ಲಿ ಪ್ರಯಾಣ , ಪದವಿಧರರಿಗೆ 3,000 ರೂಪಾಯಿ, ಡಿಪ್ಲೋಮಾ ಪದವಿಧರರಿಗೆ 1500 ರೂಪಾಯಿ, 200 ಯುನಿಟ್ ಉಚಿತ ವಿದ್ಯುತ್, ಗೃಹಣಿಯರಿಗೆ 2,000 ರೂಪಾಯಿ ಸೌಲಭ್ಯವನ್ನು ಕಾಂಗ್ರೆಸ್ ನೀಡಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

OATH TAKING CEREMONY: ಮಗಳ ಮದುವೆ ಶರ್ಟ್‌ ಧರಿಸಿ ಬಂದ ಡಿಕೆಶಿ, ಗಂಗಾಧರ ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ

ಕರ್ನಾಟಕದಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇವೆ. ದ್ವೇಷದ ಅಂಗಡಿಗೆ ಬಾಗಿಲು ಹಾಕುತ್ತೇವೆ. ಇದು ಸಮಸ್ತ ಕರ್ನಾಟಕ ಜನರ ಸರ್ಕಾರ. ಕಳೆದ 5 ವರ್ಷದಲ್ಲಿ ನೀವು ಯಾವ ರೀತಿ ಸಮಸ್ಯೆಗಳನ್ನು ಎದುರಿಸಿದ್ದೀರಿ ಅನ್ನೋದು ನಮಗೆ ಅರಿವಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಕುರಿತು ಹಲವು ವಿಶ್ಲೇಷಣೆ ಬಂದಿದೆ. ಈ ಗೆಲುವಿನ ಹಿಂದಿರುವುದು ಪ್ರಮುಖ ಕಾರಣ, ಕಾಂಗ್ರೆಸ್ ಪಕ್ಷ ಕರ್ನಾಟಕದ ಬಡವರು, ದಲಿತರು, ದಲಿತರು, ಪರಿಶಿಷ್ಠ ಪಂಗಡದವರ ಜೊತೆ ನಿಂತಿರುವುದೇ ಕಾರಣ. ಪಕ್ಷದ ಬಡವರು, ಜನಸಾಮಾನ್ಯರು ನಿಂತಿದ್ದರು. ಆದರೆ ಬಿಜೆಪಿ ಬಳಿಕ ಪೊಲೀಸರು, ಹಣ, ಶಕ್ತಿ ಎಲ್ಲವೂ ಇತ್ತು. ಆದರೆ ಬಿಜೆಪಿಯ ಎಲ್ಲಾ ಕುತಂತ್ರವನ್ನು, ಬಿಜೆಪಿ ಭ್ರಷ್ಟಾಚಾರವನ್ನು ಜನರು ಸೋಲಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ದ್ವೇಷ ಮುಗಿಸಿ, ಪ್ರೀತಿಯನ್ನು ತೆರೆದಿದ್ದೇವೆ. ಕರ್ನಾಟಕ ಜನರು ಎಲ್ಲರು ಶ್ರಮಕ್ಕೆ ನಾವು ನಿರಾಸೆ ಮಾಡುವುದಿಲ್ಲ. ಎಲ್ಲಾ ಆಶ್ವಾಸನೆಗಳನ್ನು ಈಡೇರಿಸುತ್ತೇವೆ. ನಾವು ಹೇಳಿದಂತೆ ನಡೆಯುತ್ತೇವೆ. ರೈತರು, ಸಣ್ಣ ವ್ಯಾಪಾರಿಗಳು, ಯುವ ಸಮೂಹವನ್ನು ರಕ್ಷಿಸುವುದು, ಅವರ ಭವಿಷ್ಯವನ್ನು ಉಜ್ವಲಗೊಳಿಸುವುದು ನಮ್ಮ ಗುರಿಯಾಗಿದೆ. ಕಾಂಗ್ರೆಸ್ ಭ್ರಷ್ಟಾಚಾರ ಮುಕ್ತ ಸರ್ಕಾರ ನಾವು ನೀಡುತ್ತೇವೆ. ಎಲ್ಲಾ ಮಹಿಳೆಯರು, ಯುವಕರು, ಅಕ್ಕ ತಂಗಿಯರು, ತಾಯಂದರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಪ್ರೀತಿಯನ್ನು ನಾವು ಯಾವತ್ತೂ ಮರೆಯುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸಾಕು ತಾಯಿ ನಿಧನ, ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರು!

ಈ ಸರ್ಕಾರ ಕರ್ನಾಟಕ ಜನರ ಸರ್ಕಾರ, ಇದು ನಿಮ್ಮ ಸರ್ಕಾರ, ಮನಸ್ಸಪೂರ್ವಕವಾಗಿ ಈ ಸರ್ಕಾರ ಕೆಲಸ ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ಭಾಷಣಕ್ಕೂ ಮೊದಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿದ್ದು ಬಳಿಕ ಡಿಕೆ ಶಿವುಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಡಾ.ಜಿ ಪರಮೇಶ್ವರ್, ಕೆಜೆ ಜಾರ್ಜ್, ಎಂಬಿ ಪಾಟೀಲ್, ಕೆಹೆಚ್ ಮುನಿಯಪ್ಪ, ಜಮೀರ್ ಅಹಮ್ಮದ್ ಸೇರಿದಂತೆ ಪ್ರಮುಕ ನಾಯಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Follow Us:
Download App:
  • android
  • ios