Asianet Suvarna News Asianet Suvarna News

Oath taking ceremony: ಮಗಳ ಮದುವೆ ಶರ್ಟ್‌ ಧರಿಸಿ ಬಂದ ಡಿಕೆಶಿ, ಗಂಗಾಧರ ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ

ಮಗಳ ಮದುವೆಯಲ್ಲಿ ಧರಿಸಿದ್ದ ರೇಷ್ಮೆ ಶರ್ಟ್‌ ಮತ್ತು ಮಛೆಯನ್ನು ಧರಿಸಿ ರಾಜ್ಯದ 16ನೇ ವಿಧಾನಸಭಾ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Oath taking ceremony DK Sivakumar sworn in as DCM in the name of Gangadhara Ajjaiah sat
Author
First Published May 20, 2023, 1:47 PM IST

ಬೆಂಗಳೂರು (ಮೇ 20): ಮಗಳ ಮದುವೆಯಲ್ಲಿ ಧರಿಸಿದ್ದ ರೇಷ್ಮೆ ಶರ್ಟ್‌ ಮತ್ತು ಮಛೆಯನ್ನು ಧರಿಸಿ ರಾಜ್ಯದ 16ನೇ ವಿಧಾನಸಭಾ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಡಿ.ಕೆ. ಶಿವಕುಮಾರ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಮಗಳ ಮದುವೆಯ ಶರ್ಟ್‌ ಧರಿಸಿದ್ದ ಡಿಕೆಶಿ: ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಮಗಳ ಮದುವೆಯಲ್ಲಿ ಧರಿಸಿದ್ದ ರೇಷ್ಮೆ ಅಂಗಿಯನ್ನು ಹಾಗೂ ಪಂಚೆಯನ್ನು ಧರಿಸಿ ಬಂದಿದ್ದರು. ಇನ್ನು ಕಳೆದೊಂದು ವಾರದಿಂದ ಕಾಂಗ್ರೆಸ್‌ನ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಅವರು ಹೈಕಮಾಂಡ್‌ ಒತ್ತಡಕ್ಕೆ ಮಣಿದು ಉಪಮುಖ್ಯಮಂತ್ರಿ ಆಗಲು ಒಪ್ಪಿಕೊಂಡಿದ್ದರು. ನಂತರ, ಕಳೆದ ಎರಡು ದಿನಗಳಿಂದ ಸಚಿವ ಸಂಪುಟದ ಸದಸ್ಯರ ಆಯ್ಕೆ ವಿಚಾರದಲ್ಲಿ ತೊಡಗಿಕೊಂಡಿದ್ದ ಅವರಿಗೆ ಹೊಸ ಶರ್ಟ್‌ ಖರೀದಿಗೆ ಕೂಡ ಸಮಯ ಸಿಗಲಿಲ್ಲ ಎಂದು ಕೇಳಿಬರುತ್ತಿದೆ. ಆದರೆ, ಮಗಳ ಮದುವೆಯಲ್ಲಿ ಮಿಂಚಿದ್ದ ಶರ್ಟ್‌ ಧರಿಸಿ ಉಪಮುಖ್ಯಮಂತ್ರಿಯಾಗಿಯೂ ರಾಜ್ಯದ ಜನತೆಯ ಮುಂದೆ ಮಿಂಚಿದರು. 

Karnataka CM Oath:ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಿದ ಸಿದ್ದರಾಮಯ್ಯ: ಗ್ಯಾರಂಟಿಗೆ ಬಂತು ವಾರಂಟಿ

ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಸೋಮೆಕಟ್ಟೆ ಕಾಡಸಿದ್ಧೇಶ್ವರ ಮಠದ ಗಂಗಾಧರ ಅಜ್ಜಯ್ಯನವರ ಪೀಠದ ಹೆಸರಿನಲ್ಲಿ ಡಿ.ಕೆ. ಶಿವಕುಮಾರ್‌ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಬಹುಮತ ಗಳಿಸಿದ ಬಳಿಕ ಡಿ.ಕೆ ಶಿವಕುಮಾರ್‌ ಈ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನ ಆಶೀರ್ವಾದ ಪಡೆದಿದ್ದರು. ಅವರ ರಾಜಕೀಯ ಬದುಕಿನಲ್ಲಿ ಪ್ರತೀ ಮಹತ್ವದ ಹೆಜ್ಜೆ ಇಡುವ ಮೊದಲು ಅವರು ಇಲ್ಲಿಗೆ ಆಗಮಿಸಿ ಅಜ್ಜಯ್ಯನ ಆಶೀರ್ವಾದ ಬೇಡುತ್ತಾರೆ. ರಾಜಕೀಯ ಕಾರ್ಯತಂತ್ರ ರೂಪಿಸುವ ಹಂತದಲ್ಲೂ ಅಜ್ಜಯ್ಯನ ಅಪ್ಪಣೆ ಬೇಡುತ್ತಾರೆ. ಅವರು ಅಪ್ಪಣೆ ಕೊಟ್ಟ ಬಳಿಕವೇ ಮುಂದಡಿ ಇಡುತ್ತಾರೆ. ನಂಬಿದ ಅಜ್ಜಯ್ಯ ಯಾವತ್ತೂ ಕೈ ಬಿಟ್ಟಿಲ್ಲ ಎಂದೇ ಹೇಳುತ್ತಾರೆ.

ರಾಜಕೀಯ ಕಾರ್ಯಕ್ಕೂ ಮುನ್ನ ಅಜ್ಜಯ್ಯನ ಭೇಟಿ: ರಾಜ್ಯದ ರಾಜಕೀಯ ಸ್ಥಿತ್ಯಂತರಗಳಲ್ಲಿ ಮಹತ್ವದ ಪಾತ್ರ ವಹಿಸುವ ಕಾಡ ಸಿದ್ಧೇಶ್ವರ ಮಠಕ್ಕೆ 500 ವರ್ಷಗಳ ಇತಿಹಾಸವಿದೆ. ಇಲ್ಲಿ ಸಾಕ್ಷಾತ್ ಶಿವನೇ ನೆಲೆಸಿ ಅಭಯ ನೀಡುತ್ತಾನೆ ಅನ್ನುವ ನಂಬಿಕೆ ಭಕ್ತಾದಿಗಳದು. ಈ ದೇವಸ್ಥಾನದ ಬಗ್ಗೆ ಐತಿಹ್ಯವೂ ಇದೆ. ಇದು ಕಾಡ ಸಿದ್ದೇಶ್ವರ ಎಂಬ ಯತಿಗಳ ನೆಲೆವೀಡು. ಇವರು ಈಶ್ವರನ ಪ್ರತಿರೂಪದ ಎಂಬ ನಂಬಿಕೆಯೂ ಇದೆ. ಡಿ.ಕೆ. ಶಿವಕುಮಾರ್‌ ಅವರು ಎಲ್ಲ ರಾಜಕೀಯ ಕಾರ್ಯಗಳಿಗೂ ಮುನ್ನ ಮಠಕ್ಕೆ ಭೇಟಿ ಮಾಡಿ, ಮಠದ ಪೀಠಾಧ್ಯಕ್ಷರಾದ ಡಾ. ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿಯವರು ಹಾಗೂ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿವರ ಆಶೀರ್ವಾದ ಪಡೆಯುತ್ತಾರೆ.

Oath taking ceremony DK Sivakumar sworn in as DCM in the name of Gangadhara Ajjaiah sat

ಕಾಂಗ್ರೆಸ್‌ ಕ್ಯಾಬಿನೆಟ್‌ನಲ್ಲಿ ಮಹಿಳೆಯರೇ ಇಲ್ಲ: ವೋಟಿಗಷ್ಟೇ ಬೇಕು ಆಡಳಿತಕ್ಕೆ ಬೇಡವೇ?

ಗಂಗಾಧರ ಅಜ್ಜಯ್ಯನ ಐತಿಹ್ಯವೇನು?: 
ಒಮ್ಮೆ ಕಾಡ ಸಿದ್ದೇಶ್ವರರು ಸಂಚಾರ ಮಾಡುತ್ತಿರುವಾಗ ಭಕ್ತಿಯಿಂದ ತನ್ನನ್ನು ಪ್ರಾರ್ಥಿಸಿದ ಲಕ್ಷ್ಮೇಶ್ವರದ ಸೋಮೇಶ್ವರನಿಗೆ ವರವನ್ನೂ ನೀಡುತ್ತಾರೆ. ಬಳಿಕ ನೊಣವಿನಕೆರೆಯ ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ನೆಲೆಸುತ್ತಾರೆ. ಕಾಡಿನ ನಡುವೆ ಶಿವಯೋಗಾನು ಸಂಧಾನ ಸಾಧನೆ ಮಾಡುತ್ತಿರುವ ಸಮಯದಲ್ಲಿ ಆ ನಾಡಿನ ರಾಜ ಹಾಗಲವಾಡಿಯ ಮುದಿಯಪ್ಪ ನಾಯಕ ಬೇಟೆಗೆಂದು ಅದೇ ಕಾಡಿಗೆ ಬಂದ. ಸ್ವಾಮಿಗಳನ್ನು ಮೃಗವೆಂದು ಭಾವಿಸಿ ಬಾಣ ಬಿಟ್ಟ. ಆ ಬಾಣ ಶ್ರೀಗಳನ್ನು ಭೇದಿಸಿಕೊಂಡು ಹೋಗುತ್ತದೆ. ನಿಜ ತಿಳಿದಾಗ ವ್ಯಥೆ ಪಟ್ಟ ರಾಜ ಸ್ವಾಮೀಜಿ ಪಾದಕ್ಕೆ ಬಿದ್ದು ಕ್ಷಮೆ ಕೇಳುತ್ತಾನೆ.

Follow Us:
Download App:
  • android
  • ios