5:41 PM IST
ಮಂಡ್ಯದಲ್ಲಿ ಹೈಯೆಸ್ಟ್, ಬೆಂಗಳೂರು ಕೇಂದ್ರದಲ್ಲಿ ಕಡಿಮೆ ಮತದಾನ
ಉಡುಪಿ ಚಿಕ್ಕಮಗಳೂರು- 72.13
ಹಾಸನ- 72.13
ದಕ್ಷಿಣ ಕನ್ನಡ 71.83
ಚಿತ್ರದುರ್ಗ 67
ತುಮಕೂರು- 72.10
ಮಂಡ್ಯ- 74.87
ಮೈಸೂರು- 65.85
ಚಾಮರಾಜನಗರ- 69.60
ಬೆಂಗಳೂರು ಗ್ರಾಮಾಂತರ- 61.78
ಬೆಂಗಳೂರು ಉತ್ತರ 50.04
ಬೆಂಗಳೂರು ಕೇಂದ್ರ- 48.61
ಚಿಕ್ಕಬಳ್ಳಾಪುರ 70.97
ಕೋಲಾರ- 71.26
5:30 PM IST
ಧರ್ಮದ ಆಧಾರದ ಮೇಲೆ ಮತಯಾಚಿಸಿದ್ದಕ್ಕೆ ತೇಜಸ್ವಿ ಸೂರ್ಯ ಮೇಲೆ ಕೇಸ್
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮೇಲೆ ರಾಜ್ಯ ಚುನಾವಣಾ ಆಯೋಗ ಕೇಸ್ ದಾಖಲಿಸಿದೆ. ಧರ್ಮದ ಆಧಾರದ ಮೇಲೆ ಮತ ಯಾಚನೆ ಮಾಡಿದ್ದಕ್ಕಾಗಿ ಈ ಕೇಸ್ ದಾಖಲಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ.
4:54 PM IST
ಆಸ್ಪತ್ರೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ ನಾರಾಯಣ ಮೂರ್ತಿ!
ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಡಿಸ್ಚಾರ್ಜ್ ಮಾಡಿಸಿಕೊಂಡು ಬಂದುತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
4:48 PM IST
ಮತ ಚಲಾಯಿಸಿದ ಜಾವಗಲ್ ಶ್ರೀನಾಥ್
ಟೀಮ್ ಇಂಡಿಯಾ ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಮೈಸೂರಿನಲ್ಲಿ ಮತ ಚಲಾಯಿಸಿದ್ದಾರೆ.
4:37 PM IST
ಸ್ಟ್ರೆಚರ್‌ನಲ್ಲಿ ಮತಗಟ್ಟೆಗೆ ಬಂದು ವೋಟ್ ಮಾಡಿದ ಬೆಂಗಳೂರಿನ ವೃದ್ಧೆ!
ನ್ಯುಮೋನಿಯಾದಿಂದ ಬಳಲುತ್ತಿದ್ದ 78 ವರ್ಷದ ಮಹಿಳೆಯೊಬ್ಬರು ಇಂದು ಕರ್ನಾಟಕದಲ್ಲಿ ಆಕ್ಸಿಜನ್ ಸಪೋರ್ಟ್‌ನಲ್ಲಿಯೇ ಬಂದು ಮತದಾನ ಮಾಡಿದರು.
ಆಕ್ಸಿಜನ್ ಸಪೋರ್ಟ್‌ನೊಂದಿಗೆ ಸ್ಟ್ರೆಚರ್‌ನಲ್ಲಿ ಬಂದು ವೋಟ್ ಮಾಡಿದ ಬೆಂಗಳೂರು ಮಹಿಳೆ!
4:01 PM IST
ದೇಶದಲ್ಲಿ ಶೇ. 50.3ರಷ್ಟು ಮತದಾನ
ದೇಶದಲ್ಲಿ ಮತದಾನ ನಡೆಯುತ್ತಿರುವ 88 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 50.3ರಷ್ಟು ಮತದಾನವಾಗಿದೆ.
3:53 PM IST
ಮಧ್ಯಾಹ್ನ 3 ಗಂಟೆಯ ವೇಳೆಗೆ ಕರ್ನಾಟಕದಲ್ಲಿ ಮತ ಪ್ರಮಾಣ
ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 50.93ರಷ್ಟು ಮತದಾನವಾಗಿದೆ.
3:12 PM IST
113 ವರ್ಷದ ಸಾಲಮರದ ತಿಮ್ಮಕ್ಕನಿಂದ ಮತದಾನ
113 ವರ್ಷದ ಸಾಲಮರದ ತಿಮ್ಮಕ್ಕನಿಂದ ಮತದಾನ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ಮತದಾನ. ತನ್ನ ಸಾಕು ಮಗ ಉಮೇಶ್ ಜೊತೆ ತೆರಳಿ ಮತದಾನ ಮಾಡಿದ ಸಾಲುಮರದ ತಿಮ್ಮಕ್ಕ. 113 ವರ್ಷದ ವಯಸ್ಸಿನಲ್ಲೂ ಮತಗಟ್ಟೆ ಖುದ್ದು ತೆರಳಿ ಮತದಾನ ಮಾಡಿದ ಸಾಲು ಮರದತಿಮ್ಮಕ್ಕ.
3:07 PM IST
Kolara Lok Sabha Elections 2024: ಬಂಗಾರದ ನಾಡಲ್ಲಿ ಮಲ್ಲೇಶ್-ಗೌತಮ್ ಹಣಾಹಣಿ
ಬೆಂಗಳೂರು ಸನಿಹದ ಮತ್ತೊಂದು ಜಿಲ್ಲೆಯಾಗಿರುವ ಕೋಲಾರದಲ್ಲಿ ಮಧ್ಯಾಹ್ನದ ವೇಳೆಗೆ ಮತದಾನದ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೋಲಾರದಲ್ಲಿ ವ್ಯಕ್ತಿಯೊಬ್ಬ ದುಬೈನಿಂದ ಬಂದು ಮತದಾನ ಮಾಡಿದ್ದಾರೆ.
2:13 PM IST
ಮತ ಚಲಾಯಿಸಿದ ಡಿಕೆ ಬ್ರದರ್ಸ್
ಕನಕಪುರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ತಮ್ಮೂರಿನ ಮತಗಟ್ಟೆ ಹೋಗಿ ಮತ ಚಲಾಯಿಸಿದರು.
2:04 PM IST
ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ಮತದಾನ ಮಾಡಿದ ವರ!
ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ವರ ಮತದಾನ ಮಾಡಿದ್ದಾರೆ. ಈ ಘಟನೆ ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.
1:58 PM IST
ದೇವೇಗೌಡರ ಹೇಳಿಕೆಯಿಂದ ಬೇಸರವಾಗಿದೆ: ಸುಮಲತಾ
ಜೆಡಿಎಸ್ ನಾಯಕರು ಯಾವುದೇ ಸಭೆ, ಪ್ರಚಾರಕ್ಕೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತೆ. ಆದ್ರೆ ಅವರು ನನ್ನ ಕರೆದೇ ಇಲ್ಲ ಕುಮಾರಸ್ವಾಮಿ ಒಂದು ಕರೆ ಸಹ ಮಾಡಿಲ್ಲ ಎಂದು ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದಾರೆ.
1:44 PM IST
ಬಿರುಸು ತಗ್ಗಿಸಿಕೊಂಡ ಮತದಾನ, ಶೇ.38ರಷ್ಟು ಟರ್ನ್ ಔಟ್
ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಮತದಾನ ಸ್ವಲ್ಪ ಸ್ಲೋ ಆಗುತ್ತಿದ್ದು, ಕಳೆದ ಸಾರಿಗೆ ಹೋಲಿಸಿದಲ್ಲಿ ಮತದಾರರು ತಮ್ಮ ನಿರಾಸಕ್ತಿ ತೋರಿಸುತ್ತಿರುವಂತೆ ಕಾಣಿಸುತ್ತಿದೆ. ಮೊದ ಸ್ಥಾನದಲ್ಲಿಯೇ ಇರುವ ದಕ್ಷಿಣ ಕನ್ನಡದಲ್ಲಿ ಮತದಾನ ಜೋರಾಗುತ್ತಿದೆ.
1:25 PM IST
ಚಿತ್ರದುರ್ಗ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿ ಕುಸಿದು ಸಾವು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕೆಂದು ತೆರಳಿದ್ದ ಚುನಾವಣಾ ಸಿಬ್ಬಂದಿ ಯಶೋಧಮ್ಮ ಎನ್ನುವವರು ಕಾರ್ಯ ನಿರ್ವಹಿಸುತ್ತಲೇ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲು ಮುಂದಾದರೂ ಅಷ್ಟರೊಳಗೆ ಚುನಾವಣಾ ಸಿಬ್ಬಂದಿಯ ಜೀವ ಹೊರಟೇ ಹೋಗಿತ್ತು.
1:15 PM IST
Indian General Elections 2024: ಮತ ಚಲಾಯಿಸಿದ ಕರ್ನಾಟಕದ ಅಭ್ಯರ್ಥಿಗಳು
ಕರ್ನಾಟಕದ 14 ಲೋಕ ಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿವೆ ಫೋಟೋಸ್
12:58 PM IST
ಎರಡೂ ಕೈ ಇಲ್ಲದ ರಾಷ್ಟ್ರೀಯ ಈಜು ಪಟು ವಿಶ್ವಾಸ ಕಾಲಿನಿಂದ ಮತದಾನ
ತಮ್ಮ ಕಾಲಿನಿಂದಲೇ ತಮ್ಮ ಸಾಮರ್ಥ್ಯ ಏನು ತೋರಿಸಿದ ವಿಶ್ವಾಸ್ ಅವರು ಕಾಲಲ್ಲೇ ಮತದಾನ ಮಾಡಿದ್ದಾರೆ.
12:45 PM IST
Chikkaballapura Lok sabha Elections 2024 Live Updates: ಡಿ.ಸುಧಾಕರ್, ರಕ್ಷಾ ರಾಮಯ್ಯ ನಡುವೆ ಫೈಟ್
ಚಿಕ್ಕಬಳ್ಳಾಪುರ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಮಂತ್ರಿ ಡಿ.ಸುಧಾಕರ್ ಹಾಗೂ ಕಾಂಗ್ರೆಸ್ ಯುವ ನೇತರ ರಕ್ಷಾ ರಾಮಯ್ಯ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು, ಕ್ಷೇತ್ರದ ಮತದಾನ ವಿವರ ಇಲ್ಲಿದೆ.
12:35 PM IST
Tumakuru Lok Sabha Election s2024 Live: ಸೋಮಣ್ಣ ಮುದ್ದಹನುಮೇಗೌಡ ಹೋರಾಟ
ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿ.ಸೋಮಣ್ಣ ಹಾಗೂ ಕಾಂಗ್ರೆಸ್‌ನಿಂದ ಎಸ್‌ಪಿ ಮುದ್ದಹನುಮೇಗೌಡ ತಮ್ಮ ಅದೃಷ್ಟ ಪರೀಕ್ಷಿಸಿ ಕಣಕ್ಕಳಿದಿದ್ದು, ಜಿಲ್ಲೆಯಲ್ಲೆಡೆ ಬಿರುಸಿನಿಂದ ಮತದಾನವಾಗುತ್ತಿದೆ.
12:20 PM IST
Dakshina Kannada Lok Sabha Elections 2024 Live: ಓದಿನಲ್ಲಿ ಮಾತ್ರವಲ್ಲ, ಮತದಾನಕ್ಕೂ ಸೈ
11 ಗಂಟೆ ಹೊತ್ತಿಗೆ ರಾಜ್ಯದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡದಲ್ಲಿ ಶೇ.31ರಷ್ಟು ಮತದಾನವಾಗಿದ್ದು, ಬಿಸಿಲನ್ನೂ ಲೆಕ್ಕಿಸದೇ ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಈ ಲೋಕ ಸಭಾ ಕ್ಷೇತ್ರದ ಅಪ್‌ಡೇಟ್ಸ್‌ಗೆ ಕೆಳಗೆ ಕ್ಲಿಕ್ಕಿಸಿ.
12:17 PM IST
Bengaluru Rural Lok Sabha Elections 2024: ಡಾಕ್ಟರ್ Vs ಡಿಕೆಸು ರಾಜಕಾರಣ
ಬೆಂಗಳೂರು ಗ್ರಾಮಾಂತರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಡಿ.ಕೆ.ಸುರೇಶ್ ವಿರುದ್ದ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಹೆಸರು ಮಾಡಿದ ಡಾ.ಸಿ.ಎನ್.ಮಂಜುನಾಥ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದು, ಜಿದ್ದಾಜಿದ್ದಿಯ ಹೋರಾಟ ನಡೆಯುತ್ತಿದೆ.
12:08 PM IST
Hassan Lok Sabha Elections 2024 Live: ಬೆಂಬಲಿಗರಿಲ್ಲದೇ ವೋಟ್ ಮಾಡಿದ ಪ್ರಜ್ವಲ್ ರೇವಣ್ಣ
ಹಾಸನ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಏಕಾಂಗಿಯಾಗಿ ಬಂದು, ತಮ್ಮ ಹಕ್ಕು ಚಲಾಯಿಸಿದರು. ತಾಯಿ ಭವಾನಿ ರೇವಣ್ಣ ಮಗನ ಗೆಲುವಿಗಾಗಿ ತಮ್ಮ ಪ್ರಚಾರ ಮುಂದುವರಿಸಿದ್ದು, ಮತಗಟ್ಟೆಗೆ ಆಗಮಿಸಿದ ಅತ್ತೆ-ಮಾವ ಎಚ್.ಡಿ.ದೇವೇಗೌಡ ಹಾಗೂ ಚನ್ನಮ್ಮ ಅವರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದರು.
12:01 PM IST
ಮತ ಚಲಾಯಿಸಿದ ಮಠಾಧೀಶರು
ರಾಜ್ಯದ ವಿವಿಧ ಮತಗಟ್ಟೆಯಲ್ಲಿ ಹಲವು ಮಠಾಧೀಶರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದು, ಇಲ್ಲಿವೆ ಫೋಟೋಸ್.
ಮಠಾಧೀಶರಿಂದ ಮತದಾನ
11:54 AM IST
ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಸ್ಯಾಂಡಲ್‌ವುಡ್ ಸೆಲೆಬ್ರಿಟಿಸ್!
ಭಾರತದ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ದೇಶಾದ್ಯಂತ ನಡೆಯುತ್ತಿದ್ದು, ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೂ ಬಿರುಸಿನ ಮತದಾನ ನಡೆಯುತ್ತಿದೆ. ಎಲ್ಲೆಡೆ ಸಿನಿ ತಾರೆಯರೂ ಕುಟುಂಬದೊಂದಿಗೆ ಆಗಮಿಸಿ, ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಇಲ್ಲಿವೆ ಫೋಟೋಸ್
11:48 AM IST
ಬೆಳಗ್ಗೆ ಸರಾಸರಿ ಶೇ.22ರಷ್ಟು ಮತದಾನ, ದಕ್ಷಿಣ ಕನ್ನಡದಲ್ಲಿ ಹೆಚ್ಚು ಟರ್ನೌಟ್
ರಾಜ್ಯದೆಲ್ಲೆಡೆ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಮತದಾರರು ಸರತಿ ಸಾಲಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡದಲ್ಲಿ ಹೆಚ್ಚು ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ನಲ್ಲಿ ಕಡಿಮೆ ಮತದಾನವಾಗಿದೆ.
11:38 AM IST
ಸಿದ್ಧರಾಮನಹುಂಡಿಯಲ್ಲಿ ಸಿಎಂ, ಮೈಸೂರಲ್ಲಿ ಯದುವೀರ್ ಮತದಾನ
ತಮ್ಮ ಹುಟ್ಟೂರು ಸಿದ್ದರಾಮಯ್ಯನ ಹುಂಡಿಗೆ ಮತ ಚಲಾಯಿಸಲು ತೆರಳಿದ ಸಿದ್ಧರಾಮಯ್ಯ ಅವರಿಗೆ ಅಭಿಮಾನಿಗಳು ಹಾರ, ತುರಾಯಿ ಹಾಕಿ ಸ್ವಾಗತಿಸಿದರು. ಸಿಎಂ ವಾಹನ ಮುಂದೆ ಹೋಗದಂತೆ ಅಡ್ಡ ಹಾಕಿ ಜೈ ಕಾರ ಕೂಗಿದರೆ. ಅಲ್ಲಿಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು ಸಿಎಂ. ಇದೇ ವೇಳೆ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ತಮ್ಮ ಮತ ಹಾಕಿದರು.
11:06 AM IST
ಕೋಲಾರದಲ್ಲಿ ಕೈಗೆ ಮತ ಹಾಕಿ ವೀಡಿಯೋ ಮಾಡಿದ ಮತದಾರ
ವೋಟ್ ಮಾಡಿದ ವೀಡಿಯೋ ಮಾಡ್ಕೊಂಡಿದ್ದಲ್ಲದೇ, ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿರುವ ಮೂರು ಪ್ರಕರಣಗಳು ರಾಜ್ಯದ ಕೋಲಾರ, ಬೆಂಗಳೂರು ದಕ್ಷಿಣ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ದಾಖಲಾಗಿವೆ.
Vote Done For Congress K V Gowtham 🦁🦁🦁🦁 pic.twitter.com/rTRSg1XzHZ
— . (@Safari_Arun7) April 26, 2024
#LokSabhaElections2024
— Gururaj Anjan (@Anjan94150697) April 26, 2024
📌#CHIKKABALLAPURA: HAVE YOU CASTED YOUR VOTE? NOT YET? GO OUT & VOTE.!
📌Huge Support for Youth's Favourite #RakshaRamaiah in ChikkaballaPura.
GROUND ZERO.!!! https://t.co/CIgFJZ6fBu pic.twitter.com/iXL7Tt9sFk
10:58 AM IST
ರಾಮಲಲ್ಲಾ ಮೂರ್ತಿ ಕೆತ್ತಿದ ಯೋಗಿರಾಜ್ ಮತದಾನ
ಮೈಸೂರು ಮೂಲದ ಯೋಗರಾಜ್, ಅಯೋಧ್ಯೆಯ ಬಾಲ ರಾಮನ ಮೂರ್ತಿ ಕೆತ್ತಿದ್ದರಿಂದ ಜಗದ್ವಿಖ್ಯಾತರಾದವರು. ತಮ್ಮ ಕುಟುಂಬದೊಡನೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರ.ೆ
10:49 AM IST
ವೋಟ್ ಹಾಕಿದವರಿಗೆ ಫ್ರೀ ತಿಂಡಿ: ನಿಸರ್ಗ ಗ್ರ್ಯಾಂಡಲ್ಲಿ ಕ್ಯೂ
ಕೆಲವು ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳು ಮತ ಹಾಕಿ ಬಂದವರಿಗೆ ಫ್ರೀ ತಿಂಡ ಕೊಡುತ್ತಿದ್ದು, ನಿಸರ್ಗ್ ಗ್ರ್ಯಾಂಡ್ ಮುಂದೆ ಜನರು ಕ್ಯೂ ನಿಂತಿದ್ದಾರೆ.
Long queues were seen at Nisarga Grand Hotel on Nrupathunga Road in Bengaluru, which is offering free benne khali dosa, ghee laddu, and juice on April 26 to voters who display their inked fingers as proof of voting. https://t.co/l7uewY0Odo pic.twitter.com/XpeNwaAONk
— ChristinMathewPhilip (@ChristinMP_) April 26, 2024
10:37 AM IST
ಮತ ಹಾಕಿ ಭವಿಷ್ಯ ನಿರ್ಧರಿಸೋಣ: ಶ್ವೇತಾ ಶ್ರೀವಾತ್ಸವ್
ಕರ್ನಾಟಕದ ಮೊದಲ ಹಂತದ, ದೇಶದ 2ನೇ ಹಂತದ ಪ್ರಚಾರ ಬಿರುಸಿನಿಂದ ಸಾಗಿದ್ದು, ಸಿನಿ ತಾರೆಯರು ತಮ್ಮ ಹಕ್ಕು ಚಲಾಯಿಸಿ, ಎಲ್ಲರಿಗೂ ಮತ ಹಾಕುವಂತೆ ಸೋಷಿಯಲ್ ಮೀಡಿಯಾ ಮೂಲಕ ಆಗ್ರಹಿಸುತ್ತಿದ್ದಾರೆ.
10:13 AM IST
ಬಿಸಿಲಿನ ಧಗೆ: ಬೆಳ್ಳಂ ಬೆಳಗ್ಗೆ ಮತದಾನಕ್ಕೆ ಸರತಿ ಸಾಲಲ್ಲಿ ನಿಂತ ಮತದಾರರು
ಬೆಂಗಳೂರು ಸೇರಿ ಹಲವೆಡೆ ಮತದಾರರು ಬಿಸಿಲಿನ ಧಗೆ ಏರುವ ಹೆಚ್ಚುವ ಮುಂಚೆ ಮತ ಚಲಾಯಿಸಲು ಉತ್ಸುಕರಾಗಿದ್ದು, ಎಲ್ಲೆಡೆ ಸರತಿ ಕ್ಯೂನಲ್ಲಿ ಜನರು ಸರತಿ ಸಾಲಲ್ಲಿ ನಿಂತಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ತೋರಿಸುವ ಚುನಾವಣೆಯಲ್ಲಿ ಎಲ್ಲರೂ ತೆರಳಿ, ಮತ ಚಲಾಯಿಸು ಸುಭದ್ರ ಭಾರತ ಕಟ್ಟಲು ಸೆಲೆಬ್ರಿಟಿಗಳು ಕರೆ ನೀಡಿದ್ದಾರೆ.
101 ವರ್ಷದ ಹಿರಿಯ ನಾಗರಿಕರಾದ ತಿಮ್ಮಮ್ಮ ಮೈಸೂರು ಲೋಕಸಭೆಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾದರು.
10:06 AM IST
ಬೆಂಗಳೂರ ದಕ್ಷಿಣದಲ್ಲಿ ಹೆಚ್ಚು 9.8 ರಷ್ಟು ಮತದಾನ
ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯ ಮತದಾನದ ಶೇಖಡಾವಾರು ಪ್ರಮಾಣ:
ಬೆಳಗ್ಗೆ 7.00 ರಿಂದ 9.00ರ ವರದಿ
ಬೆಂಗಳೂರು ಕೇಂದ್ರ: 8.14 %
ಬೆಂಗಳೂರು ದಕ್ಷಿಣ: 9.8 %
ಬೆಂಗಳೂರು ಉತ್ತರ: 8.64 %
ಬೆಂಗಳೂರು ದಕ್ಷಣದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತಮ್ಮ ಚಿಕ್ಕಪ್ಪ, ಬಸವನಗುಡು ಶಾಸಕ ರವಿ ಸುಬ್ರಹ್ಮಣ್ಯ ಸೇರಿ ಕುಟುಂಬದ ಇತೆರೆ ಸದಸ್ಯರೊಂದಿಗೆ ಆಗಮಿಸಿದ ಮತ ಚಲಾಯಿಸಿದರು.
10:03 AM IST
ಮತ ಹಾಕಿ ಎಲ್ಲರಿಗೂ ವೋಟ್ ಮಾಡುವಂತೆ ಕರೆ ನೀಡಿದ ಸಿನಿ ತಾರೆಯರು
ಬೆಂಗಳೂರಿನ ಹಲವೆಡೆ ಕನ್ನಡ ಸಿನಿ ತಾರಾ ಕುಟುಂಬ ಮತದಾನ ಮಾಡಿ, ಎಲ್ಲರಿಗೂ ಮತ ಹಾಕುವಂತೆ ಆಗ್ರಹಿಸಿದರೆ. ಡಾ.ರಾಜ್ ಕುಮಾರ್ ಕುಟುಂಬ, ನಟಿಯರಾದ ಪ್ರೇಮಾ, ತಾರಾ, ಕಾಂತಾರದ ಸಪ್ತಮಿ ಗೌಡ ಸೇರಿ ಹಲವು ತಮ್ಮ ಮತ ಹಕ್ಕು ಚಲಾಯಿಸಿದ್ದಾರೆ.
9:47 AM IST
ಸಂಪ್ರಾದಾಯಿಕ ಉಡುಗೆಯಲ್ಲಿ ಮತಗಟ್ಟೆ ಅಧಿಕಾರಿಗಳು
ಮೈಸೂರಿನ ವರುಣಾದಲ್ಲಿರುವ ತಾಂಡವಪುರ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಮತದಾರರನ್ನು ಸ್ವಾಗತಿಸಿದರು
9:41 AM IST
ಮತದಾನ ಮಾಡಿದ ವಿಪಕ್ಷ ನಾಯಕ ಆರ್. ಅಶೋಕ್
ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಮತ ಚಲಾವಣೆ ಮಾಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿ ವಿಲೇಜ್ ನ ಕ್ಲಾರೆಟ್ ಶಾಲೆಯಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದೆ.
— R. Ashoka (ಮೋದಿ ಅವರ ಕುಟುಂಬ) (@RAshokaBJP) April 26, 2024
ನನ್ನ ಮತ - ನನ್ನ ಹಕ್ಕು
ಮತ ಚಲಾವಣೆ - ನನ್ನ ಕರ್ತವ್ಯ.
ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ. pic.twitter.com/R6rWJBDskc

9:38 AM IST
ರಾಜ್ಯಾದ್ಯಂತ ಶೇ. 9.21ರಷ್ಟು ಮತದಾನ..
ರಾಜ್ಯಾದ್ಯಂತ ಬೆಳಗ್ಗೆ 9 ಗಂಟೆಯ ವೇಳೆಗೆ ಶೆ. 9.21ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ದಕ್ಷಿಣ ಕನ್ನಡದಲ್ಲಿ ಗರಿಷ್ಠ ಶೇ. 14.33ರಷ್ಟು ಮತದಾನವಾಗಿದೆ. ಚಿತ್ರದುರ್ಗ,ಮಂಡ್ಯ ಹಾಗೂ ಚಾಮರಾಜನಗರದಲ್ಲಿ ಅತೀ ಕಡಿಮೆ ಮತದಾನವಾಗಿದೆ.
9:20 AM IST
ಚಕ್ರವರ್ತಿ ಸೂಲಿಬೆಲೆ ಮತದಾನ
ಲೇಖಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ..
9:13 AM IST
Chamarajanagara Live: ಚಾಮರಾಜನಗರ ಚುನಾವಣೆ ಲೈವ್ ರಿಪೋರ್ಟ್..
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲ ಮತದಾನ ಚುರುಕುಗೊಂಡಿದೆ. ಡಿಸಿ ಶಿಲ್ಪಾ ನಾಗ್ ಚುನಾವಣಾ ಜಾಗೃತಿ ಸಾರುವ ಸೀರೆ ಧರಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
LIVE: ಚಾಮರಾಜನಗರ 2024 Elections: 'ಚುನಾವಣೆ ಪರ್ವ ದೇಶದ ಗರ್ವ' ಸೀರೆ ಧರಿಸಿ ಡಿಸಿ ಮತದಾನ
9:11 AM IST
Bengaluru North: ಒಕ್ಕಲಿಗರ ಭದ್ರಕೋಟೆಯಲ್ಲಿ ಗೆಲ್ಲುವವರು ಯಾರು?
ಬೆಂಗಳೂರು ಉತ್ತರದಲ್ಲಿ ಬೆಳಗಿನಿಂದಲೂ ಉತ್ತಮವಾಗಿ ಮತದಾನವಾಗುತ್ತಿದೆ. ಕಾಂಗ್ರೆಸ್‌ನ ರಾಜೀವ್ ಗೌಡಗೆ ಬಿಜೆಪಿಯ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.
LIVE: ಒಕ್ಕಲಿಗರ ಭದ್ರಕೋಟೆ ಬೆಂಗಳೂರು ಉತ್ತರದಲ್ಲಿ ಗೆಲ್ಲೋರಾರು; ಸಚಿವೆ ಶೋಭಾ ಕರಂದ್ಲಾಜೆಗೆ ಪ್ರೊಫೆಸರ್ ಸವಾಲು
9:05 AM IST
ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾಮೂರ್ತಿ ಮತದಾನ
ಬೆಂಗಳೂರಿನ ಜಯನಗರದಲ್ಲಿ ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಮತದಾನ ಮಾಡಿದ್ದಾರೆ.
8:49 AM IST
Chamarajanagara: ಮತದಾನದ ಜಾಗೃತಿ ಸಾರುವ ಸೀರೆ ಧರಿಸಿ ಮತದಾನ ಮಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್
ಚಾಮರಾಜನಗರ ಲೋಕಸಭಾ ಎಸ್.ಸಿ ಮೀಸಲು ಕ್ಷೇತ್ರದ ಚುನಾವಣೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 80 ರಲ್ಲಿಜಿಲ್ಲಾ ಚುನಾವಣಾಧಿಕಾರಿ ಹಕ್ಕು ಚಲಾಯಿಸಿದ್ದಾರೆ. ಚಾಮರಾಜನಗರ ಪಿಡಬ್ಲೂಡಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸಿ ಮತದಾನ ಮಾಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಖುದ್ದು ತಮ್ಮ ಹೆಸರನ್ನು ಶಿಲ್ಪಾ ನಾಗ್ ಹುಡುಕಿದ್ದರು. ಮತದಾನದ ಜಾಗೃತಿ ಸಾರುವ ಸೀರೆ ಧರಿಸಿ ಮತದಾನ ಮಾಡಿದ್ದಾರೆ. ಚುನಾವಣೆ ಪರ್ವ ದೇಶದ ಗರ್ವ ಎಂಬ ಟ್ಯಾಗ್ ಲೈನ್ ಮುದ್ರಿಸಿದ ಸೀರೆ . ಡಿಸಿ ಶಿಲ್ಪಾನಾಗ್, ಜಿ.ಪಂ.ಉಪಾಧ್ಯಕ್ಷೆ ಲಕ್ಷ್ಮೀ,ಆಹಾರ ಮತ್ತು ನಾಗರೀಕ ಇಲಾಖೆ ಉಪ ನಿರ್ದೇಶಕಿ ಸವಿತಾ ಇದೇ ರೀತಿಯ ಟ್ಯಾಗ್‌ಲೈನ್ ಇರುವ ಸೀರೆ ಧರಿಸಿ ಮತದಾನ ಮಾಡಿದ್ದಾರೆ.
8:43 AM IST
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೈವ್ ರಿಪೋರ್ಟ್..
ಮದುವೆಮನೆಗೆ ಹೊರಡುವ ಮುನ್ನ ಮತದಾನ ಮಾಡಿದ ವಧು, ಅದರೊಂದಿಗೆ ಹಿರಿಯ ನಾಗರೀಕರು ಕೂಡ ಉತ್ಸಾಹದಿಂದ ಮತದಾನಕ್ಕೆ ಅಣಿಯಾಗಿದ್ದಾರೆ.
LIVE: ಉಡುಪಿ ಚಿಕ್ಕಮಗಳೂರು 2024 Elections ಮೂಡಿಗೆರೆಯಲ್ಲಿ ನವವಧುನಿಂದ ಮತದಾನ
8:23 AM IST
Bengaluru: ಮತಗಟ್ಟೆಯಲ್ಲಿ ಕೈಕೊಟ್ಟ ಇವಿಎಂ ಮೆಷಿನ್
ಬೆಂಗಳೂರಿನ ಪಾದರಾಯನಪುರದಲ್ಲಿ ಮತದಾನ ಶುರುವಾಗಿ 1 ಗಂಟೆ ಆದ್ರೂ ಮತದಾನ ಶುರುವಾಗಿಲ್ಲ. ಪಾದರಾಯನಪುರ ಸುಲ್ತಾನ್ ಪಾಳ್ಯ ಮತಗಟ್ಟೆ 46ರಲ್ಲಿ ಮತದಾನ ಇನ್ನೂ ಶುರುವಾಗಿಲ್ಲ. ಬೆಳಿಗ್ಗೆ 6 ಗಂಟೆಗೆ ಮತದಾನಕ್ಕಾಗಿ ಬಂದು ನಿಂತಿದ್ದ ಜನ. ಬೆಳಿಗ್ಗೆನೆ ಮತ ಹಾಕಿ ಹೋಗುವ ಉತ್ಸಾಹದಲ್ಲಿದ್ದ ಜನರಿಗೆ ಇದರಿಂದ ನಿರಾಸೆಯಾಗಿದೆ. ಮತದಾನಕ್ಕಾಗಿ ಕಿಲೋಮೀಟರ್‌ಗಟ್ಟಲೆ ಕ್ಯೂ ನಿಂತಿದ್ದಾರೆ. ಇಂದು ಶುಕ್ರವಾರ ಮಸೀದಿ ಹೋಗುವ ಮುನ್ನ ಮತ ಹಾಕಲು ನಿರ್ಧಾರ ಮಾಡಿದ್ದರು. ಆದರೆ, ಕಳೆದ ಒಂದು ಗಂಟೆಯಿಂದಲೂ ಇವಿಎಂ ಮೆಷಿನ್ ದೋಷದಿಂದ ಮತ ಹಾಕಲು ಸಾಧ್ಯವಾಗಿಲ್ಲ. ಮತ ಹಾಕಲು ಆಗದೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
8:19 AM IST
Chikkamagaluru: ಇವಿಎಂ ಮೆಷಿನ್ ದೋಷ, ಮತದಾನ ಸ್ಥಗಿತ
ಇವಿಎಂ ದೋಷದಿಂದಾಗಿ ಚಿಕ್ಕಮಗಳೂರಿನ ಮತಗಟ್ಟೆಯೊಂದರಲ್ಲಿ ಕಳೆದ ಒಂದು ಗಂಟೆಯಿಂದ ಮತದಾನ ಸ್ಥಗಿತಗೊಂಡಿದೆ. ಎನ್.ಆರ್.ಪುರ ತಾಲೂಕಿನ ಮೆಣಸೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮೆಣಸೂರು ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಮತಗಟ್ಟೆ ಕೇಂದ್ರ. ಮತದಾನಕ್ಕಾಗಿ ಕಾದು ಕುಳಿತ ಮತದಾರರು. ಅಧಿಕಾರಿಗಳ ವಿರುದ್ಧ ಮತದಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕರಿಂದ ಅಸಮಾಧಾನ.
8:16 AM IST
ನಮ್ಮ ಮತ.. ನಮ್ಮ ಹಕ್ಕು..
8:15 AM IST
ಮತ ನಿಮ್ಮ ಹಕ್ಕು, ನಿರ್ಭೀತಿಯಿಂದ ಮತಚಲಾವಣೆ ಮಾಡೋದು ಹೇಗೆ?
ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಇದರಲ್ಲಿ ಯಾವುದಾದರೂ ಒಂದು ದಾಖಲೆಗಳಿದ್ದರೆ, ನೀವು ಮತ ಚಲಾವಣೆ ಮಾಡಬಹುದು.
Lok Sabha Elections 2024: ಇಂದು ತಪ್ಪದೇ ಮತ ಹಾಕಿ: ನಿರ್ಭಿತಿ, ವಿವೇಚನೆಯಿಂದ ವೋಟು ಹಾಕುವುದು ಹೇಗೆ?
8:12 AM IST
ವೀಲ್‌ಚೇರ್‌ನಲ್ಲಿ ಬಂದ ಮತಚಲಾಯಿಸಿದ ವ್ಯಕ್ತಿ..
ಬೆಂಗಳೂರಿನ ಗಿರಿನಗರದಲ್ಲಿ ಮತದಾನ ಮಾಡಲು ಆಗಮಿಸಿದ ಕೃತಕ ಕಾಲು ಅಳವಡಿಸಿಕೊಂಡಿರೋ ವೃದ್ಧ ವೀಲ್‌ಚೇರ್‌ನಲ್ಲಿ ಆಗಮಿಸಿದರು.
8:07 AM IST
'ನಿಮ್ಮ ಮತ ನಿಮ್ಮ ಧ್ವನಿ..' ಪ್ರಧಾನಿ ಮೋದಿ ಟ್ವೀಟ್..
ದೇಶದಲ್ಲಿ 2ನೇ ಹಂತದ ಮತದಾನ ಆರಂಭವಾಗಿರುವಾಗ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಹೆಚ್ಚಿನ ಪ್ರಮಾಣದ ಮತದಾನವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ನಮ್ಮ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ವಿಶೇಷವಾಗಿ…
— Narendra Modi (@narendramodi) April 26, 2024
8:06 AM IST
ಪಲಿಮಾರು ಮಠದ ವಿದ್ಯಾಧೀಶ ತೀರ್ಥರಿಂದ ಮತದಾನ
ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಮತದಾನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮತದಾನ ದೇಶಭಕ್ತಿಯ ಸಂದೇಶ. ಮತದಾನದ ಬಗ್ಗೆ ಉದಾಸೀನ ಮಾಡಬೇಡಿ. ರಜೆ ಕೊಟ್ಟಿರುವುದು ಎಂಜಾಯ್ ಮಾಡಲು ಅಲ್ಲ ಎಂದು ಹೇಳಿದ್ದಾರೆ,
7:17 AM IST
ಹಸೆ ಮಣೆ ಏರುವ ಮುನ್ನ ಮತದಾನ ಮಾಡಿದ ವಧು
ಚಿಕ್ಕಮಗಳೂರಿನಲ್ಲಿ ನವ ವಧುವಿನಿಂದ ಮೊದಲ ಮತದಾನ ನಡೆದಿದೆ. ಮದುವೆ ಮಂಟಪಕ್ಕೆ ಹೋಗುವ ಮುನ್ನ ಮತಗಟ್ಟೆಗೆ ಬಂದು ನವವಧು ಮತದಾನ ಮಾಡಿದ್ದಾರೆ. ಮೂಡಿಗೆರೆ ತಾಲೂಕಿನ ಕಂದೂರು ಮತಕೇಂದ್ರದಲ್ಲಿ ಮತದಾನ ಮಾಡಿದ್ದಾರೆ.
7:11 AM IST
ಪತ್ನಿ, ಮಗನೊಂದಿಗೆ ಮತದಾನಕ್ಕೆ ಆಗಮಿಸಿದ ದ್ರಾವಿಡ್.
ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್, ಪತ್ನಿ ವಿಜೇತಾ ಹಾಗೂ ಪುತ್ರ ಸುಮಿತ್ ಅವರೊಂದಿಗೆ ಮಲ್ಲೇಶ್ವರಂ ಕ್ಷೇತ್ರದ ಡಾಲರ್ಸ್ ಕಾಲೋನಿಯ ಶಿಕ್ಷಾ ಫ್ರೀಸ್ಕೂಲ್ ಮತಗಟ್ಟೆಯಲ್ಲಿ ಮತದಾನ ಮಾಡಿದರು.
7:06 AM IST
ಮೊದಲ ಹಂತದಲ್ಲಿ 14 ಜಿಲ್ಲೆಗಳಲ್ಲಿ ಮತದಾನ
ಮೊದಲ ಹಂತದಲ್ಲಿ ಒಟ್ಟು ಈ 14 ಜಿಲ್ಲೆಗಳಿಗೆ ಮತದಾನ ನಡೆಯಲಿದೆ
ಉಡುಪಿ - ಚಿಕ್ಕಮಗಳೂರು
ಚಿತ್ರದುರ್ಗ
ಕೋಲಾರ
ಮಂಡ್ಯ
ಹಾಸನ
ದಕ್ಷಿಣ ಕನ್ನಡ
ಮೈಸೂರು - ಕೊಡಗು
ಚಿಕ್ಕಬಳ್ಳಾಪುರ
ತುಮಕೂರು
ಬೆಂಗಳೂರು ಉತ್ತರ
ಬೆಂಗಳೂರು ದಕ್ಷಿಣ
ಬೆಂಗಳೂರು ಕೇಂದ್ರ
ಬೆಂಗಳೂರು ಗ್ರಾಮಾಂತರ
ಚಾಮರಾಜನಗರ
5:41 PM IST:
ಉಡುಪಿ ಚಿಕ್ಕಮಗಳೂರು- 72.13
ಹಾಸನ- 72.13
ದಕ್ಷಿಣ ಕನ್ನಡ 71.83
ಚಿತ್ರದುರ್ಗ 67
ತುಮಕೂರು- 72.10
ಮಂಡ್ಯ- 74.87
ಮೈಸೂರು- 65.85
ಚಾಮರಾಜನಗರ- 69.60
ಬೆಂಗಳೂರು ಗ್ರಾಮಾಂತರ- 61.78
ಬೆಂಗಳೂರು ಉತ್ತರ 50.04
ಬೆಂಗಳೂರು ಕೇಂದ್ರ- 48.61
ಚಿಕ್ಕಬಳ್ಳಾಪುರ 70.97
ಕೋಲಾರ- 71.26
5:30 PM IST:
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮೇಲೆ ರಾಜ್ಯ ಚುನಾವಣಾ ಆಯೋಗ ಕೇಸ್ ದಾಖಲಿಸಿದೆ. ಧರ್ಮದ ಆಧಾರದ ಮೇಲೆ ಮತ ಯಾಚನೆ ಮಾಡಿದ್ದಕ್ಕಾಗಿ ಈ ಕೇಸ್ ದಾಖಲಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ.
5:05 PM IST:
ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಡಿಸ್ಚಾರ್ಜ್ ಮಾಡಿಸಿಕೊಂಡು ಬಂದುತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
4:48 PM IST:
ಟೀಮ್ ಇಂಡಿಯಾ ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಮೈಸೂರಿನಲ್ಲಿ ಮತ ಚಲಾಯಿಸಿದ್ದಾರೆ.
4:37 PM IST:
ನ್ಯುಮೋನಿಯಾದಿಂದ ಬಳಲುತ್ತಿದ್ದ 78 ವರ್ಷದ ಮಹಿಳೆಯೊಬ್ಬರು ಇಂದು ಕರ್ನಾಟಕದಲ್ಲಿ ಆಕ್ಸಿಜನ್ ಸಪೋರ್ಟ್‌ನಲ್ಲಿಯೇ ಬಂದು ಮತದಾನ ಮಾಡಿದರು.
ಆಕ್ಸಿಜನ್ ಸಪೋರ್ಟ್‌ನೊಂದಿಗೆ ಸ್ಟ್ರೆಚರ್‌ನಲ್ಲಿ ಬಂದು ವೋಟ್ ಮಾಡಿದ ಬೆಂಗಳೂರು ಮಹಿಳೆ!
4:01 PM IST:
ದೇಶದಲ್ಲಿ ಮತದಾನ ನಡೆಯುತ್ತಿರುವ 88 ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 50.3ರಷ್ಟು ಮತದಾನವಾಗಿದೆ.
5:20 PM IST:
ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ. 50.93ರಷ್ಟು ಮತದಾನವಾಗಿದೆ.
3:12 PM IST:
113 ವರ್ಷದ ಸಾಲಮರದ ತಿಮ್ಮಕ್ಕನಿಂದ ಮತದಾನ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ಮತದಾನ. ತನ್ನ ಸಾಕು ಮಗ ಉಮೇಶ್ ಜೊತೆ ತೆರಳಿ ಮತದಾನ ಮಾಡಿದ ಸಾಲುಮರದ ತಿಮ್ಮಕ್ಕ. 113 ವರ್ಷದ ವಯಸ್ಸಿನಲ್ಲೂ ಮತಗಟ್ಟೆ ಖುದ್ದು ತೆರಳಿ ಮತದಾನ ಮಾಡಿದ ಸಾಲು ಮರದತಿಮ್ಮಕ್ಕ.
3:07 PM IST:
ಬೆಂಗಳೂರು ಸನಿಹದ ಮತ್ತೊಂದು ಜಿಲ್ಲೆಯಾಗಿರುವ ಕೋಲಾರದಲ್ಲಿ ಮಧ್ಯಾಹ್ನದ ವೇಳೆಗೆ ಮತದಾನದ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೋಲಾರದಲ್ಲಿ ವ್ಯಕ್ತಿಯೊಬ್ಬ ದುಬೈನಿಂದ ಬಂದು ಮತದಾನ ಮಾಡಿದ್ದಾರೆ.
ಕೋಲಾರ ಚುನಾವಣಾ ಸುದ್ದಿ ಅಪ್ಡೇಡ್‌ಗಾಗಿ ಇಲ್ಲಿ ಕ್ಲಿಕ್ಕಿಸ್
3:00 PM IST:
ಕನಕಪುರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ತಮ್ಮೂರಿನ ಮತಗಟ್ಟೆ ಹೋಗಿ ಮತ ಚಲಾಯಿಸಿದರು.
2:04 PM IST:
ತಾಳಿ ಕಟ್ಟಲು ಇನ್ನೇನು ಹತ್ತು ನಿಮಿಷ ಇರುವಾಗಲೇ ಓಡೋಡಿ ಬಂದು ವರ ಮತದಾನ ಮಾಡಿದ್ದಾರೆ. ಈ ಘಟನೆ ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.
1:58 PM IST:
ಜೆಡಿಎಸ್ ನಾಯಕರು ಯಾವುದೇ ಸಭೆ, ಪ್ರಚಾರಕ್ಕೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೇ ಇದ್ದರೆ ತಪ್ಪಾಗುತ್ತೆ. ಆದ್ರೆ ಅವರು ನನ್ನ ಕರೆದೇ ಇಲ್ಲ ಕುಮಾರಸ್ವಾಮಿ ಒಂದು ಕರೆ ಸಹ ಮಾಡಿಲ್ಲ ಎಂದು ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದಾರೆ.
1:53 PM IST:
ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಮತದಾನ ಸ್ವಲ್ಪ ಸ್ಲೋ ಆಗುತ್ತಿದ್ದು, ಕಳೆದ ಸಾರಿಗೆ ಹೋಲಿಸಿದಲ್ಲಿ ಮತದಾರರು ತಮ್ಮ ನಿರಾಸಕ್ತಿ ತೋರಿಸುತ್ತಿರುವಂತೆ ಕಾಣಿಸುತ್ತಿದೆ. ಮೊದ ಸ್ಥಾನದಲ್ಲಿಯೇ ಇರುವ ದಕ್ಷಿಣ ಕನ್ನಡದಲ್ಲಿ ಮತದಾನ ಜೋರಾಗುತ್ತಿದೆ.
1:25 PM IST:
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕೆಂದು ತೆರಳಿದ್ದ ಚುನಾವಣಾ ಸಿಬ್ಬಂದಿ ಯಶೋಧಮ್ಮ ಎನ್ನುವವರು ಕಾರ್ಯ ನಿರ್ವಹಿಸುತ್ತಲೇ ಲೋ ಬಿಪಿಯಿಂದಾಗಿ ತಲೆ ಸುತ್ತು ಬಂದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲು ಮುಂದಾದರೂ ಅಷ್ಟರೊಳಗೆ ಚುನಾವಣಾ ಸಿಬ್ಬಂದಿಯ ಜೀವ ಹೊರಟೇ ಹೋಗಿತ್ತು.
4:12 PM IST:
ಕರ್ನಾಟಕದ 14 ಲೋಕ ಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿವೆ ಫೋಟೋಸ್
ಇಲ್ಲಿವೆ ಉಳಿದ ಅಭ್ಯರ್ಥಿಗಳು ಫೋಟೋಸ್
2:50 PM IST:
ತಮ್ಮ ಕಾಲಿನಿಂದಲೇ ತಮ್ಮ ಸಾಮರ್ಥ್ಯ ಏನು ತೋರಿಸಿದ ವಿಶ್ವಾಸ್ ಅವರು ಕಾಲಲ್ಲೇ ಮತದಾನ ಮಾಡಿದ್ದಾರೆ.
12:45 PM IST:
ಚಿಕ್ಕಬಳ್ಳಾಪುರ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಮಂತ್ರಿ ಡಿ.ಸುಧಾಕರ್ ಹಾಗೂ ಕಾಂಗ್ರೆಸ್ ಯುವ ನೇತರ ರಕ್ಷಾ ರಾಮಯ್ಯ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು, ಕ್ಷೇತ್ರದ ಮತದಾನ ವಿವರ ಇಲ್ಲಿದೆ.
2:46 PM IST:
ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿ.ಸೋಮಣ್ಣ ಹಾಗೂ ಕಾಂಗ್ರೆಸ್‌ನಿಂದ ಎಸ್‌ಪಿ ಮುದ್ದಹನುಮೇಗೌಡ ತಮ್ಮ ಅದೃಷ್ಟ ಪರೀಕ್ಷಿಸಿ ಕಣಕ್ಕಳಿದಿದ್ದು, ಜಿಲ್ಲೆಯಲ್ಲೆಡೆ ಬಿರುಸಿನಿಂದ ಮತದಾನವಾಗುತ್ತಿದೆ.
ತುಮಕೂರು ಲೈವ್ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ
12:20 PM IST:
11 ಗಂಟೆ ಹೊತ್ತಿಗೆ ರಾಜ್ಯದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡದಲ್ಲಿ ಶೇ.31ರಷ್ಟು ಮತದಾನವಾಗಿದ್ದು, ಬಿಸಿಲನ್ನೂ ಲೆಕ್ಕಿಸದೇ ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಈ ಲೋಕ ಸಭಾ ಕ್ಷೇತ್ರದ ಅಪ್‌ಡೇಟ್ಸ್‌ಗೆ ಕೆಳಗೆ ಕ್ಲಿಕ್ಕಿಸಿ.
ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಅಪ್‌ಡೇಟ್ಸ್
12:17 PM IST:
ಬೆಂಗಳೂರು ಗ್ರಾಮಾಂತರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಡಿ.ಕೆ.ಸುರೇಶ್ ವಿರುದ್ದ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಹೆಸರು ಮಾಡಿದ ಡಾ.ಸಿ.ಎನ್.ಮಂಜುನಾಥ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದು, ಜಿದ್ದಾಜಿದ್ದಿಯ ಹೋರಾಟ ನಡೆಯುತ್ತಿದೆ.
ಈ ಕ್ಷೇತ್ರದ ಚುನಾವಣೆ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
1:24 PM IST:
ಹಾಸನ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಏಕಾಂಗಿಯಾಗಿ ಬಂದು, ತಮ್ಮ ಹಕ್ಕು ಚಲಾಯಿಸಿದರು. ತಾಯಿ ಭವಾನಿ ರೇವಣ್ಣ ಮಗನ ಗೆಲುವಿಗಾಗಿ ತಮ್ಮ ಪ್ರಚಾರ ಮುಂದುವರಿಸಿದ್ದು, ಮತಗಟ್ಟೆಗೆ ಆಗಮಿಸಿದ ಅತ್ತೆ-ಮಾವ ಎಚ್.ಡಿ.ದೇವೇಗೌಡ ಹಾಗೂ ಚನ್ನಮ್ಮ ಅವರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದರು.
ಹಾಸನ ಚುನಾವಣೆಯ ಲೈವ್ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ
1:54 PM IST:
ರಾಜ್ಯದ ವಿವಿಧ ಮತಗಟ್ಟೆಯಲ್ಲಿ ಹಲವು ಮಠಾಧೀಶರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದು, ಇಲ್ಲಿವೆ ಫೋಟೋಸ್.
ಮಠಾಧೀಶರಿಂದ ಮತದಾನ
1:01 PM IST:
ಭಾರತದ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ದೇಶಾದ್ಯಂತ ನಡೆಯುತ್ತಿದ್ದು, ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೂ ಬಿರುಸಿನ ಮತದಾನ ನಡೆಯುತ್ತಿದೆ. ಎಲ್ಲೆಡೆ ಸಿನಿ ತಾರೆಯರೂ ಕುಟುಂಬದೊಂದಿಗೆ ಆಗಮಿಸಿ, ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಇಲ್ಲಿವೆ ಫೋಟೋಸ್
12:48 PM IST:
ರಾಜ್ಯದೆಲ್ಲೆಡೆ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಮತದಾರರು ಸರತಿ ಸಾಲಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡದಲ್ಲಿ ಹೆಚ್ಚು ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ನಲ್ಲಿ ಕಡಿಮೆ ಮತದಾನವಾಗಿದೆ.
11:38 AM IST:
ತಮ್ಮ ಹುಟ್ಟೂರು ಸಿದ್ದರಾಮಯ್ಯನ ಹುಂಡಿಗೆ ಮತ ಚಲಾಯಿಸಲು ತೆರಳಿದ ಸಿದ್ಧರಾಮಯ್ಯ ಅವರಿಗೆ ಅಭಿಮಾನಿಗಳು ಹಾರ, ತುರಾಯಿ ಹಾಕಿ ಸ್ವಾಗತಿಸಿದರು. ಸಿಎಂ ವಾಹನ ಮುಂದೆ ಹೋಗದಂತೆ ಅಡ್ಡ ಹಾಕಿ ಜೈ ಕಾರ ಕೂಗಿದರೆ. ಅಲ್ಲಿಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು ಸಿಎಂ. ಇದೇ ವೇಳೆ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ತಮ್ಮ ಮತ ಹಾಕಿದರು.
11:12 AM IST:
ವೋಟ್ ಮಾಡಿದ ವೀಡಿಯೋ ಮಾಡ್ಕೊಂಡಿದ್ದಲ್ಲದೇ, ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿರುವ ಮೂರು ಪ್ರಕರಣಗಳು ರಾಜ್ಯದ ಕೋಲಾರ, ಬೆಂಗಳೂರು ದಕ್ಷಿಣ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ದಾಖಲಾಗಿವೆ.
Vote Done For Congress K V Gowtham 🦁🦁🦁🦁 pic.twitter.com/rTRSg1XzHZ
— . (@Safari_Arun7) April 26, 2024
#LokSabhaElections2024
— Gururaj Anjan (@Anjan94150697) April 26, 2024
📌#CHIKKABALLAPURA: HAVE YOU CASTED YOUR VOTE? NOT YET? GO OUT & VOTE.!
📌Huge Support for Youth's Favourite #RakshaRamaiah in ChikkaballaPura.
GROUND ZERO.!!! https://t.co/CIgFJZ6fBu pic.twitter.com/iXL7Tt9sFk
1:14 PM IST:
ಮೈಸೂರು ಮೂಲದ ಯೋಗರಾಜ್, ಅಯೋಧ್ಯೆಯ ಬಾಲ ರಾಮನ ಮೂರ್ತಿ ಕೆತ್ತಿದ್ದರಿಂದ ಜಗದ್ವಿಖ್ಯಾತರಾದವರು. ತಮ್ಮ ಕುಟುಂಬದೊಡನೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರ.ೆ
10:49 AM IST:
ಕೆಲವು ಹೊಟೇಲ್ ಹಾಗೂ ರೆಸ್ಟೋರೆಂಟ್‌ಗಳು ಮತ ಹಾಕಿ ಬಂದವರಿಗೆ ಫ್ರೀ ತಿಂಡ ಕೊಡುತ್ತಿದ್ದು, ನಿಸರ್ಗ್ ಗ್ರ್ಯಾಂಡ್ ಮುಂದೆ ಜನರು ಕ್ಯೂ ನಿಂತಿದ್ದಾರೆ.
Long queues were seen at Nisarga Grand Hotel on Nrupathunga Road in Bengaluru, which is offering free benne khali dosa, ghee laddu, and juice on April 26 to voters who display their inked fingers as proof of voting. https://t.co/l7uewY0Odo pic.twitter.com/XpeNwaAONk
— ChristinMathewPhilip (@ChristinMP_) April 26, 2024
10:37 AM IST:
ಕರ್ನಾಟಕದ ಮೊದಲ ಹಂತದ, ದೇಶದ 2ನೇ ಹಂತದ ಪ್ರಚಾರ ಬಿರುಸಿನಿಂದ ಸಾಗಿದ್ದು, ಸಿನಿ ತಾರೆಯರು ತಮ್ಮ ಹಕ್ಕು ಚಲಾಯಿಸಿ, ಎಲ್ಲರಿಗೂ ಮತ ಹಾಕುವಂತೆ ಸೋಷಿಯಲ್ ಮೀಡಿಯಾ ಮೂಲಕ ಆಗ್ರಹಿಸುತ್ತಿದ್ದಾರೆ.
12:55 PM IST:
ಬೆಂಗಳೂರು ಸೇರಿ ಹಲವೆಡೆ ಮತದಾರರು ಬಿಸಿಲಿನ ಧಗೆ ಏರುವ ಹೆಚ್ಚುವ ಮುಂಚೆ ಮತ ಚಲಾಯಿಸಲು ಉತ್ಸುಕರಾಗಿದ್ದು, ಎಲ್ಲೆಡೆ ಸರತಿ ಕ್ಯೂನಲ್ಲಿ ಜನರು ಸರತಿ ಸಾಲಲ್ಲಿ ನಿಂತಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ತೋರಿಸುವ ಚುನಾವಣೆಯಲ್ಲಿ ಎಲ್ಲರೂ ತೆರಳಿ, ಮತ ಚಲಾಯಿಸು ಸುಭದ್ರ ಭಾರತ ಕಟ್ಟಲು ಸೆಲೆಬ್ರಿಟಿಗಳು ಕರೆ ನೀಡಿದ್ದಾರೆ.
101 ವರ್ಷದ ಹಿರಿಯ ನಾಗರಿಕರಾದ ತಿಮ್ಮಮ್ಮ ಮೈಸೂರು ಲೋಕಸಭೆಯ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾದರು.
1:55 PM IST:
ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯ ಮತದಾನದ ಶೇಖಡಾವಾರು ಪ್ರಮಾಣ:
ಬೆಳಗ್ಗೆ 7.00 ರಿಂದ 9.00ರ ವರದಿ
ಬೆಂಗಳೂರು ಕೇಂದ್ರ: 8.14 %
ಬೆಂಗಳೂರು ದಕ್ಷಿಣ: 9.8 %
ಬೆಂಗಳೂರು ಉತ್ತರ: 8.64 %
ಬೆಂಗಳೂರು ದಕ್ಷಣದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತಮ್ಮ ಚಿಕ್ಕಪ್ಪ, ಬಸವನಗುಡು ಶಾಸಕ ರವಿ ಸುಬ್ರಹ್ಮಣ್ಯ ಸೇರಿ ಕುಟುಂಬದ ಇತೆರೆ ಸದಸ್ಯರೊಂದಿಗೆ ಆಗಮಿಸಿದ ಮತ ಚಲಾಯಿಸಿದರು.
11:52 AM IST:
ಬೆಂಗಳೂರಿನ ಹಲವೆಡೆ ಕನ್ನಡ ಸಿನಿ ತಾರಾ ಕುಟುಂಬ ಮತದಾನ ಮಾಡಿ, ಎಲ್ಲರಿಗೂ ಮತ ಹಾಕುವಂತೆ ಆಗ್ರಹಿಸಿದರೆ. ಡಾ.ರಾಜ್ ಕುಮಾರ್ ಕುಟುಂಬ, ನಟಿಯರಾದ ಪ್ರೇಮಾ, ತಾರಾ, ಕಾಂತಾರದ ಸಪ್ತಮಿ ಗೌಡ ಸೇರಿ ಹಲವು ತಮ್ಮ ಮತ ಹಕ್ಕು ಚಲಾಯಿಸಿದ್ದಾರೆ.
9:47 AM IST:
ಮೈಸೂರಿನ ವರುಣಾದಲ್ಲಿರುವ ತಾಂಡವಪುರ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಮತದಾರರನ್ನು ಸ್ವಾಗತಿಸಿದರು
9:41 AM IST:
ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಮತ ಚಲಾವಣೆ ಮಾಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿ ವಿಲೇಜ್ ನ ಕ್ಲಾರೆಟ್ ಶಾಲೆಯಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದೆ.
— R. Ashoka (ಮೋದಿ ಅವರ ಕುಟುಂಬ) (@RAshokaBJP) April 26, 2024
ನನ್ನ ಮತ - ನನ್ನ ಹಕ್ಕು
ಮತ ಚಲಾವಣೆ - ನನ್ನ ಕರ್ತವ್ಯ.
ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ. pic.twitter.com/R6rWJBDskc
9:41 AM IST:
ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಮತ ಚಲಾವಣೆ ಮಾಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿ ವಿಲೇಜ್ ನ ಕ್ಲಾರೆಟ್ ಶಾಲೆಯಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದೆ.
— R. Ashoka (ಮೋದಿ ಅವರ ಕುಟುಂಬ) (@RAshokaBJP) April 26, 2024
ನನ್ನ ಮತ - ನನ್ನ ಹಕ್ಕು
ಮತ ಚಲಾವಣೆ - ನನ್ನ ಕರ್ತವ್ಯ.
ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಿ. pic.twitter.com/R6rWJBDskc
9:38 AM IST:
ರಾಜ್ಯಾದ್ಯಂತ ಬೆಳಗ್ಗೆ 9 ಗಂಟೆಯ ವೇಳೆಗೆ ಶೆ. 9.21ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ದಕ್ಷಿಣ ಕನ್ನಡದಲ್ಲಿ ಗರಿಷ್ಠ ಶೇ. 14.33ರಷ್ಟು ಮತದಾನವಾಗಿದೆ. ಚಿತ್ರದುರ್ಗ,ಮಂಡ್ಯ ಹಾಗೂ ಚಾಮರಾಜನಗರದಲ್ಲಿ ಅತೀ ಕಡಿಮೆ ಮತದಾನವಾಗಿದೆ.
9:20 AM IST:
ಲೇಖಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ..
9:13 AM IST:
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲ ಮತದಾನ ಚುರುಕುಗೊಂಡಿದೆ. ಡಿಸಿ ಶಿಲ್ಪಾ ನಾಗ್ ಚುನಾವಣಾ ಜಾಗೃತಿ ಸಾರುವ ಸೀರೆ ಧರಿಸಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
LIVE: ಚಾಮರಾಜನಗರ 2024 Elections: 'ಚುನಾವಣೆ ಪರ್ವ ದೇಶದ ಗರ್ವ' ಸೀರೆ ಧರಿಸಿ ಡಿಸಿ ಮತದಾನ
9:11 AM IST:
ಬೆಂಗಳೂರು ಉತ್ತರದಲ್ಲಿ ಬೆಳಗಿನಿಂದಲೂ ಉತ್ತಮವಾಗಿ ಮತದಾನವಾಗುತ್ತಿದೆ. ಕಾಂಗ್ರೆಸ್‌ನ ರಾಜೀವ್ ಗೌಡಗೆ ಬಿಜೆಪಿಯ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.
LIVE: ಒಕ್ಕಲಿಗರ ಭದ್ರಕೋಟೆ ಬೆಂಗಳೂರು ಉತ್ತರದಲ್ಲಿ ಗೆಲ್ಲೋರಾರು; ಸಚಿವೆ ಶೋಭಾ ಕರಂದ್ಲಾಜೆಗೆ ಪ್ರೊಫೆಸರ್ ಸವಾಲು
11:16 AM IST:
ಬೆಂಗಳೂರಿನ ಜಯನಗರದಲ್ಲಿ ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಮತದಾನ ಮಾಡಿದ್ದಾರೆ.
8:49 AM IST:
ಚಾಮರಾಜನಗರ ಲೋಕಸಭಾ ಎಸ್.ಸಿ ಮೀಸಲು ಕ್ಷೇತ್ರದ ಚುನಾವಣೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 80 ರಲ್ಲಿಜಿಲ್ಲಾ ಚುನಾವಣಾಧಿಕಾರಿ ಹಕ್ಕು ಚಲಾಯಿಸಿದ್ದಾರೆ. ಚಾಮರಾಜನಗರ ಪಿಡಬ್ಲೂಡಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸಿ ಮತದಾನ ಮಾಡಿದ್ದಾರೆ. ಮತದಾರರ ಪಟ್ಟಿಯಲ್ಲಿ ಖುದ್ದು ತಮ್ಮ ಹೆಸರನ್ನು ಶಿಲ್ಪಾ ನಾಗ್ ಹುಡುಕಿದ್ದರು. ಮತದಾನದ ಜಾಗೃತಿ ಸಾರುವ ಸೀರೆ ಧರಿಸಿ ಮತದಾನ ಮಾಡಿದ್ದಾರೆ. ಚುನಾವಣೆ ಪರ್ವ ದೇಶದ ಗರ್ವ ಎಂಬ ಟ್ಯಾಗ್ ಲೈನ್ ಮುದ್ರಿಸಿದ ಸೀರೆ . ಡಿಸಿ ಶಿಲ್ಪಾನಾಗ್, ಜಿ.ಪಂ.ಉಪಾಧ್ಯಕ್ಷೆ ಲಕ್ಷ್ಮೀ,ಆಹಾರ ಮತ್ತು ನಾಗರೀಕ ಇಲಾಖೆ ಉಪ ನಿರ್ದೇಶಕಿ ಸವಿತಾ ಇದೇ ರೀತಿಯ ಟ್ಯಾಗ್‌ಲೈನ್ ಇರುವ ಸೀರೆ ಧರಿಸಿ ಮತದಾನ ಮಾಡಿದ್ದಾರೆ.
12:24 PM IST:
ಮದುವೆಮನೆಗೆ ಹೊರಡುವ ಮುನ್ನ ಮತದಾನ ಮಾಡಿದ ವಧು, ಅದರೊಂದಿಗೆ ಹಿರಿಯ ನಾಗರೀಕರು ಕೂಡ ಉತ್ಸಾಹದಿಂದ ಮತದಾನಕ್ಕೆ ಅಣಿಯಾಗಿದ್ದಾರೆ.
LIVE: ಉಡುಪಿ ಚಿಕ್ಕಮಗಳೂರು 2024 Elections ಮೂಡಿಗೆರೆಯಲ್ಲಿ ನವವಧುನಿಂದ ಮತದಾನ
12:15 PM IST:
ಬೆಂಗಳೂರಿನ ಪಾದರಾಯನಪುರದಲ್ಲಿ ಮತದಾನ ಶುರುವಾಗಿ 1 ಗಂಟೆ ಆದ್ರೂ ಮತದಾನ ಶುರುವಾಗಿಲ್ಲ. ಪಾದರಾಯನಪುರ ಸುಲ್ತಾನ್ ಪಾಳ್ಯ ಮತಗಟ್ಟೆ 46ರಲ್ಲಿ ಮತದಾನ ಇನ್ನೂ ಶುರುವಾಗಿಲ್ಲ. ಬೆಳಿಗ್ಗೆ 6 ಗಂಟೆಗೆ ಮತದಾನಕ್ಕಾಗಿ ಬಂದು ನಿಂತಿದ್ದ ಜನ. ಬೆಳಿಗ್ಗೆನೆ ಮತ ಹಾಕಿ ಹೋಗುವ ಉತ್ಸಾಹದಲ್ಲಿದ್ದ ಜನರಿಗೆ ಇದರಿಂದ ನಿರಾಸೆಯಾಗಿದೆ. ಮತದಾನಕ್ಕಾಗಿ ಕಿಲೋಮೀಟರ್‌ಗಟ್ಟಲೆ ಕ್ಯೂ ನಿಂತಿದ್ದಾರೆ. ಇಂದು ಶುಕ್ರವಾರ ಮಸೀದಿ ಹೋಗುವ ಮುನ್ನ ಮತ ಹಾಕಲು ನಿರ್ಧಾರ ಮಾಡಿದ್ದರು. ಆದರೆ, ಕಳೆದ ಒಂದು ಗಂಟೆಯಿಂದಲೂ ಇವಿಎಂ ಮೆಷಿನ್ ದೋಷದಿಂದ ಮತ ಹಾಕಲು ಸಾಧ್ಯವಾಗಿಲ್ಲ. ಮತ ಹಾಕಲು ಆಗದೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
11:45 AM IST:
ಇವಿಎಂ ದೋಷದಿಂದಾಗಿ ಚಿಕ್ಕಮಗಳೂರಿನ ಮತಗಟ್ಟೆಯೊಂದರಲ್ಲಿ ಕಳೆದ ಒಂದು ಗಂಟೆಯಿಂದ ಮತದಾನ ಸ್ಥಗಿತಗೊಂಡಿದೆ. ಎನ್.ಆರ್.ಪುರ ತಾಲೂಕಿನ ಮೆಣಸೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮೆಣಸೂರು ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ಮತಗಟ್ಟೆ ಕೇಂದ್ರ. ಮತದಾನಕ್ಕಾಗಿ ಕಾದು ಕುಳಿತ ಮತದಾರರು. ಅಧಿಕಾರಿಗಳ ವಿರುದ್ಧ ಮತದಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಲಿ ಕೆಲಸಕ್ಕೆ ಹೋಗುವ ಕಾರ್ಮಿಕರಿಂದ ಅಸಮಾಧಾನ.
8:16 AM IST:
8:14 AM IST:
ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಇದರಲ್ಲಿ ಯಾವುದಾದರೂ ಒಂದು ದಾಖಲೆಗಳಿದ್ದರೆ, ನೀವು ಮತ ಚಲಾವಣೆ ಮಾಡಬಹುದು.
Lok Sabha Elections 2024: ಇಂದು ತಪ್ಪದೇ ಮತ ಹಾಕಿ: ನಿರ್ಭಿತಿ, ವಿವೇಚನೆಯಿಂದ ವೋಟು ಹಾಕುವುದು ಹೇಗೆ?
8:12 AM IST:
ಬೆಂಗಳೂರಿನ ಗಿರಿನಗರದಲ್ಲಿ ಮತದಾನ ಮಾಡಲು ಆಗಮಿಸಿದ ಕೃತಕ ಕಾಲು ಅಳವಡಿಸಿಕೊಂಡಿರೋ ವೃದ್ಧ ವೀಲ್‌ಚೇರ್‌ನಲ್ಲಿ ಆಗಮಿಸಿದರು.
8:07 AM IST:
ದೇಶದಲ್ಲಿ 2ನೇ ಹಂತದ ಮತದಾನ ಆರಂಭವಾಗಿರುವಾಗ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಹೆಚ್ಚಿನ ಪ್ರಮಾಣದ ಮತದಾನವು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ನಮ್ಮ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಾನು ವಿಶೇಷವಾಗಿ…
— Narendra Modi (@narendramodi) April 26, 2024
8:06 AM IST:
ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಮತದಾನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮತದಾನ ದೇಶಭಕ್ತಿಯ ಸಂದೇಶ. ಮತದಾನದ ಬಗ್ಗೆ ಉದಾಸೀನ ಮಾಡಬೇಡಿ. ರಜೆ ಕೊಟ್ಟಿರುವುದು ಎಂಜಾಯ್ ಮಾಡಲು ಅಲ್ಲ ಎಂದು ಹೇಳಿದ್ದಾರೆ,
7:17 AM IST:
ಚಿಕ್ಕಮಗಳೂರಿನಲ್ಲಿ ನವ ವಧುವಿನಿಂದ ಮೊದಲ ಮತದಾನ ನಡೆದಿದೆ. ಮದುವೆ ಮಂಟಪಕ್ಕೆ ಹೋಗುವ ಮುನ್ನ ಮತಗಟ್ಟೆಗೆ ಬಂದು ನವವಧು ಮತದಾನ ಮಾಡಿದ್ದಾರೆ. ಮೂಡಿಗೆರೆ ತಾಲೂಕಿನ ಕಂದೂರು ಮತಕೇಂದ್ರದಲ್ಲಿ ಮತದಾನ ಮಾಡಿದ್ದಾರೆ.
11:28 AM IST:
ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್, ಪತ್ನಿ ವಿಜೇತಾ ಹಾಗೂ ಪುತ್ರ ಸುಮಿತ್ ಅವರೊಂದಿಗೆ ಮಲ್ಲೇಶ್ವರಂ ಕ್ಷೇತ್ರದ ಡಾಲರ್ಸ್ ಕಾಲೋನಿಯ ಶಿಕ್ಷಾ ಫ್ರೀಸ್ಕೂಲ್ ಮತಗಟ್ಟೆಯಲ್ಲಿ ಮತದಾನ ಮಾಡಿದರು.
11:08 AM IST: