ಚಿಕ್ಕಬಳ್ಳಾಪುರ 2024 Elections ಜಿಲ್ಲೆಯಲ್ಲಿ ಸಂಜೆ 5ಗಂಟೆ ವೇಳೆಗೆ 70.97% ಮತದಾನ

ಹೈವೋಲ್ಟೇಜ್‌ ಕದನ ಕಣವಾಗಿರುವ ಚಿಕ್ಕಬಳ್ಳಾಪುರದಲ್ಲೂ ಮತದಾನದ ಪ್ರಮಾಣದಲ್ಲಿ ಜಿಗಿತ ಕಂಡಿದೆ ಎನ್ನುವುದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

Karnataka lok sabha election 2024 Chikkaballbura consistency san

ಚಿಕ್ಕಬಳ್ಳಾಪುರ (ಏ.26): ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತದಾನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸಂಜೆ 5 ಗಂಟೆ ವೇಳೆಗೆ  70.97% ಮತದಾನವಾಗಿದೆ.  ಚುನಾವಣಾ ಆಯೋಗದ ಮಧ್ಯಾಹ್ನ 3 ಗಂಟೆಯ ಅಪ್‌ಡೇಟ್‌ನಲ್ಲಿ ಶೇ. 55.90ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ. 39.85ರಷ್ಟು ಮತದಾನವಾಗಿತ್ತು. ಬೆಳಗ್ಗೆ 11 ಗಂಟೆಯ ವೇಳೆ ಈ ಲೋಕಸಭಾ ಕ್ಷೇತ್ರದಲ್ಲಿ ಶೇ. 21.92ರಷ್ಟು ಮತದಾನವಾಗಿತ್ತು.. ಬಿಜೆಪಿಯಿಂದ ಮಾಜಿ ಸಚಿವ ಕೆ. ಸುಧಾಕರ್‌ ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ ರಕ್ಷಾ ರಾಮಯ್ಯ ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 29 ಅಭ್ಯರ್ಥಿಗಳಿದ್ದಾರೆ. ಒಟ್ಟು 19.81 ಲಕ್ಷ ಮತದಾರರು ಈ ಕ್ಷೇತ್ರದಲ್ಲಿದ್ದು, 9.83 ಲಕ್ಷ ಪುರುಷ ಹಾಗೂ 9.97 ಲಕ್ಷ ಮಹಿಳಾ ಮತದಾರರಿದ್ದಾರೆ. 37,446 ಮಂದಿ ಹೊಸ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಈ ಬಾರಿಯೂ ಇಲ್ಲಿ ಗೆಲುವು ಕಾಣುವ ಹಂಬಲದಲ್ಲಿದ್ದಾರೆ. ಒಕ್ಕಲಿಕ, ಎಸ್‌ಸಿಎಸ್‌ಟಿ ಮತದಾರರೇ ಈ ಕ್ಷೇತ್ರದಲ್ಲಿ ನಿಣಾಯಕರಾಗಿದ್ದಾರೆ. ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಕಾರಣದಿಂದಾಗಿ ಈ ಕ್ಷೇತ್ರ ಸಖತ್‌ ಚರ್ಚೆಯಲ್ಲಿದೆ.

ಒಂದೇ ಕುಟುಂಬದ 50ಕ್ಕೂ ಹೆಚ್ಚು ಮಂದಿ ಮತದಾನ: ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜ್  ಬಳಿಯ ಮತಗಟ್ಟೆಯಲ್ಲಿ ಒಂದೇ ಕುಟುಂಬದ 50ಕ್ಕೂ ಹೆಚ್ಚು ಮಂದಿ ಮತದಾನ ಮಾಡಿದ್ದಾರೆ ಚಿಕ್ಕಬಳ್ಳಾಪುರ ‌ನಗರದ ಬಾದಾಮ್ ಕುಟುಂಬದಿಂದ ಮತದಾನವಾಗಿದೆ. ಪ್ರತಿ‌ ಚುನಾವಣೆಗೂ ಎಲ್ಲರು ಒಗ್ಗಟ್ಟಾಗಿ ಬಂದು ಮತದಾನ ಮಾಡುತ್ತಾರೆ.

ಕರ್ನಾಟಕ Election 2024 Live: 11ಕ್ಕೆ ದ.ಕ.ದಲ್ಲಿ ಹೆಚ್ಚು ಶೇ.31, ಬೆಂಗಳೂರು ಸೆ.ಕಡಿಮೆ ವೋಟಿಂಗ್ 

ಪ್ರದೀಪ್‌ ಈಶ್ವರ್‌ ಮತದಾನ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಪತ್ನಿ ಜೊತೆ ಬಂದು ಮತದಾನ ಮಾಡಿದರು. ಸ್ವಗ್ರಾಮ ಪೆರೆಸಂದ್ರ ಗ್ರಾಮದ ಬೂತ್ ನಂಬರ್ 121 ರಲ್ಲಿ ಮತ ಹಕ್ಕು ಚಲಾಯಿಸಿದರು.

LIVE: ತುಮಕೂರು 2024 Elections 11 ಗಂಟೆಯ ವೇಳೆಗೆ ಶೇ.23.32ರಷ್ಟು ಮತದಾನ

Latest Videos
Follow Us:
Download App:
  • android
  • ios