Asianet Suvarna News Asianet Suvarna News

LIVE: Bagalkote Elections 2024: ಬಾಗಲಕೋಟೆಯಲ್ಲಿ ಪರಿಷತ್ ಸದಸ್ಯೆ ನಟಿ ಉಮಾಶ್ರೀ ಮತದಾನ

ಬಾಗಲಕೋಟೆ  ಲೋಕಸಭಾ ಚುನಾವಣೆ ಹಿನ್ನಲೆ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಪಿಸಿ ಗದ್ದಿಗೌಡರ ಮತ್ತು ಕಾಂಗ್ರೆಸ್‌ ನಿಂದ ಸಂಯುಕ್ತಾ ಪಾಟೀಲ್ ಸ್ಪರ್ಧಿಗಳಾಗಿದ್ದಾರೆ.

Karnataka Lok Sabha Election 2024 Bagalkote constituency  PC gaddigoudar challenge Samyuktha Patil gow
Author
First Published May 7, 2024, 9:26 AM IST

ಬಾಗಲಕೋಟೆ (ಮೇ.7): ಬಾಗಲಕೋಟೆ  ಲೋಕಸಭಾ ಚುನಾವಣೆ ಹಿನ್ನಲೆ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಪಿಸಿ ಗದ್ದಿಗೌಡರ ಮತ್ತು ಕಾಂಗ್ರೆಸ್‌ ನಿಂದ ಸಂಯುಕ್ತಾ ಪಾಟೀಲ್ ಸ್ಪರ್ಧಿಗಳಾಗಿದ್ದಾರೆ. ಬಾಗಲಕೋಟೆಯಲ್ಲಿ ಸಂಜೆ 5 ಗಂಟೆವರೆಗೆ  ಶೇ. 67.12 ರಷ್ಟು ಮತದಾನವಾಗಿದೆ.   ಮಧ್ಯಾಹ್ನ 3 ಗಂಟೆವರೆಗೆ  ಶೇ.54.95ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಗೆ ವೇಳೆಗೆ 42.01% ಮತದಾನವಾಗಿತ್ತು. ಬೆಳಗ್ಗೆ 11 ಗಂಟೆವರೆಗೆ ಶೇ.23.80ರಷ್ಟು  ಮತದಾನವಾಗಿತ್ತು. ಬೆಳಗ್ಗೆ 9 ಗಂಟೆವರೆಗೆ ಶೇ. 8.59ರಷ್ಟು  ಮತದಾನವಾಗಿತ್ತು.

ಮುಧೋಳ ನಗರದಲ್ಲಿ ಮಾಜಿ ಸಚಿವ ಗೋವಿಂದ‌ ಕಾರಜೋಳ ,  ಜಮ್ಮನಕಟ್ಟಿ ಗ್ರಾಮದ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ,   ಮುಧೋಳದಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ , ಹಾವರಗಿ ಗ್ರಾಮದಲ್ಲಿ ಶಾಸಕ ವಿಜಯಾನಂದ‌ ಕಾಶಪ್ಪನವರ ತಮ್ಮ ಹಕ್ಕು ಚಲಾಯಿಸಿದರು.

ವಿಜಯಪುರ ಎಸ್ ಸಿ ಲೋಕಸಭಾ ಚುನಾವಣೆಗೆ ಮತದಾನ. ಬಾಗಲಕೋಟೆ  ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ವಿಜಯಪುರ ನಗರದ ಸರ್ಕಾರಿ ಮರಾಠಿ ಗಂಡು ಮಕ್ಕಳ ಪ್ರಾಥಮಿಕ ಶಾಲೆ. ಮತ ಚಲಾಯಿಸುವ ಮುನ್ನ ಮತಗಟ್ಟೆ ಆವರಣದಲ್ಲಿ ದೊಡ್ಡಪ್ಪ ಶಿವಶರಣ ಪಾಟೀಲ್ ಕಾಲಿಗೆ ನಮಸ್ಕರಿಸಿದರು.

Karnataka Lok Sabha Election 2024 Bagalkote constituency  PC gaddigoudar challenge Samyuktha Patil gow

ಪರಿಷತ್ ಸದಸ್ಯೆ ನಟಿ ಉಮಾಶ್ರೀ ಬಾಗಲಕೋಟೆ ಜಿಲ್ಲೆಯ ರಬಕವಿಯ ಬೂತ್ ನಂ.83 ಉರ್ದು ಶಾಲೆಯ ಮತಗಟ್ಟೆಯಲ್ಲಿ ಮತದಾ‌ನ ಮಾಡಿದರು. ಸರತಿ ಸಾಲಿನಲ್ಲಿ ಬಂದು ಮತದಾನ ಮಾಡಿದರು.

LIVE: Dharwad Elections 2024: ಧಾರವಾಡದಲ್ಲಿ ಮಧ್ಯಾಹ್ನ 1 ಗಂಟೆಗೆ ವೇಳೆಗೆ 40.61% ಮತದಾನ

ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಜಮ್ಮನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು. ಮುಧೋಳದಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ ಸಿದ್ದರಾಮೇಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಬಲಿಗರೊಂದಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಜಿಲ್ಲೆಯಲ್ಲಿ 1946 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಪ್ರತಿಮತಗಟ್ಟೆಗೆ ಓರ್ವ ಪ್ರಿಸೆಂಡಿಂಗ್ ಅಧಿಕಾರಿ, 3 ಜನ ಮತದಾನದ ಸಿಬ್ಬಂದಿ ಇರಲಿದ್ದಾರೆ. ಕ್ಷೇತ್ರದಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ ಒಟ್ಟು 9274 ಸಿಬ್ಬಂದಿಗಳ ನೇಮಕ. 3500 ಪೊಲೀಸ್ ಸಿಬ್ಬಂದಿಗಳ ನೇಮಕ‌ ಮಾಡಲಾಗಿದೆ.

India General Elections 2024 Live: ರಾಜ್ಯದಲ್ಲಿ ಕೊನೇ ಹಂತದ ಮತದಾನ, ಹಕ್ಕು ಚಲಾಯಿಸಿದ ಮೋದಿ

ಒಟ್ಟು ಮತದಾರರು: 18,06,183
ಪುರುಷ ಮತದಾರರು: 8,95,432
ಮಹಿಳಾ ಮತದಾರರು: 9,10,751
ಹೊಸ ಮತದಾರರು :53,546
ಇತರ:94

Latest Videos
Follow Us:
Download App:
  • android
  • ios