ರಾಜ್ಯ ವಿಧಾನಸಭೆಗೆ ಚುನಾವಣೆಗೆ ಘೋಷಣೆ ಆದ ಬೆನ್ನಲ್ಲಿಯೇ ನೀತಿ ಸಂಹಿತೆ ಜಾರಿಯಾಗಿದೆ. ಸರ್ಕಾರಿ ಕಾರ್‌ನಲ್ಲಿ ವರುಣಾಗೆ ಸಾಗುತ್ತಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಮಾರ್ಗಮಧ್ಯದಲ್ಲಿಯೇ ಕಾರ್‌ನಿಂದ ಇಳಿದು ಖಾಸಗಿ ಕಾರ್ ಏರಿದ ಘಟನೆ ನಡೆದಿದೆ.
ಬೆಂಗಳೂರು (ಮಾ.29): ಕೇಂದ್ರ ಚುನಾವಣಾ ಆಯೋಗ ಬುಧವಾರ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಮಾಡುವುದರೊಂದಿಗೆ ಇಂದಿನಿಂದಲೇ ನೀತಿ ಸಂಹಿತಿ ಜಾರಿ ಮಾಡಿದೆ. ಇದರ ಎಫೆಕ್ಟ್ ಎನ್ನುವಂತೆ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾರ್ಗಮಧ್ಯದಲ್ಲಿಯೇ ಸರ್ಕಾರಿ ಕಾರ್‌ಅನ್ನು ಬದಲಿಸಿದ ಘಟನೆ ನಡೆದಿದೆ. ಸರ್ಕಾರಿ ಕಾರ್‌ನಲ್ಲಿ ವರುಣಾ ಕ್ಷೇತ್ರಕ್ಕೆ ಸಿದ್ಧರಾಯ್ಯ ತೆರಳುತ್ತಿದ್ದರು. ಈ ನಡುವೆ ನೀತಿ ಸಂಹಿತೆ ಜಾರಿ ಆದ ಹಿನ್ನಲೆಯಲ್ಲಿ ಮಾರ್ಗದ ನಡುವೆಯೇ ಸರ್ಕಾರಿ ಕಾರ್‌ಅನ್ನು ವಾಪಾಸ್ ಮಾಡಿ ಖಾಸಗಿ ಕಾರ್ ಏರಿದ ಘಟನೆ ನಡೆದಿದೆ. ಬುಧವಾರ ಮುಂಜಾನೆ ವರುಣಾದಲ್ಲಿದ್ದ ಸಿದ್ಧರಾಮಯ್ಯ, ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಬೆಂಗಳೂರಿಗೆ ವಾಪಸಾಗುವ ಯೋಚನೆಯಲ್ಲಿದ್ದರು. ಆದರೆ, ಕಾರ್ಯಕ್ರಮ ತಡವಾಗಿತ್ತು. ಇದರ ನಡುವೆ ಚುನಾವನೆಗೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ವರುಣಾದಿಂದ ಬರುವ ಮಾರ್ಗದಲ್ಲಿಯೇ ಸರ್ಕಾರಿ ಕಾರ್‌ಅನ್ನು ಬದಲಿಸಿ ಖಾಸಗಿ ಕಾರ್‌ಅನ್ನು ಏರಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ, 13ಕ್ಕೆ ಮತ ಎಣಿಕೆ: ಚುನಾವಣಾ ಆಯೋಗ ಘೋಷಣೆ
ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ನಾಯಕರುಗಳು ಸರ್ಕಾರಿ ಕಾರುಗಳನ್ನು ಬಿಟ್ಟು ಖಾಸಗಿ ಕಾರುಗಳಲ್ಲಿ ಓಡಾಟ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿವಾಸಕ್ಕೆ ಸಚಿವ ಸೋಮಣ್ಣ ಹಾಗೂ ಮುನಿರತ್ನ ಖಾಸಗಿ ಕಾರಿನಲ್ಲಿ ಬಂದರು. ಮುನಿರತ್ನ ಅವರ ಖಾಸಗಿ ಕಾರಿನಲ್ಲಿಯೇ ಸೋಮಣ್ಣ ಅವರು ಸಿಎಂ ನಿವಾಸಕ್ಕೆ ಆಗಮಿಸಿದರು.
Karnataka Elections 2023: ಪ್ರತಿಪಕ್ಷಗಳ ಮನವಿ ಒಪ್ಪಿದ ಆಯೋಗ, ರಾಜ್ಯದಲ್ಲಿ ಒಂದೇ ಹಂತದಲ್ಲಿ 'ಮೇ'ಗಾ ಎಲೆಕ್ಷನ್!
ಇನ್ನು ಸಚಿವ ಹಾಲ್ಲಪ್ಪ ಆಚಾರ್ ಸರ್ಕಾರಿ ಕಾರು ಬಿಟ್ಟು ಸ್ವಂತ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಸರ್ಕಾರಿ ಕಾರ್‌ನಲ್ಲಿ ತೆರಳುತ್ತಿದ್ದ ಹಾಲಪ್ಪ ಆಚಾರ್, ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲಿಯೇ ತಮ್ಮ ವಸ್ತುಗಳನ್ನು ಸ್ವಂತ ಕಾರಿಗೆ ಶಿಫ್ಟ್ ಮಾಡಿಸಿಕೊಂಡು ತೆರಳಿದ್ದಾರೆ ಎಮದು ವರದಿಯಾಗಿದೆ.
