Karnataka Elections 2023: ಪ್ರತಿಪಕ್ಷಗಳ ಮನವಿ ಒಪ್ಪಿದ ಆಯೋಗ, ರಾಜ್ಯದಲ್ಲಿ ಒಂದೇ ಹಂತದಲ್ಲಿ 'ಮೇ'ಗಾ ಎಲೆಕ್ಷನ್‌!

ಕರ್ನಾಟಕದಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಚುನಾವಣೆ ನಡೆಯಬೇಕು ಎಂದು ವಿರೋಧ ಪಕ್ಷಗಳ ಮನವಿಯನ್ನು ಒಪ್ಪಿರುವ ಕೇಂದ್ರ ಚುನಾವಣಾ ಆಯೋಗ ಅದೇ ರೀತಿಯಲ್ಲಿ ವೇಳಾಪಟ್ಟಿಯಲ್ಲಿ ಪ್ರಕಟ ಮಾಡಿದ್ದು, ಮೇ 10 ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
 

Karnataka Legislative Assembly Election Commission of India announced schedule san

ಬೆಂಗಳೂರು (ಮಾ.29): ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಈ ಹಿಂದೆ ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ ವಿರೋಧ ಪಕ್ಷಗಳು ಒಂದೇ ಹಂತದ ಚುನಾವಣೆ ನಡೆಸಬೇಕು ಎಂದು ಪಟ್ಟುಹಿಡಿದಿದ್ದವು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಬಾರದು. ಇದು ರಾಜ್ಯದಲ್ಲಿ ಚುನಾವಣಾ ಅಕ್ರಮಗಳಿಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿತ್ತು. ಅದರಂತೆ ವಿರೋಧ ಪಕ್ಷಗಳ ಮನವಿಯನ್ನು ಒಪ್ಪಿರುವ ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ತೀರ್ಮಾನ ಮಾಡಿದೆ. ಮೇ. 10 ರಂದು ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದ್ದರೆ, ಮೇ. 13 ರಂದು ಫಲಿತಾಂಶ ಪ್ರಕಟವಾಗಲಿದೆ. . ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕವಾಗಿದೆ. ಇನ್ನು ವಿರೋಧ ಪಕ್ಷಗಳೂ ಕೂಡ ಒಂದೇ ಹಂತದಲ್ಲ ಚುನಾವಣೆ ನಡೆಯೋದಕ್ಕೆ ಸಂತಸ ವ್ಯಕ್ತಪಡಿಸಿದೆ.

ಈ ಕುರಿತಾಗಿ ಮಾತನಾಡಿರುವ ಕಾಂಗ್ರೆಸ್‌ ಮುಖಂಡ ಬಿಕೆ ಹರಿಪ್ರಸಾದ್‌,  ಒಂದೇ ಹಂತದಲ್ಲಿ ಚುನಾವಣೆ ಆಗಬೇಕು ಎಂಬ ನಮ್ಮ ಅಪೇಕ್ಷೆ ಇತ್ತು. ಯಾವುದೇ ಕಾರಣಕ್ಕೂ ಮರುಮತಾದಾನ ಆಗಬಾರದು. ಇವಿಎಂ ಕೆಟ್ಟು ಮರುಮತಾದಾನ ಆಗುವಂಥ ಸ್ಥಿತಿ ಬರಬಾರದು. ಅದಕ್ಕೆ ಆಯೋಗ ಕ್ರಮ ಕೈಗೊಂಡಿದೆ. ಇನ್ನೇನೊ ಗಲಾಟೆ ಆಗಿ ಮರುಮತಾದಾನ ಆಗಬಾರದು ಎಂದು ಹೇಳಿದ್ದಾರೆ. ಅದರೊಂದಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ ಮಾಡೋಕೆ ಅವಕಾಶ ನೀಡಿದ್ದು ಸಂತೋಷ ಆಗಿದೆ ಎಂದು ತಿಳಿಸಿದ್ದಾರೆ.

ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ, 13ಕ್ಕೆ ಮತ ಎಣಿಕೆ: ಚುನಾವಣಾ ಆಯೋಗ ಘೋಷಣೆ

ಇನ್ನು ಚುನಾವಣೆ ಘೋಷಣೆಯಾಗಿದ್ದಕ್ಕೆ ಬಿಜೆಪಿ ಪಕ್ಷ ಕೂಡ ಪ್ರತಿಕ್ರಿಯೆ ನೀಡಿದ್ದು, 'ರಾಜ್ಯದಲ್ಲಿ ಕಮಲ ಅರಳುವ ದಿನಾಂಕ ನಿಶ್ಚಯವಾಗಿದೆ. ಸ್ಪಷ್ಟ ಬಹುಮತದೊಂದಿಗೆ ಆಶೀರ್ವಾದ ಮಾಡಲು ಕನ್ನಡಿಗರು ಉತ್ಸುಕರಾಗಿದ್ದಾರೆ.  ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದ ಹಗಲಿರುಳು ಶ್ರಮಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ. ಕರ್ನಾಟಕ ಗೆಲ್ಲಲಿದೆ' ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

Karnataka Assembly Election 2023: ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ, ಜಿಲ್ಲಾವಾರು ಕ್ಷೇತ್ರ ಮಾಹಿತಿ

Latest Videos
Follow Us:
Download App:
  • android
  • ios