ವಿಜಯೇಂದ್ರ ಉಪಚುನಾವಣೆ ಉಸ್ತುವಾರಿ ಕ್ಷೇತ್ರಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಅಪ್ಪ
ಇನ್ನೂ ಉಪಚುನಾವಣೆಗೆ ದಿನಾಂಕ ನಿಗದಿಯಾಗಿಲ್ಲ. ಆಗಲೇ ಬೈ ಎಲೆಕ್ಷನ್‌ನಲ್ಲಿ ಕಮಲ ಅರಳಿಸಲು ರಾಜ್ಯ ಬಿಜೆಪಿ ಸರ್ಕಾರ ಕ್ಷೇತ್ರಗಳಿಗೆ ಭರ್ಜರಿ ಉಡುಗೊರೆ ನೀಡಿದೆ.
ಬೆಂಗಳೂರು, (ಫೆ.08): ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ.ವೈ. ವಿಜಯೇಂದ್ರ ಅವರು ಉಪಚುನಾವಣೆ ಉಸ್ತುವಾರಿ ಹೊತ್ತುಕೊಂಡ ಕ್ಷೇತ್ರಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.
ಹೌದು....ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಉಪಸುನಾವಣೆಯ ಉಸ್ತುವಾರಿಯನ್ನು ಬಿ.ವೈ ವಿಜಯೇಂದ್ರ ಅವರಿಗೆ ವಹಿಸಲಾಗಿದೆ. ಇದೀಗ ಇದೇ ಕ್ಷೇತ್ರ ರಾಜ್ಯ ಸರ್ಕಾರ 17 ಕೆರೆಗಳಿಗೆ ನೀರು ತುಂಬಿಸಲು 457.18 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ.
ಬಸವಕಲ್ಯಾಣ, ಮಸ್ಕಿ, ಬೆಳಗಾವಿ ಉಪ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ
ಈ ಕುರಿತಂತೆ ಆರ್ಥಿಕ ಇಲಾಖೆಯ (ಲೋಕೋಪಯೋಗಿ ಆರ್ಥಿಕ ಕೋಶ) ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಗಾಯತ್ರಿ ಪ್ರಸ್ತಾವನೆ ಹೊರಡಿಸಿದ್ದು, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕೆರೆಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿ ಸಲುವಾಗಿ ಕೃಷ್ಣ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ತುಂಬಿಸುವ ರೂ.457.18 ಕೋಟಿಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪ್ರಸ್ತುತ 2020-21ನೇ ಸಾಲಿನಲ್ಲಿ ರೂ.82.33 ಕೋಟಿ ಮೊತ್ತದ ಮೊದಲನೇ ಹಂತ ಕಾಮಗಾರಿಗಳಿಗೆ ಟೆಂಡರ್ ಕರೆಯುವ ಷರತ್ತಿಗೊಳಪಟ್ಟು ಕೂಡಲೇ ಆದೇಶ ಹೊರಡಿಸಿ, ತದನಂತರ ಸಚಿವ ಸಂಪುಟ ಘಟನೋತ್ತರ ಮಂಜೂರಾತಿಗೆ ಮಂಡಿಸಲು ಮುಖ್ಯಮಂತ್ರಯವರು ಅನುಮೋದಿಸಿರುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.
ಅನುದಾನ ಕೊಟ್ಟು ಗೆಲ್ಲುವ ಪ್ಲಾನ್
ಯೆಸ್...ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆಯಿಂದ ತೆರವಾಗಿರುವ ಮಸ್ಕಿ ಕ್ಷೇತ್ರಕ್ಕೆ ಇನ್ನೂ ಉಪಚುನಾವಣೆ ದಿನಾಂಕ ಪ್ರಕಟವಾಗಿಲ್ಲ. ಆಗಲೇ ಬಿಜೆಪಿ ಕ್ಷೇತ್ರದಲ್ಲಿ ಕಮಲ ಅರಳಿಸಲು ಈ ಅನುದಾನ ಟ್ರಂಪ್ ಕಾರ್ಡ್ ಪ್ರಯೋಗಿಸಿದೆ. ಇನ್ನು ಇಲ್ಲಿ ಗೆದ್ದರೇ ಪುತ್ರ ವಿಜಯೇಂದ್ರನ ವರ್ಚಸ್ಸು ಮತ್ತಷ್ಟು ಹೆಚ್ಚಲಿದೆ ಎನ್ನುವ ಲೆಕ್ಕಾಚಾರದ ಮೇಲೆ ಈ ಗಿಫ್ಟ್ ಕೊಡಲಾಗಿದೆ ಎನ್ನಲಾಗಿದೆ.