ಬೆಂಗಳೂರು, (ಫೆ.04):  ಬಸವ ಕಲ್ಯಾಣ ಹಾಗೂ ಮಸ್ಕಿ ವಿಧಾನಸಭೆ ಉಪ ಚುನಾವಣೆ ನಡೆಯಬೇಕಿದೆ. ಇನ್ನು ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಈ ಮೂರು ಕ್ಷೇತ್ರಗಳಿಗೆ ಕರ್ನಾಟಕ ಬಿಜೆಪಿ ಗುರುವಾರ ಉಸ್ತುವಾರಿಗಳನ್ನು ನೇಮಿಸಿದೆ. ಈ ಮೊದಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ. ವೈ ವಿಜಯೇಂದ್ರ ಅವರಿಗೆ ಬಸವ ಕಲ್ಯಾಣ ಕ್ಷೇತ್ರದ ಉಸ್ತುವಾರಿ ನೀಡಲಾಗುತ್ತು. 

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಎರಡು ದೊಡ್ಡ ಕುಟುಂಬಗಳ ಮಧ್ಯೆ ಜಂಗಿ ಕುಸ್ತಿ

ಆದ್ರೆ, ಇದೀಗ ಬದಲಾವಣೆ ಮಾಡಿ ಅವರಿಗೆ ಮಸ್ಕಿ ಕ್ಷೇತ್ರ ಉಸ್ತುವಾರಿಯಾಗಿ ಜವಾಬ್ದಾರಿ ನೀಡಲಾಗಿದೆ.  ಹಾಗಾದ್ರೆ, ಇನ್ನುಳಿದಂತೆ ಯಾರಿಗೆ ಯಾವ ಕ್ಷೇತ್ರದ ಉಸ್ತುವಾರಿ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಬಸವಕಲ್ಯಾಣ ಉಸ್ತುವಾರಿಗಳು
* ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, * ವಿ ಸೋಮಣ್ಣ, * ಬಸವರಾಜ ಬೊಮ್ಮಾಯಿ, * ಭಗವಂತ ಖೂಬಾ, * ಮಾಲಿಕಯ್ಯ ಗುತ್ತೇದಾರ್, ರಾಜ್ಯ ಉಪಾಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕರ್, ಪ್ರಭಾರಿ ಈಶ್ವರ್ ಸಿಂಗ್ ಠಾಕೂರ್, ಅಮರನಾಥ್ ಪಾಟೀಲ್.

ಮಸ್ಕಿ ಉಸ್ತುವಾರಿಗಳ ಪಟ್ಟಿ
* ಶ್ರೀರಾಮುಲು, * ಎನ್ ರವಿ ಕುಮಾರ್, * ಬಿ. ವೈ. ವಿಜಯೇಂದ್ರ, * ನೇಮಿರಾಜ್ ನಾಯಕ್, * ನರಸಿಂಹ ನಾಯಕ್ (ರಾಜೂ ಗೌಡ). *  ಶಿವರಾಜ್ ಪಾಟೀಲ್, ಶಾಸಕ

ಬೆಳಗಾವಿ ಲೋಕಸಭಾ ಉಸ್ತುವಾರಿಗಳು
* ಜಗದೀಶ್ ಶೆಟ್ಟರ್, * ಪ್ರಹ್ಲಾದ್ ಜೋಶಿ, * ಮಹೇಶ್ ಟೆಂಗಿನಕಾಯಿ * ರಮೇಶ್ ಜಾರಕಿಹೊಳಿ, * ಉಮೇಶ್ ಕತ್ತಿ, * ಶಶಿಕಲಾ ಜೊಲ್ಲೆ