ಬರಗಾಲದಿಂದ ರೈತರಿಗೆ ಪರದಾಟ; ಊಟಿ ರೆಸಾರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ಮೋಜಿನಾಟ: ಆರ್. ಅಶೋಕ್
ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತರು ಕುಡಿವ ನೀರು, ಗೋವುಗಳಿಗೆ ಮೇವು ಹೊಂದಿಸಲು ಪರದಾಡುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಊಟಿ ರೆಸಾರ್ಟ್‌ನಲ್ಲಿ ಮೋಜಿನಾಟ ಆಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಮೇ 09): ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲದಿಂದ ರೈತರು ಪರದಾಡುತ್ತಿದ್ದಾರೆ. ನಗರ, ಪಟ್ಟಣ ಮತ್ತು ಗ್ರಾಮೀಣ ಜನರಿಗೆ ಕುಡಿಯಲು ನೀರಿಲ್ಲ. ಗೋವುಗಳಿಗೆ ತಿನ್ನಲು ಮೇವಿ ಇಲ್ಲ. ಆದರೂ, ಸಿಎಂ ಸಿದ್ದರಾಮಯ್ಯ ಮಾತ್ರ ಊಟಿಯ ರೆಸಾರ್ಟ್‌ಗೆ ಹೋಗಿ ಮಜಾ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲದಿಂದಾಗಿ ಜನರಿಗೆ ಕುಡಿಲು ನೀರಲ್ಲ, ದನ-ಕುಗಳಿಗೆ ತಿನ್ನಲು ಮೇವಿಲ್ಲ. ಆದರೆ ನೀವು ಒಳ್ಳೆಯ ಜ್ಯೂಸ್ ಕುಡಿಯುತ್ತಿದ್ದೀರಿ. ರೆಸಾರ್ಟ್‌ನಲ್ಲಿ ಎಸಿ ರೂಮಿಲ್ಲಿ ಕಾಲ ಕಳೆಯುತ್ತಿದ್ದೀರಿ. ನೀವೊಬ್ಬರೇ ಮಜಾ ಮಾಡೊದರೆ ಹೇಗೆ? ಜನರಿಗೆ ಇದನ್ನೆಲ್ಲಾ ಯಾವಾಗ ಕೊಡುತ್ತೀರ? ನೀವು ಮಿನರಲ್ ನೀರು ಕುಡಿಯಿರಿ ಬೇಡ ಎಂದಿಲ್ಲ, ಆದರೆ ಜನರಿಗೆ ಶುದ್ಧ ಕುಡಿಯುವ ನೀರನ್ನಾದರೂ ಕೊಡಿ. ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ, 108 ಆಂಬ್ಯಲೆನ್ಸ್ ವಾಹನ ಸಿಬ್ಬಂದಿಗೆ ವೇತನ ನೀಡಿಲ್ಲ. ರಾಜ್ಯದಲ್ಲಿ ಸರಿಒಯಾದ ಸಮಯಕ್ಕೆ ಆಂಬುಲೆನ್ಸ್‌ಗಳು ಸಿಗದೇ ರೋಗಿಗಳ ಪರದಾಡುತ್ತಿದ್ದರೆ ಸಿದ್ದರಾಮಯ್ಯ ಮೋಜಿನಾಟದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸಂವಿಧಾನ ಅರಿಯದೇ ವರ್ತಿಸುವ ಪ್ರಧಾನಿ ಮೋದಿ: ಸಚಿವ ಮಹದೇವಪ್ಪ
ರಾಜ್ಯದಲ್ಲಿ ತೆಂಗು ಬೆಳೆಗೆ ಪರಿಹಾರ ಇಲ್ಲ, ಅಂಗನವಾಡಿಯಲ್ಲಿ ಸರಿಯಾದ ಆಹಾರ ನೀಡುತ್ತಿಲ್ಲ. ಅಂಗನವಾಡಿಗೆ ಈ ಸಾಲಿನಲ್ಲಿ ಸುಮಾರು 2 ಲಕ್ಷ ಮಕ್ಕಳು ಶಾಲೆಗೆ ಸೇರದ ಹೊರಗುಳಿಸಿದ್ದಾರೆ. ಇನ್ನು ಸಿಇಟಿ ಪ್ರಶ್ನೆ ಪತ್ರಿಕೆ ಸಮಸ್ಯೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಬೆಂಗಳೂರು ಗುತ್ತಿಗೆದಾರರು ತಮಗೆ ಬಿಲ್ ಪಾವತಿಯಾಗಿಲ್ಲ ಎಂದು ಕೆಲಸ ಕಾರ್ಯ ನಿಲ್ಲಿಸಿದ್ದಾರೆ. ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ. ಆದರೂ ಸಿಎಂ ಸಿದ್ದರಾಮಯ್ಯ ಮಾತ್ರ ರೆಸಾರ್ಟ್ ನಲ್ಲಿ ಆರಾಮವಾಗಿ ಇದ್ದಾರೆ. ನಿಮಗಿರುವ ಆರಾಮತನ ರಾಜ್ಯದ ಜನತೆಗೆ ಯಾಕೆ ಸಿಗುತ್ತಿಲ್ಲ ಎಂದು ಕೇಳಿದರು.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಕೇವಲ 20 ದಿನ ಚುನಾವಣಾ ಪ್ರಚಾರ ಕೈಗೊಂಡಿದ್ದಕ್ಕೆ ನೀವು ವಿಶ್ರಾಂತಿ ಮೊರೆ ಹೋಗಿದ್ದೀರಿ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿ 10 ವರ್ಷದಲ್ಲಿ ಒಂದೂ ರಜೆ ಹಾಕಿಲ್ಲ. ಮುಖ್ಯಮಂತ್ರಿಯಾದ ನೀವು ತೀವ್ರ ಬರಗಾಲದಿಂದ ತತ್ತರಿಸಿದ ಜನತೆಗೆ ಯುದ್ಧೋಪಾದಿಯಲ್ಲಿ ಪರಿಹಾರ ಕಲ್ಪಿಸಬೇಕು. ಆದರೆ, ನೀವು ಸಿಕ್ ಲೀವ್, ಮನರಂಜನಾ ಲೀವ್, ಅರ್ನ್ ಲೀವ್, ಟೂರ್ ಲೀವ್ ಎಲ್ಲಾ ತೆಗೆದುಕೊಂಡಿದ್ದೀರಿ. ಆದರೆ, ಮೋದಿ ಅವರು ಸ್ವತಃ ತಮ್ಮ ತಾಯಿ ನಿಧನರಾದರೂ ಕರ್ತವ್ಯಕ್ಕೆ ರಜೆ ಹಾಕಲಿಲ್ಲ. ಎಲ್ಲಿಯ ಮೋದಿ, ಎಲ್ಲಿಯ ಸಿದ್ದರಾಮಯ್ಯ. ಸಿದ್ದರಾಮಯ್ಯ ಕಾಮ್ ಚೋರ್, ಮೋದಿಗೆ ಹೋಲಿಕೆ ಸಲ್ಲದು. ಮೋದಿ ಕಾಯಕ ಯೋಗಿ, ಸಿದ್ದರಾಮಯ್ಯ ಮಜಾವಾದಿ ಎಂದು ಟೀಕೆ ಮಾಡಿದರು.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ರಾಜ್ಯದ ಫಲಿತಾಂಶ ಶೇ.73ಕ್ಕೆ ಕುಸಿತ: ಬಾಗಲಕೋಟೆ ಅಂಕಿತಾ ಟಾಪರ್
ಕಾಂಗ್ರೆಸ್ ಸಾಗರೋತ್ತರ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ದಕ್ಷಿಣ ಭಾರತೀಯರನ್ನು ಆಫ್ರಿಕಾ ಜನಾಂಗಕ್ಕೆ ಹೋಲಿಕೆ ಮಾಡಿದ್ದಾನೆ. ಸ್ಯಾಮ್ ಪಿತ್ರೋಡಾ ಒಬ್ಬ 420. ಕಾಂಗ್ರೆಸ್ ಪಾಲಿಗೆ ಈ ಪಿತ್ರೋಡಾ ಒಂಥಾರ ತಿಥಿ ವಡೆ. ಈ ಹಿಂದೆ ಡಿ.ಕೆ. ಸುರೇಶ್ ಕೂಡ ಈ ರೀತಿ ಹೇಳಿಕೆ ಕೊಟ್ಟಿದ್ದರು. ಇದು ಕಾಂಗ್ರೆಸ್ ಮನಸ್ಥಿತಿ ಏನು ಅನ್ನೋದು ಇವರ ಹೇಳಿಕೆಯಿಂದ ಗೊತ್ತಾಗುತ್ತದೆ. ಈಗ ಸ್ಯಾಮ್ ಪಿತ್ರೋಡಾ ರಾಜೀನಾಮೆ ಕೊಟ್ಟಿದ್ದಾನೆ. ಆದ್ರೆ ಇದು ಇಲ್ಲಿಗೆ ಮುಗಿಯೋದಿಲ್ಲ. ದಕ್ಷಿಣ ಭಾರತದವರೆಲ್ಲ ಅಫ್ರೀಕಾದವರು ಎಂದು ಹೇಳಿದ್ದಾನೆ. ನಮ್ಮ ಬಣ್ಣದ ಮೇಲೆ ಇವ ತೀರ್ಮಾನ ಮಾಡ್ತಾನೆ ಎಂದರೆ, ಇಲ್ಲಿ ವಾಸಿಸುವ ಒಕ್ಕಲಿಗ ಲಿಂಗಾಯತ ಎಲ್ಲರಿಗೂ ಯಾವ ಬಣ್ಣ ಹಚ್ಚುತ್ತೀರಾ? ಹಿಂದುಳಿದವರಿಗೆ ಯಾವ ಬಣ್ಣ ಹಚ್ಚುತ್ತೀರಾ? ಈಗ ಸೋನಿಯಾ ಗಾಂಧಿ ಯಾರು? ಅವರದ್ದು ಯಾವ ಬಣ್ಣ? ಯಾವ ದೇಶದಿಂದ ಬಂದಿದ್ದಾರೆ ಹೇಳಬೇಕು ಎಂದು ಆರ್. ಅಶೋಕ್ ಆಗ್ರಹಿಸಿದರು.
ನಾವು ಅರಬ್ಬರು, ಚೈನಾದವರು ಅಲ್ಲ, ನಾವೆಲ್ಲ ಭಾರತೀಯರು. ನಮ್ಮ ದೇವರು ರಾಮ, ಈಶ್ವರ, ಕೃಷ್ಣ ಎಲ್ಲ ಕಪ್ಪು. ಕಾಂಗ್ರೆಸ್‌ನ ದೇವರು ಯಾರು, ಯಾವ ಬಣ್ಣ? ದಕ್ಷಿಣ ಭಾರತದವರು ಆಫ್ರೀಕಾದವರು ಎಂದು ಪಿತ್ರೋಡಾ ಹೇಳಿದ್ದಾರೆ. ಸಿದ್ದರಾಮಯ್ಯನವರೇ ಯಾವಗ ಅಫ್ರೀಕಾಗೆ ಹೋಗ್ತೀರಾ.? ಸಿದ್ದರಾಮಯ್ಯನವರು ಆಫ್ರೀಕಾಗೆ ಹೋಗಿ ಸಿಎಂ ಸ್ಥಾನ ಹುಡುಕಿಕೊಳ್ಳಲಿ. ಪಿತ್ರೋಡಾ ಇಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ ಎಂದು ಈಗ ಹೇಳ್ತಿದೆ. ಯಾಕೆ ಅವರ ಮೇಲೆಕ್ರಮ ಜರುಗಿಸಿಲ್ಲ. ಜನಾಂಗೀಯ ನಿಂದನೆ ಮಾಡಿರುವ ಕಾಂಗ್ರೆಸ್ ನಡೆ ಖಂಡನೆ ಮಾಡುತ್ತೇವೆ. ಸಂಜೆ ವೇಳೆ ಸ್ಯಾಮ್ ಪಿತ್ರೋಡಾ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.