ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿಯನ್ನು ಘೋಷಿಸಿದ್ದ ಪ್ರಧಾನಿಗಳು ಇದೀಗ ಮುಸ್ಲೀಮರನ್ನು ಗುರಿಯಾಗಿಸಿಕೊಂಡು ನಾನು ಮೀಸಲಾತಿಯ ಪರವಾಗಿದ್ದೇನೆ ಎಂದು ಹೇಳುತ್ತಿರುವುದು ನಿಜಕ್ಕೂ ಬೇಜವಾಬ್ದಾರಿ ತನದ ಪ್ರತೀಕವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.

ಮೈಸೂರು (ಮೇ.09): ಆರ್ಥಿಕತೆಯ ಆಧಾರದಲ್ಲಿ ಮೀಸಲಾತಿಯನ್ನು ಘೋಷಿಸಿದ್ದ ಪ್ರಧಾನಿಗಳು ಇದೀಗ ಮುಸ್ಲೀಮರನ್ನು ಗುರಿಯಾಗಿಸಿಕೊಂಡು ನಾನು ಮೀಸಲಾತಿಯ ಪರವಾಗಿದ್ದೇನೆ ಎಂದು ಹೇಳುತ್ತಿರುವುದು ನಿಜಕ್ಕೂ ಬೇಜವಾಬ್ದಾರಿ ತನದ ಪ್ರತೀಕವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.

Add Asianetnews Kannada as a Preferred SourcegooglePreferred

ಮೀಸಲಾತಿಯು ಐಸಿಹಾಸಿಕ ದೌರ್ಜನ್ಯ ಹಾಗೂ ಅವಮಾನಕ್ಕೆ ಒಳಗಾದ ಜನ ಸಮುದಾಯಕ್ಕೆ ನೀಡಬೇಕಾದ ಅಂಶ ಎಂಬ ಸಂಗತಿಯು ಸಂವಿಧಾನದಲ್ಲಿ ಸ್ಪಷ್ಟವಾಗಿದ್ದರೂ ಕೂಡಾ ಅದನ್ನು ಸಂಪೂರ್ಣವಾಗಿ ಬದಿಗೆ ತಳ್ಳಿ ಇಡಬ್ಲ್ಯೂಎಸ್ ಹೆಸರಿನಲ್ಲಿ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ಭಾರತದ ವಿಭಜನೆ ಆದ ಸಂದರ್ಭದಲ್ಲಿ ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ಹೋದ ಮುಸ್ಲೀಮರು ಪಾಕಿಸ್ತಾನದ ಸದಸ್ಯರಾದರು. ಭಾರತವನ್ನೇ ನಂಬಿ ಇಲ್ಲೇ ಇದ್ದ ಮುಸ್ಲಿಮರು ಭಾರತೀಯರಾದರು ಎಂದಿದ್ದಾರೆ.

ಆ ಸಂದರ್ಭದಲ್ಲಿ ಈ ದೇಶದ ಅಲ್ಪಸಂಖ್ಯಾತರು, ಇಲ್ಲಿನ ಬಹುಸಂಖ್ಯಾತರ ಮೇಲೆ ನಂಬಿಕೆಯಿಟ್ಟು ಇಲ್ಲಿ ಜೀವಿಸಲು ನಿರ್ಧರಿಸಿದ್ದಾರೆ. ನಮ್ಮ ಮೇಲೆ ವಿಶ್ವಾಸ ಇಟ್ಟ ಅವರೊಂದಿಗೆ ಸೌಹಾರ್ದತೆಯಿಂದ ಇದ್ದು ಅವರನ್ನು ಕಾಪಾಡಬೇಕಾದ್ದು ಭಾರತೀಯರಾದ ನಮ್ಮ ಜವಾಬ್ದಾರಿ ಎಂದಿದ್ದಾರೆ. ಆದರೆ ಇತ್ತೀಚೆಗೆ ಬಾಬಾ ಸಾಹೇಬರ ಮೇಲೆ ನಕಲಿ ಪ್ರೀತಿ ತೋರುತ್ತಿರುವ ಪ್ರಧಾನಿಗಳು ಅವರ ಮಾತುಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ತಾನೊಬ್ಬ ಎಲ್ಲಾ ಸಮುದಾಯಗಳ ಪ್ರಧಾನಿ ಎಂಬುದನ್ನು ಮರೆತು ಚುನಾವಣೆಯ ಕಾರಣಕ್ಕೆ ಮುಸ್ಲೀಮ ಸಮುದಾಯಗಳ ನೇರವಾಗಿ ದ್ವೇಷ ಕಾರುತ್ತಿರುವುದು ನನ್ನಲ್ಲಿ ಆತಂಕ ಹುಟ್ಟಿಸಿದೆ.

ಬಿಜೆಪಿ ಅಧಿಕಾರದಲ್ಲಿ ಸರ್ಕಾರಿ ಸ್ವಾಯತ್ತೆ ಸಂಸ್ಥೆಗಳ ಚೇತರಿಕೆ: ನಿರ್ಮಲಾ ಸೀತಾರಾಮನ್

ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ವಿರೋಧಿ ತಂತ್ರವನ್ನು ಪಾಲಿಸುತ್ತಿದ್ದ ಮತ್ತು ನಾವು ಇರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳುವಂತಹ ಸಂಸದರು ಮತ್ತು ಸಚಿವರನ್ನು ತನ್ನ ಸಂಪುಟದಲ್ಲಿ ಇಟ್ಟುಕೊಂಡಿರುವ ಪ್ರಧಾನಿಗಳು ಮೂಲತಃ ಮೀಸಲಾತಿಯ ವಿರೋಧಿಯೇ ಆಗಿದ್ದು ಚುನಾವಣಾ ಕಾರಣಕ್ಕಾಗಿ ಸಂವಿಧಾನದ ರಕ್ಷಣೆ ಎಂಬ ಪದವನ್ನು ಬಳಸುತ್ತಿರುವ ಇವರ ಕುತಂತ್ರದ ಮಾತುಗಳನ್ನು ಯಾರೂ ನಂಬಬಾರದು ಎಂದು ಅವರು ತಿಳಿಸಿದ್ದಾರೆ.