ಬೆಂಗಳೂರು(ಜ.13):"ಸಚಿವ ಸಂಪುಟ ವಿಸ್ತರಣೆ ಇಂದು ಸಂಜೆ ನಡೆಯಲಿದ್ದು, ಈಗಾಗಲೇ ಸಿಎಂ ಬಿ. ಎಸ್. ಯಡಿಯೂರಪ್ಪ ಸಚಿವರಾಗುವ ಏಢಳು ಮಂದಿಯ ಹೆಸರು ಘೋಷಿಸಿ್ದ್ದಾಮಾಹಿರೆ. ಅಲ್ಲದೇ ಈ ಪಟ್ಟಿಯನ್ನು ರಾಜಭವನಕ್ಕೂ ಕಳುಹಿಸಿದ್ದಾರೆ. ಮುನಿರತ್ನಗೆ ಈ ಬಾರಿ ಸಚಿವ ಸ್ಥಾನ ಕೈತಪ್ಪಿದ್ದು, ಬಿಎಸ್‌ವೈ ಅವರ ಮನವೊಲಿಸುವ ಯತ್ನದಲ್ಲಿದ್ದಾರೆ. ಹೀಗಿರುವಾಗಲೇ ಅತ  ಅಬಕಾರಿ ಸಚಿವ ಎಚ್. ನಾಗೇಶ್‌ಗೆ ಶಾಕಿಂಗ್ ಸುದ್ದಿ ಲಭಿಸಿದೆ.

ಹೌದು ಪ್ರಮಾಣವಚನ ಸ್ವೀಕರಿಸಲಿರುವ ಏಳು ಮಂದಿಯ ಹೆಸರು ಘೋಷಿಸಿ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಮತ್ತೊಂದು ಮಹತ್ವದ ವಿಚಾರ ಬಹಿರಂಗಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ 'ಸಂಪುಟದಿಂದ ಒಂದು ಸ್ಥಾನ ಖಾಲಿ ಇಟ್ಟುಕೊಂಡಿದ್ದೇವೆ. ಅಬಕಾರಿ ಅಚಿವ ಎಚ್. ನಾಗೇಶ್‌ ಜೊತೆಯ ಈ ಬಗ್ಗೆ ಮಾತನಾಡಿದ್ದೇವೆ. ಅವರ ಮನವೊಲಿಸುತ್ತೇವೆ' ಎಂದಿದ್ದಾರೆ.

ಅಲ್ಲದೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆಯೂ ಈ ಬಗ್ಗೆ ಚರ್ಚಿಸಿ ಬಳಿಕ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.