ನನಗೆ ಮತ ಹಾಕಿ, ಇಲ್ದಿದ್ರೆ ನನ್ನ-ನಿಮ್ಮ ಋಣಾನುಬಂಧ ಮುಗೀತು ಅಂತಾ ತಿಳ್ಕೊಳ್ಳಿ; ವಾಟಾಳ್‌ ಸೆಂಟಿಮೆಂಟ್‌

ಚಾಮರಾಜನಗರ ಜನತೆ ಈ ಬಾರಿ ನನ್ನನ್ನು ಗೆಲ್ಲಿಸಬೇಕು. ನನ್ನನ್ನು ಗೆಲ್ಲಿಸದಿದ್ದರೆ ಮೇ.13 ನೇ ತಾರೀಖು ನನ್ನ ನಿಮ್ಮ ಋಣಾನುಬಂಧ ಮುಗೀತು. ಈ ಜನ್ಮದಲ್ಲಿ ಈ ಕಡೆ ತಿರುಗಿಯೂ ನೋಡಲ್ಲ ಎಂದು ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ. 

Karnataka Elections 2023 Please Vote me or my chamarajanagar bonding will end says Vatal nagaraj gow

ಚಾಮರಾಜನಗರ (ಏ.30): ಚಾಮರಾಜನಗರ ಜನತೆ ಈ ಬಾರಿ ನನ್ನನ್ನು ಗೆಲ್ಲಿಸಬೇಕು. ನನ್ನನ್ನು ಆಯ್ಕೆ ಮಾಡಿದರೆ ಚಾಮರಾಜನಗರವನ್ನು ಭೂಪಟದಲ್ಲಿ ಅದ್ಭುತವಾಗಿ ಮೆರೆಯುವಂತೆ ಮಾಡುತ್ತೇನೆ ಎಂದು ಚಾಮರಾಜನಗರದಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ. 

ನನ್ನನ್ನು ಗೆಲ್ಲಿಸದಿದ್ದರೆ ಮೇ.13 ನೇ ತಾರೀಖು ನನ್ನ ನಿಮ್ಮ ಋಣಾನುಬಂಧ ಮುಗೀತು. ಈ ಜನ್ಮದಲ್ಲಿ ಈ ಕಡೆ ತಿರುಗಿಯೂ ನೋಡಲ್ಲ. ಚಾಮರಾಜನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈ ಬಾರಿಯು ಕೈ ಹಿಡಿಯದಿದ್ದರೆ ಇನ್ನು ಮುಂದೆ ಚಾಮರಾಜನಗರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಚಾಮರಾಜನಗರದಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಚಾಮರಾಜನಗರ ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಕುಳಿತು ವಿಭಿನ್ನ ರೀತಿಯಲ್ಲಿ  ಪ್ರಚಾರ ಮಾಡಿದ ವಾಟಾಳ್ ನಾಗರಾಜ್ ಅಂಗಡಿ ಮುಂಗಟ್ಟು, ಬಸ್ ನಿಲ್ದಾಣದಲ್ಲಿ ಮತ ಯಾಚಿಸಿದರು.  ಈ ಬಾರಿಯ ಚುನಾವಣೆಯಲ್ಲಿ ವಾಟಾಳ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಹಾವು ಶಿವನ ಹಾರ, ನನಗೆ ಜನರೇ ಶಿವ: ಕಾಂಗ್ರೆಸ್‌ನ ವಿಷಸರ್ಪ ಹೇಳಿಕೆ ಮೋದಿ ಟಾಂಗ್

ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ 10 ನೇ ಬಾರಿಗೆ ಕಣಕ್ಕಿಳಿಯುತ್ತಿರುವ ವಾಟಾಳ್ ನಾಗರಾಜ್  ಚಾಮರಾಜನಗರದಲ್ಲಿ 3 ಬಾರಿ ಗೆಲವು 6 ಬಾರಿ ಸೋಲು ಕಂಡಿದ್ದಾರೆ. ಕಳೆದ ಮೂರು ಬಾರಿಯಿಂದ ಸತತವಾಗಿ ವಾಟಾಳ್ ನಾಗರಾಜ್ ಇಲ್ಲಿ  ಸೋತಿದ್ದಾರೆ.

ಮೋದಿಯವರ ಜತೆಗೆ ಈಗ ಬರೀ ಲಂಚಕ್ಕೊಬ್ಬ ಮಂಚಕ್ಕೊಬ್ಬ ಇರೋರು ಮಾತ್ರ ಇರೋದು:

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios