ಮೋದಿಯವರ ಜೊತೆಗೆ ಈಗ ಬರೀ ಲಂಚಕ್ಕೊಬ್ಬ ಮಂಚಕ್ಕೊಬ್ಬ ಇರೋರು ಮಾತ್ರ ಇದ್ದಾರೆ.  ಆರೋಪ ಇಲ್ಲದಿರೋರೆಲ್ಲ ನಮ್ಮ ಜೊತೆಗೆ ಇದ್ದಾರೆ ಎಂದು ಡಿಕೆ ಶಿವಕುಮಾರ್ ಚುನಾವಣಾ ಪ್ರಚಾರದಲ್ಲಿ ಹೇಳಿಕೆ ನೀಡಿದ್ದಾರೆ.

ವಿಜಯನಗರ (ಏ.30): ಪ್ರಧಾನಿ ಮೋದಿ ವಿರುದ್ದ ಕೆಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ವೇಳೆ ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ಮೋದಿಯವರ ಜೊತೆಗೆ ಈಗ ಬರೀ ಲಂಚಕ್ಕೊಬ್ಬ ಮಂಚಕ್ಕೊಬ್ಬ ಇರೋರು ಮಾತ್ರ ಎಂದು ಹೇಳಿಕೆ ನೀಡಿದ್ದಾರೆ. ಸವದಿ ಮೇಲೆ ಭ್ರಷ್ಟಾಚಾರ ಆರೋಪ ಇತ್ತಾ? ಶೆಟ್ಟರ್ ಮೇಲೆ ಆರೋಪ ಇತ್ತಾ? ಆರೋಪ ಇಲ್ಲದಿರೋರೆಲ್ಲ ನಮ್ಮ ಜೊತೆಗೆ ಇದ್ದಾರೆ. ಆರೋಪ ಇರುವವರು ಭ್ರಷ್ಟರು ಎಲ್ಲರೂ ಅವರ ಜೊತೆಗೆ ಇದ್ದಾರೆ. ಮೋದಿ ಇಲ್ಲಿ ಬಂದು ಆಡಳಿತ ಮಾಡೋದು ಬೇಕಾಗಿಲ್ಲ. ಅತ್ಯಂತ ನೀಚ ಭ್ರಷ್ಟ ಸರ್ಕಾರ ಇಲ್ಲಿದೆ. ಭ್ರಷ್ಟಾಚಾರ ಆರೋಪ ಇರುವವರನ್ನೆಲ್ಲ ಜೊತೆಗೆ ಇಟ್ಟುಕೊಂಡು ರ್ಯಾಲಿ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾವು ಶಿವನ ಹಾರ, ನನಗೆ ಜನರೇ ಶಿವ: ಕಾಂಗ್ರೆಸ್‌ನ ವಿಷಸರ್ಪ ಹೇಳಿಕೆ ಮೋದಿ ಟಾಂಗ್

ತಂದೆ ಮಗನ ಕ್ಷೇತ್ರದಲ್ಲಿ ಡಿಕೆಶಿ ಅಬ್ಬರದ ರೋಡ್ ಶೋ ನಡೆಸಿದ್ದು, ಎಂ ಕೃಷ್ಣಪ್ಪ ಅವರ ಪರವಾಗಿ ವಿಜಯನಗರ ಕ್ಷೇತ್ರದಲ್ಲಿ ಪ್ರಿಯಕೃಷ್ಣ ಪರ ಗೋವಿಂದರಾಜ ನಗರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದಿಂದ ಪ್ರಿಯಕೃಷ್ಣ ಪರ ಡಿಕೆಶಿ ಚುನಾವಣಾ ರೋಡ್ ಶೋ ನಡೆಸಿದರು. ಈ ವೇಳೆ ಪುತ್ರನ ಕ್ಷೇತ್ರದಲ್ಲಿ ಪ್ರಚಾರಕ್ಕೆ ಡಿಕೆಶಿ ಜೊತೆಗೆ ವಿಜಯನಗರ ಅಭ್ಯರ್ಥಿ ಎಂ ಕೃಷ್ಣಪ್ಪ ಕೂಡ ಸಾಥ್ ನೀಡಿದರು. ಕಾವೇರಿನಗರ, ಉದ್ಭವ ಗಣಪತಿ ರಸ್ತೆ, ಮೂಡಲಪಾಳ್ಯ, ವಿಜಯನಗರ, ಚಂದ್ರಾಲೇಔಟ್ ಭಾಗದಲ್ಲಿ ಡಿಕೆಶಿ ಪ್ರಚಾರ ನಡೆಸಿದರು. ಪ್ರಚಾರದಲ್ಲಿ ಸ್ಟಾರ್ ಕ್ಯಾಂಪೇನರ್ ಸಾಧು ಕೋಕಿಲ ಕೂಡ ಭಾಗಿಯಾಗಿದ್ದರು.

ಜೆಡಿಎಸ್ ಕಾಂಗ್ರೆಸ್ ನ ಬಿ ಟೀಮ್, ದಳಪತಿಗಳ ಭದ್ರಕೋಟೆಯಲ್ಲಿ ಗುಡುಗಿದ ಮೋದಿ

ಇದಕ್ಕೂ ಮುನ್ನ ಬೆಂಗಳೂರು ನಗರದ ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ಶ್ರೀ ಎಸ್‌.ಬಾಲರಾಜ್‌ಗೌಡ ಅವರ ಪರವಾಗಿ ಮತಯಾಚನೆ ಮಾಡಿದರು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Scroll to load tweet…