Karnataka CM: ಡಿಕೆಶಿಯನ್ನು ಸಿಎಂ ಮಾಡುವಂತೆ ಉಡುಪಿ ಒಕ್ಕಲಿಗರ ಸಂಘ ಆಗ್ರಹ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನೇ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಉಡುಪಿ ಜಿಲ್ಲಾ ಒಕ್ಕಲಿಗರ ಸಂಘ ಆಗ್ರಹಿಸಿದೆ. ಈ ಬಗ್ಗೆ ಸಂಘದ ಗೌರವಾಧ್ಯಕ್ಷ ಸಿದ್ದರಾಜು ಅವರು ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Karnataka election results Udupi Vokkaliga Sangh demands that DK should be made CM at udupi rav

ಉಡುಪಿ (ಮೇ.16) : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನೇ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಉಡುಪಿ ಜಿಲ್ಲಾ ಒಕ್ಕಲಿಗರ ಸಂಘ ಆಗ್ರಹಿಸಿದೆ.

ಈ ಬಗ್ಗೆ ಸಂಘದ ಗೌರವಾಧ್ಯಕ್ಷ ಸಿದ್ದರಾಜು ಅವರು ಮಂಗಳವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka assembly election 2023)ಕಾಂಗ್ರೆಸ್‌ಗೆ ಭಾರಿ ದೊಡ್ಡ ಗೆಲುವನ್ನು ತಂದುಕೊಡುವಲ್ಲಿ ಒಕ್ಕಲಿಗ ಸಮುದಾಯದ ಕೊಡುಗೆ ಬಹಳ ಪ್ರಮುಖವಾಗಿರುವುದು ಸ್ಪಷ್ಟವಾಗಿದೆ. ಅಲ್ಲದೇ ಒಕ್ಕಲಿಗ ಸಮುದಾಯದ (Vokkaliga community) ನಾಯಕರಾಗಿರುವ ಡಿ.ಕೆ.ಶಿವಕುಮಾರ್‌ (DK Shivakumar) ಅವರು ರಾಜ್ಯಾದ್ಯಂತ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿದ್ದು, ಪಕ್ಷದ ಗೆಲುವಿಗೆ ಹಗಲುರಾತ್ರಿ ದುಡಿದಿದ್ದಾರೆ. ಇದನ್ನು ಪರಿಗಣಿಸಿ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದವರು ಒತ್ತಾಯಿಸಿದರು.

DK Shivakumar: ಡಿಕೆಶಿಗೇ ಸಿಎಂ ಪಟ್ಟ: ಒಕ್ಕಲಿಗ ಸಂಘ ಪಟ್ಟು!

1999ರಿಂದ 2004ರ ವರೆಗೆ ಒಕ್ಕಲಿಗ ಸಮುದಾಯದ ನಾಯಕ ಎಸ್‌.ಎಂ.ಕೃಷ್ಣ(SM Krishna) ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿದ್ದರು. ಅವರ ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಒಕ್ಕಲಿಗರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿಲ್ಲ. ಹಾಗಾಗಿ ಈ ಬಾರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನ ಕೊಡುವ ಮೂಲಕ ಕಾಂಗ್ರೆಸ್‌ ಒಕ್ಕಲಿಗರ ಪರವಾಗಿ ನಿಲ್ಲಬೇಕು ಎಂದವರು ಒತ್ತಾಯಿಸಿದರು.

ಸುದ್ದಿಗೊಷ್ಠಿಯಲ್ಲಿ ಉಡುಪಿ ಜಿಲ್ಲಾ ಒಕ್ಕಲಿಗ(ಗೌಡ)ರ ಸೇವಾ ಸಂಘದ ಕಾರ‍್ಯದರ್ಶಿ ಹೇಮಾನಂದ ಹಲ್ದಡ್ಕ, ಕೋಶಾಧಿಕಾರಿ ರಘುನಂದನ್‌ ಬಿ., ಮಾಜಿ ಕಾರ‍್ಯದರ್ಶಿ ಮಂಜುನಾಥ್‌ ಬಿ.ಪಿ. ಉಪಸ್ಥಿತರಿದ್ದರು.

ಪಕ್ಷಕ್ಕಾಗಿ ದುಡಿದ ಡಿಕೆಶಿ ಮುಖ್ಯಮಂತ್ರಿ ಆಗಬೇಕ’

ಕೋಲಾರ: ಕಾಂಗ್ರೆಸ್‌ ಪಕ್ಷವನ್ನು ತಾಯಿಯಂತೆ ಪೂಜಿಸುವ, ಕಾರ್ಯಕರ್ತರನ್ನು ದೇವರು ಎಂದು ಕರೆಯುವ, ಪಕ್ಷಕ್ಕಾಗಿ ದಣಿವರಿಯದೇ ಹೋರಾಟ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್‌ ಹೈಕಮಾಂಡ್‌ ಘೋಷಣೆ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಸೀತಿಹೊಸೂರು ಮುರಳಿಗೌಡ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪಕ್ಷದ ಸಂಘಟನೆಗಾಗಿ ಜೀವನದಲ್ಲಿ ಸಾಕಷ್ಟುನೋವುಗಳನ್ನು ಅನುಭವಿಸಿದ್ದಾರೆ ಎಲ್ಲವನ್ನೂ ಅರಗಿಸಿಕೊಂಡು ಕಳೆದ ಮೂರು ವರ್ಷದಿಂದ ಪಕ್ಷವನ್ನ ಸಂಘಟನೆ ಮಾಡಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್‌ ಕಾರಣವಾಗಿದ್ದಾರೆ. ರಾಜ್ಯದಲ್ಲಿ ಭಾರತ್‌ ಜೋಡೋ, ಪ್ರಜಾಧ್ವನಿ, ಮೇಕೆದಾಟು ಯೋಜನೆ ವಿಚಾರದಲ್ಲಿ ಮಾಡಿರುವ ಸಂಘಟನೆ ಇನ್ಯಾರು ಮಾಡಲು ಸಾಧ್ಯವಿಲ್ಲದ ರೀತಿಯಲ್ಲಿ ಇಡೀ ದೇಶಕ್ಕೆ ಡಿ.ಕೆ ಶಿವಕುಮಾರ್‌ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ ಎಂದರು.

ಪೂರ್ವಸಿದ್ಧತೆಯೇ ಕಾಂಗ್ರೆಸ್‌ ಜಯಕ್ಕೆ ಕಾರಣ: ತಂತ್ರಗಾರ ನರೇಶ್ ಅರೋರಾ

Latest Videos
Follow Us:
Download App:
  • android
  • ios