ಸೋಮವಾರ ಸಭೆ ನಡೆಸಿದ ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಶಿವಕುಮಾರ್‌ ಅವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಹಲವು ಸ್ವಾಮೀಜಿಗಳೂ ಶಿವಕುಮಾರ್‌ ಪರ ಸಂದೇಶ ರವಾನಿಸಿದ್ದಾರೆ.

ಬೆಂಗಳೂರು (ಮೇ.16) : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೇ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಭಾನುವಾರ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು, ಮುಖಂಡರು ಆಗ್ರಹಿಸಿದ ಬೆನ್ನಲ್ಲೇ ಸೋಮವಾರ ಸಭೆ ನಡೆಸಿದ ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಶಿವಕುಮಾರ್‌ ಅವರನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಹಲವು ಸ್ವಾಮೀಜಿಗಳೂ ಶಿವಕುಮಾರ್‌ ಪರ ಸಂದೇಶ ರವಾನಿಸಿದ್ದಾರೆ.

ಒಕ್ಕಲಿಗರ ಭವನದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಕೋನಪ್ಪರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಿದ ಸಂಘದ ಪದಾಧಿಕಾರಿಗಳು, ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬರುವಲ್ಲಿ ಶಿವಕುಮಾರ್‌ ಅವರ ಪರಿಶ್ರಮ ಬಹಳಷ್ಟಿದೆ. ಶಿವಕುಮಾರ್‌ ಅವರಿಂದಾಗಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ನಿಸ್ವಾರ್ಥವಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ರಾಜ್ಯವನ್ನು ಸಹ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಶಕ್ತಿ ಅವರಿಗಿದ್ದು ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಲಿಂಗಾಯತರು ಕಾಂಗ್ರೆಸ್‌ ಕಡೆ ವಾಲಿದ್ದಾರೆಂಬುದು ಸರಿಯಲ್ಲ: ಬಿವೈ ವಿಜಯೇಂದ್ರ

ಸುದ್ದಿಗಾರರೊಂದಿಗೆ ಮಾತನಾಡಿದ ಕಿಮ್ಸ್‌ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮಾಪತಿ ಗೌಡ, ಶಿವಕುಮಾರ್‌ ಅವರ ಶ್ರಮದಿಂದ ಕಾಂಗ್ರೆಸ್‌ 135 ಸ್ಥಾನ ಪಡೆದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಈಗಾಗಲೇ ಒಂದು ಅವಕಾಶ ಸಿಕ್ಕಿದ್ದು 5 ವರ್ಷ ಆಡಳಿತ ನಡೆಸಿದ್ದಾರೆ. ಈ ಹಿಂದೆ ಗುಜರಾತ್‌ನ ಕಾಂಗ್ರೆಸ್‌ ಶಾಸಕರನ್ನು ರಾಜ್ಯಕ್ಕೆ ಕರೆದುಕೊಂಡು ಬಂದು ಬಿಜೆಪಿಯವರಿಂದ ಶಿವಕುಮಾರ್‌ ಸಾಕಷ್ಟುಕಷ್ಟಅನುಭವಿಸಿದ್ದು ಇದೆಲ್ಲವನ್ನೂ ಪರಿಗಣಿಸಬೇಕು ಎಂದರು.

ಸ್ವಾಮೀಜಿಗಳ ಆಶೀರ್ವಾದ:

ಡಿ.ಕೆ. ಶಿವಕುಮಾರ್‌ (DK Shivakumar)ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಶ್ರೀ(Shivratri Desikendra of Sattur Mutt Shri)ಗಳ ಶಿಷ್ಯರು ಸದಾಶಿವನಗರದ ಶಿವಕುಮಾರ್‌ ನಿವಾಸಕ್ಕೆ ಆಗಮಿಸಿ, ಶ್ರೀಗಳು ನೀಡಿರುವ ‘ಉನ್ನತ ಸ್ಥಾನ ಸಿಗಲಿ’ ಎಂಬ ಸಂದೇಶವನ್ನು ತಲುಪಿಸಿದರು. ಭಾರತೀಯ ಪಿಂಜಾರ ನದಾಫ ಮನ್ಸೂರಿ ಭಾವೈಕ್ಯ ಗುರುಪೀಠದ ಸಂಗಮ್‌ ಪೀರ್‌ ಸ್ವಾಮೀಜಿ ಸಹ ಆಗಮಿಸಿದ್ದರು.

ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ, 120ಕ್ಕಿಂತ ಹೆಚ್ಚು ಸೀಟ್‌ ಗೆಲ್ಲುವುದು ಖಚಿತ: ಸಿದ್ದರಾಮಯ್ಯ

ಡಿಕೇಶಿ ಪರ ಸಮಾವೇಶಕ್ಕೆ ಬ್ರೇಕ್‌

ಬೆಂಗಳೂರು: ಡಿ.ಕೆ. ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಒಕ್ಕಲಿಗ ಸಮುದಾಯದ 5 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸಬೇಕು ಎಂದು ಸಮುದಾಯದ ಕೆಲ ಮುಖಂಡರು ನಿರ್ಧರಿಸಿ ಈ ಬಗ್ಗೆ ಸೋಮವಾರ ಬೆಳಿಗ್ಗೆ ಹೇಳಿಕೆಯನ್ನೂ ನೀಡಿದ್ದರು. ಮಂಗಳವಾರ ಸ್ವಾತಂತ್ರ್ಯ ಉದ್ಯಾನವನದವರೆಗೂ ಬೃಹತ್‌ ಜಾಥಾ ನಡೆಸಿ ಬಳಿಕ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶ ನಡೆಸಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ ಸೋಮವಾರ ಸಂಜೆಯ ಹೊತ್ತಿಗೆ ಈ ತೀರ್ಮಾನವನ್ನು ಕೈಬಿಡಲಾಯಿತು.