Karnataka Election Result 2023 ಮೋದಿ ಅವಲಂಬನೆ, ಭ್ರಷ್ಟಾಚಾರ ಆರೋಪ; ಬಿಜೆಪಿ ಸೋಲಿಗಿದೆ 5 ಕಾರಣ!

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ 136 ಸ್ಥಾನ ಪಡೆದುಕೊಂಡರೆ, ಬಿಜೆಪಿ 65ಕ್ಕೆ ಕುಸಿತ ಕಂಡಿದೆ. ಆಡಳಿತದಲ್ಲಿದ್ದ ಬಿಜೆಪಿ ಈ ಮಟ್ಟಿಗೆ ಕುಸಿತಕ್ಕೆ ಹಲವು ಕಾರಣಗಳಿವೆ. ಇದರಲ್ಲಿ ಪ್ರಮುಖ 5 ಕಾರಣಗಳೇ ಬಿಜೆಪಿಗೆ ಮುಳುವಾಗಿದೆ. 

Karnataka Election Result 2023 five reason behind state BJP poor show in Poll ckm

ಬೆಂಗಳೂರು(ಮೇ.13):  ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಭಾರಿ ಕುತೂಹಲ ಕೆರಳಿಸಿದ್ದ ರಾಜ್ಯ ಕದನದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಬಿಜೆಪಿ ಮಹಾ ಪತನ ಕಂಡಿದೆ. ಕಳೆದ ಮೂರೂವರೆ ವರ್ಷ ಆಡಳಿತ ನಡೆಸಿದ ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ,ಕೇಂದ್ರ ಬಿಜೆಪಿ ನಾಯಕರು ಸೇರಿದಂತೆ  ಹಲವರು ರಾಜ್ಯದ ಮೇಲೆ ಸವಾರಿ ಮಾಡಿದರೂ ಬಿಜೆಪಿ ಗೆಲುವು ಸಾಧಿಸಿಲ್ಲ. ಇದಕ್ಕೆ ಮುಖ್ಯ ಹಾಗೂ ಪ್ರಮುಖ ಕಾರಣ ಆಡಳಿತ ವಿರೋಧಿ ಅಲೆ. ಇದರ ಜೊತೆಗೆ ಸ್ವಯಂಕೃತ ತಪ್ಪುಗಳು ಬಿಜೆಪಿ ಪಾಲಿಗೆ ಮುಳುವಾಗಿದೆ.

ಭ್ರಷ್ಟಾಚಾರ, ಕಮಿಷನ್ ಆರೋಪ
ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಸತತ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿತ್ತು. ಗುತ್ತಿದಾರರಿಂದ 40 ಪರ್ಸೆಂಟ್ ಕಮಿಷನ್ ಆರೋಪ ಕೇಳಿಬಂದ ಬೆನ್ನಲ್ಲೇ ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಿತು. ಇತ್ತ ಬಿಜೆಪಿ ನಾಯಕರು ಸಮರ್ಥವಾಗಿ ಕೌಂಟರ್ ನೀಡಲು ವಿಫಲರಾದರು. ದಾಖಲೆ ಕೊಡಿ ಎಂದು ಬೊಬ್ಬೆ ಹೊಡೆದರೇ ಹೊರತು ನಾವು ಭ್ರಷ್ಟಾಚಾರ ಮಾಡಿಲ್ಲ ಎಂದು ಎದೆ ತಟ್ಟಿ ಹೇಳುವ ಧೈರ್ಯ ಮಾಡಿಲ್ಲ. ಈ ವಿಚಾರದಲ್ಲಿ ಕಾಂಗ್ರಸ್ ನಡೆಸಿದ ಹಲವು ಅಭಿಯಾನಗಳು ಜನಸಾಮಾನ್ಯರನ್ನು ತಲುಪಿತ್ತು. ಪೇಸಿಎಂ ಸೇರಿದಂತೆ ಹಲವು ಅಭಿಯಾನಗಳು ಬಿಜೆಪಿಗೆ ತೀವ್ರ ಹೊಡೆತ ನೀಡಿತು.

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!

ಪ್ರಧಾನಿ ಮೋದಿಯನ್ನೇ ನೆಚ್ಚಿಕೊಂಡ ರಾಜ್ಯ ಬಿಜೆಪಿ
ಕರ್ನಾಟಕ ಬಿಜೆಪಿ ಮಾಡಿದ ಅಭಿವದ್ಧಿಯನ್ನು ಜನರಿಗೆ ತಲುಪಿಸಲು ವಿಫಲವಾಯಿತು. ಇತ್ತ ಪ್ರಧಾನಿ ಮೋದಿ ಪ್ರಚಾರ, ಮೋದಿ ಹೆಸರಿನಲ್ಲೇ ಮತ ಕೇಳುವ ಬಿಜೆಪಿ ನಾಯಕರಿಗೆ ತಕ್ಕ ಪಾಠವನ್ನು ಮತದಾರರ ಕಲಿಸಿದ್ದಾರೆ. ಪ್ರತಿ ವಿಚಾರಕ್ಕೂ ಮೋದಿ ಹೆಸರು ಹೇಳುವ ರಾಜ್ಯ ನಾಯಕರು ತಾವು ಅತ್ಯುತ್ತಮ ಆಡಳಿತ ನೀಡುವ ಕಡೆ ಗಮನ ನೀಡಲಿಲ್ಲ. ಇತ್ತ ಪ್ರಚಾರ ಸಭೆಗಳಲ್ಲಿ ಕೇಂದ್ರದ ಹಲವು ಯೋಜನೆಗಳು, ಅಭಿವೃದ್ಧಿಗಳು ಪ್ರಸ್ತವಾಗಿತ್ತು. ಆದರೆ ರಾಜ್ಯ ಬಿಜೆಪಿ ಆಡಳಿತದಲ್ಲಿ ಮಾಡಿದ ಅಭಿವದ್ಧಿಗಳು ಪ್ರಸ್ತಾಪ ಆಗಲೇ ಇಲ್ಲ. ರಾಜ್ಯದ ಪ್ರತಿಯೊಬ್ಬ ನಾಯಕ ಮೋದಿ ಹೆಸರಿನಲ್ಲಿ ಮತ ಕೇಳಿ ಗೆದ್ದು ಬರುವ ಪ್ಲಾನ್ ವರ್ಕೌಟ್ ಆಗಲಿಲ್ಲ.

ಆಡಳಿತ ವಿರೋಧಿ ಅಲೆ
ರಾಜ್ಯ ಬಿಜೆಪಿಯ ಬಹುತೇಕ ಸಚಿವರಿಗೆ ಆಡಳಿತ ವಿರೋಧಿ ಅಲೆ ತಟ್ಟಿತ್ತು. ರಾಜ್ಯ ಸರ್ಕಾರ ಹಲವು ಭಾಗದಲ್ಲಿ ಜನರ ವಿರೋಧ ಕಟ್ಟಿಕೊಳ್ಳಬೇಕಾಯಿತು. ಕೇಂದ್ರ ಅಣತಿಯಂತೆ ಸರ್ಕಾರ ನಡೆಯುತ್ತಿದೆ ಅನ್ನೋ ಆರೋಪಗಳೂ ಬಿಜೆಪಿಯನ್ನು ಹಳ್ಳ ಹಿಡಿಸಿತು. ಇದರ ಜೊತೆಗೆ ಬೇಕಾಬಿಟ್ಟಿ ಹೇಳಿಕೆಗೆಗಳು, ದರ್ಪದ ಅಹಂಕಾರದ ಮಾತುಗಳು ಬಿಜೆಪಿಗೆ ಮುಳ್ಳಾಯಿತು. 

ಬಿಜೆಪಿಗೆ ಭಜರಂಗ ಬಲಿ, ಕಾಂಗ್ರೆಸ್‌ ಕದನ ಕಲಿ; ದಿಗ್ವಿಜಯಕ್ಕೆ ಇದೇ ಐದು ಕಾರಣಗಳು!

ನಂದಿನಿ-ಅಮೂಲ್ ಜಿದ್ದಾಜಿದ್ದಿ
ಬಿಜೆಪಿ ಹಿಂದಿ ಹೇರಿಕೆ ಮಾಡುತ್ತಿದೆ. ಸ್ಥಳೀಯ ವಿಚಾರಗಳನ್ನು ಕಡೆಗಣಿಸುತ್ತಿದೆ ಅನ್ನೋ ಆರೋಪದ ನಡುವೆ ನಂದಿನ ಹಾಗೂ ಅಮೂಲ್ ನಡುವಿನ ರಾಜಕೀಯ ಬಿಜಿಪೆಗೆ ಬಿಸಿ ತುಪ್ಪವಾಯಿತು. ನಂದಿನಿ ಬ್ರ್ಯಾಂಡ್‌ನ್ನು ಅಮೂಲ್ ಜೊತೆ ವಿಲೀನಗೊಳಿಸಲಾಗುತ್ತಿದೆ, ಅಮೂಲ್ ರಾಜ್ಯಕ್ಕೆ ತಂದು ನಂದಿನಿಯನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸಮರ್ಥವಾಗಿ ಪ್ರಚಾರ ಮಾಡುವಲ್ಲಿ ಯಶಸ್ವಿಯಾಯಿತು. ರಾಜ್ಯಕ್ಕೆ ಅಮೂಲ್ ಎಂಟ್ರಿಕೊಟ್ಟಿದ್ದು ಸಿದ್ದರಾಮಯ್ಯ ಸರ್ಕಾರದಲ್ಲಿ. ಆದರೆ ನಂದಿನಿಗೆ ಪೈಪೋಟಿಯಾಗಿ ಬಿಜೆಪಿ ಅಮೂಲ್ ರಾಜ್ಯಕ್ಕೆ ತಂದಿದೆ ಅನ್ನೋದನ್ನು ಕಾಂಗ್ರೆಸ್ ಸಮರ್ಥಾಗಿ ಜನರಬಳಿ ಕೊಂಡೊಯ್ದಿತ್ತು.

ಲಿಂಗಾಯಿತ ನಾಯಕರ ಕಡೆಗಣನೆ
ಬಿಜೆಪಿಗೆ ರಾಜ್ಯದ ಅತೀ ದೊಡ್ಡ ಮತದಾರರ ಬಳಿಕ ಲಿಂಗಾಯಿತ ಸಮುದಾಯ ಸದಾ ಬೆಂಬಲಕ್ಕೆ ನಿಂತಿತ್ತು. ಆದರೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಘಟನೆ. ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನಿರಾಕಣೆ ಸೇರಿದಂತೆ ಹಲವು ಘಟನೆಗಳು ಬಿಜೆಪಿ ಲಿಂಗಾಯಿತರ ವಿರೋಧಿ ಎಂದು ಬಿಂಬಿತಗೊಂಡವು. ಇತ್ತ ಬ್ರಾಹ್ಮಣರು ರಾಜ್ಯ ಬಿಜಿಪಿಯನ್ನು ತೆಕ್ಕೆಗೆ ತೆಗೆದುಕೊಂಡಿದ್ದಾರೆ ಅನ್ನೋ ವಿಚಾರದಲ್ಲೂ ಬಿಜೆಪಿ ಸಮರ್ಥಾಗಿ ವಾದ ಮಂಡಿಸುವ ಗೋಜಿಗೆ ಹೋಗಲಿಲ್ಲ. 

ಸಮರ್ಥ ನಾಯಕತ್ವ ಕೊರತೆ
ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಬಿಜೆಪಿ ಸಮರ್ಥ ನಾಯಕತ್ವದ ಕೊರತೆ ಅನುಭವಿಸಿತು. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರೂ ನಾಯಕತ್ವ ವಿಚಾರದಲ್ಲಿ ಎಡವಿದರು. ಕೇಂದ್ರದಲ್ಲಿ ಪ್ರಧಾನಿ ಮೋದಿಯಂತೆ, ಯುಪಿಯಲ್ಲಿ ಯೋಗಿ ಆದಿತ್ಯನಾಥ್ ರೀತಿಯ ಆಡಳಿತವನ್ನು ಹಿಂದೂ ಧ್ರುವೀಕರಣದ ಮತಗಳು ಬಯಸಿತ್ತು. ಹಲವು ಹಿಂದೂ ಕಾರ್ಯಕರ್ತರ ಹತ್ಯೆ ಘಟನೆಗಳಲ್ಲಿ ರಾಜ್ಯ ನಾಯಕರ ಕಠಿಣ ನಿರ್ಧಾರ ಹೇಳಿಕೆ ಮಾತಿಗೆ ಮಾತ್ರ ಸೀಮಿತವಾಗಿತ್ತು. ಇದು ಕಟ್ಟರ್ ಹಿಂದೂ ಮತದಾರರನ್ನು ಆಕ್ರೋಶಕ್ಕೆ ತಳ್ಳಿತ್ತು. 

ಬಿಜೆಪಿ ಪ್ರಚಾರದ ರ್ಯಾಲಿಗಳಲ್ಲಿ ರಾಜ್ಯ ನಾಯಕರ ಕಡೆಗಣಿಸಲಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿತ್ತು. ಕರ್ನಾಟಕ ವಿಧಾನಸಭಾ ಚುನಾವಣೆಗೆ ಗುಜರಾತ್ ಮಾದರಿಯನ್ನು ತರಲಾಗಿತ್ತು. ಆದರೆ ಸ್ಥಳೀಯ ಹಾಗೂ ಪ್ರಮುಖ ನಾಯಕರಿಗೆ ಟಿಕೆಟ್ ಕೈತಪ್ಪಿಸಿದ ಆರೋಪಗಳು ಕೇಳಿಬಂದಿತ್ತು. ಭಜರಂಗದಳ ನಿಷೇಧ ವಿಚಾರದಲ್ಲಿ ಮುಸ್ಲಿಮ್ ಮತಗಳು ನೇರವಾಗಿ ಕಾಂಗ್ರೆಸ್‌ಗೆ ಕೈಸೇರುವಂತೆ ಮಾಡಿತು. ಆದರೆ ಜೈ ಬಜರಂಗಬಲಿ ವಿಚಾರ ಬಿಜೆಪಿಗೆ ಮತಗಳಾಗಿ ಪರಿವರ್ತನೆ ಆಗಲಿಲ್ಲ.

 

ಬಿಜೆಪಿ ಸೋಲಿಗೆ ಕಾರಣಗಳು

- ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದು..
- ಬಿಜೆಪಿಯಲ್ಲಿ ಆಂತರಿಕವಾಗಿ ಟೀಮ್ ಗಳು ಇದ್ದವು..
- ಪರಸ್ಪರ ಒಬ್ಬರನ್ನೊಬ್ಬರು ಸೋಲಿಸೋಕೆ ಮುಂದಾದರು
- ವಿಪಕ್ಷಗಳ ಅಭ್ಯರ್ಥಿಗಳಲ್ಲಿ ಕೆಲವರಿಗೆ ಬಿಜೆಲಿಯ ಕೆಲ ನಾಯಜರು ಹಣಕಾಸಿನ ಸಹಾಯ ಮಾಡಿದರು...?
- ಅತಿಯಾದ ಆತ್ಮವಿಶ್ವಾಸ
- ಹೈಕಮಾಂಡ್ ನಾಯಕರ ಮೇಲೆ ಅತಿಯಾದ ಅವಲಂಬನೆ
- ರಾಜ್ಯದಲ್ಲಿ ಕೈ ಹಿಡಿಯದ ನಮೋ ವರ್ಚಸ್ಸು, ನಮೋ ರೋಡ್ ಶೋಗಳು
- ಫಲ‌ ಕೊಡದ ಚಾಣಕ್ಯ ಅಮಿತ್ ಶಾ ತಂತ್ರಗಾರಿಕೆ
- ರಾಜ್ಯದಲ್ಲಿ ಅತಿಯಾದ ಪ್ರಯೋಗ ಅಸ್ತ್ರಗಳು. 
- 20 ಹಾಲಿಗಳಿಗೆ ಟಿಕೆಟ್ ಮಿಸ್ ನಿರ್ಧಾರ. 
- 75 ಹೊಸಬರಿಗೆ ಟಿಕೆಟ್
- ಯಡಿಯೂರಪ್ಪ ಕಡೆಗಣನೆ ಎಫೆಕ್ಟ್
- ಶೆಟ್ಟರ್, ಸವದಿ ಸೇರಿದಂತೆ ಹಲವು ಲಿಂಗಾಯತ ನಾಯಕರ ಕಡೆಗಣನೆ.
- ಪರಿಣಾಮ ವೀರಶೈವ ಲಿಂಗಾಯತ ಮತವರ್ಗದ ವಿಭಜನೆ
- ರಾಜ್ಯ ನಾಯಕರನ್ನು ಪರಿಗಣಿಸದ ಹೈಕಮಾಂಡ್ ನಾಯಕರ ಧೋರಣೆ
- ಹಲವು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆಯ ಪರಿಣಾಮ
- 40% ಕಮೀಷನ್ ಆರೋಪ, ಬೆಲೆ ಏರಿಕೆ ಪರಿಣಾಮ
- ಒಕ್ಕಲಿಗ ಮತವರ್ಗದ ವಿಶ್ವಾಸ ಗಳಿಸಿಕೊಳ್ಳುವಲ್ಲಿ ವಿಫಲ
- ಹಿಂದುತ್ವದ ಅಜೆಂಡಾ ಮೇಲೂ ಅವಲಂಬನೆ. 
- ಕೈಕೊಟ್ಟ ಹಿಂದುತ್ವದ ಅಜೆಂಡಾ
- ಫಲ‌ ಕೊಡದ ಮೀಸಲಾತಿ ಹೆಚ್ಚಳ ಅಸ್ತ್ರ ಮತ್ತು ಒಳಮೀಸಲಾತಿ ಹಂಚಿಕೆ ನಿರ್ಣಯ
- ಎಚ್ಡಿಕೆ ಬಿಟ್ಟ ಪೇಶ್ವೆ ಬ್ರಾಹ್ಮಣ ವರ್ಸಸ್ ಲಿಂಗಾಯತ ಬಾಣದ ಎಫೆಕ್ಟ್
- ಸಿಎಂ ಬೊಮ್ಮಾಯಿ ನಾಯಕತ್ವ ಗುಣ ಇಲ್ಲದಿರುವುದು
- ಬೊಮ್ಮಾಯಿ ಸರ್ಕಾರದ ವೈಫಲ್ಯ
- ಬಂಡಾಯ ಶಮನ ಮಾಡುವಲ್ಲಿ ಬಿಜೆಪಿ ನಾಯಕರ ವೈಫಲ್ಯ
- ಸಚಿವರ ನಿಷ್ಕ್ರಿಯತೆ, ವೈಫಲ್ಯ
- ಸರ್ಕಾರದ ಅವಧಿಯಲ್ಲಿ ಕೇಳಿಬಂದ ಕಮೀಷನ್ ಆರೋಪ, 
- ಪಿಎಸ್ಐ ಅಕ್ರಮ ಪ್ರಕರಣ - - - ಬಿಟ್‌ಕಾಯಿನ್ ಹಗರಣ ಆರೋಪ, 
- ಡ್ರಗ್ ಪ್ರಕರಣ, ಕೋವಿಡ್ ಸಂದರ್ಭದ ನಾನಾ ಆರೋಪಗಳ ಎಫೆಕ್ಟ್
- ಸಚಿವರ ಭ್ರಷ್ಟಾಚಾರ ಆರೋಪ.
- ಬಿಜೆಪಿ ಶಾಸಕರ ಭ್ರಷ್ಟಾಚಾರ ಆರೋಪ
- ಅತಿಯಾಗಿ ಪ್ರಯೋಗ ಮಾಡಿದ್ದು.
- ಟಿಕೆಟ್ ಕೊನೆ ಹಂತದಲ್ಲಿ ಘೋಷಣೆ
- ಮೀಸಲಾತಿಯನ್ನು ಕೊನೆ ಕ್ಷಣದಲ್ಲಿ ಘೋಷಣೆ ಮಾಡಿದ್ದು
- ಲಂಬಾಣಿ ಸಮುದಾಯ ಬೇಸರ ಹೊಂದಿದ್ದು..
- ಮೀಸಲಾತಿಯ ಲಾಭ ನಷ್ಟದ ಅರಿವು ಆಗಲು ಸಮಯ ಸಿಗಲಿಲ್ಲ
- ಕೇವಲ ಘೋಷಣೆ ಆಗಿಯೆ ಉಳಿಯಿತು
- ಬೊಮ್ಮಾಯಿ‌ ಮತ್ತು ಸಂಘಟನೆ ನಡುವೆ ಹೊಂದಾಣಿಕೆ ಇರಲಿಲ್ಲ.
- ಬೊಮ್ಮಾಯಿ‌ಯನ್ನು ಪಕ್ಷದ ಕಾರ್ಯಕರ್ತರು ಸಹ ಒಪ್ಪಲಿಲ್ಲ
- ಬೊಮ್ಮಾಯಿ‌ ನಿಷ್ಕ್ರಿಯ ಆಗಿದ್ರು.. 
- ಅನೇಕ ಶಾಕರ ಕೆಲಸ ಕಾರ್ಯ ಫೈಲ್ ಕ್ಲೀಯರ್ ಮಾಡ್ತಾ ಇರಲಿಲ್ಲ ಎನ್ನುವ ಆರೋಪ
- ಬೊಮ್ಮಾಯಿ‌ ಹೆಡ್ ಮಾಸ್ಟರ್ ಆಗಿದ್ರು , ಸ್ಟೂಡೆಂಟ್ ಅವರ ಮಾತು ಕೇಳ್ತಾ ಇರಲಿಲ್ಲ..
- ಬೊಮ್ಮಾಯಿ‌ಯನ್ನು ಯಡಿಯೂರಪ್ಪ ಜೊತೆ ಕಂಪ್ಯಾರ್ ಮಾಡಿದ್ದು
- ಬೊಮ್ಮಾಯಿ‌ಗೆ ವರ್ಚಸ್ಸು ಇಲ್ಲದೇ ಇದ್ದದ್ದು..

Latest Videos
Follow Us:
Download App:
  • android
  • ios