ತತ್ವ ಸಿದ್ಧಾಂತವಿಲ್ಲದ ಬಿಎಸ್‌ವೈ ಶಿಷ್ಯಗೆ ಕಾಂಗ್ರೆಸ್ ಟಿಕೆಟ್: ಮಾಜಿ ಶಾಸಕ ಬಿ.ಎಚ್ ಬನ್ನಿಕೋಡ ಆಕ್ರೋಶ
ಹಿರೇಕೆರೂರ-ರಟ್ಟೀಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ವಂಚನೆ ಮಾಡಿದ ರಾಜ್ಯ ಕಾಂಗ್ರೆಸ್ ನಾಯಕರ ನಡೆಯನ್ನು ನನ್ನ ಬೆಂಬಗಲಿರು ಪ್ರಶ್ನಿಸುತ್ತಿದ್ದು, ಅಭಿಮಾನಿಗಳು, ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದೇನೆ. 13ರಂದು ನಾಮಪತ್ರ ಸಲ್ಲಿಸುವ ದಿನದಂದೇ ಮುಂದಿನ ರಾಜಕೀಯ ನಡೆ ಬಗ್ಗೆ ತಿಳಿಸುತ್ತೇನೆ ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.
ರಟ್ಟೀಹಳ್ಳಿ (ಏ.6) : ಹಿರೇಕೆರೂರ-ರಟ್ಟೀಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ವಂಚನೆ ಮಾಡಿದ ರಾಜ್ಯ ಕಾಂಗ್ರೆಸ್ ನಾಯಕರ ನಡೆಯನ್ನು ನನ್ನ ಬೆಂಬಗಲಿರು ಪ್ರಶ್ನಿಸುತ್ತಿದ್ದು, ಅಭಿಮಾನಿಗಳು, ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದೇನೆ. 13ರಂದು ನಾಮಪತ್ರ ಸಲ್ಲಿಸುವ ದಿನದಂದೇ ಮುಂದಿನ ರಾಜಕೀಯ ನಡೆ ಬಗ್ಗೆ ತಿಳಿಸುತ್ತೇನೆ ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.
ತಾಲೂಕಿನ ಖಂಡೇಬಾಗೂರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬನ್ನಿಕೋಡ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಗೊತ್ತಿಲ್ಲದ ಯಡಿಯೂರಪ್ಪ(BS Yadiyurappa)ನವರ ಶಿಷ್ಯನಿಗೆ (ಯು.ಬಿ. ಬಣಕಾರ) ಯಾವ ಮಾನದಂಡದ ಮೇಲೆ ಕಾಂಗ್ರೆಸ್ ಟಿಕೆಟ್(Congress Ticket) ನೀಡಿದೆ ಎಂದು ತಾಲೂಕಿನ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಯಡಿಯೂರಪ್ಪ ಏನೂ ಮಾಡುವ ಸ್ಥಿತಿಯಲ್ಲಿಲ್ಲ, ಬಣಕಾರ ಬಂಡಾಯಕ್ಕೆ ಬಿಜೆಪಿ ಥಂಡಾ!
ಯು.ಬಿ.ಬಣಕಾರ(UB Banakar) ನಿಗಮ ಮಂಡಳಿ ಅಧ್ಯಕ್ಷನಾಗಿ ಸರ್ಕಾರದ ಎಲ್ಲ ಸವಲತ್ತು ಪಡೆದು ಈಗ ಬಿಜೆಪಿಯಲ್ಲಿ ನೆಲೆ ಕಳೆದುಕೊಂಡು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮತ್ತೆ ಅಧಿಕಾರದ ದುರಾಸೆಗಾಗಿ ಕಾಂಗ್ರೆಸ್ಸಿನ ತತ್ವ ಸಿದ್ಧಾಂತದ ಗಂಧ, ಗಾಳಿ ಇಲ್ಲದ ವ್ಯಕ್ತಿ ಬಂದು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದೂರಿದರು.
ಈ ಹಿಂದಿನ ಉಪ ಚುನಾವಣೆಯಲ್ಲಿ 56 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದು, ತಾಲೂಕಿನಲ್ಲಿ ನನ್ನದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತೇನೆ ಎಂದು ಬನ್ನಿಕೋಡ ಹೇಳಿದರು.
ನಾನು ಕಾಂಗ್ರೆಸ್ ಟಿಕೆಟ್‌ಗಾಗಿ ಯಾವೊಬ್ಬ ನಾಯಕರ ಮನೆಗೆ ಹೋಗಲ್ಲ. ತಾವಾಗಿಯೇ ತಿಳಿದು ನಾಯಕರ ಮನವೊಲಿಸಿ ಟಿಕೆಟ್ ಕೊಡಿಸಿದ್ದೇ ಆದಲ್ಲಿ ಮುಂದಿನ ಎಲ್ಲ ಚುನಾವಣೆಗಳಲ್ಲಿ ನನ್ನ ಅಭಿಮಾನಿಗಳು ನಿಮಗೆ ಬೆಂಬಲಿಸುವ ಭರವಸೆ ನೀಡುತ್ತೇನೆ ಎಂದರು.
ಸಚಿವ ಬಿ.ಸಿ. ಪಾಟೀಲ್ ಕಿರುಕುಳಕ್ಕೆ ಬಿಜೆಪಿ ಬಿಡುವ ನಿರ್ಧಾರ; ರಾಜೀನಾಮೆಗೆ ಮಾಜಿ ಶಾಸಕ ಯು.ಬಿ. ಬಣಕಾರ ಸ್ಪಷ್ಟನೆ
ಈ ವೇಳೆ ಎ.ಕೆ. ಪಾಟೀಲ್, ಹನುಮಂತಪ್ಪ ಹಡಗದ, ಸುರೇಶಗೌಡ ಸೊರಟೂರ, ಕೆ.ಪಿ. ಪಾಟೀಲ್, ಬಸಪ್ಪ ಕುರಿ, ಎಲ್.ಸಿ. ಕೊರ್ಚರ, ಎ.ಎ. ಕನವಳ್ಳಿ, ಸರ್ಫರಾಜ ಮಾಸೂರ, ಶೇಖಪ್ಪ ಉಕ್ಕುಂದ, ರಾಜಣ್ಣ ಪಾಟೀಲ, ಮಾಲತೇಶಸ್ವಾಮಿ, ಶಶಿಕಲಾ ಹಾದ್ರಿಹಳ್ಳಿ, ಮೀನಾಕ್ಷಿ ಸಾವಜ್ಜಿಯವರ, ಅಣಜಿ ಬಸನಗೌಡ್ರ, ಪ್ರಕಾಶ ಬನ್ನಿಕೋಡ, ನಾಸೀರ್ ಸೈಕಲ್ಗಾರ ಇದ್ದರು.