ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಾಂತ್ಯವಾರು ಪ್ರಾಬಲ್ಯ ಸಾಧಿಸಿದವರು ಯಾರು? ಮಧ್ಯ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸೇರಿದಂತೆ ಎಲ್ಲಾ ಪ್ರಾಂತ್ಯದಲ್ಲಿ ಗೆಲುವು ಹಾಗೂ ಸ್ಥಾನದ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷೆ.
ಬೆಂಗಳೂರು(ಮೇ.10): ಕರ್ನಾಟಕ ವಿಧಾನಸಭಾ ಚುನಾವಣೋತ್ತರ ಸಮೀಕ್ಷಾ ವರದಿಗಳು ಪ್ರಕಟಗೊಂಡಿದೆ. ಮೂರು ಸಂಸ್ಥೆಗಳು ಬಿಜೆಪಿ ಅತೀ ದೊಡ್ಡ ಪಕ್ಷ ಎಂದರೆ, ಬಹುತೇಕ ಸಂಸ್ಥೆಗಳು ಕಾಂಗ್ರೆಸ್ ಪ್ರಾಬಲ್ಯ ಎಂದಿದೆ. ಮತ್ತೆರೆಡು ಸಂಸ್ಥೆಗಳು ಕಾಂಗ್ರೆಸ್‌ಗೆ ಭರ್ಜರಿ ಗೆಲುವಿನೊಂದಿಗೆ ಸರ್ಕಾರ ರಚಿಸಲಿದೆ ಎಂದಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಜನ್ ಕಿ ಬಾತ್ ನಡೆಸಿದ ಪ್ರಾಂತ್ಯವಾರು ಸಮೀಕ್ಷೆಯ ರೋಚಕ ಮಾಹಿತಿ ಬಹಿರಂಗಗೊಂಡಿದೆ. ಎಂದಿನಂತೆ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಇತ್ತ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸಿದೆ. ಮುಂಬೈ ಕರ್ನಾಟಕದಲ್ಲಿ ಬಿಜೆಪಿ ಬಾವುಟ ಹಾರಿದ್ದರೆ, ಹೈದರಾಹಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಮಧ್ಯ ಕರ್ನಾಟಕದಲ್ಲಿ ತೀವ್ರ ಪೈಪೋಟಿ ನಡುವೆ ಬಿಜೆಪಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿನ ಪ್ರಾಂತ್ಯವಾರು ಸ್ಥಾನಗಳ ಲೆಕ್ಕಾಚಾರ ಇಲ್ಲಿದೆ.
Karnataka Elections 2023 LIVE: ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ...
ಬೆಂಗಳೂರು ಭಾಗದಲ್ಲಿ ಬಿಜೆಪಿ ಹರಹಾಸದ ಮುನ್ನಡೆ
ಬಿಜೆಪಿ: 17
ಕಾಂಗ್ರೆಸ್ :15
ಜೆಡಿಎಸ್ : 00
ಇತರರು:00
ಮಧ್ಯ ಕರ್ನಾಟಕ ಭಾಗದಲ್ಲಿ ಜಿದ್ದಾಜಿದ್ದಿ
ಬಿಜೆಪಿ: 13
ಕಾಂಗ್ರೆಸ್ : 11
ಜೆಡಿಎಸ್ : 02
ಇತರರು: 00
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಮುನ್ನಡೆ
ಬಿಜೆಪಿ: 15
ಕಾಂಗ್ರೆಸ್ : 24
ಜೆಡಿಎಸ್ : 01
ಇತರರು:00

ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿ ಜಯಭೇರಿ
ಬಿಜೆಪಿ: 31
ಕಾಂಗ್ರೆಸ್ : 19
ಜೆಡಿಎಸ್ : 00
ಇತರರು: 00
ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಗೆಲುವಿನ ನಗೆ
ಬಿಜೆಪಿ: 15
ಕಾಂಗ್ರೆಸ್ : 04
ಜೆಡಿಎಸ್ : 00
ಇತರರು: 00
Karnataka Election Exit Poll ಕಾಂಗ್ರೆಸ್‌ಗೆ ಭರ್ಜರಿ ಗೆಲುವಿನ ಭವಿಷ್ಯ ನುಡಿದ ಚಾಣಾಕ್ಯ,ಇಂಡಿಯಾ ಟುಡೆ!
ಕರ್ನಾಟಕ ವಿಧಾನಸಭಾ ಚುನಾವಣೆಯ ಹಲವು ಪ್ರಾಂತ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇರುವುದು ಸ್ಪಷ್ಟವಾಗಿದೆ. ಹಳೇ ಮೈಸೂರು ಭಾಗವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿತ್ತು. ಅಮಿತ್ ಶಾ ಸೇರಿದಂತೆ ಕೇಂದ್ರದ ಬಿಜೆಪಿ ನಾಯಕರು ಹಳೇ ಮೈಸೂರು ಭಾಗದಲ್ಲಿ ಸಂಚಲನ ಸೃಷ್ಟಿಸಿದ್ದರು. ಆದರೆ ಈ ಭಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದೆ.
ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ಸಮೀಕ್ಷೆ
ಬಿಜೆಪಿ: 94 ರಿಂದ 117 ಸ್ಥಾನ
ಕಾಂಗ್ರೆಸ್: 96 ರಿಂದ 106 ಸ್ಥಾನ
ಜೆಡಿಎಸ್: 14 ರಂದ 24 ಸ್ಥಾನ
ಇತರರು: 2 ಸ್ಥಾನ
ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷೆ
ಬಿಜೆಪಿ: ಶೇಕಡಾ 37.5 ರಿಂದ 39 ವೋಟ್ ಶೇರ್
ಕಾಂಗ್ರೆಸ್: ಶೇಕಡಾ 38 ರಿಂದ 40 ವೋಟ್ ಶೇರ್
ಜೆಡಿಎಸ್: ಶೇಕಡಾ 14 ರಿಂದ 17 ವೋಟ್ ಶೇರ್
ಇತರರು: ಶೇಕಡಾ 6 ರಿಂದ 8.5 ವೋಟ್ ಶೇರ್
ಇಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ ಬಹುತೇಕ ಶಾಂತಿಯುವಾಗಿ ನಡೆದಿದೆ. ಮೇ.13ಕ್ಕೆ ಫಲಿತಾಂಶ ಹೊರಬೀಳಲಿದೆ. ಚುನಾವಣೋತ್ತರ ಸಮೀಕ್ಷೆ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಶೇಕಡಾ 100ರಷ್ಟು ಸತ್ಯವಲ್ಲ. ಮೇ.13ರ ವರೆಗೆ ಕಾಯಬೇಕು ಎಂದಿದ್ದಾರೆ. ಇತ್ತ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ 130 ರಿಂದ 150 ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ ಎಂದು ಈ ಹಿಂದೆಯೇ ಹೇಳಿದ್ದೇನೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಿಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
