ಕರ್ನಾಟಕ ವಿಧಾನಸಭಾ ಚುನಾವಣಾ ಮತದಾನ ಅಂತ್ಯಗೊಂಡಿದೆ. ಈ ಬಾರಿ ಶೇಕಡಾ ರಷ್ಟು ಮತದಾನವಾಗಿದೆ. ಇದೀಗ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಳ್ಳುತ್ತಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ಪ್ರಕಟಿಸಿದ ಸಮೀಕ್ಷೆಯಲ್ಲಿ ಈ ಬಾರಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ಆದರೆ ಕಾಂಗ್ರೆಸ್ ಠಕ್ಕರ್ ನೀಡುವ ಸಾಧ್ಯತೆಯನ್ನೂ ಹೇಳಿದೆ.
ಎಕ್ಸಿಚ್ ಪೋಲ್ ನಂಬರ್ಸ್ ಹೇಗಿದೆ?
Karnataka Elections 2023 LIVE: ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ

Karnataka Elections 2023ರ ಮತದಾನ ಪ್ರಕ್ರಿಯೆ ಮುಗಿದಿದ್ದು, 224 ಕ್ಷೇತ್ರಗಳಲ್ಲಿ 2615 ಅಭ್ಯರ್ಥಿಗಳ ಅದೃಷ್ಟ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಲಾಕ್ ಆಗಲಿದೆ. ಮತಗಟ್ಟೆಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ನಿರ್ಧರಿತ ಸ್ಟ್ರಾಂಗ್ ರೂಮ್‌ಗಳಲ್ಲಿ ಭದ್ರವಾಗಿ ಲಾಕ್ ಆಗಲಿದೆ. ಸುಮಾರು 5.3 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದು, ಶೇ.72 ರಿಂದ ಶೇ.75ರಷ್ಟು ಮತ ಚಲಾಯಿಸಿರುವ ಸಾಧ್ಯತೆ ಇದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಲ್ಲದೇ ಕೆಲವೆಡೆ ಸ್ವತಂತ್ರ ಅಭ್ಯರ್ಥಿಗಳು, ಸ್ಯಾಂಡಲ್‌ವುಡ್ ನಟ ಉಪೇಂದ್ರ ಸ್ಥಾಪಿಸಿದ ಪ್ರಜಾಕಿಯ ಹಾಗೂ ಜನಾರ್ದನ ರೆಡ್ಡಿ ಅವರ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಅಭ್ಯರ್ಥಿಗಳೂ ಸ್ಪರ್ಧಿಸಿದ್ದರು. ಯಾರು ಬಹುಮತ ಪಡೆಯಬಹುದೆಂಬ ಕುತೂಹಲ ಎಲ್ಲರಿಗೂ ಇದೆ. ಸಿಲಿಕಾನ್ ವ್ಯಾಲಿ ಎಂದು ಹೆಸರು ಪಡೆದಿರುವ ಬೆಂಗಳೂರಿನಲ್ಲಿ ದೇಶ, ವಿದೇಶಗಳ ಕಂಪನಿಗಳು ಹಾಗೂ ಉದ್ಯೋಗಿಗಳು ನೆಲೆ ಕಂಡು ಕೊಂಡಿದ್ದು, ಇದು ಕೇವಲ ಕರ್ನಾಟಕದ ಚುನಾವಣೆಯಾದರೂ, ಇಲ್ಲಿ ಹೂಡಿಕೆ ಮಾಡಿರುವ ಪ್ರತಿಯೊಬ್ಬರಿಗೂ ಯಾವ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಬಹುದೆಂಬ ಕುತೂಹಲ ಸಹಜವಾಗಿದಯೇ ಹೆಚ್ಚಾಗಿದೆ.ಮೇ 13ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಲ್ಲೀವರೆಗೂ ಯಾವ ಪಕ್ಷದ ಸರಕಾರ ರಚನೆಯಾಗುತ್ತದೆ ಎಂಬುದನ್ನು ಕಾಯಲೇ ಬೇಕು.
Karnataka Election Exit Poll ಏಷ್ಯಾನೆಟ್ ಚುನಾವಣೋತ್ತರ ಸಮೀಕ್ಷೆ ಪ್ರಕಟ, ಬಿಜೆಪಿ ಅತೀದೊಡ್ಡ ಪಕ್ಷ!
ಬಳ್ಳಾರಿಯಲ್ಲಿ ಶೇ.70ರಷ್ಟು ಮತದಾನ
ಬಳ್ಳಾರಿ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನ ವಿವರ
ಸಂಜೆ. 05 ಗಂಟೆಯವರೆಗೆ ಶೇಕಡಾವಾರು ಮತದಾನ
91-ಕಂಪ್ಲಿ - ಶೇ.78.39
92-ಸಿರಗುಪ್ಪ-ಶೇ.71.15
93-ಬಳ್ಳಾರಿ ಗ್ರಾಮೀಣ- ಶೇ. 67.51
94-ಬಳ್ಳಾರಿ ನಗರ-ಶೇ. 54.84
95-ಸಂಡೂರು-ಶೇ.69.09
ಜಿಲ್ಲಾ ಸರಾಸರಿ ಶೇ.- 67.68
ಗುಪ್ತ ಮತದಾನ ನಿಯಮ ಉಲ್ಲಂಘಿಸಿದ ಮತದಾರರು, ವೋಟ್ ಹಾಕಿದ್ದು ಮೊಬೈಲ್‌ನಲ್ಲಿ ಸೆರೆ
ರಾಜ್ಯಾದ್ಯಂತ ಇಂದು ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಗುಪ್ತವಾಗಿ ಮತದಾನ ಮಾಡಬೇಕು ಎಂಬ ನಿಯಮವಿದ್ದರೂ ಹಲವು ಯುವಕರು ತಾವು ಮತದಾನ ಮಾಡಿದ ವೀಡಿಯೋ, ಪೊಟೋ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಮತದಾನ ಮಾಡಿದ ಬಳಿಕ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಫೋಟೋ ಅಪಲೋಡ್ ಮಾಡಿಕೊಂಡಿದ್ದಾನೆ. ಹಾವೇರಿಯ ಪುರದ ಓಣಿ ಯುವಕ ಹರೀಶ್ ಮಾಳಗಿ ಹುಕ್ಕೇರಿ ಮಠದ ಮಹಿಳಾ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿದ್ದನು. ಈ ವೇಳೆ ಮತದಾನ ಮಾಡುವ ವೇಳೆ ಪೋಟೋ ಕ್ಲಿಕ್ಕಿಸಿಕೊಂಡಿದ್ದನು. ನಂತರ, ಪೋಟೋವನ್ನು ತನ್ನ ಫೇಸ್‌ಬುಕ್‌ನಲ್ಲಿ ಅಪ್ ಲೋಡ್ ಮಾಡಿ ಹಂಚಿಕೊಂಡಿದ್ದಾನೆ. ಇನ್ನು ಈ ಘಟನೆ ತಿಳಿದ ಕೂಡಲೇ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗುಪ್ತ ಮತದಾನ ನಿಯಮ ಉಲ್ಲಂಘಿಸಿದ ಮತದಾರರು, ವೋಟ್ ಹಾಕಿದ್ದು ಮೊಬೈಲ್‌ನಲ್ಲಿ ಸೆರೆ
ರಾಜ್ಯಾದ್ಯಂತ ಇಂದು ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಗುಪ್ತವಾಗಿ ಮತದಾನ ಮಾಡಬೇಕು ಎಂಬ ನಿಯಮವಿದ್ದರೂ ಹಲವು ಯುವಕರು ತಾವು ಮತದಾನ ಮಾಡಿದ ವೀಡಿಯೋ, ಪೊಟೋ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಮತದಾನ ಮಾಡಿದ ಬಳಿಕ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಫೋಟೋ ಅಪಲೋಡ್ ಮಾಡಿಕೊಂಡಿದ್ದಾನೆ. ಹಾವೇರಿಯ ಪುರದ ಓಣಿ ಯುವಕ ಹರೀಶ್ ಮಾಳಗಿ ಹುಕ್ಕೇರಿ ಮಠದ ಮಹಿಳಾ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿದ್ದನು. ಈ ವೇಳೆ ಮತದಾನ ಮಾಡುವ ವೇಳೆ ಪೋಟೋ ಕ್ಲಿಕ್ಕಿಸಿಕೊಂಡಿದ್ದನು. ನಂತರ, ಪೋಟೋವನ್ನು ತನ್ನ ಫೇಸ್‌ಬುಕ್‌ನಲ್ಲಿ ಅಪ್ ಲೋಡ್ ಮಾಡಿ ಹಂಚಿಕೊಂಡಿದ್ದಾನೆ. ಇನ್ನು ಈ ಘಟನೆ ತಿಳಿದ ಕೂಡಲೇ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯದಲ್ಲಿ ಒಟ್ಟಾರೆ ಶೇ.65.69 ಮತದಾನ, ಇನ್ನೇನು ಕೆಲವೇ ಕ್ಷಣಗಳಲ್ಲಿ ಮುಕ್ತಾಯ
ಕರ್ನಾಟಕ ವಿಧಾನಸಭಾ ಚುವಾವಣೆಯ ಮತದಾನದ ಪ್ರಕ್ರಿಯೆ ಬೆಳಗ್ಗೆ 7ರಿಂದ ಆರಂಭಗೊಂಡಿದ್ದು, ಸಂಜೆ 7ರವರೆಗೂ ನಡೆದಿದೆ. ಇದುವರೆಗೆ ಒಟ್ಟಾರೆ ಶೇ.65.69ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಕೆಲವೆಡೆ ಜನರಿನ್ನೂ ಮತ ಚಲಾಯಿಸಲು ಕ್ಯೂ ನಿಂತಿದ್ದಾರೆ. ಮತ್ತೆ ಕೆಲವೆಡೆ ಜನರು ನೀರಸ ಪ್ರತಿಕ್ರಿಯೆ ತೋರಿದ್ದು, ಒಟ್ಟಾರೆ ಚಿತ್ರಣ ಇನ್ನು ಕೆಲವೇ ಗಂಟೆಗಳಲ್ಲಿ ಸಿಗಲಿದೆ.
ಬಳ್ಳಾರಿ: ಮದದಾನಕ್ಕಾಗಿ ಕಾದ ಜನರು ಹೈರಾಣು
ಬಳ್ಳಾರಿ: ಮತದಾನಕ್ಕೆ ಅರ್ಧ ಗಂಟೆ ಮಾತ್ರ ಬಾಕಿ ಹಿನ್ನಲೆಯಲ್ಲಿ ಬಳ್ಳಾರಿ ಎಪಿಎಂಸಿ ಮತಗಟ್ಟೆಯಲ್ಲಿ ನಿಧಾನಗತಿ ಮತದಾನ. ಮತದಾನ ಪ್ರಕ್ರಿಯೆ ವಿಳಂಬ ಮತಗಟ್ಟೆ ಮುಂದೆ ಹೈರಾಣಾ ಜನ.. ನಾವಣಾಧಿಕಾರಿ ಹಾಗೂ ಪೊಲೀಸರ ಮಧ್ಯೆ ವಾಗ್ವಾದ. ಚುನಾವಣಾ ನಿರಂತ ಸಿಬ್ಬಂದಿ ಜೊತೆಗೆ ವಾಗ್ವಾದಗಿಳಿದ ಮತದಾರರು. ಎಪಿಎಂಸಿಯ ಮತಗಟ್ಟೆ ಸಂಖ್ಯೆ 222 ರಲ್ಲಿ ಘಟನೆ. ಮತದಾನಕ್ಕಾಗಿ ಕಾದು ಕಾದು ಸುಸ್ತಾದ ಜನರು.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತದಾನಕ್ಕೆ ನೂಕು ನುಗ್ಗಲು. ಮತಗಟ್ಟೆ ಮುಂದೆ ನೂರಾರು ಜನರು ಕ್ಯೂ. ನಾಗಶೆಟ್ಟಿಕೊಪ್ಪದ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಜನವೋ ಜನ.ಮೂರು ಮತಗಟ್ಟೆಗಳ ಮುಂದೆ ನೂರಾರು ಜನರ ಸರದಿ ಸಾಲು.
ಬೆಳಗಾವಿ: ನಿಧಾನವಾಗಿ ವರ್ಕ್ ಆಗ್ತಿರೋ ಇವಿಎಂ ಮಶಿನ್. ಸರತಿ ಸಾಲಿನಲ್ಲಿ ನಿಂತು ಪರದಾಡ್ತಿರೋ ಮತದಾರರು. ಗೋಕಾಕನ ಕೆಎಲ್ಇ ಸ್ಕೂಲ್ ನಲ್ಲಿ ಮತಗಟ್ಟೆಯ ಮುಂದೆ ಸರತಿ ಸಾಲು. ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿರುವ ಮತದಾನ ಪ್ರಕ್ರಿಯೆ. ಕಳೆದ 1 ಗಂಟೆಯಿಂದ ನಿಧಾನವಾಗಿ ವರ್ಕ್ ಆಗ್ತಿರೋ ಇವಿಎಂ. ಇವಿಎಂ ಸ್ಲೋ ಆಗಿರೋದ್ರಿಂದ ಪರದಾಡುತ್ತಿರುವ ಮತದಾರರು
ಸಂಜೆ 5 ಗಂಟೆ ಹೊತ್ತಿಗೆ ಎಲ್ಲೆಡೆ ಇಷ್ಟಾಗಿತ್ತು ಮತದಾನ
ಬೀದರ್ ಜಿಲ್ಲೆಯಲ್ಲಿ ಮಧ್ಯಾಹ್ನ 5ರ ವರೆಗೆ ಶೇ. 60.49ರಷ್ಟು ಮತದಾನ
ಬಸವಕಲ್ಯಾಣ ಶೇ. 59.82
ಹುಮನಾಬಾದ್ ಶೇ. 58.32
ಬೀದರ್ ದಕ್ಷಿಣ ಶೇ. 56.8
ಬೀದರ್ ಶೇ. 54.3
ಭಾಲ್ಕಿ ಶೇ. 70.25
ಔರಾದ್ ಶೇ. 63.27
ಚಿತ್ರದುರ್ಗ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನ ವಿವರ
ಸಂಜೆ 5 ಗಂಟೆಯವರೆಗೆ ಶೇಕಡಾವಾರು ಮತದಾನ
97 -ಮೊಳಕಾಲ್ಮೂರು - ಶೇ.76
98-ಚಳ್ಳಕೆರೆ -ಶೇ.69.32
99-ಚಿತ್ರದುರ್ಗ- ಶೇ.70.47
100-ಹಿರಿಯೂರು-ಶೇ.62.05
101-ಹೊಸದುರ್ಗ-ಶೇ.71.87
102-ಹೊಳಲ್ಕೆರೆ -ಶೇ.74.97
ಮಂಡ್ಯ ಜಿಲ್ಲಾ ವಿಧಾನಸಭಾ ಕ್ಷೇತ್ರ ಸಂಜೆ 5 ಗಂಟೆಯ ವಿವರ
186 ಮಳವಳ್ಳಿ- 70.08 %
187 ಮದ್ದೂರು- 77.66%
188 ಮೇಲುಕೋಟೆ- 84.53%
189 ಮಂಡ್ಯ- 69.13%
190 ಶ್ರೀರಂಗಪಟ್ಟಣ- 78.12%
191 ನಾಗಮಂಗಲ- 79.32%
192 ಕೆ.ಆರ್ ಪೇಟೆ- 74.30 %
ಒಟ್ಟಾರೆ ಸರಾಸರಿ 75.90%
ಹಾವೇರಿ ಜಿಲ್ಲೆಯಲ್ಲಿ ಸಂಜೆ 5 ಗಂಟೆ ವೇಳೆಗೆ ಶೇ 73.25 ರಷ್ಟು ಮತದಾನವಾಗಿದೆ.
ಹಾನಗಲ್ಲ- ಶೇ 74.41
ಶಿಗ್ಗಾವಿ- ಶೇ 69.81
ಹಾವೇರಿ- ಶೇ 69.98
ಬ್ಯಾಡಗಿ- ಶೇ 76.65
ಹಿರೇಕೆರೂರು- ಶೇ 78.07
ರಾಣೆಬೆನ್ನೂರು- ಶೇ 71.93
ವಿಜಯಪುರ ಜಿಲ್ಲೆಯಲ್ಲಿ ಸಂಜೆ 5 ಗಂಟೆವರೆಗೆ ಸರಾಸರಿ ಶೇ.62.54 ರಷ್ಟು ಮತದಾನವಾಗಿದೆ.
ಬಬಲೇಶ್ವರ-ಶೇ. 72.90
ಬಸವನ ಬಾಗೇವಾಡಿ-61,40
ವಿಜಯಪುರ-61.90
ದೇವರ ಹಿಪ್ಪರಗಿ-57
ಇಂಡಿ-62.23
ಮುದ್ದೇಬಿಹಾಳ- 63.85
ನಾಗಠಾಣ-57.62
ಸಿಂದಗಿ-64.43
ಉತ್ತರಕನ್ನಡ ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರೆಗೆ ಒಟ್ಟು 68.06% ಮತದಾನ
ಹಳಿಯಾಳ-67.27%,
ಕಾರವಾರ- 66.29%,
ಕುಮಟಾ- 60.35%,
ಭಟ್ಕಳ-71.59%, ಶಿರಸಿ- 73.62%,
ಯಲ್ಲಾಪುರ- 68.52% ಮತದಾನ
ಕಡೇ ಕ್ಷಣದ ಮತದಾನಕ್ಕೆ ಅಡ್ಡಿಯಾದ ವರುಣ
ಹಳಿಯಾಳದಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಅಡ್ಡಿಯಾದ ವರುಣ. ಏಕಾಏಕಿ ಸುರಿದ ಭಾರೀ ಮಳೆಯಿಂದಾಗಿ ಜನರು ಚೆಲ್ಲಾಪಿಲ್ಲಿ. ಮತದಾನ ಮಾಡಲಾಗದೇ ಅಂಗಡಿಗಳು, ಬಸ್ ಸ್ಟ್ಯಾಂಡ್‌ಗಳಲ್ಲಿ ಆಸರೆ ಪಡೆದ ಜನರು. ಮತದಾನ ಕೇಂದ್ರಗಳಲ್ಲಿ ಇರುವ ಜನರು ಹೊರತು ಪಡಿಸಿ ಉಳಿದವರಿಗೆ ಮನೆಯಿಂದ ಹೊರಗೆ ಹೋಗಲು ಮಳೆ ಅಡ್ಡಿ. ಮತದಾನ ಮಾಡಲು ತೆರಳಲಾಗದೇ ಮನೆಗಳು ಹಾಗೂ ಕೆಲಸದ ಸ್ಥಳಗಳಲ್ಲೇ ಬಾಕಿಯಾದ ಮತದಾರರು.
ಬಳಿಕ ಭಟ್ಕಳ, ಶಿರಸಿಯಲ್ಲೂ ಕಾಣಿಸಿಕೊಂಡ ಮಳೆ. ಭಟ್ಕಳ ಹಾಗೂ ಶಿರಸಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಮಳೆಯಿಂದ ಅಂಗಡಿ, ಬಸ್‌ಸ್ಟ್ಯಾಂಡ್‌ಗಳಲ್ಲಿ ಆಸರೆ ಪಡೆದ ಜನರು. ಮಳೆಯಾದರೂ ಭಟ್ಕಳ ಹಾಗೂ ಶಿರಸಿಯಲ್ಲಿ ಮುಂದುವರಿದಿದೆ ಬಿರುಸಿದ ಮತದಾನ.
ಸಂಜೆ 5 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ: 75.92% ಮತದಾನ
5.00 ಗಂಟೆಯವರೆಗೆ ದಾಖಲಾದ ಮತದಾನದ ಶೇಕಡಾವಾರು ಬೆಂಗಳೂರು ಗ್ರಾಮಾಂತರ ಜಿಲ್ಲೆ: 75.92%
ಹೊಸಕೋಟೆ ವಿಧಾನಸಭಾ ಕ್ಷೇತ್ರ: 83.21%
ದೇವನಹಳ್ಳಿ ವಿಧಾನಸಭಾ ಕ್ಷೇತ್ರ: 76.08%
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: 75.23%
ನೆಲಮಂಗಲ ವಿಧಾನಸಭಾ ಕ್ಷೇತ್ರ: 68.08%
ಮತದಾನದ ಬಳಿಕೆ ಆಟೋ ಓಡಿಸಿದ ಡಿಕೆಶಿ
ಬೆಂಗಳೂರು (ಮೇ.10): ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾನ ಪ್ರಭುಗಳು ಬೆಳಗ್ಗಿನಿಂದಲೇ ಉತ್ಸಾಹದಿಂದ ಬಂದು ಮತದಾನ ಮಾಡಿದ್ದಾರೆ. ಕನಕಪುರದಲ್ಲಿ ಡಿಕೆ ಶಿವಕುಮಾರ್ ಮತದಾನ ಮಾಡಿವುದರ ಜೊತೆಗೆ ಆಟೋ ರಿಕ್ಷಾ ಓಡಿಸಿ ಸಂಭ್ರಮ ಪಟ್ಟಿದ್ದಾರೆ.
ಫೋಟೋಸ್‌ಗೆ ಇಲ್ಲಿ ಕ್ಲಿಕ್ಕಿಸಿ

ಮಂತ ಯಂತ್ರದಲ್ಲಿ ದೋಷ, ಜನರಿಂದ ಆಕ್ರೋಶ
ಮತಯಂತ್ರದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ- ಜನರಿಂದ ಆಕ್ರೋಶ. ಸುಮಾರು 1 ಗಂಟೆಗಳ ಕಾಲ ಸ್ಥಗಿತಗೊಂಡ ಮತದಾನ. ಹಳಿಯಾಳ ವಿಧಾನಸಭಾ ಕ್ಷೇತ್ರದ ಯಲ್ಲಾಪುರ ನಾಕಾ ಬಳಿಯ ಮತಗಟ್ಟೆ ಸಂಖ್ಯೆ 101ರಲ್ಲಿ ಘಟನೆ. ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ನಿರ್ಮಿಸಲಾಗಿದ್ದ ಮತಗಟ್ಟೆ. ಒಂದು ಗಂಟೆಯ ಕಾಲ ಮತಯಂತ್ರ ರಿಪೇರಿಗೆ ಯತ್ನಿಸಿ ಕೊನೆಗೆ ಬೇರೆ ಮತಯಂತ್ರದ ಮೂಲಕ ಮತದಾನ ಪ್ರಕ್ರಿಯೆ. ಮತದಾನ ಪ್ರಕ್ರಿಯೆ ತಡವಾಗಿ ನಡೆಯುತ್ತಿರುವುದರಿಂದ ಮತ್ತೆ 1 ಗಂಟೆಗಳ ಕಾಲ ಅವಕಾಶ ಕೊಡಬೇಕೆಂದು ಜನರ ಒತ್ತಾಯ. ಅಧಿಕಾರಿಗಳ ಎಡವಟ್ಟಿನಿಂದ ಮತಯಂತ್ರ ಹಾಳಾಗಿದ್ದು, ಜನರಿಗೆ ಮತ ಹಾಕಲು ಅವಕಾಶ ಸಿಗಲ್ಲ.20 ಸೆಕೆಂಡ್‌ಗೆ ಒಂದು ಓಟು ಬೀಳುತ್ತಿದ್ದು, ಮಳೆಯಾದಲ್ಲಿ ಜನರು ಓಟು ಹಾಕಲು ಹಿಂಜರಿಯುತ್ತಾರೆ. ನಿಗದಿತ ಸಮಯಕ್ಕಿಂತ ಒಂದು ಗಂಟೆ ಹೆಚ್ಚು ಸಮಯಾವಕಾಶ ನೀಡಿ ಮತದಾನ ಮಾಡಿಸಬೇಕೆಂದು ಜನರಿಂದ ಒತ್ತಾಯ.
ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿನ್ನೂ ಶೇ.41ರಷ್ಟು ಮತದಾನ
ಮಧ್ಯಾಹ್ನ 3 ಗಂಟೆ ವೇಳೆಗೆ ಬೆಂಗಳೂರಿನಲ್ಲಿ ಶೇಕಾಡ 41.43 ಮತದಾನ
ಬೆಂಗಳೂರು ಉತ್ತರ ಶೇಕಾಡ 40.21% ಮತದಾನ
ಬೆಂಗಳೂರು ದಕ್ಷಿಣ 40.21% ಮತದಾನವಾಗಿದೆ
ಬೆಂಗಳೂರು ಸೆಂಟ್ರಲ್ 40.75% ಮತದಾನವಾಗಿದೆ
ಬೆಂಗಳೂರು ಅರ್ಬನ್ 41.43% ಮತದಾನವಾಗಿದೆ
ಬೆಂಗಳೂರು ಕೇಂದ್ರ ದಕ್ಷಿಣ-41.79%
ಬಿಟಿಎಮ್ ಲೇಔಟ್ -39.67%
ಬಸವನಗುಡಿ-43.88%
ಬೊಮ್ಮನಹಳ್ಳಿ - 37.69%
ಗೋವಿಂದ ರಾಜ್ ನಗರ-40.47%
ಜಯನಗರ - 45.42%
ಪದ್ಮನಾಭ ನಗರ- 47.57%
ವಿಜಯನಗರ - 37.84%
ಬೆಂಗಳೂರು ಕೇಂದ್ರ ಉತ್ತರ-40.21%
ಸಿವಿ ರಾಮನ್‌ನಗರ - 34.87%
ಹೆಬ್ಬಾಳ - 42.07%
ಕೆಆರ್ ಪುರಂ - 38.51%
ಮಹಾಲಕ್ಷ್ಮಿ ಲೇಔಟ್ - 45.71%
ಮಲ್ಲೇಶ್ವರಂ - 42.35%
ಪುಲಕೇಶಿ ನಗರ್ - 39.72%
ಸರ್ವಜ್ಞ ನಗರ್ - 38.21%
ಬೆಂಗಳೂರು ಅರ್ಬನ್ ವಿಧಾನ ಸಭಾ ಕ್ಷೇತ್ರ - 42.96%
ಆನೇಕಲ್ - 45.36%
ಬೆಂಗಳೂರು ಸೌಥ್ - 40.31%
ಬ್ಯಾಟರಾಯನ ಪುರ - 42.12%
ದಾಸರಹಳ್ಳಿ - 40.08%
ಮಹಾದೇವ ಪುರ - 40.02%
ಯಲಹಂಕ - 45.08%
ಯಶವಂತ ಪುರ - 47.75%
ಬೆಂಗಳೂರು ಅರ್ಬನ್ ವಿಧಾನ ಸಭಾ ಕ್ಷೇತ್ರ - 42.96%
ಆನೇಕಲ್ - 45.36%
ಬೆಂಗಳೂರು ಸೌಥ್ - 40.31%
ಬ್ಯಾಟರಾಯನ ಪುರ - 42.12%
ದಾಸರಹಳ್ಳಿ - 40.08%
ಮಹಾದೇವ ಪುರ - 40.02%
ಯಲಹಂಕ - 45.08%
ಯಶವಂತ ಪುರ - 47.75%
ಬೆಂಗಳೂರು ಕೇಂದ್ರ - 40.75%
ಚಾಮರಾಜಪೇಟೆ - 38.9%
ಚಿಕ್ಕಪೇಟೆ - 42.4%
ಗಾಂಧಿನಗರ - 40.76%
ರಾಜಾಜೀನಗರ - 43.06%
ರಾಜರಾಜೇಶ್ವರಿ ನಗರ - 41.01%
ಶಾಂತಿ ನಗರ - 37.35%
ಶಿವಾಜಿನಗರ - 41.78%
ನಾರಾಯಣ ಗೌಡರ ವಿರುದ್ಧ ಹರಿಹಾಯ್ದ ಜೆಡಿಎಸ್ ಕಾರ್ಯಕರ್ತರು
ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಬಣ್ಣೇನಹಳ್ಳಿ ಗ್ರಾಮದಲ್ಲಿ ಘಟನೆ. ಕ್ಷೇತ್ರದಲ್ಲಿ ಮತದಾನ ಹೇಗೆ ನಡೆಯುತ್ತಿದೆ ಎಂದು ವೀಕ್ಷಣೆ ಮಾಡುತ್ತಿದ್ದ ನಾರಾಯಣಗೌಡ. ಹಾಗೆಯೇ ಬಣ್ಣೇನಹಳ್ಳಿ ಗ್ರಾಮಕ್ಕೆ ತೆರಳಿದ್ದ ನಾರಾಯಣಗೌಡ. ನಾರಾಯಣಗೌಡಗೆ ಜೆಡಿಎಸ್ ಕಾರ್ಯಕರ್ತರಿಂದ ಅವಾಚ್ಯಶಬ್ಧಗಳಿಂದ ನಿಂದನೆ. ಇಲ್ಲಿಗೆ ಯಾಕೆ ಬಂದಿದ್ದೀಯಾ ಎಂದು ನಾರಾಯಣಗೌಡಗೆ ಪ್ರಶ್ನೆ ಮಾಡಿದ ಜೆಡಿಎಸ್ ಕಾರ್ಯಕರ್ತರು.ನಾನ್ ಯಾಕೆ ಬರಬಾರದು ಹೇಳಿ ಎಂದ ನಾರಾಯಣಗೌಡ. ಈ ವೇಳೆ ನಾರಾಯಣಗೌಡಗೆ ಏಕವಚನದಿಂದ ಮಾತನಾಡಿದ ಜೆಡಿಎಸ್ ಕಾರ್ಯಕರ್ತರು.
ಮರ್ಯಾದೆ ಕೊಟ್ಟು ಮತಾಡಿ ಎಂದ ನಾರಾಯಣಗೌಡಗೆ ಅವಾಚ್ಯ ಶಬ್ಧಗಳಿಂದ ನಿಂದನೆ. ಬಳಿಕ ಸ್ಥಳದಲ್ಲಿ ಇಬ್ಬರ ನಡುವೆ ನಡೆದ ನೂಕಾಟ ತಳ್ಳಾಟ. ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು, ಸಚಿವರ ಅಂಗರಕ್ಷಕರು.
ಉತ್ತರ ಕನ್ನಡ ಎಂಪಿ ಅನಂತ್ ಕುಮಾರ್ ಮತದಾನ
ಚುನಾವಣೆ ವೇಳೆ ಎಲ್ಲಿಯೂ ಸದ್ದು ಮಾಡದ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ತಮ್ಮ ಪತ್ನಿಯೊಂದಿಗೆ ಬಂದು ಮತ ಚಲಾಯಿಸಿದ್ದಾರೆ.

ಬಿಬಿಎಂಪಿ ವೋಟರ್ ಲಿಸ್ಟ್ ನಲ್ಲಿ ಕೆಲವರ ಹೆಸರಿನ ಮೇಲೆ ಡಿಲೀಟ್!
ಬಿಬಿಎಂಪಿ ವೋಟರ್ ಲಿಸ್ಟ್ ನಲ್ಲಿ ಕೆಲವರ ಹೆಸರಿನ ಮೇಲೆ ಡಿಲೀಟ್ ಆಗಿದ್ದು, ವೋಟರ್ ಲಿಸ್ಟ್‌ನಲ್ಲಿ ಹೆಸರಿನ ಮೇಲೆ ಡಿಲೀಟ್ ಸೀಲ್ ಒತ್ತಲಾಗಿದೆ. ವೋಟರ್ ಕಾರ್ಡ್ ಇದ್ರೂ ಮತ ಚಲಾವಣೆ ಮಾಡಕ್ಕಾಗ್ತಿಲ್ಲ. ಒಂದೇ ಕುಟುಂಬದ ಸದಸ್ಯರು, ಸಂಬಂಧಿಕರ ಅಳಲು. ಚಿಕ್ಕಪೇಟೆ ಕ್ಷೇತ್ರದಲ್ಲಿ ಬೂತ್ ನಂ 88, 87 ರಲ್ಲಿ ಮತದಾರರ ಅಳಲು. 30 ವರ್ಷಗಳಿಂದ ಬೆಂಗಳೂರು ನಿವಾಸಿ ಆಗಿರುವ ಮತದಾರರು. ಕಳೆದ ಸಲ ಮತ ಚಲಾಯಿಸಿದ್ದು, 50ಕ್ಕೂ ಹೆಚ್ಚು ಮತದಾರರ ಹೆಸರುಡಿಲೀಟ್ ಆವೆ. ನಾವು ಇಲ್ಲಿಂದ ಎಲ್ಲಿಗೂ ಶಿಫ್ಟ್ ಆಗಿಲ್ಲ. ನಮ್ಮ ಮನೆಯವರಯ ಮನೆ ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲಿ ಯಾರು ಸತ್ತು ಹೋಗಿಲ್ಲ. ಹಾಗಿದ್ರೆ ಯಾಕೆ ಟಿಲಿಟ್ ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಿರುವ ಶಂಕರಪುರಂ ನಿವಾಸಿಗಳು. ಬೆಳಗ್ಗೆಯಿಂದ ಮತದಾನ ಮಾಡಲು ಪರದಾಟುತ್ತಿರುವ ಶಂಕರಪುರನ ಕೆಲ ನಿವಾಸಿಗಳು.
ಹರದನಹಳ್ಳಿಯಲ್ಲಿ ಮತ ಚಲಾಯಿಸಿದ ಮಾಜಿ ಪ್ರಧಾನಿ ಎಚ್ಡಿ. ದೇವೇಗೌಡ
ಹಾಸನದ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಪತ್ನಿ ಚನ್ನಮ್ಮ ಅವರೊಟ್ಟಿಗೆ ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದು, ಇಷ್ಟು ಸಣ್ಣ ಹಳ್ಳಿ ಈ ಮಟ್ಟಿಗೆ ಅಭಿವೃದ್ಧಿ ಹೊಂದಿದೆ ಅಂದ್ರೆ ಶಾಸಕ ಎಚ್.ಡಿ.ರೇವಣ್ಣ ಅವರ ಪರಿಶ್ರಮವೇ ಕಾರಣವೆಂದು ಹೇಳಿದ್ದಾರೆ.
ಇವಿಎಂ ತಾಂತ್ರಿಕ ದೋಷ, ಕೆಲವೆಡೆ ಮತದಾನ ಸ್ಥಗಿತ
ಸುಮಾರು ಶೇ.40ರಷ್ಟು ಮತದಾನವಾಗಿದ್ದು, ಎಲ್ಲೆಲ್ಲಿ ಎಷ್ಟು ಮತದಾನವಾಗಿದೆ?
9 ಗಂಟೆಯ 9:00 AM 11.AM 1PM
ಕರ್ನಾಟಕ 8.11 20.94 37.25
ಬಾಗಲಕೋಟೆ ಶೇ. 8.5 23.44 40.87
ಬೆಳಗಾವಿ ಶೇ. 7.52 20.76 37.48
ಬಳ್ಳಾರಿ 8.84 2356 39.74
ಬೀದರ್ 7.64 20.54 37.11
ವಿಜಯಪುರ 8.36 20.66 36.55
ಚಾಮರಾಜನಗರ 2.51 16.77 30.63
ಚಿಕ್ಕಬಳ್ಳಾಪುರ 9.18 21.46 40.15
ಚಿಕ್ಕಮಗಳೂರು 8.68 22.29 41
ಚಿತ್ರದುರ್ಗ 6.08 18.56 36.41
ದ.ಕನ್ನಡ 12.47 28.46 38.64
ದಾವಣಗೆರೆ 7.04 21.32 36.14
ಧಾರವಾಡ 8.48 20.82 38.98
ಗದಗ 7.25 21.14 32.69
ಗುಲ್ಬರ್ಗ 7.3 17.69 40.84
ಹಾಸನ 9.03 22.18 36.74
ಹಾವೇರಿ 6.49 19.44 36.74
ಕೊಡಗು 11.94 26.49 45.64
ಕೋಲಾರ 7.4 19.87 36.87
ಕೊಪ್ಪಳ 7.64 21.46 39.94
ಮಂಡ್ಯ 7.49 19.52 39.38
ಮೈಸೂರು 5.83 19.34 36.73
ರಾಯಚೂರು 6.97 22.48 38.2
ರಾಮನಗರ 8.57 25.21 42.52
ಶಿವಮೊಗ್ಗ 8.61 22.75 41.02
ತುಮಕೂರು 7.82 22.06 40.6
ಉಡುಪಿ 13.28 30.26 47.09
ಉತ್ತರ ಕನ್ನಡ 9.87 25.46 42.43
ವಿಜಯನಗರ 6.82 21.07 39.56
ಯಾದಗಿರಿ 5.33 18.84 35.68
ಚಾಮರಾಜಪೇಟೆ 6.88 15.86 28.33
ಚಿಕ್ಕಪೇಟೆ 7.35 17.95 30.84
ಗಾಂಧಿನಗರ 7.71 17.44 28.65
ರಾಜಾಜಿನಗರ 8.59 19.82 32.41
ರಾಜರಾಜೇಶ್ವರಿ ನಗರ 7.95 17.41 31.72
ಶಾಂತಿ ನಗರ 9 15.47 25.86
ಶಿವಾಜಿನಗರ 7.8 17.04 29.75
ಸಿ.ವಿ ರಾಮನ್ ನಗರ 4.83 15.05 26.85
ಹೆಬ್ಬಾಳ 5.4 19.93 32.96
ಕೆ.ಆರ್ ಪುರ 9.48 18.73 29.43
ಮಹಾಲಕ್ಷ್ಮೀ ಲೇಔಟ್ 9.46 20.01 34.26
ಮಲ್ಲೇಶ್ವರಂ 9.9 20.75 32.08
ಪುಲಿಕೇಶಿ ನಗರ 6.8 17.92 28.65
ಸರ್ವಜ್ಞ ನಗರ 6 14.94 25.08
ಬಿಟಿಎಂ ಲೇಔಟ್ 8.6 17.06 29.79
ಬಸವನಗುಡಿ 8.79 18.51 33.34
ಬೊಮ್ಮನಹಳ್ಳಿ 8 17.64 30.72
ಗೋವಿಂದ ರಾಜನಗರ 8.08 18.61 30.72
ಜಯನಗರ 9.92 20.11 34.82
ಪದ್ಮನಾಭ ನಗರ 8.73 22.73 33.57
ವಿಜಯನಗರ 14 15.92 27.3
ದೇವನಹಳ್ಳಿ 6.36 18.24 36.83
ದೊಡ್ಡ ಬಳ್ಳಾಪುರ 6.22 18.37 36.52
ಹೊಸಕೋಟೆ 10.16 24.95 43.46
ನೆಲಮಂಗಲ 7.9 18.94 38.53
ಆನೇಕಲ್ 6.8 13.4 29.98
ಬೆಂಗಳೂರು ದಕ್ಷಿಣ 7.9 16.49 28.81
ಬ್ಯಾಟರಾಯನಪುರ 10.45 17.42 29.57
ದಾಸರಹಳ್ಳಿ 7.38 15.24 29.05
ಮಹಾದೇವಪುರ 13 16.54 29.23
ಯಲಹಂಕ 8.37 18.66 33.12
ಯಶವಂತಪುರ 8.83 19.84 35.33
ಮತಯಂತ್ರ ಒಡೆದು ಪುಡಿಗಟ್ಟಿದ ಗ್ರಾಮಸ್ಥರು: ಚುನಾವಣಾಧಿಕಾರಿ ಕಾರು ಉರುಳಿಸಿ ಆಕ್ರೋಶ
ಮತದಾನ ಮಾಡುವುಕ್ಕಾಗಿ ತರಲಾಗಿದ್ದ ಮತಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ಇವಿಎಂ ಮಶೀನ್ ಹಾಗೂ ವಿವಿಪ್ಯಾಟ್ ಮಶೀನ್‌ಗಳನ್ನ ಒಡೆದು ಹಾಕಿದ ಗ್ರಾಮಸ್ಥರು. ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರ್ತಿದ್ದಾಗ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿದ ಗ್ರಾಮಸ್ಥರು. ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ ಗ್ರಾಮಸ್ಥರು. ಸಿಬ್ಬಂದಿಗಳಿಗು ಥಳಿತ, ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಎಲ್ಲೆಲ್ಲಿ, ಎಷ್ಟಾಯಿತು ಮತದಾನ?
ರಾಮನಗರ: ಜಿಲ್ಲೆಯಲ್ಲಿ ಬೆಳಗ್ಗೆ 01 ಗಂಟೆ ವರೆಗೆ ಶೇ.41.89 ರಷ್ಟು ಮತದಾನ ಆಗಿದೆ. ಮಾಗಡಿ ಕ್ಷೇತ್ರದಲ್ಲಿ 44.21, ರಾಮನಗರ ಕ್ಷೇತ್ರದಲ್ಲಿ 45, ಕನಕಪುರ ಕ್ಷೇತ್ರದಲ್ಲಿ 37.15, ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ 41.21 ರಷ್ಟು ಮತದಾನ ನಡೆದಿದೆ
ವಿಧಾನಸಭಾ ಸಾರ್ವತ್ರಿಕ ಚುನಾವಣೆ-ವಿಜಯನಗರ ಜಿಲ್ಲೆ
ಜಿಲ್ಲೆಯಲ್ಲಿ ಒಟ್ಟು ಶೇ.21.21ರಷ್ಟು ಮತದಾನ. ಬೆಳಿಗ್ಗೆ 11 ಗಂಟೆಯವರೆಗೂ ನಡೆದ ಶೇಕಡಾವಾರು ಮತದಾನ ಪ್ರಮಾಣ. 88-ಹೂವಿನಹಡಗಲಿ ಶೇ.19.64. 89-ಹಗರಿಬೊಮ್ಮನಹಳ್ಳಿ ಶೇ.19.14
90-ವಿಜಯನಗರ ಶೇ.23.95. 96-ಕೂಡ್ಲಿಗಿ ಶೇ.20.75. 104-ಹರಪನಹಳ್ಳಿ ಶೇ.22.15. ಒಟ್ಟು ಜಿಲ್ಲೆಯಾದ್ಯಂತ ಇದುವರೆಗೂ 2,31,629 ಜನ ಮತಚಲಾಯಿಸಿದ್ದಾರೆ
ಬೆಳಗಾವಿಯಲ್ಲಿ ಶೇ.37ರಷ್ಟು ಮತದಾನವಾಗಿದೆ. ಮಧ್ಯಾಹ್ನ 1:00 ಗಂಟೆವರೆಗೆ ಶೇಕಡ 40.35% ರಷ್ಟು ಮತದಾನ
ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ವಿಧಾನಸಭೆಗೆ ಜಿಲ್ಲೆಯಾದ್ಯಂತ ಇಂದು ಬಿರುಸಿನ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1:00 ಗಂಟೆಯವರೆಗೆ 40.35% ರಷ್ಟು ಮತ ಚಲಾವಣೆಯಾಗಿದೆ. ವಿಧಾನಸಭಾ ಕ್ಷೇತ್ರವಾರು, ಗೌರಿಬಿದನೂರು-38.87%, ಬಾಗೇಪಲ್ಲಿ-43.37%, ಚಿಕ್ಕಬಳ್ಳಾಪುರ-42.77%, ಶಿಡ್ಲಘಟ್ಟ-37.97%, ಚಿಂತಾಮಣಿ-42.00%
ಧಾರವಾಡ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನ ವಿವರ. ಮಧ್ಯಾಹ್ನ 1 ಗಂಟೆಯವರೆಗೆ ಆಗಿರುವ ಶೇಕಡಾವಾರು ಮತದಾನ ವಿವರ:
69 ನವಲಗುಂದ ವಿಧಾನಸಭಾ ಮತಕ್ಷೇತ್ರ ಶೇ. 35.08
70 ಕುಂದಗೋಳ ವಿಧಾನಸಭಾ ಮತಕ್ಷೇತ್ರ ಶೇ. 35.28
71 ಧಾರವಾಡ ವಿಧಾನಸಭಾ ಮತಕ್ಷೇತ್ರ ಶೇ.38.61
72 ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇಯ ಶೇ.32
73 ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ಶೇ. 34.68
74 ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ಶೇ. 35.74
75 ಕಲಘಟಗಿ ವಿಧಾನಸಭಾ ಮತಕ್ಷೇತ್ರ ಶೇ.33
ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ನಡೆದಿರುವ ಸರಾಸರಿ ಮತದಾನ ಶೇ. 35.06
ಮೋದಿ ಅಭಿವೃದ್ಧಿ, ದೇಶದ ಭದ್ರತೆಗೆ ಜನರ ವೋಟು: ಕುಮಾರ್ ಬಂಗಾರಪ್ಪ
ಸೊರಬ ತಾಲೂಕಿನ ಕುಮಟೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ಹೇಳಿಕೆ. ಸೊರಬ ಕ್ಷೇತ್ರದಲ್ಲಿ ತಾವು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕುಮಾರ ಬಂಗಾರಪ್ಪ . ಸೊರಬ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನನ್ನ ಕೈ ಹಿಡಿಯಲಿದೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಅಭ್ಯರ್ಥಿ ಕೇವಲ ನೈಟ್ ಶೋ ನಡೆಸುತ್ತಾರೆ. ನಮ್ಮದು ಡೇ ಶೋ. ತೋಳ್ಬಲದಿಂದ ಹಣ ಹಂಚಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಬರೆದಿರುವ ಪತ್ರವೇ ಸಾಕ್ಷಿ. ಮೋದಿಯವರ ಅಭಿವೃದ್ಧಿ ಕಾರ್ಯಗಳು ಹಾಗೂ ದೇಶದ ಭದ್ರತೆ ಜನ ಮತದಾನ ಮಾಡುತ್ತಾರೆ