ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಕ್ಷಾ ವರದಿಗಳು ಪ್ರಕಟಗೊಂಡಿದೆ. ಚುನಾವಣೋತ್ತರ ವರದಿಯಲ್ಲಿ ಎರಡು ಸಂಸ್ಥೆಗಳು ಪ್ರಮುಖವಾಗಿ ಕಾಂಗ್ರೆಸ್‌ಗೆ ಅಭೂತಪೂರ್ವ ಗೆಲುವು ಸಾಧಸಲಿದೆ ಎಂದಿದೆ. 

ಬೆಂಗಳೂರು(ಮೇ.10): ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಚುನಾವಣೋತ್ತರ ಸಮೀಕ್ಷಾ ವರದಿ. 5 ಪ್ರಮುಖ ಸಮೀಕ್ಷಾ ಎಜೆನ್ಸಿಗಳು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರಲಿದೆ ಎಂದಿದೆ. ಇದರಲ್ಲಿ ಚಾಣಾಕ್ಯ , ಇಂಡಿಯಾ ಟುಡೆ ಸೇರಿದಂತೆ ಮೂರು ಸಂಸ್ಥೆಗಳು ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದಿದೆ. ಇಂಡಿಯಾ ಟುಡೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ 122 ರಿಂದ 140 ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂದಿದೆ.

ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ 122ರಿಂದ 140 ಸ್ಥಾನ ಗೆಲ್ಲಲಿದೆ. ಕರ್ನಾಟಕದಲ್ಲಿ ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ನಂಬರ್ 113. ಹೀಗಾಗಿ ಕಾಂಗ್ರೆಸ್ ಭರ್ಜರಿ ಗೆಲುವಿನೊಂದಿಗೆ ಸರ್ಕಾರ ರಚಿಸಲಿದೆ ಎಂದು ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಹೇಳಿದೆ. ಇತ್ತ ಬಿಜೆಪಿ 62 ರಿಂದ 80 ಸ್ಥಾನಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. 2018ರ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 104 ಸ್ಥಾನ ಗೆದ್ದಿತ್ತು. ಬಳಿಕ ಆಪರೇಶನ್ ಕಮಲ ಮೂಲಕ 117 ಸ್ಥಾನಕ್ಕೆ ಹಿಗ್ಗಿಸಿಕೊಂಡಿತ್ತು. ಈ ಸಂಖ್ಯೆ ಈ ಚುನಾವಣೆಯಲ್ಲಿ ಬಿಜೆಪಿ 122ರಿಂದ 140 ಸ್ಥಾನ.

Karnataka Elections 2023 LIVE: ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ...

ಇಂಡಿಯಾ ಟುಡೆ ಚುನಾವಣೋತ್ತರ ಸಮೀಕ್ಷೆ
ಕಾಂಗ್ರೆಸ್: 122 ರಿಂದ 140 ಸ್ಥಾನ
ಬಿಜೆಪಿ: 62 ರಿಂದ 80 ಸ್ಥಾನ
ಜೆಡಿಎಸ್:20 ರಿಂದ 25 ಸ್ಥಾನ
ಇತರರು:0-3 ಸ್ಥಾನ

ಇತ್ತ ಚಾಣಾಕ್ಯ ಚುನಾವಣೋತ್ತರ ಸಮೀಕ್ಷೆಯಲ್ಲೂ ಕಾಂಗ್ರೆಸ್ ಸ್ಪಷ್ಟ ಬಹುಮತ ನೀಡಿದೆ. ಕಾಂಗ್ರೆಸ್ ಈ ಬಾರಿ 120 ಸ್ಥಾನ ಗೆಲ್ಲುವ ಮೂಲಕ ಅಧಿಕಾರಕ್ಕೇರಲಿದೆ ಎಂದಿದೆ. ಕರ್ನಾಟಕದ ಬಹುತೇಕ ಬಾಗದಲ್ಲಿ ಆಡಳಿತ ವಿರೋಧಿ ಅಲೆ ಬಿಜೆಪಿಗೆ ಮುಳುವಾಗಲಿದೆ ಎಂದಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 80 ಸ್ಥಾನ ಗೆದ್ದುಕೊಂಡಿತ್ತು. ಇತ್ತ ಬಿಜೆಪಿ ಸ್ಥಾನ 92 ಸ್ಥಾನಕ್ಕೆ ಕುಸಿಯಲಿದೆ ಎಂದು ಚಾಣಾಕ್ಯ ಚುನಾವಣೋತ್ತರ ಸಮೀಕ್ಷೆಯಲ್ಲಿ ಹೇಳಿದೆ. ಇನ್ನು ಜೆಡಿಎಸ್ 12 ಸ್ಥಾನಕ್ಕೆ ಕುಸಿಯಲಿದೆ ಎಂದಿದೆ. ಇತರರು ಗೆಲ್ಲುವ ಸಾಧ್ಯತೆಯನ್ನು ಚಾಣಾಕ್ಯ ಸಮೀಕ್ಷೆ ತಳ್ಳಿ ಹಾಕಿದೆ.

KARNATAKA ASSEMBLY ELECTION EXIT POLL ಈ ಭಾರಿಯ ನಿರ್ಧಾರವೂ ಅತಂತ್ರವೇ? ಯಾರಿಗೂ ಇಲ್ಲ ಬಹುಮತ!

ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಿದೆ. ಮೇ.13 ರಂದು ಫಲಿತಾಂಶ ಹೊರಬೀಳಲಿದೆ. ಯಾರು ಗೆಲುವು ಸಾಧಿಸುತ್ತಾರೆ? ಅನ್ನೋ ಸ್ಪಷ್ಟ ಚಿತ್ರ ಫಲಿತಾಂಶದ ದಿನ ಸಿಗಲಿದೆ. ಸ್ಪಷ್ಟ ಬಹುಮತ ಬಂದರೆ ಸುಗಮವಾಗಿ ಸರ್ಕಾರ ರಚನೆಯಾಗಲಿದೆ. ಆದರೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಯಾರು ಸರ್ಕಾರ ರಚಿಸಲಿದ್ದಾರೆ ಅನ್ನೋ ಕುತೂಹಲ ಕೆಲ ದಿನ ಮುಂದುವರಿಯಲಿದೆ.