Asianet Suvarna News Asianet Suvarna News

ಮಸಾಲಾ ಜಯರಾಂ ಸಚಿವರಾಗುವುದು ನಿಶ್ಚಿತ: ರಾಜ್ಯಸಭಾ ಸದಸ್ಯ ಜಗ್ಗೇಶ್‌

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿರುವ ಮಸಾಲಾ ಜಯರಾಮ್‌ ಅವರನ್ನು ಈ ಕ್ಷೇತ್ರದಲ್ಲಿ ಜಯಶೀಲರನ್ನಾಗಿಸಿದರೆ ಅವರು ಸಚಿವರಾಗಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್‌ ಹೇಳಿದರು. 

Karnataka Election 2023 Masala Jayaram is sure to become the minister Says Jaggesh gvd
Author
First Published Apr 29, 2023, 9:02 PM IST

ತುರುವೇಕೆರೆ (ಏ.29): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿರುವ ಮಸಾಲಾ ಜಯರಾಮ್‌ ಅವರನ್ನು ಈ ಕ್ಷೇತ್ರದಲ್ಲಿ ಜಯಶೀಲರನ್ನಾಗಿಸಿದರೆ ಅವರು ಸಚಿವರಾಗಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್‌ ಹೇಳಿದರು. ತಾಲೂಕಿನ ದುಂಡ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಕಳೆದ 50 ವರ್ಷಗಳ ಹಿಂದೆ ತಾಳ್ಕೆರೆ ಸುಬ್ರಹ್ಮಣ್ಯಂ ಅವರಿಗೆ ಮಂತ್ರಿಸ್ಥಾನ ದೊರಕಿತ್ತು. ತದ ನಂತರ ಮಂತ್ರಿ ಪದವಿ ದೊರತೇ ಇಲ್ಲ. ಈ ನೋವನ್ನು ಸರಿಪಡಿಸುವ ಕಾಲ ಸನ್ನಿಹಿತವಾಗಿದೆ. 

ಈ ಬಾರಿ ಮಸಾಲಾ ಜಯರಾಮ್‌ ಅವರನ್ನು ಈ ಕ್ಷೇತ್ರದ ಜನರು ಇಪ್ಪತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸುವುದು ನೂರಕ್ಕೆ ನೂರು ಖಚಿತ. ಹಾಗೆಯೇ ಅವರು ಮಂತ್ರಿಯಾಗುವುದೂ ಖಚಿತ ಎಂದು ಜಗ್ಗೇಶ್‌ ಹೇಳಿದರು. ಶಾಸಕ ಮಸಾಲಾ ಜಯರಾಮ್‌ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೇ ಅತ್ಯಂತ ಸಂತಸವಾಗುತ್ತದೆ. ಅಭಿವೃದ್ಧಿ ಪರ ಚಿಂತನೆಯುಳ್ಳ ಮಸಾಲಾ ಜಯರಾಮ್‌ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಕಾರ್ಯಕರ್ತರು ಹೋರಾಟ ಮಾಡಬೇಕೆಂದು ಮನವಿ ಮಾಡಿಕೊಂಡರು. ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರ ದೂರದೃಷ್ಟಿಚಿಂತನೆಯ ಫಲವಾಗಿ ದೇಶದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂಬುದನ್ನು ಮರೆಯಬಾರದು ಎಂದರು.

ಕಾಂಗ್ರೆಸ್‌ ನೀಡಿದ್ದ ಅನುದಾನ ಇಳಿಸಿದ್ದು ಎಚ್‌ಡಿಕೆ: ಜಮೀರ್‌ ಅಹಮದ್‌ ಖಾನ್‌

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಈ ಹಿಂದೆ ರಾಜ್ಯವನ್ನಾಳಿದ ಕಾಂಗ್ರೆಸ್‌ ಕೇವಲ ಓಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ. ಇನ್ನೊಂದೆಡೆ ಜೆಡಿಎಸ್‌ ಕುಟುಂಬ ರಾಜಕಾರಣ ಮಾಡುವ ಮೂಲಕ ಜನಹಿತ ಮರೆತಿತ್ತು ಎಂಬುದು ನಿಮಗೆಲ್ಲಾ ತಿಳಿದಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಸರ್ವಜನಿಕರ ಹಿತ ಕಾಪಾಡಿದೆ. ತುರುವೇಕೆರೆ ಕ್ಷೇತ್ರದಿಂದ ಮಸಾಲಾ ಜಯರಾಮ್‌ ಅವರನ್ನು ಹೆಚ್ಚು ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಶಾಸಕ ಮಸಾಲಾ ಜಯರಾಮ್‌ ಮಾತನಾಡಿ, ಯಡಿಯೂರಪ್ಪನವರ ಆಶೀರ್ವಾದದಿಂದಲೇ ತಾವು ಶಾಸಕನಾಗಿದ್ದು, ನಾನು ಇನ್ನು ಹತ್ತು ಜನ್ಮ ಎತ್ತಿದರೂ ಅವರ ಋುಣ ತೀರಿಸಲು ಸಾಧ್ಯವಿಲ್ಲ. ಈ ಬಾರಿಯೂ ಸಹ ಅವರ ಆಶೀರ್ವಾದದಿಂದಲೇ ಮತ್ತೆ ಶಾಸಕನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವೀರಶೈವ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳು ನನ್ನ ಜೊತೆಯಲ್ಲಿದ್ದು, ಮತ್ತೆ ಶಾಸಕನಾಗಿ ಅವರ ಸೇವೆ ಮಾಡುವೆ. ಈಗಾಗಲೇ 1500 ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೆ ಶಾಸಕನಾಗಿ ಕ್ಷೇತ್ರವನ್ನು ಮತ್ತಷ್ಟುಅಭಿವೃದ್ಧಿಪಡಿಸುವೆ ಎಂಬ ಭರವಸೆ ನೀಡಿದರು.

ಈ ವೇಳೆ ಸಂಸದ ಜಿ.ಎಸ್‌. ಬಸವರಾಜು, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಮೃತ್ಯುಂಜಯ, ಮಾಜಿ ಶಾಸಕ ನಂಜೇಗೌಡ, ಜಿ.ಪಂ. ಮಾಜಿ ಸದಸ್ಯ ಉಗ್ರಯ್ಯ, ವೀರಶೈವ ಸಮಾಜದ ಮುಖಂಡ ಕುಮಾರಸ್ವಾಮಿ, ನಿಕಟಪೂರ್ವ ಮಂಡಲಾಧ್ಯಕ್ಷ ದುಂಡರೇಣುಕಯ್ಯ, ಗ್ರಾ.ಪಂ. ಸದಸ್ಯ ನವೀನ್‌ ಮತ್ತಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಶಾಸಕ ಮಸಾಲಾ ಜಯರಾಮ್‌ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ಅತ್ಯಂತ ಸಂತಸವಾಗುತ್ತದೆ. ಅಭಿವೃದ್ಧಿ ಪರ ಚಿಂತನೆಯುಳ್ಳ ಮಸಾಲಾ ಜಯರಾಮ್‌ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಲು ಕಾರ್ಯಕರ್ತರು ಹೋರಾಟ ಮಾಡಬೇಕು. ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರ ದೂರದೃಷ್ಟಿಚಿಂತನೆಯ ಫಲವಾಗಿ ದೇಶದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ
-ಜಗ್ಗೇಶ್‌, ರಾಜ್ಯಸಭಾ ಸದಸ್ಯ, ನಟ

ನನ್ನ ಸ್ಪರ್ಧೆ​ಯಿಂದ ಡಿಕೆಶಿ ಕುಟುಂಬಕ್ಕೆ ಭಯ: ಸಚಿವ ಅ​ಶೋಕ್‌

ಕಾಂಗ್ರೆಸ್‌ ಕೇವಲ ಓಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ. ಇನ್ನೊಂದೆಡೆ ಜೆಡಿಎಸ್‌ ಕುಟುಂಬ ರಾಜಕಾರಣ ಮಾಡುವ ಮೂಲಕ ಜನಹಿತ ಮರೆತಿತ್ತು ಎಂಬುದು ನಿಮಗೆಲ್ಲಾ ತಿಳಿದಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನಪರ ಕಾಳಜಿಯ ಯೋಜನೆ ಜಾರಿಗೊಳಿಸಿ ವಿಶ್ವಾಸ ಉಳಿಸಿಕೊಂಡಿದೆ
-ಭಗವಂತ ಖೂಬಾ, ಕೇಂದ್ರ ಸಚಿವ

Follow Us:
Download App:
  • android
  • ios