ಬಿಜೆಪಿ ತನ್ನದೇ ಪಕ್ಷದ ನಾಯಕರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದಕ್ಕೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಉತ್ತಮ ಉದಾಹರಣೆ, ಇನ್ನು ಬಿಜೆಪಿ ಬಿಟ್ಟು ಬರಲು ಯಡಿಯೂರಪ್ಪ ಮಾತ್ರ ಬಾಕಿ ಉಳಿದಿರುವುದು ಎಂದು ಮಾಜಿ ಸಚಿವ, ಕಾಂಗ್ರೆಸ್‌ ರಾಜ್ಯ ವಕ್ತಾರ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಕಲಬುರಗಿ (ಏ.18): ಬಿಜೆಪಿ ತನ್ನದೇ ಪಕ್ಷದ ನಾಯಕರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದಕ್ಕೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಉತ್ತಮ ಉದಾಹರಣೆ, ಇನ್ನು ಬಿಜೆಪಿ ಬಿಟ್ಟು ಬರಲು ಯಡಿಯೂರಪ್ಪ ಮಾತ್ರ ಬಾಕಿ ಉಳಿದಿರುವುದು ಎಂದು ಮಾಜಿ ಸಚಿವ, ಕಾಂಗ್ರೆಸ್‌ ರಾಜ್ಯ ವಕ್ತಾರ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪನವರು ಆಗಿರುವ ಅನ್ಯಾಯ ಸಹಿಸಿಕೊಂಡು ಅದ್ಯಾಕೆ ಇನ್ನೂ ಅಲ್ಲೇ ಇದ್ದಾರೋ ಗೊತ್ತಿಲ್ಲ,

ಬಿಜೆಪಿಯನ್ನು ಬೇರು ಮಟ್ಟದಲ್ಲಿ ಕಟ್ಟಿ ಬೆಳೆಸಿದ ಮುಖಂಡರನ್ನೇ ಈ ರೀತಿ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಬಳಸಿ ಬಿಸಾಕೋದೇ ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಚರ್‌, ಬಿಜೆಪಿನಲ್ಲಿ ಅಡ್ವಾನಿ ಜೋಶಿ ಅಟಲ್‌ ಬಿಹಾರಿ ವಾಜಪೇಯಿ ಅವರ ಫೋಟೋ ಕಾಣಿಸುತ್ತಿದ್ದವು, ಈಗ ಆ ಫೋಟೋಗಳು ಕಾಣಲು ಸಿಗುತ್ತವೆಯೇ? ಬಿಜೆಪಿಯ ಟಾಪ್‌ ಲೀಡರ್ಶಿಪ್‌ ಮುಗಿಸಲು ಕುತಂತ್ರ ನಡೆಯುತ್ತಿದೆ ಎಂದರು. ಬಿಜೆಪಿಯವರ ಬ್ಯಾಲೆಟ್‌ ಪೇಪರ್‌ ಮೂಲಕ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂದ್ರೆ ಇದೆನಾ ? ಲಿಂಗಾಯಿತರ ಓಟ್‌ ಬೇಕಾದಾಗ ಇದೇ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಿದ್ದರು. 

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ 10 ಸೀಟು ಹೆಚ್ಚು ಗೆಲುವು: ಡಿ.ಕೆ.ಶಿವಕುಮಾರ್

ಯಡಿಯೂರಪ್ಪನವರನ್ನು ಯಾಕೆ ಸಿಎಂ ಸ್ಥಾನದಿಂದ ಕೆಳಗಿಳಿದ್ರು ಅಂತ ಈಗಲೂ ಹೇಳಿಲ್ಲ. ಇದೀಗ ಮೋದಿ ಜಾತ್ರೆಯಲ್ಲಿ ಗೆಳೆಯನ ಕೈ ಹಿಡಿದುಕೊಂಡು ತಿರುಗಿದಂತೆ ಯಡಿಯೂರಪ್ಪರೊಂದಿಗೆ ನಡೆದುಕೊಳ್ಳುತ್ತಿದ್ದಾರೆಂದರು. ಗುಜರಾತ್‌ ಮಾಡೆಲ್‌ ಅಂತ ಕರ್ನಾಟಕದಲ್ಲಿ ಬಿಜೆಪಿ ಬದಲಾವಣೆಗೆ ಮುಂದಾಗಿದೆ. ಬಿಜೆಪಿಯವರು ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಮನಗಂಡೇ ಈ ರೀತಿ ಬದಲಾವಣೆ ಮಾಡುತ್ತಿದ್ದಾರೆ. ಇದು ಕರ್ನಾಟಕ , ನೀವು ಹೇಳಿದ್ದೆಲ್ಲ ಇಲ್ಲಿ ನಡೆಯೋದಿಲ್ಲ, ಅದಕ್ಕಾಗಿಯೇ ಇಷ್ಟೊಂದು ರಾಜೀನಾಮೆಗಳಾಗುತ್ತಿರುವುದು, ಈಗಾಗಲೇ ಬಿಜೆಪಿಯವರು ಎಲೆಕ್ಷನ್‌ ಸೋಲುತ್ತಿರುವುದನ್ನು ಒಪ್ಪಿಕೊಂಡಿದ್ದಾರೆಂದು ಛೇಡಿಸಿದರು.

ಚಾಮರಾಜನಗರ ಟಿಕೆಟ್‌ ಆಕಾಂಕ್ಷಿಗಳ ಬಂಡಾಯ ಶಮನ: ಸಚಿವ ಸೋಮಣ್ಣ ಹಾದಿ ಸುಗಮ

ಬೊಮ್ಮಾಯಿ ಅವ್ರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ನೋಡಿ ಓಟ್‌ ಹಾಕಿ ಎಂದು ಅಮಿತ್‌ ಶಾ ಹೇಳುತ್ತಾರೆ, ಅಂದ್ರೆ ಬಿಜೆಪಿಯಲ್ಲಿ ನಮ್ಮ ರಾಜ್ಯದ ನಾಯಕರುಗಳ ಮುಖಗಳಿಗೆ ಬೆಲೆ ಇಲ್ಲವಾ ? ಇವರು ಬದಲಾವಣೆ ತರಲಿ, ಆದರೆ ಒಳ್ಳೆಯ ಬದಲಾವಣೆ ತಂದ್ರಾ ? ಒಬ್ಬ ನಿವೃತ್ತ ಐಪಿಎಸ್‌ ಆಫೀಸರ್‌ ರೌಡಿ ಡಿಶೀಟರ್‌ ಮನೆಗೆ ಹೋಗುವ ಪರಿಸ್ಥಿತಿ ತಂದಿಟ್ಟಿದ್ದಾರೆ, ಬಿಜೆಪಿಯವರು ಹತಾಶರಾಗಿ ಈ ರೀತಿ ಮಾಡುತ್ತಿದ್ದಾರೆಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.