ಮಳೆಯ ನಡುವೆಯೇ ಪ್ರಧಾನಿಯ ಕಟೌಟ್ ಒರೆಸುತ್ತಾ ನಿಂತ ಅಭಿಮಾನಿ, ಮೋದಿನೇ ನಮ್ಮ ದೇವರೆಂದ!
ಕೇಂದ್ರ ಸಚಿವ ಅಮಿತ್ ಶಾ ರೋಡ್ ಶೋ ರದ್ದಾದ ವೇಳೆ ಮಳೆಯಿಂದ ಒದ್ದೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಟೌಟ್ ಅನ್ನು ಒರೆಸುವ ಮೂಲಕ ನಿಷ್ಕಲ್ಮಶ ಅಭಿಮಾನ ಪ್ರದರ್ಶಿಸಿದ್ದಾನೆ.
ಬೆಂಗಳೂರು (ಏ.21): ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದರೆ ಗೌರವ, ಅಭಿಮಾನದ ಜೊತೆಗೆ ಪ್ರೀತಿಯನ್ನು ತೋರಿಸುವ ಜನರನ್ನು ನಾವು ದೇಶಾದ್ಯಂತ ನೋಡಬಹುದು. ಇದಕ್ಕೆ ಸಾಕ್ಷಿಯೆಂಬಂತೆ ಬೆಂಗಳೂರಿನ ದೇವನಹಳ್ಳಿ ಬಳಿ ಆಯೋಜಿಸಲಾಗಿದ್ದ ಕೇಂದ್ರ ಸಚಿವ ಅಮಿತ್ ಶಾ ಅವರ ರೋಡ್ ಶೋ ಮಳೆಯಿಂದ ರದ್ದಾಗಿದ್ದು, ಈ ವೇಳೆ ರಸ್ತೆ ಬದಿ ಇರಿಸಲಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಟೌಟ್ ಮೇಲಿದ್ದ ನೀರನ್ನು ಗ್ರಾಮಸ್ಥನೊಬ್ಬ ಒರೆಸಿದ ವೀಡಿಯೀ ಎಲ್ಲೆಡೆ ವೈರಲ್ ಆಗಿದೆ.
ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಯಾವುದೇ ಪ್ರದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರ್ಯಾಲಿ ಎಂದರೆ ಸಾಕು, ಯುವಕರಿಂದ ವೃದ್ಧರವರೆಗೂ ಅಭಿಮಾನಿಗಳು ಹುಚ್ಚೆದ್ದು ಬಂದು ಸಹಸ್ರಾರು ಸಂಖ್ಯೆಯಲ್ಲಿ ಬಂದು ಸೇರುತ್ತಾರೆ. ಇನ್ನು ಅವರ ಫೋಟೋವನ್ನು ನೋಡಿದರೆ ಗೌರವವನ್ನು ಕೊಡುವವರ ಸಂಖ್ಯೆಯೂ ಸಾಕಷ್ಟಿದೆ. ಇತ್ತೀಚೆಗೆ ನರೇಂದ್ರ ಮೋದಿ ಅವರು ಬೆಂಗಳೂರು, ಮಂಡ್ಯ, ಬೆಳಗಾವಿ, ದಾವಣಗೆರೆ, ಧಾರವಾಡ, ಶಿವಮೊಗ್ಗದಲ್ಲಿ ನಡೆಸಿದ ರ್ಯಾಲಿಯೇ ಸಾಕ್ಷಿಯಾಗಿದೆ.
Karnataka Election 2023: ರೋಡ್ ಶೋ ರದ್ದಾದ ಬೆನ್ನಲ್ಲೇ ಬಿಜೆಪಿ ನಾಯಕರ ಸಭೆ ಕರೆದ ಅಮಿತ್ ಶಾ
ಈಗ ಕರ್ನಾಟಕ ವಿಧಾನಸಭಾ ಚುನಾವಣೆ 2023ರ (Karnataka Assembly Election 2023) ಹಿನ್ನೆಲೆಯಲ್ಲಿ ಶುಕ್ರವಾರ (ಏ.21) ಮಧ್ಯಾಹ್ನ ಕೇಂದ್ರ ಸಚಿವ ಅಮಿತ್ ಶಾ ಅವರ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನರೇಂದ್ರ ಮೋದಿ ಅವರ ಕಟೌಟ್‌ಗಳನ್ನು ರಸ್ತೆಯ ಬದಿಗಳಲ್ಲಿ ನಿಲ್ಲಿಸಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಮಳೆಯಿಂದಾಗಿ ರೋಡ್ ಶೋ ರದ್ದುಗೊಳಿಸಲಾಯಿತು. ಆಗ ಮಳೆಯಲ್ಲಿಯೇ ಒದ್ದೆಯಾಗುತ್ತಿದ್ದ ಕಟೌಟ್ ಅನ್ನು ಸ್ಥಳೀಯ ಅಭಿಮಾನಿಯೊಬ್ಬ ತನ್ನ ಟವೆಲ್‌ನಿಂದ ಒರೆಸಿ ಸ್ವಚ್ಛಗೊಳಿಸಿದನು. ಈ ನಿಷ್ಕಲ್ಮಶ ಅಭಿಮಾನವನ್ನು ನೋಡಿದವರ ಎಂಥವರ ಮನಸ್ಸೂ ಕೂಡ ಮಿಡಿಯದೇ ಇರದು.
ಎಲ್ಲರೂ ಮಳೆಗೆ ಆಶ್ರಯ ಪಡೆದರೆ ಅಭಿಮಾನಿ ಕಟೌಟ್ ಒರೆಸಿದ: ಅಮಿತ್ ಶಾ ಅವರ ರೋಡ್ ಶೋ ರದ್ದಾಗಿದ್ದ ವೇಳೆ ಮಳೆಯಿಂದಾಗಿ ದೇವನಹಳ್ಳಿಯ ಬಹುತೇಕ ಗ್ರಾಮಸ್ಥರು ಆಶ್ರಯ ಪಡೆಯಲು ಹರಸಾಹಸ ಪಡುತ್ತಿದ್ದರು. ಆದರೆ, ಈ ವ್ಯಕ್ತಿ ಮಾತ್ರ ತಮ್ಮ ಟವೆಲ್‌ನಿಂದ ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್‌ನಲ್ಲಿ ನೀರು ಒರೆಸುತ್ತಿರುವುದು ಕಂಡುಬಂದಿದೆ. ಬಿಳಿ ಅಂಗಿ ಮತ್ತು ಧೋತಿ ತೊಟ್ಟಿದ್ದ ಗ್ರಾಮೀಣ ವ್ಯಕ್ತಿ ತನ್ನ ಟವೆಲ್‌ನಿಂದ ಮೋದಿ ಕಟೌಟ್ ಒರೆಸಿ ಅಲ್ಲಿಂದ ಮುಂದೆ ಹೋಗಿದ್ದಾರೆ.
ಹಣ ಪಡೆದಿದ್ದಾರಾ ಎಂದು ಕೇಳಿದ ಜನ: ಇನ್ನು ನರೇಂದ್ರ ಮೋದಿ ಅವರ ಕಟೌಟ್ ಒರೆಸಿದ್ದಕ್ಕೆ ನೀವು ಬಿಜೆಪಿಯವರ ಬಳಿ ಹಣ ಪಡೆದಿದ್ದೀರಾ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವನಹಳ್ಳಿ ಗ್ರಾಮಸ್ಥರು, ಪ್ರಧಾನಿ ಮೋದಿಯವರ ಮೇಲಿರುವ ವಿಶ್ವಾಸಕ್ಕಾಗಿ ಕಟೌಟ್ ಮೇಲಿದ್ದ ಮಳೆ ನೀರನ್ನು ಒರೆಸಿದ್ದಾಗಿ ಹೇಳಿದರು. 'ಮೋದಿ ಜಿ ದೇವರು, ಯಾರೂ ನನಗೆ ಹಣ ನೀಡಿಲ್ಲ' ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿಟ್ಟಾಗಿರುವ ಪತ್ನಿ ಚೆನ್ನಮ್ಮ
ಬೆಂಗಳೂರಲ್ಲೇ ಅಮಿತ್ ಶಾ ವಾಸ್ತವ್ಯ: ಏಪ್ರಿಲ್ 27ರಿಂದ ಅಮಿತ್ ಶಾ ನಿರಂತರವಾಗಿ ಬೆಂಗಳೂರು ವಾಸ್ತವ್ಯ ಹೂಡಲಿದ್ದು, ಇದಕ್ಕೂ ಮುನ್ನ ಅಮಿತ್ ಶಾ ಬೆಂಗಳೂರಿಗೆ 8 ಬಾರಿ ಬಂದು ಹೋಗಿದ್ದಾರೆ. ಪ್ರತೀ ಬಾರಿ ಬಂದಾಗಲೂ ಸಭೆ ನಡೆಸಿದ್ದಾರೆ. ಹೀಗಾಗಿ ಇಂದೂ ಕೂಡ ಸಭೆ ನಡೆಸಲಿದ್ದು ಈ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅರುಣ್ ಸಿಂಗ್ ಸೇರಿದಂತೆ ಚುನಾವಣಾ ಪ್ರಚಾರ ಸಮಿತಿ ಮತ್ತು ನಿರ್ವಹಣಾ ಸಮಿತಿ ಸೇರಿ ಸುಮಾರು 54 ಜನ ಭಾಗಿ ಪ್ರಮುಖರನ್ನು ಸಭೆಗೆ ಕರೆಯಲಾಗಿದೆ.
ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಮುಗಿದಿದೆ. ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.