ದೇವನಹಳ್ಳಿಯ ರೋಡ್ ಶೋ ರದ್ಧಾದ ಹಿನ್ನೆಲೆ ತಾಜ್ ಹೋಟೆಲ್ ನಲ್ಲಿ ತಂಗಿರುವ ಅಮಿತ್ ಶಾ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಸುಮಾರು 54 ಜನ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರು (ಏ.21): ರಾಜ್ಯ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಸ್ಟಾರ್ ಪ್ರಚಾರಕ ಕೇಂದ್ರ ಸಚಿವ ಅಮಿತ್ ಶಾ ಅವರ ಇಂದಿನ ದೇವನಹಳ್ಳಿ ರೋಡ್ ಶೋ ಮಳೆ ಕಾರಣ ರದ್ದಾದ ಹಿನ್ನೆಲೆ ವಿಮಾನ ನಿಲ್ದಾಣದಿಂದ ತಾಜ್ ಹೋಟೆಲ್ ಗೆ ತೆರಳಿದ್ದು ಅಲ್ಲಿ ಬಿಜೆಪಿ ನಾಯಕರ ಜೊತೆಗೆ ಸಭೆ ಸಭೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ಮುಖ್ಯವಾಗಿ
- ಲಿಂಗಾಯತ ಪಾಲಿಟಿಕ್ಸ್
- ಬಂಡಾಯ ವಿಚಾರ
- ಮೋದಿ ಪ್ರಚಾರ ಹೇಗೆ ಇರಬೇಕು
- ಜಗದೀಶ್ ಶೆಟ್ಟರ್ ಸೇರಿದಂತೆ ಸವದಿ ಪಾರ್ಟಿ ಬಿಟ್ಟ ವಿಚಾರ
- ಇತರ ಪಕ್ಷಕ್ಕೆ ಹೋದವರನ್ನು ಸೋಲಿಸುವ ಟಾಸ್ಕ್
ಇವೆಲ್ಲದರ ಬಗ್ಗೆ ಪ್ರಮುಖವಾಗಿ ಅಮಿತ್ ಶಾ ಸಮಾಲೋಚನೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ಏಪ್ರಿಲ್ 27ರಿಂದ ಅಮಿತ್ ಶಾ ನಿರಂತರವಾಗಿ ಬೆಂಗಳೂರು ವಾಸ್ತವ್ಯ ಹೂಡಲಿದ್ದು, ಇದಕ್ಕೂ ಮುನ್ನ ಅಮಿತ್ ಶಾ ಬೆಂಗಳೂರಿಗೆ 8 ಬಾರಿ ಬಂದು ಹೋಗಿದ್ದಾರೆ. ಪ್ರತೀ ಬಾರಿ ಬಂದಾಗಲೂ ಸಭೆ ನಡೆಸಿದ್ದಾರೆ. ಹೀಗಾಗಿ ಇಂದೂ ಕೂಡ ಸಭೆ ನಡೆಸಲಿದ್ದು ಈ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅರುಣ್ ಸಿಂಗ್ ಸೇರಿದಂತೆ ಚುನಾವಣಾ ಪ್ರಚಾರ ಸಮಿತಿ ಮತ್ತು ನಿರ್ವಹಣಾ ಸಮಿತಿ ಸೇರಿ ಸುಮಾರು 54 ಜನ ಭಾಗಿ ಪ್ರಮುಖರನ್ನು ಸಭೆಗೆ ಕರೆಯಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿಟ್ಟಾಗಿರುವ ಪತ್ನಿ ಚೆನ್ನಮ್ಮ: ಕಾರಣ
ಸದ್ಯ ಅಮಿತ್ ಶಾ ಅವರ ರೋಡ್ ಶೋ ಮಳೆಯ ಕಾರಣ ನಾಳೆಗೆ ಮುಂದೂಡಲಾಗಿದ್ದು, ನಾಳೆ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಅಮಿತ್ ಶಾ ಇಂದು ಬೆಂಗಳೂರಿನಲ್ಲೇ ತಂಗಲಿದ್ದಾರೆ. ಅಮಿತ್ ಶಾ ಆಗಮನ ಮತ್ತು ರೋಡ್ ಶೋ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ 500 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ರಾಜ್ಯಕ್ಕೆ ಬಂದ ಅಮಿತ್ ಶಾ, ಇಂದು ನಡೆಯಬೇಕಿದ್ದ ಬಿಜೆಪಿ ರೋಡ್ ಶೋ ಮುಂದೂಡಿಕೆ
ಇದಕ್ಕೂ ಮುನ್ನ ದೆಹಲಿಯಿಂದ ಕೆಂಪೇಗೌಡ ಏರ್ಪೋಟ್ ಗೆ ವಿಶೇಷ ವಿಮಾನದಲ್ಲಿ ಕೆಐಎಬಿಗೆ ಆಗಮಿಸಿದ ಅಮಿತ್ ಶಾ ಅವರನ್ನು ಸಿಎಂ ಬೊಮ್ಮಾಯಿ ಮತ್ತು ಸಚಿವ ಸುಧಾಕರ್ ಸ್ವಾಗತ ಕೋರಿದರು.
ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಮುಗಿದಿದೆ. ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
