ರಾಜ್ಯದ ಜನತೆಗೆ ಭರ್ಜರಿ ಆಫರ್: ಬಿಜೆಪಿ ಗಳಿಸುವ ಮತಗಳನ್ನು ಗೆಸ್ ಮಾಡಿ, ಬಹುಮಾನ ಗೆಲ್ಲಿ
ರಾಜ್ಯದಲ್ಲಿ ಮತಗಟ್ಟೆ ಹಾಗೂ ವಿಧಾನಸಭಾ ಕ್ಷೇತ್ರವಾರು ಬಿಜೆಪಿ ಗಳಿಸಿದ ಮತಗಳನ್ನು ಊಹಿಸಿ, ಬಹುಮಾನ ಗೆಲ್ಲಿ.
ಬೆಂಗಳೂರು (ಮೇ 12): ಕರ್ನಾಟಕ ವಿಧಾನಸಭಾ ಚುನಾವಣೆ 2023 ಫಲಿತಾಂಶಕ್ಕೂ ಮುನ್ನ ಬಿಜೆಪಿ ತನ್ನ ಆಂತರಿಕ ಸಮೀಕ್ಷೆಗೆ ಒಳಗಾಗಿರುವ ಬಿಜೆಪಿ, ಬೂತ್ ಮಟ್ಟದಲ್ಲಿ ಬಿಜೆಪಗೆ ಬರುವ ಮತಗಳನ್ನು ಸ್ಥಳೀಯ ಮತದಾರರಿಂದಲೇ ತಿಳಿದುಕೊಳ್ಳಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿಯೊಳಗೆ ಮತಗಟ್ಟೆವಾರು ಬಿಜೆಪಿ ಗಳಿಸುವ ಮತವನ್ನು ಹೇಳಿದರೆ ಯಾರು ಭವಿಷ್ಯ ಹತ್ತಿರವಾಗಿರುತ್ತದೆಯೋ ಅವರಿಗೆ ಬಹುಮಾನವನ್ನೂ ನೀಡಲು ಮುಂದಾಗಿದೆ. ಇನ್ನು ಈ ಬಗ್ಗೆ ಮಾಹಿತಿಯನ್ನು ಕಳಿಸಲು ವಾಟ್ಸಾಪ್ ಸಂಖ್ಯೆ, ಇಮೇಲ್ ವಿಳಾಸ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಕಳಿಸುವಂತೆ ತಿಳಿಸಿದ್ದಾರೆ.
Karnataka Election 2023: ಫಲಿತಾಂಶಕ್ಕೂ ಮುನ್ನ ಬಿಎಸ್‌ವೈ ಭೇಟಿಯಾದ ಸಿಎಂ ಬೊಮ್ಮಾಯಿ: ಸರ್ಕಾರ ರಚನೆಗೆ ಕಸರತ್ತು!
ಬಹುತೇಕ ಚುನಾವಣಾ ಸಮೀಕ್ಷೆಗಳ ಫಲಿತಾಂಶಗಳು ಕಾಂಗ್ರೆಸ್ ಪರವಾಗಿ ಬಂದಿರೋದ್ರಿಂದ ಬಿಜೆಪಿ ಕಂಗೆಟ್ಟಂತೆ ಕಾಣಿದೆ. ಈಗಾಗಲೇ ಹೊರಬಂದಿರುವ 1 ಚುನಾವಣಾ ಸಮೀಕ್ಷೆಗಳಲ್ಲಿ ಕೇವಲ 2 ಸಮೀಕ್ಷೆಗಳು ಮಾತ್ರ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿವೆ. ಈ ಸಮೀಕ್ಷೆಯ ಫಲಿತಾಂಶವನ್ನು ಅರಗಿಸಿಕೊಳ್ಳಲು ತುಸು ಕಷ್ಟವೆನಿಸಿರೋ ಕಾರಣದಿಂದ ಇದೀಗ ಬೆಜೆಪಿಗೆ ಬರುವ ಸೀಟ್‌ಗಳ ಲೆಕ್ಕ ಮಾಡಲು ಹೊಸ ದಾರಿಯನ್ನು ಹಿಡಿದಿದೆ. ಬೂತ್ ಮಟ್ಟದಲ್ಲಿ ಬಿಜೆಪಿಗೆ ಬಿದ್ದಿರುವ ಮತಗಳೆಷ್ಟು ಎಂದು ಜನ ಊಹೆ ಮಾಡಬೇಕು.. ಆ ಅಂದಾಜು ಸಂಖ್ಯೆಯನ್ನು ಬಿಜೆಪಿಯ 810 505 1086 ನಂಬರ್‌ಗೆ ಕಳುಹಿಸಬೇಕು.
ನಿಖರವಾಗಿ ಅಂದಾಜು ಮಾಡಿದವರಿಗೆ ಪರಸ್ಕಾರ ನೀಡೋದಾಗಿ ಬಿಜೆಪಿ ಟ್ವಿಟ್ ಮಾಡಿದೆ. ಇಂದು ರಾತ್ರಿ (ಮೇ 12) 11 ಗಂಟೆಯವರೆಗೂ ಮತಗಟ್ಟೆಯಲ್ಲಿ ಬಿಜೆಪಿಗೆ ಬಿದ್ದ ಮತಗಳನ್ನು ಅಂದಾಜಿಸಿ ಬಿಜೆಪಿಗೆ ಕಳುಹಿಸಿಕೊಡಬಹುದಾಗಿದೆ. ಈ ಹೊಸ ಆಫರ್ ಮೂಲಕ ಬಿಜೆಪಿಗೆ ಸಿಗಬಹುದಾದ ಸೀಟ್‌ಗಳ ಸಂಖ್ಯೆಯ ಮಾಹಿತಿ ಪಡೆದು ಮುಂದಿನ ರಾಜಕೀಯ ತಂತ್ರಗಾರಿಕೆ ಮಾಡುವ ಚಿಂತನೆ ಮಾಡುತ್ತಿದೆ.
Election special: ಚಾಮುಂಡಿ ಸೇಡು ತೀರಿಸಿಕೊಳ್ಳಲು ಹೋಗಿ ಎಡವಿ ಬಿದ್ದರಾ ಸಿದ್ದು..?
ಅತ್ಯಂತ ನಿಖರ ಮಾಹಿತಿ ಅಥವಾ ಹತ್ತಿರದ ಸಂಖ್ಯೆಯನ್ನು ಹೇಳಿದವರಿಗೆ ಬಹುಮಾನ ನೀಡುವುದಾಗಿ ತಿಳಿಸಿದೆ. ಇನ್ನು ಮತಗಟ್ಟೆಯಲ್ಲಿ ಬಿಜೆಪಿ ಪಡೆದ ಮತಗಳ ಮಾಹಿತಿ ಕಳುಹಿಸುವವರು ತಮ್ಮ ಹೆಸರು, ವಿಧಾನಸಭಾ ಕ್ಷೇತ್ರ, ಮತಗಟ್ಟೆ ಸಂಖ್ಯೆ, ಸಾಮಾಜಿಕ ಜಾಲತಾಣ ಹಾಗೂ ಸಂಪರ್ಕ ಸಂಖ್ಯೆಯನ್ನು ನಮೂದಿಸಬೇಕು.