Karnataka Election 2023: ಫಲಿತಾಂಶಕ್ಕೂ ಮುನ್ನ ಬಿಎಸ್‌ವೈ ಭೇಟಿಯಾದ ಸಿಎಂ ಬೊಮ್ಮಾಯಿ: ಸರ್ಕಾರ ರಚನೆಗೆ ಕಸರತ್ತು!
ಫಲಿತಾಂಶಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಸರ್ಕಾರ ರಚನೆ ಕಸರತ್ತು ಚರ್ಚೆಗೆ ಮುಂದಾಗಿದ್ದಾರೆ.
ಬೆಂಗಳೂರು (ಮೇ 12): ಕರ್ನಾಟಕ ವಿಧಾನಸಭಾ ಚುನಾವಣಾ ಮತದಾನ ಪೂರ್ಣಗೊಂಡಿದ್ದು, ನಾಳೆ ಫಲಿತಾಂಶ ಹೊರ ಬೀಳಲಿದೆ. ಆದರೆ, ಫಲಿತಾಂಶಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಸರ್ಕಾರ ರಚನೆ ಕಸರತ್ತು ಚರ್ಚೆಗೆ ಮುಂದಾಗಿದ್ದಾರೆ.
ಚುನಾವಣಾ ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತ ಬರಲಿದೆ ಎಂದು ಹೇಳಿವೆ. ಬಹುಮತ ಬರದಿದ್ದರೂ ಸರ್ಕಾರ ರಚನೆಗೆ ಪ್ಲ್ಯಾನ್ ಬಿ ಸಿದ್ಧವಿದೆ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಸಿಎಂ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಪಕ್ಷಕ್ಕೆ ಬಹುಮತ ಬರಲಿದೆ ಎಂಬ ವಿಶ್ವಾಸವನ್ನು ಯಡಿಯೂರಪ್ಪ ಅವರಿಗೆ ತುಂಬಿದ್ದಾರೆ ಎನ್ನಲಾಗಿದೆ.
KARNATAKA ELECTION 2023 : ಫಲಿತಾಂಶಕ್ಕೂ ಮುನ್ನವೇ ಪ್ಲ್ಯಾನ್ 'ಬಿ' ರೆಡಿ: ಬಿಜೆಪಿ ನಾಯಕನ ಹೊಸ ಬಾಂಬ್
ಫಲಿತಾಂಶ ವಾಸ್ತವ ಸ್ಥಿತಿ ಕುರಿತು ಚರ್ಚೆ: ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲೇಬೇಕು ಎಂದು ಕಸರತ್ತು ಮಾಡುತ್ತಿರುವ ಬಿಜೆಪಿ ನಾಯಕರು ಫಲಿತಾಂಶ ಕುರಿತು ವಸ್ತುಸ್ಥಿತಿ ವಿಚಾರ ವಿನಿಮಯ ಮಾಡಿಕೊಂಡು, ಮುಂದಿನ ಹೆಜ್ಜೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇನ್ನು ಅತಂತ್ರ ಸ್ಥಿತಿ ಬಂದರೆ ಮುಂದೆ ಏನು ಮಾಡಬೇಕೆಂಬ ಚರ್ಚೆಯನ್ನೂ ಮಾಡಲಾಗಿದೆ. ಇನ್ನು ಆಪರೇಷನ್ ಕಮಲ ನಡೆಸಲು ಕೂಡ ಚರ್ಚೆ ಮಾಡಲಾಗಿದೆ ಎಮದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ನಾಯಕರು ಬಹಿರಂಗವಾಗಿ ಹೇಳಿಕೊಂಡಿಲ್ಲ. ನಮಗೆ ಸ್ಪಷ್ಟ ಬಹುಮತ ಬರಲಿದೆ ಎಂದೇ ಹೇಳುತ್ತಿದ್ದಾರೆ.
105 ರಿಂದ 120 ಸ್ಥಾನ ಬಿಜೆಪಿ ಗೆಲ್ಲಲಿದೆ: ಮಾಜಿ ಸಿಎಂ ಯಡಿಯೂರಪ್ಪ ಅವರ ಕಾವೇರಿ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ನಾವು ಏನೇ ಹೇಳಿದರೂ ನಾಳೆ ಫಲಿತಾಂಶದಲ್ಲಿ ವಾಸ್ತವ ಗೊತ್ತಾಗಲಿದೆ. ನಾವು 105 ರಿಂದ 120ರವರೆಗೆ ಸ್ಥಾನಗಳಲ್ಲಿ ಗೆಲ್ಲುತ್ತೇವೆ. ನನ್ನ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ15ಕ್ಕಿಂತ ಕಡಿಮೆ ಬರುವುದಿಲ್ಲ. ಬೆಂಗಳೂರಿನಲ್ಲಿ ಕೂಡ 15ಕ್ಕಿಂತ ಹೆಚ್ಚು ಸ್ಥಾನ ಗಳಿಸುತ್ತೇವೆ. ಕರಾವಳಿಯಲ್ಲಿ ಅತಿ ಹೆಚ್ಚು ಗೆಲ್ಲುತ್ತೇವೆ. ಒಟ್ಟಾರೆ ರಾಜ್ಯದ ವಿಚಾರ ತೆಗೆದುಕೊಂಡ್ರೆ 105ಕ್ಕಿಂತ ಹೆಚ್ಚು ಗೆಲುವು ನಿಶ್ಚಿತ. ಕಾಂಗ್ರೆಸ್ ಏನೇ ಹೇಳಬಹುದು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದರು.
Karnataka Elections 2023: ಎಕ್ಸಿಟ್ ಪೋಲ್ ಅತಂತ್ರ ಕೈಬಿಟ್ಟು, ಒಂದೇ ಪಕ್ಷಕ್ಕೆ ಬಹುಮತ ಕೊಟ್ಟ ಸಟ್ಟಾ ಬಜಾರ್‌ಗಳು!
ಕಾಂಗ್ರೆಸ್‌ಗೆ ಬಹುಮತ ಸಿಗಲ್ಲ: ಇದಕ್ಕೂ ಮೊದಲೇ ಆರ್ ಟಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಚುನಾವಣೆಗೆ ಮುಂಚೆ, ನಂತರ ಯಾವುದೇ ಇರಲಿ. ಸಮೀಕ್ಷೆಗಳು ಏನೇ ಹೇಳಿರಲಿ. ನನ್ನದು ಆಗಲೂ ಈಗಲೂ ಒಂದೇ ಮಾತು. ಅದು, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಗ್ರೌಡ್ ರಿಪೋರ್ಟ್ ಕೂಡ ಅದೇ ಹೇಳುತ್ತದೆ. ಪ್ರತಿಕ್ರಿಯಿಸಿದ ಅವರು, ವಸ್ತುಸ್ಥಿತಿ ವರದಿಯನ್ನು ವರಿಷ್ಠರಿಗೆ ಸಲ್ಲಿಸಿರುವೆ. ಬಿಜೆಪಿ ಗಳಿಸಲಿರುವ ನಂಬರ್‌ಗಳ ಬಗ್ಗೆ ಹಿರಿಯ ನಾಯಕ ಹೇಳಿದ್ದೇ ನನ್ನ ನಂಬರ್. ಇಬ್ಬರದೂ ಬೇರೆ ನಂಬರ್ ಗಳಿಲ್ಲ. ಕಾಂಗ್ರೆಸ್ ನವರಿಗೆ ಬಹುಮತ ಬರಲ್ಲ. ಹಾಗಾಗಿ ಬೇರೆ ಪಕ್ಷದವರ ಜತೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಪಕ್ಷದ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದಾಯಿತು ಎಂದರು.