ರಾಜ್ಯ​ದಲ್ಲಿ ಯಾವುದೇ ಕಾರ​ಣಕ್ಕೂ ಸಮ್ಮಿಶ್ರ ಸರ್ಕಾರ ಬರಲ್ಲ. ಜನರು ಸಮ್ಮಿಶ್ರ ಸರ್ಕಾ​ರ​ಗ​ಳಿಂದ ಬೇಸ​ರ​ಗೊಂಡಿದ್ದು, ಚುನಾ​ವ​ಣೆ​ಯಲ್ಲಿ 130ಕ್ಕೂ ಹೆಚ್ಚು ಸ್ಥಾನ​ಗಳಲ್ಲಿ ಕಾಂಗ್ರೆ​ಸ್‌ ಗೆಲ್ಲ​ಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. 

ರಾಯ​ಚೂರು (ಏ.29): ರಾಜ್ಯ​ದಲ್ಲಿ ಯಾವುದೇ ಕಾರ​ಣಕ್ಕೂ ಸಮ್ಮಿಶ್ರ ಸರ್ಕಾರ ಬರಲ್ಲ. ಜನರು ಸಮ್ಮಿಶ್ರ ಸರ್ಕಾ​ರ​ಗ​ಳಿಂದ ಬೇಸ​ರ​ಗೊಂಡಿದ್ದು, ಚುನಾ​ವ​ಣೆ​ಯಲ್ಲಿ 130ಕ್ಕೂ ಹೆಚ್ಚು ಸ್ಥಾನ​ಗಳಲ್ಲಿ ಕಾಂಗ್ರೆ​ಸ್‌ ಗೆಲ್ಲ​ಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಶುಕ್ರ​ವಾರ ನಗರದಲ್ಲಿ ಮಾತ​ನಾ​ಡಿ, ನರೇಂದ್ರ ಮೋದಿ ಅವರು ಗ್ಯಾರಂಟಿ ಕಾರ್ಡ್‌ ವಿಚಾರವಾಗಿ ಹಗುರವಾಗಿ ಮಾತನಾಡಿದ್ದಾರೆ. ಈ ಯೋಜ​ನೆ​ಗಳು ಜಾರಿಗೆ ತಂದಲ್ಲಿ ರಾಜ್ಯ ಆರ್ಥಿ​ಕ​ವಾಗಿ ದಿವಾಳಿಯಾಗ​ಲಿದೆ ಎಂದಿ​ರುವು​ದು ಸರಿಯಲ್ಲ. 

ಕರ್ನಾಟಕವನ್ನು ಸಾಲಗಾರ ಮಾಡಿದ್ದು ಬಿಜೆಪಿ, 9 ವರ್ಷದ ಆಡಳಿತದಲ್ಲಿ ಮೋದಿ ಸರ್ಕಾರ 152 ಲಕ್ಷ ಕೋಟಿ ರು. ಸಾಲ ಮಾಡಿದೆ. ನಾವು ಕೊಟ್ಟಭರವಸೆಗಳನ್ನು ಈಡೇರಿಸಿಯೇ ತೀರುತ್ತೇವೆ. ಮೋದಿ ಸುಳ್ಳಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ. ರಾಜ್ಯ​ದಲ್ಲಿ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬಂದಲ್ಲಿ ಒಟ್ಟಾರೆ ಮೀಸ​ಲಾತಿ ಶೇ.50 ರಿಂದ 75ಕ್ಕೆ ಹೆಚ್ಚಿಸಿ ಎಲ್ಲ ವರ್ಗ​ದ​ವ​ರಿಗೂ ಸಹ ಅನು​ಕೂ​ಲ​ವಾ​ಗು​ವಂತೆ ಸಮಾ​ನ​ವಾಗಿ ಮೀಸ​ಲಾ​ತಿ ಹಂಚಿಕೆ ಮಾಡ​ಲಾ​ಗು​ವುದು. 

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ: ಜಮೀರ್‌ ಅಹಮದ್‌ ಖಾನ್‌

ರಾಜ್ಯದ ಜನತೆಗೆ ಕಾಂಗ್ರೆಸ್‌ ಕೊಟ್ಟ ಭರವಸೆ ಜಾರಿಗೆ ತರಲು ಆಗದಿದ್ದರೆ ಕ್ಷಣದಲ್ಲಿ ಖುರ್ಚಿ ಖಾಲಿ ಮಾಡುವೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರ ಅಲಿಬಾಬ ಮತ್ತು ಚಾಲೀಸ್‌ ಚೋರ್‌ ಸರ್ಕಾರವಾಗಿದೆ. ಬಿಜೆಪಿ ಆಡಳಿತದ ಭ್ರಷ್ಟಾಚಾರದಿಂದ ವಿಧಾನಸೌಧದ ಗೋಡೆಯ ಕಲ್ಲು ಕಲ್ಲುಗಳು ಲಂಚ.. ಲಂಚ.. ಲಂಚ.. ಎಂದು ಮಾತನಾಡುತ್ತಿವೆ ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ ರಾಜ್ಯದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಆಸೆ ಬಿಚ್ಚಿಟ್ಟಸಿದ್ದು: ರಾಯಚೂರು ಜಿಲ್ಲೆಯಲ್ಲಿ ಅಭ್ಯರ್ಥಿ ಪರ ಪ್ರಚಾರ ಮಾಡುವ ವೇಳೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸ್ಸನ್ನು ಬಿಚ್ಚಿಟ್ಟಿದ್ದಾರೆ. ನಾನು ಸಿಎಂ ಆಗಬೇಕು ಅಂದರೆ ಡಿ.ಎಸ್‌.ಹೊಲಗೇರಿ ಗೆಲ್ಲಬೇಕು ಎಂದರು.

ಸ್ಟೆಪ್‌ ಹಾಕಿದ ಸಿದ್ದು: ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಸಿದ್ದರಾಮಯ್ಯರ ಅಭಿಮಾನಿ ಪ್ರಕಾಶ್‌, ಸಿದ್ದರಾಮಯ್ಯರ ಕುರಿತು ರಚನೆ ಮಾಡಿದ ಆಡಿಯೋವನ್ನು ಮಳೆಯಲ್ಲಿಯೇ ಸಿದ್ದರಾಮಯ್ಯ ಬಿಡುಗಡೆ ಮಾಡಿ, ಹಾಡು ಕೇಳಿ ಸ್ಟೆಪ್‌ ಹಾಕಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಶಿವನಗೌಡ, ಮಾನಪ್ಪ ವಜ್ಜಲ್‌ಗೆ ಜೈಲು ಗ್ಯಾರಂಟಿ: ನಾರಾಯಣಪೂರ ಬಲದಂಡೆ ನಾಲೆ ಕಾಲುವೆಗಳ ಮರುನಿರ್ಮಾಣ ಕಾಮಗಾರಿಯಲ್ಲಿ ಸುಮಾರು 2 ಸಾವಿರ ಕೋಟಿ ಲೂಟಿ ಮಾಡಿರುವ ಗುತ್ತಿಗೆದಾರ, ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್‌ ಹಾಗೂ ಶಾಮೀಲಾಗಿರುವ ಶಾಸಕ ಕೆ.ಶಿವನಗೌಡ ನಾಯಕರಿಗೆ ಜೈಲು ಗ್ಯಾರಂಟಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು. ಪಟ್ಟಣದ ಟಿಎಪಿಸಿಎಂಸ್‌ ಮೈದಾನದಲ್ಲಿ ಶುಕ್ರವಾರ ಜರುಗಿದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿ, ಪರ್ಸಂಟೇಜ್‌ ಸರ್ಕಾರದಲ್ಲಿ ಲೂಟಿ ಮಾಡಿದವರೇ ಹೆಚ್ಚಾಗಿದ್ದಾರೆ. 

ಶೇ.40, ಶೇ. 50ರಷ್ಟು ಕೆಲವಡೆ ನೂರಕ್ಕೆ ನೂರಷ್ಟು ಪರ್ಸಂಟೇಜ್‌ ಪಡೆದು ಬಿಜೆಪಿಯ ಎಲ್ಲರೂ ಲೂಟಿ ಮಾಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಖಂಡಿತ ಅಧಿಕಾರಕ್ಕೆ ಬರಲಿದ್ದು, ವಿಶೇಷ ತನಿಖಾ ತಂಡ ನಿಯೋಜಿಸಿ ಲೂಟಿಕೋರರಿಗೆ ಖಂಡಿತ ಜೈಲು ಸೇರಿಸಲಾಗುವದು ಎಂದ​ರು. ಅಕಾಲಿಕ ಮರಣದ ಬಳಿಕ ಬಿ.ವಿ. ನಾಯಕರಿಗೆ ಹಾಗೂ ಒಂದು ಬಾರಿ ರಾಜಶೇಖರ ನಾಯಕಗೆ ಟಿಕೆಟ್‌ ನೀಡಲಾಗಿತ್ತು. ಒಂದು ಬಾರಿ ಸಂಸದರಾಗಿ, ಮತ್ತೊಮ್ಮೆ ಟಿಕೆಟ್‌ ನೀಡಿದ್ದರೂ ಸೋಲು ಕಂಡಿದ್ದರು. ಬಳಿಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಪಕ್ಷ ಮಾಡಿತ್ತು. 

ನನ್ನನ್ನು ಸೋಲಿ​ಸಲು ಕಾಂಗ್ರೆಸ್‌-ಬಿಜೆಪಿ ಷಡ್ಯಂತ್ರ: ನಿಖಿಲ್‌ ಕುಮಾ​ರ​ಸ್ವಾಮಿ

ಆದರೆ ನಾನು ಕನಸು ಮನಸ್ಸಿನಲ್ಲಿ ಕೂಡ ಯೋಚಿಸಲಿರಲಿಲ್ಲ, ಬಿಜೆಪಿ ಹೋಗಿ ಪಕ್ಷಕ್ಕೆ, ಕುಟುಂಬಕ್ಕೆ ಬಿ.ವಿ. ನಾಯಕ ದ್ರೋಹ ಮಾಡಿದ್ದಾರೆ. ಅವರದ್ದು ಎಂತಹ ಸ್ವಾರ್ಥ ಮನಸ್ಸು ಎಂಬುದು ಸಾಬೀತಾಗಿದೆ. ನಾವು ಅನಾ​ಥ​ರಾ​ಗಿ​ದ್ದೇ​ವೆ. ನಾನು ಮತ್ತು ಪತಿ ರಾಜಶೇಖರ ನಾಯಕ ಮಾತ್ರ ಇದ್ದೇವೆ. ಕ್ಷೇತ್ರದ ಮತದಾರರೇ ನನ್ನ ಕುಟುಂಬ ಸದಸ್ಯರು. ನೀವೇ ನಮ್ಮನ್ನು ಕೈಹಿಡಿಯಬೇಕೆಂದು ಕಣ್ಣೀರು ಹಾಕಿ, ಸೆರಗೊಡ್ಡಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀದೇವಿ ರಾಜಶೇಖರ ನಾಯಕ ಮತಭಿಕ್ಷೆ ಕೇಳಿ ಗಮನ ಸೆಳೆದರು.