Asianet Suvarna News Asianet Suvarna News

ನನ್ನನ್ನು ಸೋಲಿ​ಸಲು ಕಾಂಗ್ರೆಸ್‌-ಬಿಜೆಪಿ ಷಡ್ಯಂತ್ರ: ನಿಖಿಲ್‌ ಕುಮಾ​ರ​ಸ್ವಾಮಿ

ಮಂಡ್ಯ ಚುನಾ​ವಣೆ ರೀತಿ​ಯಲ್ಲಿಯೇ ಇಲ್ಲಿಯೂ ನನ್ನ ವಿರುದ್ಧ ಕುತಂತ್ರ ನಡೆ​ಯು​ತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಹೊಂದಾ​ಣಿಕೆ ಮಾಡಿ​ಕೊಂಡು ನನ್ನನ್ನು ಸೋಲಿ​ಸಲು ಷಡ್ಯಂತ್ರ ನಡೆ​ಸಿ​ವೆ ಎಂದು ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಕುಮಾ​ರ​ಸ್ವಾಮಿ ಆರೋ​ಪಿ​ಸಿ​ದ​ರು.

Karnataka Election 2023 Nikhil Kumaraswamy Slams On Congress And BJP gvd
Author
First Published Apr 29, 2023, 12:30 AM IST

ರಾಮ​ನ​ಗರ (ಏ.29): ಮಂಡ್ಯ ಚುನಾ​ವಣೆ ರೀತಿ​ಯಲ್ಲಿಯೇ ಇಲ್ಲಿಯೂ ನನ್ನ ವಿರುದ್ಧ ಕುತಂತ್ರ ನಡೆ​ಯು​ತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಹೊಂದಾ​ಣಿಕೆ ಮಾಡಿ​ಕೊಂಡು ನನ್ನನ್ನು ಸೋಲಿ​ಸಲು ಷಡ್ಯಂತ್ರ ನಡೆ​ಸಿ​ವೆ ಎಂದು ಜೆಡಿ​ಎಸ್‌ ಅಭ್ಯರ್ಥಿ ನಿಖಿಲ್‌ ಕುಮಾ​ರ​ಸ್ವಾಮಿ ಆರೋ​ಪಿ​ಸಿ​ದ​ರು. ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಬಿಜೆಪಿ ಮುಖಂಡರು ಪಕ್ಷ ತೊರೆದು ಜೆಡಿ​ಎಸ್‌ ಸೇರ್ಪಡೆ ಬಳಿಕ ಸುದ್ದಿ​ಗಾ​ರರೊಂದಿಗೆ ಮಾತ​ನಾ​ಡಿದ ಅವರು, ಜೆಡಿ​ಎಸ್‌ ಮತ​ಗ​ಳನ್ನು ವಿಭ​ಜನೆ ಮಾಡಲು ಕಾಂಗ್ರೆಸ್‌ - ಬಿಜೆಪಿ ಒಳ​ಒ​ಪ್ಪಂದ ಮಾಡಿ​ಕೊಂಡಿವೆ ಎಂದು ದೂರಿ​ದ​ ಅವರು, ಕ್ಷೇತ್ರದ ಹಲವೆಡೆ ಕಾಂಗ್ರೆಸ್‌ ಅಭ್ಯರ್ಥಿ ಬಿಜೆಪಿಗೆ ಮತ ಹಾಕಿ ಅಂದಿದ್ದಾರೆ. 

ನನಗೆ ಮತ ಹಾಕದಿದ್ದರೂ ಪರವಾಗಿಲ್ಲ ಬಿಜೆಪಿಗೆ ಮತಹಾಕಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಹೇಳುತ್ತಿ​ದ್ದಾರೆ. ಕೆಲವೆಡೆ ಬಿಜೆಪಿಯವರು ಕೂಡ ಕಾಂಗ್ರೆಸ್‌ಗೆ ಮತ ಹಾಕುವಂತೆ ಪ್ರಚಾರ ಮಾಡುತ್ತಿ​ದ್ದಾ​ರೆ. ನಮ್ಮ ಮತಗಳನ್ನು ವಿಭಜನೆ ಮಾಡಲು ಕಾಂಗ್ರೆಸ್‌-ಬಿಜೆಪಿ ಈ ರೀತಿ ಮಾಡುತ್ತಿದ್ದು, ಮಂಡ್ಯದ ಚುನಾವಣೆ ರೀತಿಯಲ್ಲಿಯೇ ಇಲ್ಲಿಯೂ ಕುತಂತ್ರ ಮಾಡುತ್ತಿ​ದ್ದಾರೆ. ನಾನು ಎಲ್ಲವನ್ನೂ ಬಹಿರಂಗವಾಗಿ ಚರ್ಚೆ ಮಾಡಲ್ಲ. ಇದಕ್ಕೆ ಕ್ಷೇತ್ರದ ಮತದಾರರೇ ಉತ್ತರ ಕೊಡುತ್ತಾರೆ. ಇದರಿಂದ ಬೇಸತ್ತಿರುವ ಬಿಜೆಪಿ ಕಾರ್ಯಕರ್ತರು ನಮ್ಮ ಪಕ್ಷ ಸೇರ್ಪಡೆ ಆಗುತ್ತಿ​ದ್ದಾರೆ ಎಂದು ಹೇಳಿ​¨ರು.

ಹಿಂದಿನ ಅಭಿವೃದ್ಧಿಗಳೇ ನಾಳೆಯ ಅಧಿಕಾರಕ್ಕೆ ದಾರಿ: ಡಾ.ಜಿ.ಪರಮೇಶ್ವರ್‌

ಜೆಡಿ​ಎಸ್‌ ಪಕ್ಷ ದೇವೇ​ಗೌಡ ಹಾಗೂ ಕುಮಾ​ರ​ಸ್ವಾ​ಮಿ​ ಅವರ ಸಿದ್ಧಾಂತ​ವನ್ನು ಒಪ್ಪಿ ಬಿಜೆ​ಪಿ​ಯ​ವರು ಯುವ​ಕ​ನಿಗೆ ಶಕ್ತಿ ತುಂಬಲು ಪಕ್ಷಕ್ಕೆ ಬಂದಿ​ದ್ದಾರೆ. ಬಿಜೆಪಿ - ಕಾಂಗ್ರೆಸ್‌ ಒಪ್ಪಂದ ಮಾಡಿ​ಕೊಂಡು ಮಂಡ್ಯ​ದಂತೆ ಇಲ್ಲಿಯೂ ಕುತಂತ್ರದ ರಾಜ​ಕಾ​ರಣ ನಡೆ​ಯು​ತ್ತಿ​ರು​ವು​ದನ್ನು ಜೆಡಿ​ಎಸ್‌ ಸೇರಿದ ಬಿಜೆಪಿ ಕಾರ್ಯ​ಕ​ರ್ತರೇ ತಿಳಿ​ಸಿ​ದ್ದಾರೆ. ಕನ​ಕ​ಪು​ರ​ದಲ್ಲಿ ಆರ್‌.ಅ​ಶೋಕ್‌ ಮತ್ತು ಡಿ.ಕೆ.​ಶಿ​ವ​ಕು​ಮಾರ್‌ ಹೊಂದಾ​ಣಿಕೆ ಮಾಡಿ​ಕೊಂಡಿ​ದ್ದಾರೆ. ಸುಮ್ಮನೆ ಕಾಟಾ​ಚಾ​ರಕ್ಕೆ ಬಂದು ಕನ​ಕ​ಪು​ರ​ದಲ್ಲಿ ಅರ್ಜಿ ಹಾಕಿ​ದ್ದಾರೆ. ಗೆಲ್ಲುವ ವಿಶ್ವಾ​ಸ ಇದ್ದಿ​ದ್ದರೆ ಕನ​ಕ​ಪು​ರ​ದಲ್ಲಿ ಮಾತ್ರ ಸ್ಪರ್ಧೆ ಮಾಡ​ಬೇ​ಕಿತ್ತು ಎಂದು ಸಚಿವ ಅಶೋಕ್‌ ಹೇಳಿ​ಕೆಗೆ ತಿರು​ಗೇಟು ನೀಡಿ​ದರು.

ಅಶೋಕ್‌ ಅವರು ಪದ್ಮ​ನಾ​ಭ​ನ​ಗರ ಮತ್ತು ಕನ​ಕ​ಪುರ ಕ್ಷೇತ್ರ​ದಿಂದ ಸ್ಪರ್ಧೆ ಮಾಡಿ​ರು​ವುದು ಹೊಂದಾ​ಣಿಕೆ ಅಲ್ಲದೆ ಮತ್ತೇನು. ಕನ​ಕ​ಪು​ರ​ದಲ್ಲಿ ಬಿಜೆಪಿ ನೆಲೆಯೇ ಇಲ್ಲ. ಅಲ್ಲಿನ ಕಾರ್ಯ​ಕ​ರ್ತ​ರಿಗೆ ನಾವು ರಕ್ಷಣೆ ನೀಡುತ್ತಾ ಬಂದಿ​ದ್ದೇವೆ. ಬಿಜೆ​ಪಿ​ಯಿಂದ ನಾವು ಕಲಿ​ಯು​ವುದು ಏನೂ ಇಲ್ಲ ಎಂದು ಹೇಳಿ​ದ​ರು.

ಜೆಡಿ​ಎಸ್‌ ಸೇರ್ಪಡೆಗೊಂಡವರು: ರಾಮನಗರ ನಗ​ರಾ​ಭಿ​ವೃದ್ಧಿ ಪ್ರಾಧಿ​ಕಾರ ಮಾಜಿ ನಿರ್ದೇ​ಶಕ ಕಾಡನಕುಪ್ಪೆ ರಾಘವೇಂದ್ರ, ಕೈಲಾಂಚ ಹೋಬಳಿ ಬಿಜೆಪಿ ಘಟಕ ಅಧ್ಯಕ್ಷ ಅವ್ವೇರಹಳ್ಳಿ ಪ್ರಶಾಂತ್‌, ಉಪಾಧ್ಯಕ್ಷ ಅಂಜನಾಪುರ ಕಿರಣ್‌, ಮರಳವಾಡಿ ಚಂದ್ರಣ್ಣ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ರಾಜೇಶ್‌, ದೇವರದೊಡ್ಡಿ ರವಿನಾಯಕ, ಬನ್ನಿಕುಪ್ಪೆ ಈಶ್ವರಯ್ಯ, ಹೊಸದೊಡ್ಡಿ ರಾಕೇಶ್‌, ಅವ್ವೇರಹಳ್ಳಿ ಸತೀಶ್‌, ಅನಿತಾ, ನೆಲಮಲೆ ಮಹಾಲಕ್ಷ್ಮೀ, ಅಗರ ಕುಮಾರ್‌, ಮಲ್ಲೇಶ್‌, ಸ್ವಾಮಿಗೌಡ ಸೇರಿದಂತೆ 30ಕ್ಕೂ ಹೆಚ್ಚು ಪದಾಧಿಕಾರಿಗಳು ಬಿಜೆಪಿ ತೊರೆದು ಜೆಡಿ​ಎಸ್‌ ಸೇರ್ಪಡೆಯಾದರು.

ಬಿಜೆಪಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ: ಅರುಣ್‌ ಸಿಂಗ್‌ ವಿಶ್ವಾಸ

ಜಿಪಂ ಮಾಜಿ ಅಧ್ಯಕ್ಷ ಎಚ್‌.ಸಿ. ರಾಜಣ್ಣ, ಜೆಡಿ​ಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌, ವಕ್ತಾರ ಬಿ.ಉಮೇಶ್‌, ಪ್ರಚಾರ ಸಮಿತಿ ಅಧ್ಯಕ್ಷ ಪಾಂಡುರಂಗ, ಮುಖಂಡರಾದ ಪಿ. ಅಶ್ವತ್‌್ಥ, ಅವ್ವೇರಹಳ್ಳಿ ನಂದೀಶ್‌ಗೌಡ ಸ್ವಾಮಿ, ಸಬ್ಬಕೆರೆ ಶಿವಲಿಂಗಪ್ಪ, ಗುನ್ನೂರು ದೇವರಾಜು, ದೊರೆಸ್ವಾಮಿ, ಕೆ.ಶಿವಲಿಂಗಯ್ಯ, ಗುತ್ತಿ​ಗೆ​ದಾರ ಪ್ರಕಾಶ್‌, ಶಿವಲಿಂಗಯ್ಯ, ಅಂಕನಹಳ್ಳಿ ಎಸ್‌. ಮಹೇಶ್‌, ವಡ್ಡರಹಳ್ಳಿ ವೆಂಕಟೇಶ್‌, ಗೌಡಯ್ಯನದೊಡ್ಡಿ ವಾಸು, ತಮ್ಮಣ್ಣ, ಕಾಳಾನಾಯ್ಕ, ಮುತ್ತರಾಜನಾಯ್ಕ, ಬಸವರಾಜು, ರಮೇಶ್‌, ಶ್ರೀನಿವಾಸಮೂರ್ತಿ, ಲಕ್ಷ್ಮೇಕಾಂತ್‌, ಲಕ್ಕೋಜನಹಳ್ಳಿ ನಾಗರಾಜು, ನಂಜಾಪುರ ಚಲುವರಾಜು, ಜಿ.ಟಿ.ಕೃಷ್ಣ, ಮೂರ್ತಿನಾಯ್ಕ, ಭಾಸ್ಕರ್‌, ತಮ್ಮಣ್ಣ, ಚಂದ್ರಗಿರಿ, ಚಲುವರಾಜು, ನಾಗರಾಜು, ಗಿರಿಸ್ವಾಮಿ, ಬೈರಪ್ಪ, ದೇವರಾಜು ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios