ಬಾಗಲಕೋಟೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಬರೋಬ್ಬರಿ 5 ಕೋಟಿ ಹಣ ಜಪ್ತಿ!
ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಐದು ಕೋಟಿ ಹಣ ಜಪ್ತಿ ಮಾಡಲಾಗಿದೆ. ಜಿಲ್ಲೆಯ ಲೋಕಾಪುರ ಪಟ್ಟಣದ ಬಳಿ ಘಟನೆ ನಡೆದಿದೆ.
ಬಾಗಲಕೋಟೆ (ಏ.29): ಬಾಗಲಕೋಟೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಐದು ಕೋಟಿ ಹಣ ಜಪ್ತಿ ಮಾಡಲಾಗಿದೆ. ಜಿಲ್ಲೆಯ ಲೋಕಾಪುರ ಪಟ್ಟಣದ ಬಳಿ ಘಟನೆ ನಡೆದಿದೆ. ಮುಧೋಳ ಚುನಾವಣಾಧಿಕಾರಿಗಳು, ಪ್ಲೈಯಿಂಗ್ ಸ್ಕ್ವಾಡ್, ಲೋಕಾಪುರ ಪೊಲೀಸರಿಂದ ಈ ಹಣವನ್ನು ಜಪ್ತಿ ಮಾಡಲಾಗಿದೆ. ಲೋಕಾಪುರ ಬಳಿ ಲಕ್ಷಾ ನಟ್ಟಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಸಮರ್ಪಕ ದಾಖಲೆಯಿಲ್ಲದ ಹಿನ್ನೆಲೆಯಲ್ಲಿ ಹಣ ಜಪ್ತಿ ಮಾಡಲಾಗಿದೆ. ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಈ ಹಣವನ್ನು ಸಾಗಿಸಲಾಗುತ್ತಿತ್ತು. ಹಣದ ಜೊತೆ ಕಾರಿನಲ್ಲಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ. ಯೂನಿಯನ್ ಬ್ಯಾಂಕ್ ಗೆ ಸೇರಿದ ಹಣ ಎಂಬ ಮಾಹಿತಿ ಇದೆ. ಹಣ ಸಾಗಿಸುವ ಭದ್ರತಾ ಬೊಲೆರೊ ವಾಹನದಲ್ಲಿ ಹುಬ್ಬಳ್ಳಿ ಯೂನಿಯನ್ ಬ್ಯಾಂಕ್ ನಿಂದ ಮುಧೋಳ ಯೂನಿಯನ್ ಬ್ಯಾಂಕ್ ಗೆ ಸಾಗಿಸಲಾಗುತ್ತಿತ್ತು. ಸೂಕ್ತ ದಾಖಲೆ ನೀಡದ ಹಿನ್ನೆಲೆ ಜಪ್ತಿ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ: ಅಧಿಕಾರಿಗಳ ನಿರ್ಲಕ್ಷ್ಯ, ಕಲ್ಯಾಣಿಗೆ ಬಿದ್ದು ಬಾಲಕಿ ಮೃತ್ಯು!
ಉತ್ತರಕನ್ನಡದಲ್ಲಿ ಮತದಾರರಿಗೆ ಹಂಚಲು ತರುತ್ತಿದ್ದ ದಾಖಲೆ ಇಲ್ಲದ ಹಣ ವಶಕ್ಕೆ:
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಚಂದಾವರ ಗ್ರಾಮದ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. Ka -14,C4874 ನೊಂದಣಿಯ ಆಟೋದಲ್ಲಿ ಆಟೋದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಸಾಗಾಟ ಮಾಡಲು ಆರೋಪಿಗಳು ಯತ್ನಿಸಿದ್ದರು. ಈ ಹಣ ಶಿವಮೊಗ್ಗದಿಂದ ಕುಮಟಾಕ್ಕೆ ತರಲಾಗುತ್ತಿತ್ತು ಎಂದು ತಿಳಿದುಬಂದಿದೆ. ಆಟೋದೊಂದಿಗೆ 93 ಲಕ್ಷ ರೂ. ಹಾಗೂ ಇಬ್ಬರು ಆರೋಪಿ ವಶಕ್ಕೆ ಪಡೆದು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮತದಾರರಿಗೆ ಹಂಚಿಕೆ ಮಾಡಲು ಈ ಹಣ ತರಲಾಗುತ್ತಿತ್ತು ಎಂಬುದಾಗಿ ಮಾಹಿತಿ ಲಭ್ಯವಾಗಿದೆ.
Bengaluru: ಕಲ್ಲಿನಿಂದ ಹೊಡೆದು ಯುವಕನ ಕೊಲೆ, ಮೊಬೈಲ್ ಸ್ನಾಚ್ ಮಾಡಲು ಹೋಗಿ ನಡೀ
ಬೆಂಗಳೂರಿನಲ್ಲಿ ದಾಖಲೆ ಇಲ್ಲದೆ ಬೆನ್ಜ್ ಕಾರಿನಲ್ಲಿ ಸಾಗಿಸ್ತಿದ್ದ ಹಣ ಪತ್ತೆ:
ಬೆಂಗಳೂರಿನಲ್ಲಿ ದಾಖಲೆ ಇಲ್ಲದೆ ಸಾಗಿಸ್ತಿದ್ದ ಹಣ ಪತ್ತೆಯಾಗಿದೆ. ಆರ್ ಟಿ ನಗರ ಟಿವಿ ಟವರ್ ಸಮೀಪದ ಚೆಕ್ ಪೋಸ್ಟ್ ಬಳಿ ಚುನಾವಣಾ ಅಧಿಕಾರಿಗಳ ಪರಿಶೀಲನೆ ವೇಳೆ ಹತ್ತು ಲಕ್ಷ ಹಣ ಪತ್ತೆಯಾಗಿದೆ. ಬೆನ್ಜ್ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಹಣ ವಶಕ್ಕೆ ಪಡೆಯಲಾಗಿದೆ. ಮೊಹಮ್ಮದ್ ಷರೀಫ್, ಮಹಮ್ಮದ್ ಯುನೂಸ್ ಎಂಬುವರ ಕಾರಿನಲ್ಲಿ ಹಣ ಪತ್ತೆಯಾಗಿದ್ದು, ವಾಹನ ತಪಾಸಣೆ ವೇಳೆ ಬೆನ್ಜ್ ಕಾರು ತಡೆದು ಪರಿಶೀಲನೆ ನಡೆಸಿದ್ದರಿಂದ ಹತ್ತು ಲಕ್ಷ ನಗದು ಹಣಕ್ಕೆ ಯಾವುದೇ ದಾಖಲೆ ಇಲ್ಲದೇ ಇರೋದು ಪತ್ತೆಯಾಗಿತ್ತು. ಕಾರಿನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ಹಣದ ಬಗ್ಗೆ ವಿಚಾರಣೆ ನಡೆಸಿದಾಗ ಮೊಬೈಲ್ ಸೇಲ್ಸ್ ಅಂಡ್ ಸರ್ವಿಸ್ ಶೋ ನಡೆಸ್ತಿರೋದಾಗಿ ಕಾರಿನ ಮಾಲೀಕ ಹೇಳಿದ್ದಾನೆ. ಹಣ ವಶಪಡಿಸಿಕೊಂಡ ಆರ್.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.