Bengaluru: ಕಲ್ಲಿನಿಂದ ಹೊಡೆದು ಯುವಕನ ಕೊಲೆ, ಮೊಬೈಲ್ ಸ್ನಾಚ್ ಮಾಡಲು ಹೋಗಿ ನಡೀತಾ ಹತ್ಯೆ!?
ಚಿಕ್ಕಬಾಣಾವಾರದ ಪ್ರಾಂಗಣ ಪಂಕ್ಷನ್ ಹಾಲ್ ಬಳಿ ಯುವಕನೋರ್ವನನ್ನು ಕಲ್ಲಿನಿಂದ ಹೊಡೆದು ಥಳಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು (ಏ.29): ಚಿಕ್ಕಬಾಣಾವಾರದ ಪ್ರಾಂಗಣ ಪಂಕ್ಷನ್ ಹಾಲ್ ಬಳಿ ಯುವಕನೋರ್ವನನ್ನು ಕಲ್ಲಿನಿಂದ ಹೊಡೆದು ಥಳಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. 22 ವರ್ಷದ ಅರುಣ್ ಕೊಲೆಯಾದ ಯುವಕನಾಗಿದ್ದಾನೆ. ಐವರು ಯುವಕರಿಂದ ಅರುಣ್ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಪಂಕ್ಷನ್ ಹಾಲ್ ಬಳಿ ಕೆಲಸಕ್ಕಾಗಿ ನಿಂತಿದ್ದರು. ಮಾದನಾಯಕನಹಳ್ಳಿಯಲ್ಲಿ ಡೆಕೋರೇಟರ್ ಹಾಗೂ ಡ್ರೈವರ್ ಆಗಿ ಆರೋಪಿಗಳು ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಸ್ನೇಹಿತನ ಜೊತೆ ಮೃತ ಅರುಣ್ ಬೈಕ್ ನಲ್ಲಿ ಬಂದಿದ್ದನು. ಈ ವೇಳೆ ಮೊಬೈಲ್ ಕಸಿಯಲು ಅರುಣ್ ಮುಂದಾಗಿದ್ದ ಎನ್ನುವ ಮಾಹಿತಿ ಇದೆ. ಹೀಗಾಗಿ ಕಲ್ಲಿನಿಂದ ಅರುಣ್ ಗೆ ಎ 1 ಆರೋಪಿ ಹೊಡಿದ್ದಾನೆ. ಅತ ಬಿದ್ದ ತಕ್ಷಣ ಐವರು ಆರೋಪಿಗಳು ಅತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ತೀವ್ರ ಥಳಿತಕ್ಕೊಳಗಾದ ಅರುಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಡರಾತ್ರಿ ಒಂದು ಗಂಟೆ ಸುಮಾರಿಗೆ ನಡೆದ ಘಟನೆ ನಡೆದಿದ್ದು, ಈ ಹಿಂದೆ ಕೂಡ ಸಾಕಷ್ಟು ರೌಡಿ ಎಲಿಮೆಂಟ್ಸ್ ನಲ್ಲಿ ಅರುಣ್ ಭಾಗಿಯಾಗಿದ್ದ ಎನ್ನಲಾಗಿದೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗನಿಂದ ಪಂಚಾಯಿತಿ ಸದಸ್ಯನಿಗೆ ಪ್ರಾಣ ಬೆದರಿಕೆ,
ಪತ್ನಿ ಕೊಲೆ, ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಬಾಗಲಕೋಟೆ: ಪತ್ನಿಯ ಶೀಲದ ಬಗ್ಗೆ ಸಂಶಯ ಪಟ್ಟು ಕೊಲೆ ಮಾಡಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ, .10 ಸಾವಿರ ದಂಡ ಮತ್ತು 3 ವರ್ಷ ಜೈಲು, .5 ಸಾವಿರಗಳ ದಂಡ ಹಾಗೂ ಮೃತಳ ಮಕ್ಕಳಿಗೆ ಪರಿಹಾರ ನೀಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಮಗಳ ಕತ್ತು ಹಿಸುಕಿ ಬಾಯಿಗೆ ಟಾಯ್ಲೆಟ್ ಕ್ಲೀನರ್ ಸುರಿದ ಪಾಪಿ ತಂದೆ: ಸಾವು ಬದುಕಿನ ನಡುವೆ ಹೋರಾಟ!
ಮೀರಾಸಾಬ ಸಹನಶಾಸಾಬ ಶಾಹಾಪೂರ ಕೊಲೆ ಮಾಡಿದ ಆರೋಪಿಯಾಗಿದ್ದು, ಈತನ ಪತ್ನಿ ಖೈರುನಭಿ ಅವಳನ್ನು 15 ವರ್ಷಗಳ ಹಿಂದೆ ಮದುವೆಯಾಗಿದ್ದ. ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟು ಹೊಡಿಯುವುದು ಮಾಡುತ್ತಿದ್ದ. ಮೃತ ಖೈರುನಭಿಯನ್ನು ರಾತ್ರಿ ಕೊಲೆಗೈದ ಹಿನ್ನೆಲೆಯಲ್ಲಿ ಬಾಗಲಕೋಟೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಚಾರಣೆ ವೇಳೆ ಆರೋಪಿಯ ಅಪರಾಧ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಆತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸರ್ಕಾರದ ಪರವಾಗಿ ಪ್ರಧಾನ ಸರಕಾರಿ ಅಭಿಯೋಜಕ ವಿ.ಜಿ.ಹೆಬಸೂರ ವಾದ ಮಂಡಿಸಿದ್ದರು.