ಕಲ್ಯಾಣಿಗೆ ಬಿದ್ದು ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರದ ಹೊಸಕೋಟೆಯ ನಂದಗುಡಿಯಲ್ಲಿ ನಡೆದಿದೆ.

ಹೊಸಕೋಟೆ (ಏ.29):  ಕಲ್ಯಾಣಿಗೆ ಬಿದ್ದು ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರದ ಹೊಸಕೋಟೆಯ ನಂದಗುಡಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಹರ್ಷಿತ (15) ಎಂದು ಗುರುತಿಸಲಾಗಿದೆ. ನಂದಗುಡಿ ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿಯಾಗಿದ್ದು, ಅಭಿಲಾಷ್ (6) ಎಂಬ ಮಗು ಪ್ರಾಣಾಪಾಯದಿಂದ ಅದೃಷ್ಟವಶಾತ್ ಪಾರಾಗಿದೆ. ನಂದಗುಡಿ ಗ್ರಾ.ಪಂ ಅಧಿಕಾರಿಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದ ಕಲ್ಯಾಣಿಯಲ್ಲಿ ಹೂಳು ತುಂಬಿತ್ತು. ಕಲ್ಯಾಣಿ ಬಿದ್ದು ಬಾಲಕಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬಸ್‌ ಡಿಕ್ಕಿಯಾಗಿ ಪಾದಚಾರಿ ಸಾವು: ಚಾಲಕನಿಗೆ ಸಜೆ ತೀರ್ಪು
ಮಂಗಳೂರು: ಬಸ್‌ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಪ್ರಕರಣದಲ್ಲಿ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯ ಬಸ್‌ ಚಾಲಕನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬಸ್‌ ಚಾಲಕ ಕೃಷ್ಣಾಪುರ ಕಾಟಿಪಳ್ಳ 7ನೇ ಬ್ಲಾಕ್‌ನ ನಿವಾಸಿ ಉಸ್ಮಾನ್‌(37) ಶಿಕ್ಷೆಗೊಳಗಾದ ಆರೋಪಿ. ಘಟನೆಯಲ್ಲಿ ಕೃಷ್ಣಾಪುರದ ಸುಂದರ್‌ ಸಾಲಿಯಾನ್‌(70) ಮೃತಪಟ್ಟಿದ್ದರು.

2020ರ ಜ.16ರಂದು ಬೆಳಗ್ಗೆ 10.20ಕ್ಕೆ ಸುಂದರ್‌ ಸಾಲಿಯಾನ್‌ ಅವರು ಬೈಕಂಪಾಡಿ ಜಂಕ್ಷನ್‌ ಬಳಿ ಬಸ್‌ ನಿಲ್ದಾಣದ ಎದುರು ಬಸ್‌ಗಾಗಿ ಕಾಯುತ್ತಿದ್ದರು. ಆಗ ಜೋಕಟ್ಟೆಕ್ರಾಸ್‌ ಕಡೆಯಿಂದ ಉಸ್ಮಾನ್‌ ಎಂಬಾತ ಬಸ್‌ನ್ನು ತೀರಾ ಎಡಬದಿಗೆ ಚಲಾಯಿಸಿಕೊಂಡ ಬಂದ ಸಿಟಿಬಸ್‌ ಸುಂದರ್‌ ಅವರಿಗೆ ಢಿಕ್ಕಿ ಹೊಡೆದು ಬಸ್‌ನ ಎದುರಿನ ಎಡಬದಿಯ ಚಕ್ರ ಅವರ ಎಡಬದಿಯ ಕಾಲು ಮತ್ತು ಸೊಂಟದ ಮೇಲೆ ಹಾದು ಹೋಗಿ ಗಂಭೀರವಾಗಿ ಗಾಯಗೊಂಡಿದ್ದರು. ಸುಂದರ್‌ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಬಗ್ಗೆ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

BENGALURU: ಕಲ್ಲಿನಿಂದ ಹೊಡೆದು ಯುವಕನ ಕೊಲೆ, ಮೊಬೈಲ್ ಸ್ನಾಚ್ ಮಾಡಲು ಹೋಗಿ ನಡೀತಾ ಹತ್ಯೆ!?

ತೋಟದ ಕೆರೆಗೆ ಬಿದ್ದು ಯುವಕ ಸಾವು
ಪುತ್ತೂರು: ತೋಟದ ಕೆರೆಯ ಪಾಚಿ ತೆಗೆಯಲು ಹೋದ ವಿವಾಹಿತ ಯುವಕ ಆಕಸ್ಮಿಕವಾಗಿ ಕೆರೆಯ ಆಳಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟಘಟನೆ ಪಾಲ್ತಾಡಿ ಗ್ರಾಮದ ಕಾಪುತಮೂಲೆ ಎಂಬಲ್ಲಿ ಶುಕ್ರವಾರ ನಡೆದಿದೆ. ಪಾಲ್ತಾಡಿ ಗ್ರಾಮದ ಕಾಪುತಮೂಲೆ ನಿವಾಸಿ ಮೋನಪ್ಪ ನಾಯ್ಕ ಎಂಬವರ ಪುತ್ರ ಗೋಪಾಲಕೃಷ್ಣ ಕೆ.(34) ಮೃತರು. ತಮ್ಮ ತೋಟದ ಕೆರೆಯಲ್ಲಿದ್ದ ಪಾಚಿಯನ್ನು ತೆರವು ಮಾಡುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ ಕೆರೆಯ ಆಳಕ್ಕೆ ಬಿದ್ದು ಮೃತ ಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ಒಬ್ಬರೇ ಕೆರೆಯ ಬಳಿಗೆ ಹೋಗಿದ್ದರು ಎಂದು ತಿಳಿದು ಬಂದಿದೆ. ಬಳಿಕ ಮನೆಯವರು ನೋಡಿದಾಗ ಅವರ ಚಪ್ಪಲಿ ಕೆರೆಯ ನೀರಿನಲ್ಲಿ ತೇಲುತ್ತಿತ್ತು. ಇದರಿಂದಾಗಿ ಅವರು ಕೆರೆಗೆ ಬಿದ್ದಿರುವುದು ದೃಡಪಟ್ಟಿತ್ತು. ತಕ್ಷಣವೇ ಅವರನ್ನು ನೀರಿನ ಆಳದಿಂದ ಮೇಲಕ್ಕೆತ್ತಿ ಕೆಯ್ಯೂರಿನ ಆಸ್ಪತ್ರೆಗೆ ತರಲಾಗಿತ್ತು. ಬಳಿಕ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ತರಲಾಯಿತು. ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗನಿಂದ ಪಂಚಾಯಿತಿ ಸದಸ್ಯನಿಗೆ ಪ್ರಾಣ ಬೆದರಿಕೆ, 

ಅವರು ಪಡುಬಿದ್ರಿಯ ಅದಾನಿ ಪವರ್‌ ಲಿಮಿಟೆಡ್‌ನಲ್ಲಿ ಎಲೆಕ್ಟ್ರಿಕಲ್‌ ಮೆಂಟೈನೆನ್ಸ್‌ ಟೆಕ್ನಿಶಿಯನ್‌ ಆಗಿದ್ದರು. ಗುರುವಾರ ರಜಾ ದಿನವಾಗಿತ್ತು. ಅವರು 6 ತಿಂಗಳ ಗರ್ಭಿಣಿಯಾದ ಪತ್ನಿ, ತಂದೆ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.