Karnataka Election 2023: ಬಳ್ಳಾರಿಯಲ್ಲಿ ಪಕ್ಷಗಳ ಕಾರ್ಯಕರ್ತರ ಮಾರಾಮಾರಿ, ಕಂಪ್ಲಿಯಲ್ಲಿ 103 ವರ್ಷದ ಅಜ್ಜಿಯ ಜವಾಬ್ದಾರಿ!

ಒಂದೆಡೆ ರಾಜ್ಯದಲ್ಲಿ ಮತದಾನದ ಬಿರುಸು ಜೋರಾಗಿದ್ದರೆ, ಇನ್ನೊಂದೆಡೆ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವ ಘಟನೆಗಳೂ ವರದಿಯಾಗಿದೆ. ಬ್ಯಾಟರಾಯನಪುರದಲ್ಲಿ ಮಾತ್ರವಲ್ಲದೆ ಬಳ್ಳಾರಿ ಗ್ರಾಮಾಂತರದಲ್ಲ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಘರ್ಷಣೆ ಮಾಡಿಕೊಂಡಿದ್ದಾರೆ.
 

Karnataka Election 2023 Fight fight between Congress and BJP Workers in Ballari san

ಬಳ್ಳಾರಿ (ಮೇ.10) : ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ತಕರ್ತರ ನಡುವೆ ಮಾರಾಮಾರಿ ನಡೆದಿದೆ. ಸಂಜೀವರಾಯನಕೋಟೆ ಗ್ರಾಮದಲ್ಲಿ ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಘಟನೆಯಲ್ಲಿ ಕಾಂಗ್ರೆಸ್  ಸ್ಥಳೀಯ ಮುಖಂಡ  ಉಮೇಶ್ ಗೌಡ ತಲೆಗೆ ಗಾಯವಾಗಿದೆ. ಇತ್ತೀಚಿಗಷ್ಟೇ ಉಮೇಶ್‌ ಗೌಡ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಪಕ್ಷ ಸೇರಿದ್ದರು. ಮತದಾನಕ್ಕೆ ತೆರಳುವ ಸಮಯದಲ್ಲಿ ವೇಳೆ ಸಣ್ಣ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಉಮೇಶ್ ಗೌಡ ಅವರಿಗೆ ತಲೆಗೆ ಕಲ್ಲೇಟು ಬಿದ್ದಿದ್ದು, ರಕ್ತ ಸುರಿದು ಗಾಯವಾಗಿದೆ. ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಪೋಲಿಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಇನ್ನು ಶಾಸಕ ಸೋಮಶೇಖರ್ ರೆಡ್ಡಿ ಮತದಾನದ ಮಾಡಿದ್ದಾರೆ. ಪತ್ನಿ ಮಕ್ಕಳೊಂದಿಗೆ ಬಂದು ಸೋಮಶೇಖರ್‌ ರೆಡ್ಡಿ ಮತದಾನ ಮಾಡಿದ್ದಾರೆ. ಇದೇ ವೇಳೆ ಬಳ್ಳಾರಿ ನಗರ ಶಾಸಕ ಸೋಮಶೇಖರ್‌ ರೆಡ್ಡಿ ಗೆಲುವಿನ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.' ಅಭಿವೃದ್ಧಿಗಾಗಿ ಈ ಬಾರಿ ಮತವನ್ನು ನೀಡ್ತಾರೆ. ದೇವರ ಆಶೀರ್ವಾದ ಜನರ ಆಶೀರ್ವಾದ ನನ್ನ ಮೇಲಿದೆ. ಕಸಾಪುರ ಆಂಜನೇಯನನ್ನು ನಂಬಿದ್ದೇನೆ ಆಂಜನೇಯ ನನ್ನ ಕೈ ಬಿಡೋದಿಲ್ಲ ಎಂದ ಸೋಮಶೇಖರ್‌ ರೆಡ್ಡಿ ಈ ವೇಳೆ ಕೆಆರ್‌ಪಿಪಿ ಕಾರ್ಯಕರ್ತರ ವಿರುದ್ಧ ಮತ್ತೊಮ್ಮೆ ಹರಿಹಾಯ್ದರು.

ಕೆಆರ್‌ಪಿಪಿ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರಿಗೆ‌ ಬೆದರಿಕೆ ಹಾಕ್ತಿದ್ದಾರೆ. ಹದಿಮೂರನೇ ತಾರಿಖಿನ ಬಳಿಕ ಬಳ್ಳಾರಿಯಲ್ಲಿ ಆಂಧ್ರ ಮಾದರಿ ರಾಜಕೀಯ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಜಗ್ಗೋ ಮಾತಿಲ್ಲ.. ಕಾನೂನು ಹೋರಾಟ ಮಾಡೋ ಬಗ್ಗೆ ಚಿಂತನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

Karnataka Elections 2023 LIVE: ದಕ್ಷಿಣ ಕನ್ನಡದಲ್ಲಿ ಶೇ.12, ಒಟ್ಟಾರೆ ಶೇ8ರಷ್ಟು ಮತದಾನ 

ಇನ್ನು ಬಳ್ಳಾರಿಯ ಕಂಪ್ಲಿಯಲ್ಲಿ 103 ವರ್ಷದ ಅಜ್ಜಿಯಿಂದ ಮತದಾನವಾಗಿದೆ. ಮನೆಯಲ್ಲಿ ಕುಳಿತು ಮತದಾನ ಮಾಡಲು ಅವಕಾಶ ಇದ್ದರೂ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದ್ದಾರೆ. ನಾನು ಗಟ್ಡಿಮುಟ್ಟಾಗಿದ್ದೇನೆ. ಹೀಗಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದೇನೆಂದು ಅಜ್ಜಿ ಹೇಳಿದ್ದಾರೆ. ಆ ಮೂಲಕ ಮತದಾನ ಮಾಡಲು ನಿರ್ಲಕ್ಷ್ಯ ಮಾಡೋರಿಗೆ ಅಜ್ಜಿ ಮಾದರಿಯಾಗಿದ್ದಾರೆ.
ಇನ್ನು ಬಳ್ಳಾರಿಯಲ್ಲಿ ಬೆಳಗ್ಗೆ 9 ಗಂಟೆಯ ಹೊತ್ತಿಗೆ  8.84% ರಷ್ಟು ಮತದಾನವಾಗಿದ್ದರೆ,  ವಿಜಯನಗರದಲ್ಲಿ  6.82 % ಮತದಾನವಾಗಿದೆ.

Karnataka Assembly Election voting: ಅಮೇರಿಕಾದಿಂದ ಬಂದು ತಮ್ಮ ಹಕ್ಕು ಚಲಾಯಿಸಿದ ಮಹಿಳೆ!

Latest Videos
Follow Us:
Download App:
  • android
  • ios