Karnataka Assembly Election voting: ಧರ್ಮಸ್ಥಳದಲ್ಲಿ ಮದುವೆಯಾಗಿ ಡೈರೆಕ್ಟ್ ಮತಗಟ್ಟೆಗೆ ಬಂದ ವರ!
ಬೆಂಗಳೂರು (ಮೇ.10): ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮತದಾನ ಪ್ರಭುಗಳು ಬೆಳಗ್ಗಿನಿಂದಲೇ ಉತ್ಸಾಹದಿಂದ ಬಂದು ಮತದಾನ ಮಾಡಿದ್ದಾರೆ. ಹೊರದೇಶದಲ್ಲಿರುವ ಕೆಲವರು ತಮ್ಮೂರಿಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದಲ್ಲದೆ ವಿಶೇಷಚೇತನರು, ವೃದ್ದರು ಉತ್ಸಾಹದಿಂದ ಬಂದು ತಮ್ಮ ಹಕ್ಕು ಚಲಾಯಿಸಿದರು.
ಧರ್ಮಸ್ಥಳದಲ್ಲಿ ಮದುವೆಯಾಗಿ ಬಂದು ನೇರವಾಗಿ ಮತಗಟ್ಟೆಗೆ ಬಂದ ಮದುಮಗ. ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಮತಗಟ್ಟೆ 85 ರಲ್ಲಿ ಹಕ್ಕು ಚಲಾವಣೆ ಮಾಡಿದ ರೋಹಿತ್. ರೋಹಿತ್ ಸಕಲೇಶಪುರದ, ಮಹೇಶ್ವರಿ ನಗರದ ನಿವಾಸಿ ಇಂದು ಧರ್ಮಸ್ಥಳದಲ್ಲಿ ನಂದಿನಿ ಜೊತೆ ವಿವಾಹವಾಗಿ ಸಕಲೇಶಪುರಕ್ಕೆ ಬಂದು ಮತ ಚಲಾವಣೆ ಮಾಡಿದ್ದಾರೆ.
ರಾಜ್ಯ ವಿಧಾನಸಭೆ ಮತದಾನ ಹಿನ್ನೆಲೆ ಧಾರವಾಡದಲ್ಲಿ ಮೊದಲ ಮತದಾನ ಮಾಡಿದ ನಂತರ ಸೆಲ್ಫಿ ತೆಗೆದುಕೊಂಡು ಯುವತಿಯರು ಖುಷಿಪಟ್ಟರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಮಾಕೋನಹಳ್ಳಿ ಮತಗಟ್ಟೆಗೆ ಬಂದು ಮದುಮಗಳು ಮದುವೆಗೆ ಮುನ್ನ ತಮ್ಮ ಹಕ್ಕು ಚಲಾಯಿಸಿದರು.
ಚುನಾವಣೆಯಲ್ಲಿ ಮತದಾನಕ್ಕೋಸ್ಕರ ದೂರದ ಅಮೇರಿಕಾದಿಂದ ಆಗಮಿಸಿದ ಶಿರಸಿಯ ಬೆಟ್ಟಕೊಪ್ಪದ ಅಶ್ವಿನಿ ರಾಜಶೇಖರ ಭಟ್ಟ ಮತದಾನ ಮಾಡಿ ಕಾನಗೋಡ ಮತಗಟ್ಟೆ ಮೂಲಕ ಹಕ್ಕು ಚಲಾಯಿಸಿದರು.
ಪಾರ್ಸಿಯಿಂದ ಬಳಲುತ್ತಿರುವ ಕೊಪ್ಪಳ ಜಿಲ್ಲೆಯ ಕುಕನೂರಿನ ಅನ್ವರ್ ಸಾಬ್ ಅನಾರೋಗ್ಯ ಮಧ್ಯೆಯೂ ಆಟೋದಲ್ಲಿ ಬಂದು ಮತದಾನ ಮಾಡಿದರು.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಚೇತನರು ಮತಗಟ್ಟೆಗೆ ಬಂದು ಮತದಾನ ಮಾಡಿದರು.
election
ಕೋಲಾರದಲ್ಲಿ 93 ವರ್ಷದ ವೃದ್ಧೆ ಮಾತದಾನ ಮಾಡಿದ್ದಾರೆ. ಕೋಲಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬೂತ್ ನಲ್ಲಿ ಮತದಾನ. ಸುಬ್ಬಲಕ್ಷ್ಮಮ್ಮ ಮತದಾನ ಮಾಡಿರುವ ವೃದ್ಧೆ. ಮತಗಟ್ಟೆ ಸಂಖ್ಯೆ 135 ರಲ್ಲಿ ಮತದಾನ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ತನ್ನ ಪ್ರಥಮ ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದ ಯುವತಿ. ದಿಶಾ ಹರಿಕಂತ್ರ ಪ್ರಥಮ ಮತದಾನ ಮಾಡಿದ ಯುವತಿ.
ಚಿಕ್ಕಮಗಳೂರಿನ ಸಿ.ಟಿ.ರವಿ ಬೂತ್ ನಲ್ಲಿ ಮೊದಲ ಮತದಾನ. 80 ವರ್ಷದ ವೃದ್ಧೆ ಕಣ್ಣಮ್ಮರಿಂದ ಮತದಾನ. ಈಕೆ ನಗರದಲ್ಲಿ ತರಕಾರಿ ಮಾರುವ ವೃದ್ಧೆ. ಅಜ್ಜಿಯ ಮತದಾನದ ಉತ್ಸವಕ್ಕೆ ಅಧಿಕಾರಿಗಳು ಫಿದಾ
ಬಳ್ಳಾರಿಯಲ್ಲಿ ಕಂಪ್ಲಿಯಲ್ಲಿ 103 ವರ್ಷದ ಅಜ್ಜಿ ಮತದಾನ ಮಾಡಿದ್ದಾರೆ. ಮನೆಯಲ್ಲಿ ಕುಳಿತು ಮತದಾನ ಮಾಡಲು ಅವಕಾಶ ಇದ್ರೂ. ನಾನು ಗಟ್ಡಿಮುಟ್ಟಾಗಿದ್ದೇನೆ. ಹೀಗಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದೇನೆಂದು ಅಜ್ಜಿ ಹೇಳಿದ್ದು, ಮತದಾನ ಮಾಡಲು ನಿರ್ಲಕ್ಷ್ಯ ಮಾಡೋರಿಗೆ ಮಾದರಿಯಾಗಿದ್ದಾರೆ.
ಚುನಾವಣೆ ಹಿನ್ನೆಲೆ ಮತಗಟ್ಟೆಯಲ್ಲಿ ಸಾಲುಗಟ್ಟಿ ನಿಂತು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಲು ಸಾಲು ಗಟ್ಟಿ ನಿಂತಿರುವ ಮಹಿಳೆಯರು
ballari
ಎರಡು ಕೈ ಇಲ್ಲದ ದಿವ್ಯಾಂಗ ನಿಂದ ಮತದಾನ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೊಳಗಲ್ಲು ಗ್ರಾಮದ ಮತಗಟ್ಟೆಯಲ್ಲಿ ಮುಸ್ತಫಾ ಅವರಿಂದ ಮತದಾನ