Asianet Suvarna News Asianet Suvarna News

ಕಾಂಗ್ರೆಸ್‌ನದ್ದು ಬೋಗಸ್‌ ಪ್ರಣಾಳಿಕೆ: ಸಿಎಂ ಬೊಮ್ಮಾಯಿ ಲೇವಡಿ

ಕಾಂಗ್ರೆಸ್‌ ಸರ್ಕಾರ ಹೊರಡಿಸಿದ ಪ್ರಣಾಳಿಕೆ ಸಂಪೂರ್ಣ ಬೋಗಸ್‌ನಿಂದ ಕೂಡಿದೆ. ನಾವು ಹೊರಡಿಸಿರುವ ಪ್ರಣಾಳಿಕೆಗಳನ್ನೇ ಕದ್ದಿದ್ದಾರೆ. ಇನ್ನು ಕೆಲವುಗಳನ್ನು ಈಡೇರಿಸಲು ಸಾಧ್ಯವಾಗದಂತಹ ಸುಳ್ಳಿನ ಕಂತೆಗಳನ್ನು ಅಳವಡಿಸಿದ್ದಾರೆ. 

Karnataka Election 2023 Congress has a bogus manifesto Says CM Basavaraj Bommai gvd
Author
First Published May 3, 2023, 7:23 AM IST

ಹುಬ್ಬಳ್ಳಿ (ಮೇ.03): ಕಾಂಗ್ರೆಸ್‌ ಸರ್ಕಾರ ಹೊರಡಿಸಿದ ಪ್ರಣಾಳಿಕೆ ಸಂಪೂರ್ಣ ಬೋಗಸ್‌ನಿಂದ ಕೂಡಿದೆ. ನಾವು ಹೊರಡಿಸಿರುವ ಪ್ರಣಾಳಿಕೆಗಳನ್ನೇ ಕದ್ದಿದ್ದಾರೆ. ಇನ್ನು ಕೆಲವುಗಳನ್ನು ಈಡೇರಿಸಲು ಸಾಧ್ಯವಾಗದಂತಹ ಸುಳ್ಳಿನ ಕಂತೆಗಳನ್ನು ಅಳವಡಿಸಿದ್ದಾರೆ. ಇವುಗಳನ್ನು ಈಡೇರಿಸಲು ಕಾಂಗ್ರೆಸ್‌ಗೆ .6 ಲಕ್ಷ ಕೋಟಿ ಬೇಕು. ಇಷ್ಟೊಂದು ಹಣ ಎಲ್ಲಿಂದ ತರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು. ಮಂಗಳವಾರ ಧಾರವಾಡದ ನವಲಗುಂದ, ಕುಂದಗೋಳ, ಹಾವೇರಿಯ ಹಾನಗಲ್ಲ ಮತ್ತು ಗದಗದ ಶಿರಹಟ್ಟಿಕ್ಷೇತ್ರಗಳಲ್ಲಿ ಹಮ್ಮಿಕೊಂಡಿದ್ದ ರೋಡ್‌ ಶೋದಲ್ಲಿ ಪಾಲ್ಗೊಂಡು ಅಭ್ಯರ್ಥಿ ಪರ ಮತಯಾಚಿಸಿ, ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮತ್ತೆ ಜನರಿಂದ ಲೂಟಿ ಮಾಡಿ, ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುವ ಹುನ್ನಾರವಿದೆ. ಕಾಂಗ್ರೆಸ್‌ನವರ ಮನಸ್ಥಿತಿ ಹೇಗಿದೆ ಎಂದರೆ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು. ಯಾರಿಗೆ ಏನಾದರೂ ಚಿಂತೆಯಿಲ್ಲ ನಾವು ಅಧಿಕಾರದಲ್ಲಿಬೇಕು ಎಂಬುದು. ಗ್ಯಾರಂಟಿ ಕಾರ್ಡ್‌ಗಳನ್ನು ಹಿಡಿದು ಮತ ಕೇಳುತ್ತಿರುವ ಕಾಂಗ್ರೆಸ್‌ನ ಗ್ಯಾರಂಟಿ ಮೇ 10ರವರೆಗೆ ಮಾತ್ರ. ಆನಂತರ ಬರಿ ಗಳಗಂಟಿ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು. 

ರಾಮ ಆಯ್ತು, ಈಗ ಕಾಂಗ್ರೆಸ್‌ನಿಂದ ಹನುಮನೂ ಬಂಧಿ: ಪ್ರಧಾನಿ ಮೋದಿ ವಾಗ್ದಾಳಿ

ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನತೆಗೆ ಅನ್ನಭಾಗ್ಯದ ಹೆಸರಲ್ಲಿ ಕನ್ನಭಾಗ್ಯ ನೀಡಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅನ್ನಭಾಗ್ಯದ ಹೆಸರಲ್ಲಿ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಅನ್ನಭಾಗ್ಯದ 10 ಕೆ.ಜಿ.ಅಕ್ಕಿ ಮೋದಿ ಅವರದು ಆದರೆ, ಮೇಲಿನ .3 ಚೀಲ ಮಾತ್ರ ಸಿದ್ದರಾಮಯ್ಯನವರದು. ಮೋದಿ ಸರ್ಕಾರ ನೀಡಿದ ಅಕ್ಕಿ ಚೀಲದ ಮೇಲೆ ಕಾಂಗ್ರೆಸ್‌ ಹೆಸರು ಹಾಕಿ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದರು.

ನಮ್ಮದು ವಿಕಾಸ, ವಿಶ್ವಾಸದ ಗ್ಯಾರಂಟಿ: ಬಹುತೇಕ ಕಾಂಗ್ರೆಸ್‌ ಮುಖಂಡರಿಗೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವ ಎಲ್ಲ ಸೂಚನೆಗಳು ಸಿಕ್ಕಿದೆ. ಇದರಿಂದ ಹತಾಶರಾಗಿ ಕಾಂಗ್ರೆಸ್‌ ಮುಖಂಡರು ಪ್ರಧಾನಿ ಮೋದಿ, ನನಗೂ ಸೇರಿದಂತೆ ಎಲ್ಲರಿಗೂ ಬೈಯುವಂತಹ ನೀಚ ಪ್ರವೃತ್ತಿಗೆ ಇಳಿದಿದ್ದಾರೆ. ನಮ್ಮದು ವಿಕಾಸ ಮತ್ತು ವಿಶ್ವಾಸದ ಗ್ಯಾರಂಟಿ, ಕಾಂಗ್ರೆಸ್‌ ಪಕ್ಷದ್ದು ಬರೀ ಗಳಗಂಟಿ. ನಮ್ಮ ಕೆಲಸ ಕಾರ್ಯಗಳನ್ನು ಹೇಳಿ ಜನರಿಂದ ಮತ ಪಡೆಯುತ್ತೇವೆ. ಕಾಂಗ್ರೆಸ್‌ ಹಾಗೇ ವಿಷ ಬೀಜ ಬಿತ್ತಿ ಮತ ಪಡೆಯುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.

40% ಕಮಿಷನ್‌ನ ಬಿಜೆಪಿಗೆ 40 ಸೀಟು ಮಾತ್ರ ಕೊಡಿ: ರಾಹುಲ್‌ ಗಾಂಧಿ

ಕಾಂಗ್ರೆಸ್ಸಿಗಿದು ಕೊನೆ ಚುನಾವಣೆ: ಕಾಂಗ್ರೆಸ್ಸಿಗಿದು ಕೊನೆ ಚುನಾವಣೆ, ಹಿಂದುಳಿದವರ ಹಿಂದಿಟ್ಟು ತಾವು ಮಾತ್ರ ಮುಂದೆ ಹೋದವರು ಕಾಂಗ್ರೆಸ್‌ ನಾಯಕರು. ಕಾಂಗ್ರೆಸ್ಸಿಗರು ಕೊಡ್ತೀನಿ, ಕೊಡಿಸ್ತೀನಿ, ಕೊಡೋರಿಗೆ ಹೇಳ್ತೀನಿ ಅಂತ ಕಾಲ ದೂಡಿ ಮತದಾರರಿಗೆ ಮೋಸ ಮಾಡುವವರು. ನಾವು ಮಾಡಿದ ಅಭಿವೃದ್ಧಿಯನ್ನು ಮಾಡುತ್ತೇವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಬಿಜೆಪಿ ಈ ಬಾರಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios