40% ಕಮಿಷನ್‌ನ ಬಿಜೆಪಿಗೆ 40 ಸೀಟು ಮಾತ್ರ ಕೊಡಿ: ರಾಹುಲ್ ಗಾಂಧಿ
‘40% ಕಮಿಷನ್‌ನ ಬಿಜೆಪಿಯವರಿಗೆ 40 ನಂಬರ್‌ನ ಮೇಲೆ ತುಂಬಾ ವ್ಯಾಮೋಹವಿದೆ. ಸರ್ಕಾರಿ ನೇಮಕಾತಿ, ಕಾಮಗಾರಿ ಗುತ್ತಿಗೆ, ಸರ್ಕಾರಿ ಸೇವೆ... ಹೀಗೆ ಎಲ್ಲದರಲ್ಲೂ 40% ಕಮಿಷನ್ ಪಡೆಯುವ ಬಿಜೆಪಿಗೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ 40 ಸೀಟನ್ನು ಮಾತ್ರ ನೀಡಿ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಹರಿಹರ (ಮೇ.03): ‘40% ಕಮಿಷನ್‌ನ ಬಿಜೆಪಿಯವರಿಗೆ 40 ನಂಬರ್‌ನ ಮೇಲೆ ತುಂಬಾ ವ್ಯಾಮೋಹವಿದೆ. ಸರ್ಕಾರಿ ನೇಮಕಾತಿ, ಕಾಮಗಾರಿ ಗುತ್ತಿಗೆ, ಸರ್ಕಾರಿ ಸೇವೆ... ಹೀಗೆ ಎಲ್ಲದರಲ್ಲೂ 40% ಕಮಿಷನ್ ಪಡೆಯುವ ಬಿಜೆಪಿಗೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ 40 ಸೀಟನ್ನು ಮಾತ್ರ ನೀಡಿ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್ 150 ಸ್ಥಾನ ಗೆದ್ದು, ಅಧಿಕಾರಕ್ಕೆ ಬಂದರೆ, ಬಿಜೆಪಿ ಲೂಟಿ ಮಾಡಿದ ಎಲ್ಲಾ ಹಣವನ್ನು ವಾಪಸ್ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ರಾಹುಲ್, ಮಂಗಳವಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಹರಿಹರಗಳಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಈ ಮಧ್ಯೆ, ಹರಿಹರದದ ಗಾಂಧಿ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ನಂದಿಗಾವಿ ಪರ ಪ್ರಚಾರ ನಡೆಸಿದ ರಾಹುಲ್, ಬಿಜೆಪಿ ವಿರುದ್ಧ ಹರಿಹಾಯ್ದರು. ಕಳೆದ ಮೂರು ವರ್ಷದಿಂದ ಬಿಜೆಪಿ ಸರ್ಕಾರ ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡಿದೆ.
ಯಾರು ಏನೇ ಅಪಪ್ರಚಾರ ಮಾಡಿದರೂ ಜೆಡಿಎಸ್ ಅಧಿಕಾರಕ್ಕೆ ಬರುವುದು ತಪ್ಪಿಸಲಾಗದು: ಎಚ್‌ಡಿಕೆ
ಪ್ರತಿ ಕೆಲಸಕ್ಕೂ 40% ಕಮಿಷನ್ ಇಲ್ಲದೆ ಯಾವ ಕೆಲಸ ಕಾರ್ಯ ಸಹ ಆಗದ ಪರಿಸ್ಥಿತಿಯನ್ನು ನಿರ್ಮಿಸಿದೆ. ಇದುವೇ ಬಿಜೆಪಿಯ ಸಾಧನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಿಜೆಪಿ ಸರ್ಕಾರ ಲೂಟಿ ಮಾಡಿರುವ ಅಷ್ಟೂಹಣವನ್ನು ರಾಜ್ಯದ ಜನರಿಗೆ ವಾಪಸ್ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು. ಇದಕ್ಕೂ ಮೊದಲು ತೀರ್ಥಹಳ್ಳಿಯಲ್ಲಿ ಮಾತನಾಡಿ, ಮೋದಿಯವರೇ, ನಿಮ್ಮ ಬಗ್ಗೆ ನೀವೇ ಮಾತನಾಡುವುದನ್ನು ದಯವಿಟ್ಟು ನಿಲ್ಲಿಸಿ. ಕರ್ನಾಟಕಕ್ಕೆ ಬಂದಾಗ ಇಲ್ಲಿನ ಬಗ್ಗೆ ಮಾತನಾಡಿ. ಕಳೆದ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದೆ? 60%ರಷ್ಟು ಭರವಸೆಗಳನ್ನೂ ಸಹ ಈಡೇರಿಸಿಲ್ಲ.
ಬಿಜೆಪಿಗೆ ಕೇವಲ 40 ಸೀಟು ಮಾತ್ರ ನೀಡಿ: ರಾಹುಲ್ ಗಾಂಧಿ
ಈ ಬಗ್ಗೆ ಹೇಳಿ. ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಉಂಟಾದಾಗ ಏನು ಪರಿಹಾರ ಕೊಟ್ಟಿದ್ದೀರಿ? ದೇಶದಲ್ಲೇ ಅತಿ ಹೆಚ್ಚು ಜಿಎಸ್‌ಟಿಯನ್ನು ಕರ್ನಾಟಕದಿಂದ ಪಡೆಯುತ್ತಿದ್ದರೂ, ಪರಿಹಾರ, ಯೋಜನೆ, ಅನುದಾನ ನೀಡುವಾಗ ಈ ರಾಜ್ಯಕ್ಕೆ ಕಡಿಮೆ ಪಾಲು ನೀಡುವುದು ಏಕೆ? ಮೋದಿಯವರೇ ಈ ಬಗ್ಗೆ ಉತ್ತರಿಸಿ. ನಿಮ್ಮ ಯಾವುದೇ ಭಾಷಣದಲ್ಲಿ ರಾಜ್ಯದ ಬಿಜೆಪಿ ಸರ್ಕಾರದ 40% ಬೇಡ, 30% ಕಮಿಷನ್ ಬಗ್ಗೆಯಾದರೂ ಮಾತನಾಡಿ ಎಂದು ಮೋದಿಗೆ ತಿರುಗೇಟು ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.