ಬಜರಂಗ ದಳ ಮುಟ್ಟುವ ತಾಕತ್ತು ಯಾರಿಗಿದೆ?: ಸಿಎಂ ಬೊಮ್ಮಾಯಿ ಸವಾಲು
ನಾವೆಲ್ಲರೂ ದೇಶಭಕ್ತರು. ನಮ್ಮದು ದೇಶಭಕ್ತ ಪಕ್ಷ. ಈಗಾಗಲೇ ನಾವು ಪಿಎಫ್‌ಐ ಬ್ಯಾನ್ ಮಾಡಿದ್ದೇವೆ. ಕಾಂಗ್ರೆಸ್ ಪಿಎಫ್‌ಐ ಕಪಿಮುಷ್ಟಿಯಲ್ಲಿದ್ದು, ಅವರ ಒತ್ತಡಕ್ಕೆ ಮಣಿದು ಬಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುತ್ತಿದ್ದಾರೆ.
ಹಾವೇರಿ (ಮೇ.07): ನಾವೆಲ್ಲರೂ ದೇಶಭಕ್ತರು. ನಮ್ಮದು ದೇಶಭಕ್ತ ಪಕ್ಷ. ಈಗಾಗಲೇ ನಾವು ಪಿಎಫ್‌ಐ ಬ್ಯಾನ್ ಮಾಡಿದ್ದೇವೆ. ಕಾಂಗ್ರೆಸ್ ಪಿಎಫ್‌ಐ ಕಪಿಮುಷ್ಟಿಯಲ್ಲಿದ್ದು, ಅವರ ಒತ್ತಡಕ್ಕೆ ಮಣಿದು ಬಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ಬಜರಂಗದಳ ಮುಟ್ಟುವ ತಾಕತ್ತು ಯಾರಿಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು. ನಗರದ ಹೊರವಲಯದ ಅಜ್ಜಯ್ಯ ಗದ್ದುಗೆ ಮುಂಭಾಗದಲ್ಲಿ ಶನಿವಾರ ಬಿಜೆಪಿಯಿಂದ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ದೇಶ ವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸಿದ ಕಾಂಗ್ರೆಸ್ ಪಿಎಫ್‌ಐ ಕಾರ್ಯಕರ್ತರ ಕೇಸ್‌ಗಳನ್ನು ಹಿಂದಕ್ಕೆ ಪಡೆದಿತ್ತು.
ಕಾಂಗ್ರೆಸ್ಸಿಗರು ಪಿಎಫ್‌ಐ ಕಪಿಮುಷ್ಟಿಯಲ್ಲಿದ್ದಾರೆ. ಇಂಥ ಪಕ್ಷವನ್ನು ಬೇರು ಸಹಿತ ಕಿತ್ತೊಗೆಯಬೇಕು. ಡಬಲ್ ಎಂಜಿನ್ ಸರ್ಕಾರ ಮಾಡಿರುವ ಅಭಿವೃದ್ಧಿ ಮುಂದಿಟ್ಟುಕೊಂಡು ನಾವು ಚುನಾವಣೆಗೆ ಹೋಗುತ್ತಿದ್ದೇವೆ. ಆದರೆ, ಕಾಂಗ್ರೆಸ್ಸಿಗರು ಸುಳ್ಳು ಗ್ಯಾರಂಟಿ, ಸುಳ್ಳು ಆರೋಪ, ಸಮಾಜ ಒಡೆಯುವ ಕೆಲಸ ಮಾಡಿ ಚುನಾವಣೆ ಗೆಲ್ಲಬೇಕೆಂದು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸತ್ಯ, ನ್ಯಾಯ, ನಮ್ಮ ಕಾರ್ಯಕ್ರಮ, ಅಭಿವೃದ್ಧಿ ನಮ್ಮ ಚುನಾವಣೆಯ ಧ್ಯೇಯ. ಕರ್ನಾಟಕದಲ್ಲಿ ಪ್ರಗತಿಪರ ಸರ್ಕಾರ ಇದೆ. ಈ ಸರ್ಕಾರದ ಹಿಂದಿರುವ ಶಕ್ತಿ ನರೇಂದ್ರ ಮೋದಿ ಅವರದು ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಯೋಗಿ ಮಾದರಿ ಸರ್ಕಾರ: ಯತ್ನಾಳ
ಗ್ಯಾರಂಟಿ ಅಲ್ಲ ಗಳಗಂಟಿ: ಕಾಂಗ್ರೆಸ್ ಗ್ಯಾರಂಟಿ, ಗ್ಯಾರಂಟಿ ಎಂದು ಹೇಳುತ್ತಿದೆ. 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಿದ್ದಾರೆ. 2013ರಲ್ಲಿ 10 ಕೆಜಿ ಅಕ್ಕಿ ಕೊಡುತ್ತಿದ್ದೆವು. ಇವರು ಬಂದು 5 ಕೆಜಿ ಮಾಡಿದರು. ಕೋವಿಡ್ ಸಮಯದಲ್ಲಿ ಮೋದಿಯವರು ಗರೀಬ್ ಕಲ್ಯಾಣ ಯೋಜನೆಯಡಿ 10 ಕೆಜಿ ಅಕ್ಕಿ ಪ್ರತಿ ಬಡವರಿಗೆ ನೀಡಿದರು. ಕಾಂಗ್ರೆಸ್‌ನ ಗ್ಯಾರಂಟಿಗಳು ಮೇ 10ರ ವರೆಗೆ ಮಾತ್ರ. ನಂತರ ಅವು ಗಳಗಂಟಿ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
ಡಬಲ್ ಎಂಜಿನ್ ಸರ್ಕಾರದಿಂದ ಜನಪರ ಆಡಳಿತ: ಡಬಲ್ ಎಂಜಿನ್ ಸರ್ಕಾರ ಎಂದರೆ ಜನಪರ, ಜನ ಕಲ್ಯಾಣ ಕೆಲಸ, ರೈತರ ಕೆಲಸ. ಕಿಸಾನ್ ಸಮ್ಮಾನ್ ಯೋಜನೆಯಿಂದ ಕಳೆದ ನಾಲ್ಕು ವರ್ಷದಲ್ಲಿ ರಾಜ್ಯಕ್ಕೆ . 16 ಸಾವಿರ ಕೋಟಿ ಬಂದಿದೆ. ಹಾವೇರಿ ಜಿಲ್ಲೆಯೊಂದಕ್ಕೆ 3 ಲಕ್ಷಕ್ಕೂ ಹೆಚ್ಚು ರೈತರಿಗೆ ಹಣ ಬಂದಿದೆ. ಇದಕ್ಕಿಂತ ಇನ್ನು ಏನು ಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ನಗರದ ಹೊರವಲಯದ ಅಜ್ಜಯ್ಯ ಗದ್ದುಗೆ ಮುಂಭಾಗದಲ್ಲಿ ಶನಿವಾರ ಬಿಜೆಪಿಯಿಂದ ಆಯೋಜಿಸಿದ್ದ ಚುನಾವಣಾ ಪ್ರಚಾರದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸತ್ಯ, ನ್ಯಾಯ, ನಮ್ಮ ಕಾರ್ಯಕ್ರಮ, ಅಭಿವೃದ್ಧಿ ನಮ್ಮ ಚುನಾವಣೆಯ ಧ್ಯೇಯ. ಇವತ್ತು ನಮ್ಮ ಸರ್ಕಾರ ಪೂರ್ಣ ಐದು ವರ್ಷ ಇರಲಿಲ್ಲ. ಕೇವಲ ಮೂರುವರೆ ವರ್ಷ ಸರ್ಕಾರ ಇತ್ತು. ಕೋವಿಡ್ ಬಂದಾಗ ದಕ್ಷತೆಯಿಂದ ಅದರ ನಿರ್ವಹಣೆ ಮಾಡಿದ್ದೇವೆ. ಕರ್ನಾಟಕದಲ್ಲಿ ಪ್ರಗತಿಪರ ಸರ್ಕಾರ ಇದೆ. ಆಡಳಿತ, ಆರ್ಥಿಕ ಸದೃಢ ಸರ್ಕಾರದ ಹಿಂದೆ ಇರುವ ಶಕ್ತಿ ಡಬಲ್ ಎಂಜಿನ್ ಸರ್ಕಾರದ ನರೇಂದ್ರ ಮೋದಿಜಿ ಅವರು. ಇಂದು ಬಿಜೆಪಿ ವಿಜಯದ ದಿನ. ನರೇಂದ್ರ ಮೋದಿಯವರು ಹಾವೇರಿ ಮಣ್ಣು ಮೆಟ್ಟಿದ್ದಾರೆ. ಆ ಕ್ಷಣ ವಿಜಯದ ಪತಾಕೆಯನ್ನು ಹಾರಿಸಿದೆ. ಹಾವೇರಿ, ಧಾರವಾಡ, ಉತ್ತರ ಕರ್ನಾಟಕ, ಸಮಗ್ರ ಕರ್ನಾಟಕದಲ್ಲಿ ಬಿಜೆಪಿ ಸುನಾಮಿ ಆರಂಭವಾಗಿದೆ ಎಂದರು.
ಸಿ.ಟಿ.ರವಿ ರಾಜಕೀಯ ಜೀವನ ಈ ಎಲೆಕ್ಷನ್‌ನಲ್ಲಿ ಅಂತ್ಯ: ಸಿದ್ದರಾಮಯ್ಯ
ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ಗರು ಬಹಳ ಮಾತನಾಡಿದರು. ನಮ್ಮ ಸರ್ಕಾರದ ಮೇಲಿನ ಒಂದು ಪುರಾವೆ ಕೊಡಿ ಎಂದು ಕೇಳಿದರು ಕೋರ್ಚ್, ವಿಧಾನಸಭೆಯಲ್ಲಿ ದಾಖಲೆ ಕೊಡಲಿಲ್ಲ. ಸುಳ್ಳು ಆರೋಪ ಮಾಡಿ ಜನರ ತಪ್ಪು ದಾರಿಗೆ ತರುತ್ತಿದ್ದೀರಿ. ನಿಮ್ಮ ಕಾಲದಲ್ಲಿ ಬಿಡಿಎ ರೀಡೂದಲ್ಲಿ . 8 ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ. ಸಣ್ಣ ನೀರಾವರಿ, ಎಸ್ಸಿ, ಎಸ್ಟಿವಿದ್ಯಾರ್ಥಿಗಳ ಹಾಸಿಗೆ, ದಿಂಬು ಬಿಟ್ಟಿಲ್ಲ ನೀವು. ನಿಮಗೆ ನಾಚಿಕೆ ಆಗಬೇಕು ಎಂದು ಹರಿಹಾಯ್ದರು. ಹಾವೇರಿ ಜಿಲ್ಲೆಯಲ್ಲಿ ಅಪ್ಪರ್ ತುಂಗಾ ಯೋಜನೆ ಮಾಡಿದ್ದು ಬಿಜೆಪಿ ಸರ್ಕಾರ. ಮೆಗಾ ಡೈರಿ, ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಮಾಡಿದ್ದು ನಮ್ಮ ಸರ್ಕಾರ. ಅಭಿವೃದ್ಧಿಗಾಗಿ ಮೇ 10ರಂದು ಬಿಜೆಪಿಗೆ ಮತ ಕೊಡಿ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ತರೋಣ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.