ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಯೋಗಿ ಮಾದರಿ ಸರ್ಕಾರ: ಯತ್ನಾಳ

ಕರ್ನಾ​ಟ​ಕ​ದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿ​ಕಾ​ರಕ್ಕೆ ಬಂದಿ​ದ್ದೆ​ಯಾ​ದಲ್ಲಿ ನಾವು ಉತ್ತ​ರ​ಪ್ರ​ದೇಶದ ಯೋಗಿ ಮಾದ​ರಿ​ಯಲ್ಲಿ ಸರ್ಕಾರ ಕೊಡು​ತ್ತೇ​ವೆ. ಗೂಂಡಾ​ಗಿರಿ ಮಾಡೋದು, ಹಿಂದು​ಗಳ ಮೇಲೆ ಹಲ್ಲೆ ಮಡೋ​ದನ್ನ ಡೈರೆಕ್ಟ್ ಬುಲ್ಡೋಜರ್‌ ಮತ್ತು ಎನ್‌​ಕೌಂಟರ್‌ ಮುಖಾಂತರ ಉತ್ತ​ರಿ​ಸ್ತೇವೆ ಎಂದು ಬಿಜೆಪಿ ಸ್ಟಾರ್‌ ಪ್ರಚಾ​ರಕ, ಶಾಸಕ ಬಸ​ವ​ನ​ಗೌಡ ಪಾಟೀಲ್‌ ಯತ್ನಾಳ್‌ ಭವಿಷ್ಯ ನುಡಿ​ದ​ರು. 

If BJP comes to power Yogi will be a model government in Karnataka Says Basanagouda Patil Yatnal gvd

ಬೀದರ್‌ (ಮೇ.07): ಕರ್ನಾ​ಟ​ಕ​ದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿ​ಕಾ​ರಕ್ಕೆ ಬಂದಿ​ದ್ದೆ​ಯಾ​ದಲ್ಲಿ ನಾವು ಉತ್ತ​ರ​ಪ್ರ​ದೇಶದ ಯೋಗಿ ಮಾದ​ರಿ​ಯಲ್ಲಿ ಸರ್ಕಾರ ಕೊಡು​ತ್ತೇ​ವೆ. ಗೂಂಡಾ​ಗಿರಿ ಮಾಡೋದು, ಹಿಂದು​ಗಳ ಮೇಲೆ ಹಲ್ಲೆ ಮಡೋ​ದನ್ನ ಡೈರೆಕ್ಟ್ ಬುಲ್ಡೋಜರ್‌ ಮತ್ತು ಎನ್‌​ಕೌಂಟರ್‌ ಮುಖಾಂತರ ಉತ್ತ​ರಿ​ಸ್ತೇವೆ ಎಂದು ಬಿಜೆಪಿ ಸ್ಟಾರ್‌ ಪ್ರಚಾ​ರಕ, ಶಾಸಕ ಬಸ​ವ​ನ​ಗೌಡ ಪಾಟೀಲ್‌ ಯತ್ನಾಳ್‌ ಭವಿಷ್ಯ ನುಡಿ​ದ​ರು. ಅವರು ನಗ​ರದ ಗಾಂಧಿ​ಗಂಜ್‌​ನಲ್ಲಿ ಬಿಜೆಪಿ ಅಭ್ಯರ್ಥಿ ಈಶ್ವ​ರ​ಸಿಂಗ್‌ ಠಾಕೂರ್‌ ಪರ​ವಾಗಿ ಆಯೋ​ಜಿ​ಸಿದ್ದ ಪ್ರಚಾರ ಸಭೆ​ಯಲ್ಲಿ ಮಾತ​ನಾಡಿ, ಹಿಂದೂ​ಗಳ ವಿರುದ್ಧ ಅಕ್ರ​ಮಣ ಸಹಿ​ಸೋಲ್ಲ. ಗೂಂಡಾ​ಗಿರಿ ನಡೆ​ಯಲು ಬಿಡೋಲ್ಲ ಹೀಗಾಗಿ ಶೇ.90ರಷ್ಟುಹಿಂದೂ​ಗಳು ಮತ​ದಾನ ಮಾಡುವ ಮೂಲಕ ಬಿಜೆಪಿ ಅಭ್ಯ​ರ್ಥಿ​ಯನ್ನು ಆಯ್ಕೆ ಮಾಡಿ ಸರ್ಕಾರ ರಚಿ​ಸಲು ಸಹ​ಕ​ರಿಸಿ ಎಂದು ಕರೆ ನೀಡಿ​ದ​ರು.

ಬಜ​ರಂಗ​ದಳ ನಿಷೇಧ ಮಾಡುವ ಮಾತನಾ​ಡುವ ಕಾಂಗ್ರೆ​ಸ್‌ಗೆ ಪಾಠ ಕಲಿ​ಸಿ: ಕಾಂಗ್ರೆಸ್‌ ಚುನಾ​ವಣೆ ಪ್ರಣಾ​ಳಿಕೆ ಘೋಷ​ಣೆಯಾದ ಒಂದು ತಾಸಿ​ನೊ​ಳ​ಗೆ ಡಿ.ಕೆ ಶಿವ​ಕು​ಮಾರ ಅವರ ಹೆಲಿ​ಕ್ಯಾ​ಪ್ಟರ್‌ ಗಾಳಿ​ಯಲ್ಲಿ ಅಪ​ಘಾತ ಕಂಡಿತು. ಮರು​ದಿನ ಬೆಂಕಿ ಅವ​ಘಡ ಸಂಭ​ವಿ​ಸಿತು. ಇನ್ನು ಜಲ ಅವ​ಘ​ಡ ಬಾಕಿ​ಯಿದೆ ಎಂದರು.

ಸಿ.ಟಿ.ರವಿ ರಾಜಕೀಯ ಜೀವನ ಈ ಎಲೆಕ್ಷನ್‌ನಲ್ಲಿ ಅಂತ್ಯ: ಸಿದ್ದರಾಮಯ್ಯ

ಕಾಂಗ್ರೆ​ಸ್‌​ನ​ವ​ರಿಗೆ ದೇಶ ಬೇಕಾ​ಗಿಲ್ಲ ಮುಸ್ಲಿಂಮರ ಮತ​ಗ​ಳು ಮಾತ್ರ ಬೇಕು: ಕಾಂಗ್ರೆ​ಸ್‌ಗೆ ಓಟು ಹಾಕಿ​ದರೆ ಆತ್ಮ​ಹತ್ಯೆ ಮಾಡಿ​ಕೊಂಡಂತೆ ಎಂದು ಡಾ. ಬಾಬಾ ಸಾಹೇಬ್‌ ಅಂಬೇ​ಡ್ಕರ್‌ 1950ರಲ್ಲಿ​ಯೇ ಸ್ಪಷ್ಟ​ಪ​ಡಿ​ಸಿದ್ದು ಅದನ್ನು ಸ್ಮರಿ​ಸಿ​ಕೊಳ್ಳಿ. ಅಲ್ಲದೆ ಕಾಂಗ್ರೆ​ಸ್‌​ನ​ವ​ರಿಗೆ ದೇಶ ಬೇಕಾ​ಗಿಲ್ಲ ಮುಸ್ಲಿಂಮರ ಓಟು ಮಾತ್ರ ಬೇಕು ಎಂದು ನುಡಿ​ದ​ರು. ಕಾಂಗ್ರೆಸ್‌ ಪ್ರಣಾ​ಳಿ​ಕೆ​ಯಲ್ಲಿ ಮುಸ್ಲಿಂ ಓಲೈ​ಕೆಯೇ ಪ್ರಮು​ಖ​ವಾ​ಗಿದೆ ಅವರ ಪ್ರಣಾ​ಳಿ​ಕೆ​ಯ​ಲ್ಲಿಯೂ ಮಸೀ​ದಿ​ಗ​ಳಿಗೆ ಸಂಪೂರ್ಣ ವಿದ್ಯುತ್‌, ಮುಸ್ಲಿಂ ವಿದ್ಯಾ​ರ್ಥಿ​ಗ​ಳಿಗೆ 20ಲಕ್ಷ ರು. ಅನು​ದಾ​ನ, ಮುಸ್ಲಿಂಮ​ರಿಗೆ ವಸತಿ ಶಾಲೆ, ಇಮಾ​ಮ​ರಿಗೆ ಮಾಶಾ​ಸ​ನ ಮತ್ತಿ​ತ​ರ​ವನ್ನು ಘೋಷಿ​ಸಿದೆ ಎಂದರು.

ರಾಜಧಾನಿ ಗೆಲ್ಲಲು ಬಿಜೆಪಿ, ಕಾಂಗ್ರೆಸ್‌ ಜಿದ್ದಾಜಿದ್ದಿ ಕದನ: ಬೆಂಗಳೂರಿನ 3 ಕಡೆ ಜೆಡಿಎಸ್‌ನಿಂದ ಪೈಪೋಟಿ

ಲಿಂಗಾ​ಯ​ತ​ರನ್ನು ಸೋಲಿಸಿ ಎಂದಿರುವ ರಹೀ​ಮ್‌ ವಿರುದ್ಧ ಸ್ವಾಭಿ​ಮಾನದ ಶಕ್ತಿ ತೋರಿಸಿ: ಬೀದ​ರ್‌​ನಲ್ಲಿ ಬದ​ಲಾ​ವಣೆ ಆಗ​ಬೇಕು. ನಾವೆಲ್ಲ ಒಂದಾ​ಗ​ಬೇಕು. ಪಕ್ಷಾ​ತೀ​ತ​ವಾಗಿ ಲಿಂಗಾ​ಯ​ತ​ರನ್ನು ಸೋಲಿಸಿ ಎಂದು ಕರೆ ನೀಡಿ​ರುವ ರಹೀ​ಮ್‌​ಖಾ​ನ್‌ ವಿರುದ್ಧ ಸ್ವಾಭಿ​ಮಾನ ತೋರಿಸಿ ಲಿಂಗಾ​ಯ​ತರು ಸೇರಿ​ದಂತೆ ಎಲ್ಲರೂ ಸೇರಿಸಿ ಸೋಲಿ​ಸಲು ಮುಂದಾಗಿ ಎಂದು ಕರೆ ನೀಡಿ​ದ​ರು. ಇದು ಹಿಂದು ಕ್ಷೇತ್ರ​ವಾ​ಗ​ಬೇ​ಕಾ​ದರೆ ಎಲ್ಲರೂ ಒಂದಾ​ಗ​ಬೇಕು. ಅಂದು ಎಲ್ಲ ಹಿಂದೂ​ಗಳು ಅಂಗಡಿ ಮುಂಗ​ಟ್ಟು​ಗ​ಳನ್ನು ಬಂದ್‌ ಮಾಡಿ, ಎಲ್ಲರೂ ಒಂದಾ​ದಲ್ಲಿ ಈಶ್ವ​ರ​ಸಿಂಗ್‌ ಠಾಕೂರ್‌ ಕನಿಷ್ಟ 10 ಸಾವಿರ ಮತ​ಗ​ಳಿಂದ ಜಯ​ಗ​ಳಿ​ಸು​ತ್ತಾರೆ ಆಗ ಬೀದ​ರ್‌​ನಲ್ಲಿ ಸದಾ ಭಗವಾ ಧ್ವಜ ಹಾರಾ​ಡು​ತ್ತೆ​ ಎಂದು ಬಸ​ವ​ನ​ಗೌಡ ಪಾಟೀಲ್‌ ಯತ್ನಾಳ್‌ ಕರೆ ನೀಡಿ​ದ​ರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios